ದಿನಾಂಕ : 06/01/2019 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.04/2019 ಕಲಂ. 36(B) KARNATAKA EXCISE ACT:-

     ದಿನಾಂಕ: 05/01/2019 ರಂದು 7-45 ಗಂಟೆಗೆ ಸಿ.ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ಬೆಳಿಗ್ಗೆ 7-30 ಗಂಟೆಯಲ್ಲಿ ತಾನು ಚಿಕ್ಕಬಳ್ಳಾಪುರ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ನಗರದ ಬಜಾರ್ ರಸ್ತೆಯಲ್ಲಿರುವ ಗ್ರೀನ್ ಲ್ಯಾಂಡ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಪರವಾನಗಿಯಲ್ಲಿ ನೀಡಿರುವ ಅವಧಿಗೆ ಮುಂಚಿತವಾಗಿ ತೆರೆದು ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಬಂದಿರುತ್ತೆ. ಸದರಿ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಕಲಂ 36 (ಬಿ) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

2) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.05/2019 ಕಲಂ. 36(B) KARNATAKA EXCISE ACT:-

     ದಿನಾಂಕ: 05/01/2019 ರಂದು 8-15 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ನೀಡಿದ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ಬೆಳಿಗ್ಗೆ 8-00 ಗಂಟೆಯಲ್ಲಿ ತಾನು ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದಾಗ ನಗರದ ಎಲೆಪೇಟೆ ಜಿ.ಎನ್.ವಿ ರಸ್ತೆಯಲ್ಲಿ ಇರುವ ಮಂಜುನಾಥ್ ವೈನ್ಸ್ ನಲ್ಲಿ ಪರವಾನಗಿಯಲ್ಲಿ ನೀಡಿರುವ ಅವಧಿಗೆ ಮುಂಚಿತವಾಗಿ ತೆರೆದು ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಬಂದಿರುತ್ತೆ. ಸದರಿ ವೈನ್ಸ್ ನ ಮೇಲೆ ಕಲಂ 36 (ಬಿ) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.06/2019 ಕಲಂ. 36(B) KARNATAKA EXCISE ACT:-

     ದಿನಾಂಕ: 05/01/2019 ರಂದು 9-00 ಗಂಟೆಗೆ ಸಿ.ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ಬೆಳಿಗ್ಗೆ 8-45 ಗಂಟೆಯಲ್ಲಿ ತಾನು ಚಿಕ್ಕಬಳ್ಳಾಪುರ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ನಗರದ ದಿನ್ನೇಹೊಸಹಳ್ಳಿ ರಸ್ತೆಯಲ್ಲಿರುವ ಪಲ್ಲವಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಪರವಾನಗಿಯಲ್ಲಿ ನೀಡಿರುವ ಅವಧಿಗೆ ಮುಂಚಿತವಾಗಿ ತೆರೆದು ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಬಂದಿರುತ್ತೆ. ಸದರಿ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಕಲಂ 36 (ಬಿ) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

4) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.07/2019 ಕಲಂ. 36(B) KARNATAKA EXCISE ACT:-

     ದಿನಾಂಕ: 05/01/2019 ರಂದು 9-15 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ನೀಡಿದ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ಬೆಳಿಗ್ಗೆ 9-00 ಗಂಟೆಯಲ್ಲಿ ತಾನು ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದಾಗ ನಗರದ ಎಂ.ಬಿ. ರಸ್ತೆಯ ಎ.ಪಿ.ಎಂ.ಸಿ ಮಾರುಕಟ್ಟೆಯ ಮುಂಭಾಗದಲ್ಲಿರುವ ಚೇತನ್ ವೈನ್ಸ್ ನಲ್ಲಿ ಪರವಾನಗಿಯಲ್ಲಿ ನೀಡಿರುವ ಅವಧಿಗೆ ಮುಂಚಿತವಾಗಿ ತೆರೆದು ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಬಂದಿರುತ್ತೆ. ಸದರಿ ವೈನ್ಸ್ ನ ಮೇಲೆ ಕಲಂ 36 (ಬಿ) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

5) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.08/2019 ಕಲಂ. 32-34 KARNATAKA EXCISE ACT:-

     ದಿನಾಂಕ: 05/01/2019 ರಂದು 11-00 ಗಂಟೆಗೆ ಠಾಣೆಯ ಹೆಚ್.ಸಿ. 48 ದಿನೇಶ್ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 05-01-2019 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣಾ ಹಾಜರಾತಿಗೆ ಹಾಜರಾಗಿದ್ದು ಠಾಣಾಧಿಕಾರಿಗಳು ನನಗೆ ಅಪರಾದ ಪ್ರಕರಣಗಳ ಪತ್ತೆಯ ಬಗ್ಗೆ  ವಿಶೇಷ ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು ನಗರದ ಎಂ.ಜಿ.ರಸ್ತೆ, ಬಾಗೇಪಲ್ಲಿ ವೃತ್ತ, ಶಿಡ್ಲಘಟ್ಟ ವೃತ್ತದಲ್ಲಿ  ಗಸ್ತು ಮಾಡಿಕೊಂಡು ಬೆಳಿಗ್ಗೆ 10-30 ಗಂಟೆಗೆ  ಎಂ.ಜಿ.ರಸ್ತೆಯ ದರ್ಗಾ ಬಳಿಗೆ  ಬಂದಾಗ ಅನುಮಾನಾಸ್ಪದವಾಗಿ ಯಾರೋ ಒಬ್ಬ ಆಸಾಮಿಯು ಕೆ.ಎ.01-ಎ-4585 ಆಟೋದಲ್ಲಿ  ಒಂದು ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡಿದ್ದು   ಅನುಮಾನಗೊಂಡು ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ರೆಡ್ಡಪ್ಪ ಬಿನ್ ಲೇಟ್ ಯಲ್ಲಪ್ಪ  ವರ್ಷ ಹಂದಿ ಜೋಗಿ ಜನಾಂಗ ಆಟೋ ಚಾಲಕ ವಾಸ ಜಾತವಾರ ಹೊಸಹಳ್ಳಿ, ನಂದಿ ಹೋಬಳಿ,ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಚೀಲವನ್ನು ಪರಿಶೀಲಿಸಲಾಗಿ  ಮದ್ಯದ ಟೆಟ್ರಾಪ್ಯಾಕ್ ಗಳಿದ್ದು  ಹೈವಾರ್ಡ್ಸ್- ಕಂಪನಿಯ 90 ಎಂ.ಎಲ್.ನ  48 ಟೆಟ್ರಾ ಪ್ಯಾಕ್ ಗಳು 4 ಲೀಟರ್ 140 ಎಂಎಲ್. ಬೆಲೆ 1440/- ರೂ, ಆಗಿರುತ್ತೆ. ಸದರಿ ಮದ್ಯದ ಬಗ್ಗೆ ದಾಖಲೆಗಳನ್ನು ಕೇಳಲಾಗಿ ಯಾವುದೇ ಬಿಲ್ಲುಗಳಿಲ್ಲವೆಂದು ತಿಳಿಸಿದ್ದು ಸದರಿ ಮದ್ಯವನ್ನು ಮಾರಾಟವನ್ನು ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಆಸಾಮಿಯು ಯಾವುದೇ ಪರವಾನಗಿಯಿಲ್ಲದೇ ಆಟೋದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆಯನ್ನು ಮಾಡುತ್ತಿದ್ದು  ಮುಂದಿನ ಕ್ರಮಕ್ಕಾಗಿ ಆಸಾಮಿ, ಆಟೋ ಮತ್ತು ಮದ್ಯವನ್ನು ಬೆಳಿಗ್ಗೆ 11-00 ಗಂಟೆಗೆ ಠಾಣೆಯಲ್ಲಿ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

6) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.09/2019 ಕಲಂ. 32-34  KARNATAKA EXCISE ACT:-

     ದಿನಾಂಕ: 05/01/2019 ರಂದು ಮಧ್ಯಾಹ್ನ 12-30 ಗಂಟೆಗೆ ಠಾಣೆಯ ಪಿ.ಸಿ.138  ಮುರಳಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 05-01-2019 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣಾ ಹಾಜರಾತಿಗೆ ಹಾಜರಾಗಿದ್ದು ಠಾಣಾಧಿಕಾರಿಗಳು ನನಗೆ ಅಪರಾದ ಪ್ರಕರಣಗಳ ಪತ್ತೆಯ ಬಗ್ಗೆ  ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು ನಗರದ ಬಾಗೇಪಲ್ಲಿ ವೃತ್ತ, ಶಿಡ್ಲಘಟ್ಟ ವೃತ್ತ, ಬಿ.ಬಿ.ರಸ್ತೆ  ಎಂ.ಜಿ.ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಮಧ್ಯಾಹ್ನ 12-00 ಗಂಟೆಗೆ  ಎ.ಪಿ.ಎಂ.ಸಿ. ಮುಂಭಾಗಕ್ಕೆ ಬಂದಾಗ  ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿ ಕೆ.ಎ.04-ಇ.ಯು-6902 ಹೊಂಡಾ ಆಕ್ಟೀವಾ  ದ್ವಿಚಕ್ರವಾಹನದಲ್ಲಿ  ಒಂದು ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡಿದ್ದು ಅನುಮಾನಗೊಂಡು ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ದೀಪು ಬಿನ್  ಲೇಪಾಕ್ಷಿ, 22 ವರ್ಷ, ಈಡಿಗರು, ಮೆಕ್ಯಾನಿಕ್, ವಾಸ ಗಂಗನಮಿದ್ದೆ, ಚಿಕ್ಕಬಳ್ಳಾಪುರ  ಎಂದು ತಿಳಿಸಿದನು. ಚೀಲದಲ್ಲಿ ಪರಿಶೀಲಿಸಲಾಗಿ ಮಧ್ಯದ ಟ್ರೆಟ್ರಾ ಪ್ಯಾಕ್ ಗಳಿದ್ದು, ನೋಡಲಾಗಿ 1)ಹೈವಾರ್ಡ್ಸ್- 90 ಎಂ.ಎಲ್.ನ  28 ಟೆಟ್ರಾ ಪ್ಯಾಕ್ ಗಳು 2 ಲೀಟರ್ 520 ಎಂಎಲ್. ಬೆಲೆ 900/- ರೂ, ಸದರಿ ಮದ್ಯದ ಬಗ್ಗೆ ದಾಖಲೆಗಳನ್ನು ಕೇಳಲಾಗಿ ಯಾವುದೇ ಬಿಲ್ಲುಗಳಿಲ್ಲವೆಂದು ತಿಳಿಸಿದ್ದು ಸದರಿ ಮದ್ಯವನ್ನು ಮಾರಾಟವನ್ನು ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಆಸಾಮಿಯು ಯಾವುದೇ ಪರವಾನಗಿಯಿಲ್ಲದೇ ದ್ವಿಚಕ್ರವಾಹನದಲ್ಲಿ  ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆಯನ್ನು ಮಾಡುತ್ತಿದ್ದು  ಮುಂದಿನ ಕ್ರಮಕ್ಕಾಗಿ ಆಸಾಮಿ, ದ್ವಿಚಕ್ರವಾಹನ ಮತ್ತು ಮದ್ಯವನ್ನು 12-30 ಗಂಟೆಗೆ ಠಾಣೆಯಲ್ಲಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

7) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.10/2019 ಕಲಂ. 32-34  KARNATAKA EXCISE ACT:-

     ದಿನಾಂಕ: 05/01/2019 ರಂದು 13-30 ಗಂಟೆಗೆ ಠಾಣೆಯ  ಪಿ.ಸಿ. 510 ಹರೀಶ  ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 05-01-2018 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣಾ ಹಾಜರಾತಿಗೆ ಹಾಜರಾಗಿದ್ದು ಠಾಣಾಧಿಕಾರಿಗಳು ನನಗೆ  ಚೀತಾ ಗಸ್ತು  ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು ನಗರದ ಎಂ.ಜಿ.ರಸ್ತೆ, ಬಾಗೇಪಲ್ಲಿ ವೃತ್ತ, ಶಿಡ್ಲಘಟ್ಟ ವೃತ್ತ, ಬಿ.ಬಿ.ರಸ್ತೆಯಲ್ಲಿ ಗಸ್ತು  ಮಾಡಿಕೊಂಡು  ಶಿಡ್ಲಘಟ್ಟ ರಸ್ತೆಯಲ್ಲಿ  ಮಧ್ಯಾಹ್ನ 01-00 ಗಂಟೆಗೆ ಬಂದಾಗ  ಕವಿತ ಬಾರ್ ಮುಂಭಾಗದಲ್ಲಿ ಇರುವ ಖಾಲಿ ನಿವೇಶನದ ಹತ್ತಿರ  ಯಾರೋ ಒಬ್ಬ ಆಸಾಮಿಯು ಒಂದು ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡಿದ್ದು ಅನುಮಾನಗೊಂಡು ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಗಣೇಶ ಬಿನ್ ಲೇಟ್ ಮುನಿಯಪ್ಪ, 20 ವರ್ಷ, ಆದಿ ಕರ್ನಾಟಕ, ಕಾರ್ಪೇಂಟರ್ ಕೆಲಸ, ವಾಸ ಅಂಬೇಡ್ಕರ್ ನಗರ, ಚಿಕ್ಕಬಳ್ಳಾಪುರ    ಎಂದು ತಿಳಿಸಿದನು. ಚೀಲದಲ್ಲಿ  ಪರಿಶೀಲಿಸಲಾಗಿ  ಮದ್ಯದ ಟೆಟ್ರಾಪ್ಯಾಕ್ ಗಳಿದ್ದು 1)ಹೈವಾರ್ಡ್ಸ್- 90 ಎಂ.ಎಲ್.ನ  19 ಟೆಟ್ರಾ ಪ್ಯಾಕ್ ಗಳು 1 ಲೀಟರ್ 710 ಎಂಎಲ್. ಬೆಲೆ 570/- ರೂ, ನ ಸದರಿ ಮದ್ಯದ ಬಗ್ಗೆ ದಾಖಲೆಗಳನ್ನು ಕೇಳಲಾಗಿ ಯಾವುದೇ ಬಿಲ್ಲುಗಳಿಲ್ಲವೆಂದು ತಿಳಿಸಿದ್ದು ಸದರಿ ಮದ್ಯವನ್ನು ಮಾರಾಟವನ್ನು ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಆಸಾಮಿಯು ಯಾವುದೇ ಪರವಾನಗಿಯಿಲ್ಲದೇ ಅಕ್ರಮವಾಗಿ ಮದ್ಯವನ್ನು ಮಾರಾಟವನ್ನು ಮಾಡಲು ತೆಗೆದುಕೊಂಡು ಹೋಗುತ್ತಿದ್ದು  ಮುಂದಿನ ಕ್ರಮಕ್ಕಾಗಿ ಆಸಾಮಿ ಮತ್ತು ಮದ್ಯವನ್ನು ಮಧ್ಯಾಹ್ನ 13-30 ಗಂಟೆಗೆ ಠಾಣೆಯಲ್ಲಿ ಹಾರ್ಪಡಿಸಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

8) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.11/2019 ಕಲಂ. 454-457-380 ಐ.ಪಿ.ಸಿ:-

     ದಿನಾಂಕ: 06/01/2019 ರಂದು ಬೆಳಿಗ್ಗೆ 8-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ. ಡಿ.ಉಮಾ ಬಿನ್ ವೆಳ್ಳಿಗಿರಿ 41 ವರ್ಷ, ಪ.ಜಾತಿ ದಿನ್ನೇಹೊಸಹಳ್ಳಿ ರಸ್ತೆ ವಾರ್ಡ್ ನಂ 4 ಪ್ರಶಾಂತನಗರ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 04/01/2019 ರಂದು ಬೆಳಗಿನ ಜಾವ 5-30 ಗಂಟೆಗೆ ತಮ್ಮ ಕುಟುಂಬ ಸಮೇತ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ದಿನಾಂಕ: 06/01/2019 ರಂದು ಬೆಳಗಿನ ಜಾವ 4-30 ಗಂಟೆಗೆ ಮನೆಗೆ ಬಂದು ಮನೆ ಗೇಟ್ ತೆಗೆದು ಬಾಗಿಲಿನ ಬಳಿಗೆ ಬಂದಾಗ ಬಾಗಿಲು ತರೆದುಕೊಂಡಿದ್ದು, ಪರಿಶೀಲಸಲಾಗಿ ಯಾರೋ ಕಳ್ಳರು ಮನೆಯ ಡೋರ್ ಲಾಕನ್ನು ಯಾವುದೋ ಆಯುಧದಿಂದ ಮೀಟಿ ಬಾಗಿಲು ತೆಗೆದು ಒಳಗೆ ಪ್ರವೇಶಮಾಡಿ ಮನೆಯಲ್ಲಿದ್ದ ಎರಡು ಬೀರುಗಳನ್ನು ಮೀಟಿದ್ದು 1 ನೇ ಬೀರುವಿನಲ್ಲಿದ್ದ 1] ಲಕ್ಷ್ಮಿ ಕಾಸು 3 ಗ್ರಾಂ, 2]ಕಿವಿ ಗುಂಡುಗಳು 4 ಗ್ರಾಂ, 3] ಲಾಂಗ್ ಚೈನ್ [ಹಾರ] 45 ಗ್ರಾಂ, 4] ನಕ್ಲೇಸ್ 32 ಗ್ರಾಂ, 5] 2 ಎಳೆ ಚೈನು 40 ಗ್ರಾಂ 6] 1 ಉಂಗುರ 6 ಗ್ರಾಂ, 7] ಒಂದು ಜೊತೆ ಓಲೆ ಜುಮಕಿ 9 ಗ್ರಾಂ, 8] 3 ಜೋತೆ ಸಾದ ಓಲೆ ಹ್ಯಾಂಗಿಸ್ಸ್ 25 ಗ್ರಾಂ 9] 1 ಮೂಗುತಿ 2 ಗ್ರಾಂ  ಒಟ್ಟು 166 ಗ್ರಾಂಗಳಾಗಿದ್ದ ಇದರ ಬೆಲೆ 4,15,000 ರೂಗಳು ಮತ್ತೊಂದು ಬೀರುವಿನಲ್ಲಿದ್ದ 1] 90,000 ರೂ ನಗದು, 2] 66 ಗ್ರಾಂ ತೂಕದ ಬೆಳ್ಳಿಯ ಲಕ್ಷ್ಮೀ ಮುಖವಾಡ 1] 30 ಗ್ರಾಂ ತೂಕದ ಬೆಳ್ಳಿಯ ಕುಂಕುಮ ಭರಣೆಗಳು ಇವರುಗಳ ಒಟ್ಟು, 96 ಗ್ರಾಂ. ತೂಕ ಬೆಲೆ 5000 ರೂಗಳು, 3] ಹಾಲ್ ನಲ್ಲಿದ್ದ  ಎಲ್.ಜಿ ಕಂಪನಿಯ ಎಲ್.ಸಿ.ಡಿ ಟಿ.ವಿ ಮತ್ತು ಸ್ಟೇಪಲೇಜರ್ ಇವುಗಳ ಬೆಲೆ 10,000 ಇವುಗಳ ಎಲ್ಲಾ ಒಟ್ಟು ಬಲೆ 5,20,000 ರೂಗಳಾಗಿದ್ದು, ಕಳವು ಮಾಡಿಕೊಂಡು ಹೋಗಿರುವ ಮಾಲನ್ನು ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.03/2019 ಕಲಂ. 87 ಕೆ.ಪಿ.ಆಕ್ಟ್:-

     ದಿ: 05-01-2019 ರಂದು ಸಂಜೆ 4:00 ಗಂಟೆಯಲ್ಲಿ ಮಾನ್ಯ ಸಿ.ಪಿ.ಐ ಸಾಹೇಬರವರು ನೀಡಿದ ಮೆಮೋವನ್ನು ಪಡೆದುಕೊಂಡಿದ್ದರ ಸಾರಾಂಶ- ದಿನಾಂಕ:05/01/2019 ರಂದು ಮಧ್ಯಾಹ್ನ 2-00 ಗಂಟೆೆ ಸಮಯದಲ್ಲಿ  ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ, ಗೌಡಸಂದ್ರ  ಗ್ರಾಮದ ಹೊರವಲಯದಲ್ಲಿರುವ ಕೆರೆ ಕೋಡಿ ಕಾಲುವೆಯಲ್ಲಿ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ನನಗೆ ಬಂದ ಮಾಹಿತಿ ಮೇರೆಗೆ ವಿ.ಅವಿನಾಶ್,  ಪಿಎಸ್ಐ, ಗೌರೀಬಿದನೂರು ಗ್ರಾ ಠಾಣೆ, ಪೊಲೀಸ್ ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ಗೌಡಸಂದ್ರ ಗ್ರಾಮದ ಹೊರವಲಯದಲ್ಲಿರುವ ಕೆರೆ ಕೋಡಿ ಕಾಲುವೆಯಲ್ಲಿ  ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ  1] ಶ್ರೀನಿವಾಸ ಬಿನ್ ಲೇಟ್ ಪಾಪಣ್ಣ, 33 ವರ್ಷ, ಕುಂಬಾರ ಜನಾಂಗ, ಹೋಟೆಲ್ ವ್ಯಾಪಾರ, ವಾಸ ವಿಧುರಾಶ್ವತ್ಥ, ಗೌರೀಬಿದನೂರು ತಾಲ್ಲೂಕು  2) ನವೀನ್ @ ನಂಧೀಶ  ಬಿನ್ ಶಿವಪ್ಪ, ವಯಸ್ಸು 25 ವರ್ಷ, ಬಲಜಿಗರು, ಆಟೋ ಚಾಲಕ ವೃತ್ತಿ,  ವಾಸ ವಿಧುರಾಶ್ವತ್ಥ, ಗೌರೀಬಿದನೂರು ತಾಲ್ಲೂಕು, 3) ಗೋವಿಂದರಾಜು ಬಿನ್ ಲೇಟ್ ನಾಗರಾಜ, 33 ವರ್ಷ, ನಾಯಕ ಜನಾಂಗ, ಆಟೋ ಚಾಲಕ  ವಿಧುರಾಶ್ವತ್ಥ ಗೌರೀಬಿದನೂರು ತಾಲ್ಲೂಕು, 4) ರೆಡ್ಡಪ್ಪ ಬಿನ್ ಲೇಟ್ ಬಾಬು, 29 ವರ್ಷ, ಕುರುಬ ಜನಾಂಗ, ಜಿರಾಯ್ತಿ,  ಕದಿರೇನಹಳ್ಳಿ ಗ್ರಾಮ,  ಗೌರೀಬಿದನೂರು ತಾಲ್ಲೂಕು, 5) ನಾಗರಾಜ ಬಿನ್ ಲೇಟ್ ನಾರಾಯಣಪ್ಪ, 45 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಿಧುರಾಶ್ವತ್ಥ, ಗೌರೀಬಿದನೂರು ತಾಲ್ಲೂಕು, 6) ವೆಂಕಟೇಶ ಬಿನ್ ಲೇಟ್ ನಾರಾಯಣಸ್ವಾಮಿ 41 ವರ್ಷ, ನಾಯಕ ಜನಾಂಗ,  ಗಾರೆ ಕೆಲಸ,ವಾಸ ವಿಧುರಾಶ್ವತ್ಥ ಗೌರೀಬಿದನೂರು  ತಾಲ್ಲೂಕು, 7) ರಾಮಾಂಜಿನಪ್ಪ ಬಿನ್ ಲಕ್ಷ್ಮಯ್ಯ, 41 ವರ್ಷ, ಬೋವಿ ಜನಾಂಗ, ಜಿರಾಯ್ತಿ, ಯರಹಳ್ಳಿ ಗ್ರಾಮ,  ಗೌರೀಬಿದನೂರು ತಾಲ್ಲೂಕು, ರವರುಗಳನ್ನು ಹಾಗು ಜೂಜಾಟಕ್ಕೆ ಬಳಸುತ್ತಿದ್ದ 52 ಇಸ್ಟೀಟ್ ಎಲೆಗಳು, ಹಾಗು  24,850/-ರೂ ನಗದು ಹಣವನ್ನು  ಮಧ್ಯಾಹ್ನ 2-30 ರಿಂದ 3-30 ಗಂಟೆಯವರೆಗೆ  ಮಹಜರ್ ಮೂಲಕ ವಶಕ್ಕೆ ತೆಗೆದುಕೊಂಡಿರುತ್ತೆ. ಈ ಮೇಲ್ಕಂಡ 7 ಜನ ಆರೋಪಿಗಳನ್ನು 24,850/- ರೂ ನಗದು ಹಣ,  52 ಇಸ್ಪೀಟ್ ಎಲೆಗಳನ್ನು ಠಾಣೆಗೆ ಈ ಮೆಮೋ ಪತ್ರದೊಂದಿಗೆ ಹಾಜರ್ಪಡಿಸುತ್ತಿದ್ದು, ಆರೋಪಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿ, ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಎಂದು ಇದ್ದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

10) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.04/2019 ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ:05/01/2019 ರಂದು ಸಾಯಂಕಾಲ 4-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ವಿರುಪಸಂದ್ರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳದಲ್ಲಿ ಯಾರೋ ಅಂದರ್ ಬಾಹರ್ ಜೂಜಾಟವಾಡುತ್ತಿರುವುದಾಗಿ ಬೀಟು ಪೊಲೀಸ್ ಪಿ.ಸಿ-520 ಶ್ರೀನಾಥರವರು ನೀಡಿದ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿಯವರೊಂದಿಗೆ ಪಂಚಾಯ್ತಿದಾರರನ್ನು ಕರೆದುಕೊಂಡು ಪೊಲೀಸ್ ಜೀಪಿನಲ್ಲಿ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ವಿರುಪಸಂದ್ರ ಗ್ರಾಮಕ್ಕೆ ಹೋಗಿ ಮಾಹಿತಿ ಬಂದ ಸ್ಥಳವಾದ ವಿರುಪಸಂದ್ರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿಯೇ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ನಡೆದುಕೊಂಡು ಜಾಲಿಗಿಡಗಳ ಪೊದೆಯೊಳಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಜಾಲಿಗಿಡಗಳ ಕೆಳಗೆ ಸುಮಾರು 6-7 ಜನರ ಗುಂಪು ಇದ್ದು, ಗುಂಪಿನಲ್ಲಿದ್ದವರು ಅಂದರ್ ಗೆ 200/- ರೂ. ಬಾಹರ್ ಗೆ 200/- ಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟ ವಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1] ಅಶ್ವಥನಾರಾಯಣ ಬಿನ್ ಗಂಗಾಧರಪ್ಪ, 32 ವರ್ಷ, ಬೋವಿ ಜನಾಂಗ, ಪೈಂಟಿಂಗ್ ಕೆಲಸ, ವಿರುಸಂದ್ರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. 2] ಗಂಗರಾಜು ಬಿನ್ ಲೇಟ್ ಅಶ್ವಥಪ್ಪ, 30 ವರ್ಷ, ದೋಬಿ ಜನಾಂಗ, ಪ್ಯಾಕ್ಟರಿಯಲ್ಲಿ ಕೆಲಸ, ವಿರುಸಂದ್ರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. 3] ಮಹಮ್ಮದ್ ಹುಸೇನ್ @ ಸದರ್ಾರ್ ಬಿನ್ ಫಕೃದ್ದೀನ್ ಸಾಬ್, 62 ವರ್ಷ, ಮುಸ್ಲೀಮರು, ವ್ಯಾಪಾರ, ವಿರುಸಂದ್ರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. 4] ತಿಮ್ಮಯ್ಯ ಬಿನ್ ಯರ್ರಪ್ಪ, 29 ವರ್ಷ, ಪರಿಶಿಷ್ಟ ಜಾತಿ[ಎ.ಕೆ], ಕೂಲಿಕೆಲಸ, ವಿರುಸಂದ್ರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. 5] ಅಶ್ವಥ ಬಿನ್ ಸತ್ಯಪ್ಪ, 40 ವರ್ಷ, ಪರಿಶಿಷ್ಟ ಜಾತಿ[ಎ.ಕೆ], ಕೂಲಿಕೆಲಸ, ವಿರುಸಂದ್ರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. 6] ಸುರೇಂದ್ರ ಬಿನ್ ಲಿಂಗಪ್ಪ, 31 ವರ್ಷ, ಬಲಜಿಗರು, ಚಾಲಕ ವೃತ್ತಿ, ವಿರುಸಂದ್ರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. ಮತ್ತು 7] ಗಂಗಾಧರ ಬಿನ್ ನಂಜಪ್ಪ, 42 ವರ್ಷ, ಬಲಜಿಗರು, ಚಾಲಕ ವೃತ್ತಿ, ವಿರುಸಂದ್ರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿದ್ದ 1] KA-40—ED-2736 BAJAJ CT -100, 2] ನೊಂದಣಿ ಸಂಖ್ಯೆ ಇಲ್ಲದ HERO PASSION PRO ENG NO – HA10AC3HJ68228, CHS NO-MBLHAR181JHJ34298 3] KA-40-Y-0035 HERO HONDA SPLENDOR PLUS ದ್ವಿಚಕ್ರ ವಾಹನಗಳು, 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ 1730/- ರೂ. ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ಮೇಲ್ಕಂಡ ಆಸಾಮಿಗಳನ್ನು, 3 ದ್ವಿಚಕ್ರ ವಾಹನಗಳನ್ನು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ ಹಣ 1730/- ರೂ. ನಗದು ಹಣವನ್ನು ಸಾಯಂಕಾಲ 5-00 ಗಂಟೆಯಿಂದ ಸಾಯಂಕಾಲ 6-00 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡು ಸಾಯಂಕಾಲ 6-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ಆರೋಪಿಗಳ ವಿರುದ್ದ ಮೊ.ಸಂ. 04/2019 ಕಲಂ:87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೇನೆ.

11) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.03/2019 ಕಲಂ. 143-436-448 ರೆ/ವಿ 149 ಐ.ಪಿ.ಸಿ:-

     ದಿನಾಂಕ:06-01-2019 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀನಿವಾಸ.ವಿ. ಬಿನ್ ವೆಂಕಟರವಣಪ್ಪ, ಭೂಮಿಶೆಟ್ಟಿಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:05-01-2019 ರಂದು ಬೆಳಗ್ಗೆ 10-00 ಗಂಟೆಗೆ ಸಮಯದಲ್ಲಿ ತಾವು ಯಾರೂ ಇಲ್ಲದ ಸಮಯ ನೋಡಿ ಹಾಗೂ ಯಾರಿಂದ ಏನಾಗುತ್ತದೋ ನೋಡಬೇಕು ಎಂಬ ಅಟ್ಟಹಾಸದಿಂದ ತನಿಗೆ ಸೇರಿದ ಭೂಮಿಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ: 48/ಪಿ5 ರಲ್ಲಿರುವ ಬೋರ್ ವೆಲ್ ನ ಬೋರ್ಡ್ ,ಮೋಟಾರ್ ನ್ನು ಹಾಗೂ ಪೈಪುಗಳನ್ನು ತಮ್ಮ ಗ್ರಾಮದ 1) ವೆಂಕಟರವಣಪ್ಪ ಬಿನ್ ರಾಮಕ್ರೀಷ್ಣ, 2)ರಾಮಪ್ಪ ಬಿನ್ ವೆಂಕಟಪ್ಪ, 3) ವೆಂಕಟಶಾಮಿ ಬಿನ್ ವೆಂಕಟರಾಮನ್ನ, 4) ಆಂಜಪ್ಪ ಬಿನ್ ವೆಂಕಟಪ್ಪ, 5) ಶ್ರೀಕಂಠ ಬಿನ್ ರಾಮಪ್ಪ ರವರುಗಳು ಸೇರಿ ಕಿತ್ತು ಹಾಕಿ ಸುಟ್ಟಹಾಕಿರುತ್ತಾರೆ.  ಇದಕ್ಕೆ ಮೊದಲು ಇದೇ ರೀತಿಯಾಗಿ ದಿನಾಂಕ:26-10-2018 ರಂದು ವಿದ್ಯುತ್ ವೈರುಗಳನ್ನು ಕಡಿದು ಬೆಳೆ ನಷ್ಟ ಉಂಟು ಮಾಡಿದ್ದು ಸದರಿಯವರ ಮೇಲೆ ಕೇಸು ಹಾಕಿಸಿ ವಿಚಾರಿಣೆಯಲ್ಲಿರುತ್ತದೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ತನಿಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸಲುಕೊಡಲು ನೀಡಿರುವ ಪಿರ್ಯಾಧು

12) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.04/2019 ಕಲಂ. 279-337  ಐ.ಪಿ.ಸಿ:-

     ದಿನಾಂಕ:06/01/2019 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ  ಪಿರ್ಯಾದಿದಾರರಾದ ದ್ಯಾವಣ್ಣ ಟಿ.ಸಿ ಬಿನ್ ಲೇಟ್ ಚಿಕ್ಕಮುನಿಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 31/12/2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತನ್ನ ಮಗ ಶ್ರೀನಿವಾಸಮೂರ್ತಿ  ಮತ್ತು ತಮ್ಮ ಗ್ರಾಮದ ವೆಂಕಟೇಶಪ್ಪ ರವರು ಕೆಎ-40 ಆರ್-7830 ಹೀರೋ ಪ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಛೇರಿಯಲ್ಲಿ ಜಮೀನು ಪಹಣಿ ತರಲು ಹೋಗಿದ್ದು ಇದೇ ದಿನ ಮದ್ಯಾಹ್ನ 1-40 ಗಂಟೆ ಸಮಯದಲ್ಲಿ  ತಮ್ಮ ಗ್ರಾಮದ ರಾಮಕೃಷ್ಣಪ್ಪ ರವರು  ತನಗೆ ದೂರವಾಣಿ ಕರೆ ಮಾಡಿ ಚೀಮಂಗಲ ಗ್ರಾಮದ ಬಳಿ ಇರುವ ಮುನೇಶ್ವರಸ್ವಾಮಿ ದೇವಸ್ಥಾನದ ಬಳಿ ನಿನ್ನ ಮಗ ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಅಪಘಾತವಾಗಿರುತ್ತೆಂದು ತಿಳಿಸಿದ್ದು ಆಗ ತಕ್ಷಣ ತಾನು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಪಘಾತವನ್ನು ಕಣ್ಣಾರೆ ಕಂಡಂತಹ ತಮ್ಮ ಗ್ರಾಮದ ರಾಮಕೃಷ್ಣಪ್ಪ ರವರನ್ನು ವಿಚಾರ ಮಾಡಿತಿಳಿದುಕೊಳ್ಳಲಾಗಿ ತನ್ನ ಮಗ ಶ್ರೀನಿವಾಸಮೂರ್ತಿ ಮತ್ತು ತಮ್ಮ ಗ್ರಾಮದ ವೆಂಕಟೇಶಪ್ಪ ಬಿನ್ ವೆಂಕಟಪ್ಪ ರವರು ಕೆಎ-40 ಆರ್-7830 ಹೀರೋ ಪ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ತನ್ನ ಮಗ ಶ್ರೀನಿವಾಸಮೂರ್ತಿ ಚಾಲನೆ ಮಾಡಿಕೊಂಡು ತಮ್ಮ ಗ್ರಾಮಕ್ಕೆ ಬರಲು ದಿನಾಂಕ:31/12/2018 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ಶಿಡ್ಲಘಟ್ಟ-ಹೆಚ್ ಕ್ರಾಸ್ ರಸ್ತೆಯ ಚೀಮಂಗಲ ಗ್ರಾಮದ ಶ್ರೀ ಮುನೇಶ್ವರ ದೇವಸ್ಥಾನದ ಬಳಿ ರಸ್ತೆಯ ಎಡಬದಿಯಲ್ಲಿಯೇ ಬರುತ್ತಿದ್ದಾಗ ಹೆಚ್.ಕ್ರಾಸ್ ಕಡೆಯಿಂದ ಕೆಎ-06 ಸಿ-2679 ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶ್ರೀನಿವಾಸಮೂರ್ತಿ  ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ  ಶ್ರೀನಿವಾಸಮೂರ್ತಿ ಮತ್ತು ವೆಂಕಟೇಶಪ್ಪ ರವರು ಕೆಳಗಡೆಬಿದ್ದು ಶ್ರೀನಿವಾಸಮೂರ್ತಿ  ರವರಿಗೆ ಬಲಕಾಲಿನ ಮೊಣಕಾಲು,ಬಲಕಾಲಿನ ಬೆರಳುಗಳಿಗೆ,ತಲೆಯ ಹಿಂಭಾಗ ರಕ್ತಗಾಯಗಳಾಗಿದ್ದು ಬೆನ್ನಿನ ಮೇಲೆ ತರುಚಿದಗಾಯವಾಗಿರುತ್ತೆ, ವೆಂಕಟೇಶಪ್ಪ ರವರಿಗೆ ಬಲಕಾಲಿನ ತೊಡೆಯ ಬಳಿ, ಬಲ ಮುಂಗಾಲಿನ ಬಳಿ ಬಲಕಾಲಿ ಬೆರಳುಗಳಗೆ ತಲೆಗೆ ರಕ್ತಗಾಯಗಳಾಗಿರುತ್ತೆ, ತಾನು ಮತ್ತು ತಮ್ಮ ಗ್ರಾಮದ ರಾಮಕೃಷ್ಣಪ್ಪ ಸೇರಿ ಗಾಯಗೊಂಡಿದ್ದ ಶ್ರೀನಿವಾಸಮೂರ್ತಿ ಮತ್ತು ವೆಂಕಟೇಶಪ್ಪ ರವರನ್ನು 108 ಅಂಬ್ಯೂಲೆನ್ಸ್ ವಾಹನದಲ್ಲಿ ಹಾಕಿಕೊಂಡು ಕೋಲಾರದ ಶ್ರೀ ಗೌರವ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು.  ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಚಿಕಿತ್ಸೆಪಡಿಸಿಕೊಂಡಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ಕೊಡುತ್ತಿದ್ದು ಅಪಘಾತವುಂಟುಮಾಡಿದ ಕೆಎ-06 ಸಿ-2679 ಆಟೋ ಚಾಲಕನ ವಿರುದ್ದ  ಕಾನೂನು ರೀತ್ಯಾ  ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡಿರುತ್ತೆ.