ದಿನಾಂಕ : 05/12/2018ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.200/2018 ಕಲಂ.323-324-504 ಐ.ಪಿ.ಸಿ:-

     ದಿನಾಂಕ 05-12-2018 ರಂದು  12-00 ಗಂಟೆಗೆ ಪಿರ್ಯಾದಿದಾರರಾದ  ಚಿಕ್ಕಬಳ್ಳಾಪುರ ನಗರದ ಪ್ರಶಾಂತನಗರದ ಗೋಕುಲ್ ಸ್ಕೂಲ್ ಹಿಂಭಾಗದಲ್ಲಿ ವಾಸವಾಗಿರುವ ಮುದಾಸರ್ ನಜರ್ ಬಿನ್ ಶೇಖ್ ಅಲ್ಲಾಬಕಾಷ್ , 32 ವರ್ಷ,ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತಾನು ಮತ್ತು ತನ್ನ ತಂದೆ  ಇಬ್ಬರು ಬಿಬಿ.ರಸ್ತೆಯಲ್ಲಿ ರೆಡ್ಡಿ ಮಿಲ್ಟ್ರಿ ಹೋಟೇಲ್ ಹತ್ತಿರ, ಪುಟ್ ಪಾತ್ ನಲ್ಲಿ ತಳ್ಳುವ ಗಾಡಿಯಲ್ಲಿ ಕಬಾಬ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರವನ್ನು ಮಾಡಿಕೊಂಡಿರುತ್ತೇನೆ.  ದರ್ಗಾಮೊಹಲ್ಲಾ  ವಾಸಿ ಆಕೀಲ್ ಬಿನ್ ಅಜಾದ್ , ಬಿ.ಎಂ.ಟಿ.ಸಿ.ಯಲ್ಲಿ ಡ್ರೈವರ್ ಕೆಲಸ, ಎಂಬುವನು ಆಗಾಗ್ಗೆ ಅಂಗಡಿಯ ಬಳಿಗೆ ಬಂದು  ಕಬಾಬ್ ಅನ್ನು ತಿಂದು ಸಾಲ ಹೇಳಿ ಹೋಗುತ್ತಿದ್ದನು. ದಿನಾಂಕ 03-12-2018 ರಂದು ಸಂಜೆ 07-00 ಗಂಟೆಯಲ್ಲಿ  ತಾನು ಮತ್ತು ತನ್ನ ತಂದೆಯವರು ಹಾಗೂ ಕೆಲಸದ ಹುಡುಗ ಸಲ್ಮಾನ್ 3 ಜನರು ಇದ್ದಾಗ  ಆಕೀಲ್  ಅಂಗಡಿಯ ಬಳಿಗೆ ಬಂದು ಕಬಾಬ್ ಕೇಳಿದ್ದು ಆಗ ಪಿರ್ಯಾದಿದಾರರು  ನೀನು ಈ ಹಿಂದೆ 2 ಸಾರಿ  ಸಾಲ ತೆಗೆದುಕೊಂಡು ಹೋಗಿದ್ದೀಯಾ, ಕಾಸು ಕೊಟ್ಟರೆ ಕಬಾಬ್ ಕೊಡುತ್ತೇನೆಂದು ಹೇಳಿದಾಗ ಅಲ್ಲಿಂದ ಹೊರಟು ಹೋದನು.  ಪುನಃ ರಾತ್ರಿ 09-30 ಗಂಟೆಯಲ್ಲಿ ಆಕೀಲ್ ಅಂಗಡಿಯ ಬಳಿಗೆ ಬಂದವನೇ ಏನೋ ನಾನು ಸಾಲ ಕೇಳಿದರೆ ಕೊಡೋದಿಲ್ಲಾ, ತೇರಿ ಮಾಕಿ ಚೋದ್, ನಾನು ಎಲ್ಲಿಗಾದರೂ ಹೋಗುತ್ತೇನೆನೋ, ನನಗೆ ಕಬಾಬ್ ಕೊಡೋ ಎಂದು ಕೆಟ್ಟ ಮಾತಿನಿಂದ ಬೈದನು . ಪಿರ್ಯಾದಿ  ಇಲ್ಲ ನೀನು ಕಾಸು ಕೊಟ್ಟರೆ ಕೊಡುತ್ತೇನೆ ಎಂದಾಗ  ಆಕೀಲ್  ಅಂಗಡಿಯಲ್ಲಿ ಇದ್ದ  ಕಬಾಬ್  ಅನ್ನು ಬಾಣಲಿಯಿಂದ ತೆಗೆಯುವ ಕಬ್ಬಿಣದ  ಜಾಲರಾದಿಂದ ಪಿರ್ಯಾದಿದಾರರಿಗೆ ಹೊಡೆದು  ಆಮೇಲೆ ಬಿಸಿ ಎಣ್ಣೆಯಲ್ಲಿ ಜಾಲರಾವನ್ನು ಅದ್ದಿ ಬಿಸಿ ಎಣ್ಣೆಯನ್ನು ಪಿರ್ಯಾದಿ ಮೈಮೇಲೆ ಹಾಕಲು ಬಂದಾಗ ಪಿರ್ಯಾದಿಯವರ ತಂದೆಯವರಾದ ಶೇಖ್ ಅಲ್ಲಾಬಕಾಷ್ ರವರು ಅಡ್ಡ ಬಂದಿದ್ದು  ಬಿಸಿಎಣ್ಣೆಯನ್ನು ಪಿರ್ಯಾದಿಯವರ ತಂದೆಗೆ ಎರಚಿದಾಗ ಬಲಗೈ ಮೇಲೆ ಮತ್ತು ಬಲ ಹೊಟ್ಟೆಯ ಮೇಲೆ  ಬಿಸಿ ಎಣ್ಣೆ ಬಿದ್ದು  ಅಲ್ಲಲ್ಲಿ ಸುಟ್ಟ ಗಾಯ ಮಾಡಿರುತ್ತಾನೆ. ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

2) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.201/2018 ಕಲಂ.317 ಐ.ಪಿ.ಸಿ:-

     ದಿನಾಂಕ: 05/12/2018 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಡಾ// ಎಂ.ವಿ.ವಿಜಯಕುಮಾರ್ ಜಿಲ್ಲಾ ಶಸ್ತ್ರ ಚಿಕಿತ್ಸಕರು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 03/12/2018 ರಂದು ಬೆಳಿಗ್ಗೆ ಸುಮಾರು 6-30 ರ ಸಮಯದಲ್ಲಿ 1 ದಿನದ ನವಜಾತ ಹೆಣ್ಣು ಶಿಶುವನ್ನು ದೇವರ ತೊಟ್ಟಿಲುನಲ್ಲಿ ಬಿಟ್ಟುಹೋಗಿರುತ್ತಾರೆ. ಸದರಿ ಮಗುವನ್ನು ರಕ್ಷಣೆ ಮಾಡಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿಕೊಂಡಿದ್ದು, ಮಗುವಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಿರುತ್ತೇವೆ. ಸದರಿ ಮಗುವಿನ ಬಗ್ಗೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ ಎಂದು ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.259/2018 ಕಲಂ.307-309 ಐ.ಪಿ.ಸಿ:-

     ದಿನಾಂಕ:05/12/2018 ರಂದು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೊ ಪಡೆದು ಗಾಯಾಳು ಮನೋಜ್ ಬಿನ್ ವೆಂಕಟೇಶಪ್ಪ 12 ವರ್ಷ, 6 ನೇ ತರಗತಿ ಎಸ್ ಸಿ ಜನಾಂಗ, ಆಶ್ರಯ ಬಡಾವಣೆ. ಚಿಂತಾಮಣಿ ನಗರ. ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ,  ನಮ್ಮ ತಂದೆ ವೆಂಕಟೇಶಪ್ಪ, ತಾಯಿ  ರಾಜಮ್ಮ ರವರಿಗೆ ನಾವು 5  ಜನ ಮಕ್ಕಳಿದ್ದು 1 ನೇ  ಕಿರಣ್  15 ವರ್ಷ,  2ನೇ ತಾನು  3ನೇ  ಅಮೃತ 10 ವರ್ಷ,  4ನೇ  ಭೂಮಿಕ 8 ವರ್ಷ,  5 ನೇ ಬಾಬು 6 ವರ್ಷ ರವರಾಗಿರುತ್ತಾರೆ.  ನನ್ನ  ತಂದೆ  ತಿಂಗಳಿಗೊಮ್ಮೆ  ಮನೆಗೆ ಬರುತ್ತಿದ್ದು, ಆ ಸಮಯದಲ್ಲಿ  ನಮ್ಮ ತಾಯಿಯೊಂದಿಗೆ  ಜಗಳವಾಡಿಕೊಂಡು  ಹೊರಟುಹೋಗುತ್ತಿದ್ದರು,  ನಮ್ಮ ವಿದ್ಯಾಬ್ಯಾಸಕ್ಕಾಗಲಿ, ಮನೆಯ ಸಂಸಾರಕ್ಕಾಗಲಿ,  ಹಣ ಕೊಡುತ್ತಿರಲಿಲ್ಲ  ನನ್ನ ತಂದೆ ಹಲವಾರು ಕಡೆ ಕೈ ಸಾಲ  ಮಾಡಿದ್ದು ಸಾಲಗಾರರು ಮನೆಯ ಹತ್ರ ಬಂದು ತನ್ನ  ತಾಯಿಯನ್ನು ಕೇಳುತ್ತಿದ್ದರು ತಮ್ಮ ತಂದೆ ಬೇರೆ ಹೆಂಗಸರೊಂದಿಗೆ  ಸಹವಾಸ ಮಾಡಿಕೊಂಡಿದ್ದಾರೆಂದು  ತನ್ನ ತಾಯಿ  ತಂದೆಯೊಂದಿಗೆ  ಜಗಳ ಮಾಡುತ್ತಿದ್ದರು,  ದಿನಾಂಕ: 04/12/2018 ರಂದು ಸಂಜೆ 5-30 ಗಂಟೆಯಲ್ಲಿ ತಮ್ಮ ತಾಯಿ   ತಮ್ಮ ತಂದೆಯವರಿಗೆ  ಪೋನ್ ಮಾಡಿದಾಗ ಪೋನಿನಲ್ಲಿ ಬೈಯ್ದಾಕೊಂಡಿರುತ್ತಿದ್ದರು,  ಆ ನಂತರ   ಊಟಮಾಡಿ ಮಲಗಿದೆವು  ಮದ್ಯ ರಾತ್ರಿ 12-00 ಗಂಟೆಯಲ್ಲಿ  ನನ್ನನ್ನು ಅಮೃತ, ಭೂಮಿಕ ರವರನ್ನು  ನಮ್ಮ ತಾಯಿ  ನಿದ್ದೆಯಿಂದ  ಎಬ್ಬಿಸಿ ಲಕ್ಷ್ಮಣ ರೇಖೆಯನ್ನು ಪುಡಿ ಮಾಡಿ ನೀರಿನಲ್ಲಿ  ಬೆರೆಸಿಕೊಂಡು ನಿಮ್ಮ  ತಂದೆ ಮನೆಗೆ ಸರಿಯಾಗಿ  ತಂದು ಹಾಕುವುದಿಲ್ಲ. ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ನಾವೆಲ್ಲ ಬದುಕುವುದು ಬೇಡ ಸತ್ತುಹೋಗೋಣವೆಂತ ಹೇಳಿ  ಲಕ್ಷ್ಮಣ ರೇಖೆ ಬೆರೆಸಿದ್ದ  ನೀರನ್ನು ಕುಡಿದು ನಂತರ  ಬ್ಲೇಡಿನಿಂದ  ತನ್ನ ಬಲ ಬಾಗದ ಕುತ್ತಿಗೆಗೆ ಕೊಯ್ದುಕೊಂಡು  ಆ ನಂತರ  ನೀವು ಇನ್ನು  ಮುಂದೆ ಬದುಕುವುದು ಬೇಡ ಸತ್ತುಹೋಗಿಯೆಂದು  ಹೇಳಿ ಅದೇ ಬ್ಲೇಡಿನಿಂದ  ನನ್ನ ಕುತ್ತಿಗೆಯ ಎಡಬಾಗಕ್ಕೆ  ಅಮೃತ ಮತ್ತು ಭೂಮಿಕ ರವರ  ಕುತ್ತಿಗೆಯ  ಎಡಬಾಗಕ್ಕೆ ಕೊಯ್ದು ಕಲೆ ಮಾಡಲು  ಪ್ರಯತ್ನಿಸಿದಳು ನಮಗೆ ನೋವಾಗಿ  ಜೋರಾಗಿ ಕಿರುಚಿಕೊಂಡಾಗ ನಮ್ಮ ತಾಯಿಯ ಸ್ನೇಹಿತೆಯಾದ ಮಾದವಿ  ನಮ್ಮ ಮಾವನಾದ ಜಿಮ್ ನಾಗ ರವರು  ರಕ್ತ ಬರುತ್ತಿದ್ದ ನಮ್ಮನ್ನು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಿರುತ್ತಾರೆ. ನಮ್ಮ ತಾಯಿ  ಜೀವನದಲ್ಲಿ ಬೇಸತ್ತು  ಆತ್ಮಹತ್ಯೆ ಗೆ ಪ್ರಯತ್ನಿಸಿ ನಮ್ಮನ್ನು ಸಾಯಿಸಲು ಪ್ರಯತ್ನಿಸಿರುತ್ತಾಳೆಂದು ದೂರು

4) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.271/2018 ಕಲಂ.279-337 ಐ.ಪಿ.ಸಿ:-

     ದಿನಾಂಕ:04.12.2018 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:24.11.2018 ರಂದು ಬೆಳಿಗ್ಗೆ 5-00 ಗಂಟೆಯಲ್ಲಿ ತನ್ನ ಭಾಮೈದನಾದ ವರಪ್ರಸಾದ್ ಜಾನಕಿ ರವರು ತನ್ನ ಬಾಬತ್ತು ಕೆ.ಎ-03 ಎಮ್.ವೈ-0297 ನೊಂದಣಿಯ ಹುಂಡೈ ಕ್ರೆಟಾ ಕಾರಿನಲ್ಲಿ ಬೆಂಗಳೂರಿನಿಂದ ಚಾಲನೆ ಮಾಡಿಕೊಂಡು ಆಂಧ್ರ್ರಪ್ರದೇಶ ರಾಜ್ಯದ ಧರ್ಮವರಂ ಗೆ ಎನ್.ಎಚ್-7 ರಸ್ತೆಯಲ್ಲಿ ಹೋಗುತ್ತಿದ್ದಾಗ, ಬೆಳಿಗ್ಗೆ ಸುಮಾರು 7-10 ಗಂಟೆಯಲ್ಲಿ ಚೆಂಡೂರು ಕ್ರಾಸ್ ನಿಂದ ಸ್ವಲ್ಪ ಹಿಂದೆ ಯಾವುದೋ ಒಂದು ನಾಯಿ ಅಡ್ಡ ಬಂದಾಗ ಸಡನ್ ಆಗಿ ವರಪ್ರಸಾದ್ ರವರು ಬ್ರೇಕ್ ಹಾಕಿದಾಗ, ಕಾರು ತನ್ನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ಪಲ್ಟಿ ಹೊಡೆದು ಬಿದ್ದು ಕಾರು ಪೂರ್ತಿ ಜಕಂಗೊಂಡಿದ್ದು, ಆದರೆ ಕಾರಿನೊಳಗೆ ಏರ್ ಬ್ಯಾಗದ ಓಪನ್ ಆಗದೇ ತನ್ನ ಭಾಮೈದ ವರಪ್ರಸಾದ್ ರವರಿಗೆ ತೀವ್ರವಾದ ಗಾಯಗಳಾಗಿ ಎಡ ಕೈ ಮತ್ತು ಎಡ ಕಾಲುಗೆ ಹಾಗೂ ಎದೆಗೆ ತೀವ್ರವಾದ ಗಾಯಗಳಾಗಿದ್ದು, ಕತ್ತಿನ ಬಳಿ ಮೂಳೆ ಮುರಿತಗಾಯವಾಗಿದ್ದು, ಅಪಘಾತದ ಸ್ಥಳ್ಕಕೆ ಸಾರ್ವಜನಿಕರು ಹೋಗಿ ತನ್ನ ಭಾಮೈದನನ್ನು ರಕ್ಷಿಸಿ ಆಂಬುಲೆನ್ಸ್ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವಿಚಾರ ತಿಳಿದುಕೊಂಡು ತಾನು ಕೂಡಲೇ ಆಸ್ಪತ್ರೆ ಬಳಿ ಹೋಗುವಷ್ಟರಲ್ಲಿ ತನ್ನ ಭಾಮೈದನಿಗೆ ವೈಧ್ಯರು ಚಿಕಿತ್ಸೆ ನೀಡುತ್ತಿದ್ದು, ವೈಧ್ಯರು ಹೆಚ್ಚಿನ ಚಿಕತ್ಸೆಗೆ ತನ್ನ ಭಾಮೈದನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಆಗ ತನ್ನ ಕಾರಿನಲ್ಲಿ ತನ್ನ ಭಾಮೈದನನ್ನು ಬೆಂಗಳೂರಿನ ಆಸ್ಟರ್ ಸಿ.ಎಮ್.ಐ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ತನ್ನ ಭಾಮೈದನ ಕತ್ತಿನ ಮೂಳೆ ಮುರಿತಗೊಂಡಿದ್ದು ರೆಸ್ಟ್ ಬೇಕೆಂದು ವೈಧ್ಯರು ತಿಳಿಸಿದ್ದು, ದಿನಾಂಕ:26.11.2018 ರಂದು ತನ್ನ ಭಾಮೈದನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದು, ತನ್ನ ಭಾಮೈದನು ಓಡಾಡಲು ಸಾಧ್ಯವಾಗದೇ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದು, ತಾನು ಸಹ ಆಸ್ಪತ್ರೆಯಲ್ಲಿ ತನ್ನ ಭಾಮೈದನ ಆರೈಕೆ ನೋಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ, ಮೇಲ್ಕಂಡಂತೆ ಜರುಗಿರುವ ಅಪಘಾತದ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುತ್ತಾರೆ.

5) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.272/2018 ಕಲಂ.279 ಐ.ಪಿ.ಸಿ:-

     ದಿನಾಂಕ:04.12.2018 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ತನ್ನ ಮಗನ ಬಾಬತ್ತು ಕೆ,ಎ-04 ಎಮ್.ಜೆ-5056 ನೊಂದಣಿಯ ಕಾರಿನಲ್ಲಿ ಚಾಲಕ ಬಾದಣ್ಣ ರವರೊಂದಿಗೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ನಲ್ಲಚೆರುವು ಗ್ರಾಮದಲ್ಲಿ ತಮ್ಮ ಜಮೀನಿನ ಪೋಡಿ ಮಾಡುವ ಕೆಲಸದ ನಿಮಿತ್ತ ಬೆಂಗಳೂರಿನಿಂದ-ಎನ್,ಎಚ್-7 ರಸ್ತೆಯಲ್ಲಿ ಹೋಗುವಾಗ, ಮದ್ಯಾಹ್ನ 11-20 ಗಂಟೆಯಲ್ಲಿ ಕೆ,ಎ-51 ಎ-4590 ನೊಂದಣಿಯ ಟಿಪ್ಪರ್ ಲಾರಿ ತಮ್ಮ ಕಾರಿಗೆ ಓವರ್ ಟೆಕ್ ಮಾಡುವ ಸಂಧರ್ಭದಲ್ಲಿ ತಮ್ಮ ಕಾರಿನ  ಬಲಭಾಗಕ್ಕೆ ಡಿಕ್ಕಿ ಹೊಡೆದು ಸುಮಾರು 10-15 ಅಡಿ ಕಾರನ್ನು ತಳ್ಳಿಕೊಂಡು ಹೋಗಿದ್ದು ತಮ್ಮ ಕಾರು ಸಂಪೂರ್ಣ ಜಖಂಗೊಂಡಿದ್ದು, ತಮ್ಮ ಕಾರಿಗೆ ಅಪಘಾತಪಡಿಸಿದ ಮೇಲ್ಕಂಡ ಟಿಪ್ಪರ್ ಲಾರಿಯ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು ಆಗಿರುತ್ತೆ.

6) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.273/2018 ಕಲಂ.427-447 ಐ.ಪಿ.ಸಿ:-

     ದಿನಾಂಕ:04.12.2018 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಚಿಕ್ಕಬಳ್ಳಾಪುರ ಜಿಲ್ಲೆ  ಮಂಡಿಕಲ್  ಹೋಬಳಿಯ ರೋಪ್ಪಾರ್ಲಹಳ್ಳಿ ಗ್ರಾಮದ ಸರ್ವೆ ನಂ:90/1ಎ2.90/2.88.90/1ಎ.90/1ಬಿ ಜಮೀನಿನಲ್ಲಿ ಒಟ್ಟು 5 ಎಕರೆ 35 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ದ್ರಾಕ್ಷಿ ಬೆಳೆ & ಆಲೂಗಡ್ಡೆ ಬೆಳೆಯನ್ನು ಬೆಳೆದಿದ್ದು, ಸದರಿ ಜಮೀನಿನ ಸುತ್ತಲೂ ತಂತಿ ಬೇಲಿಯನ್ನು ಅಳವಡಿಸಿದ್ದು, ದಿನಾಂಕ:03.11.2018 ರಂದು ಸಂಜೆ 5-00 ಗಂಟೆಯಲ್ಲಿ ಸೋಮವಾರ ಗುಡಿಬಂಡೆ ತಾಲೂಕು ವರ್ಲಕೊಂಡ ಗ್ರಾಮ ಪಂಚಾಯ್ತಿಯ ಕೆಳಗಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡುವ ನೆಪದಲ್ಲಿ ಅದೇ  ಗ್ರಾಮಸ್ಥರು ಉದ್ದೇಶ ಪೂರ್ವಕವಾಗಿ ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ತಂತಿ ಬೇಲಿಯನ್ನು ಕಟಾವು  ಮಾಡಿ ದ್ರಾಕ್ಷಿ ಬೆಳೆಗೆ ಅತಿಕ್ರಮಣ ಮಾಡಿ ಬೆಳೆದಿರುವ ಆಲೂಗಡ್ಡೆ ಬೆಳೆಯನ್ನು ತುಳಿದು ಅಪಾರ ನಷ್ಟವನ್ನುಂಟು ಮಾಡಿದ್ದು, ಆ ಬಗ್ಗೆ ವಿಡೀಯೋ ಕ್ಯಾಸೇಟ್ ಇದ್ದು  ಸದರಿ ವೀಡಿಯೋ ಕ್ಯಾಸೇಟ್ ಪರಿಶೀಲಿಸಿ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿರುತ್ತಾರೆ.

7) ಶಿಡ್ಲಘಟ್ಟ ಪುರ  ಪೊಲೀಸ್ ಠಾಣೆ ಮೊ.ಸಂ.222/2018 ಕಲಂ.279-337 ಐ.ಪಿ.ಸಿ:-

     ದಿನಾಂಕ.04.12.2018 ರಂದು ಮದ್ಯಾಹ್ನ 3.30 ಗಂಟೆಗೆ ಪಿರ್ಯಾದಿ ಅರುಣ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.03.12.2018 ರಂದು ಬೆಳಿಗ್ಗೆ 11.00 ಗಂಟೆಗೆ ನಾನು ನಮ್ಮ ತಂದೆ ಎಂ.ಎಂ.ಕೃಷ್ಣಪ್ಪ ಬಿನ್ ಲೇಟ್ ಮುನಿಶಾಮಪ್ಪ, ಎಂಬುವರೊಂದಿಗೆ ನಮ್ಮ ಸ್ವಂತ ಕೆಲಸದ ಮೇಲೆ ಅಂದರೆ ತಾಲ್ಲೂಕು ಕಚೇರಿಗೆ ನಮ್ಮ KA.40.Q.8188 ದ್ವಿಚಕ್ರ ಹಿರೋ ಹೊಂಡಾ ಸ್ಲ್ಪೇಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಕೆಲಸ ಮುಗಿದ ಮೇಲೆ ಶಿಡ್ಲಘಟ್ಟ ಮಯೂರ ವೃತ್ತದ ಮೂಲಕ ನಮ್ಮೂರಿಗೆ ವಾಪಸ್ಸು ಹೋಗಲು ನನ್ನ ದ್ವಿಚಕ್ರ ವಾಹನದಲ್ಲಿ ನಮ್ಮ ತಂದೆಯನ್ನು ಹಿಂಬದಿ ಕುಳ್ಳರಿಸಿಕೊಂಡು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 1.00 ಗಂಟೆಯಲ್ಲಿ ಮಯೂರ ಸರ್ಕಲ್ ನಿಂದ ಸ್ವಲ್ಪ ಮುಂದೆ ತಿರುವಿನಲ್ಲಿ ಶಿಡ್ಲಘಟ್ಟ ಬಸ್ ನಿಲ್ದಾಣ ಕಡೆಯಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ KA.40.F.875 ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಎಡಭಾಗದ ರಸ್ತೆ ರಿಪೇರಿ ಇದ್ದುದ್ದರಿಂದ ಮಣ್ಣಿನ ರಸ್ತೆ ಬಿಟ್ಟು ಬಲಭಾಗದ ರಸ್ತೆಗೆ ಬರಲು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಪರಿಣಾಮ ನಾವು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು, ಆ ಸಮಯದಲ್ಲಿ ನನಗೆ ಬಲಕಾಲಿನ ಹೆಬ್ಬರಳಿಗೆ, ಮೊಣಕಾಲು ಕೆಳಗೆ, ಎಡಮುಂಗೈಗೆ ರಕ್ತಗಾಯಗಳಾಗಿರುತ್ತೆ. ಹಿಂದೆ ಕುಳಿತಿದ್ದ ನಮ್ಮ ತಂದೆಗೆ ಬಲಕೈಗೆ ಮೊಳೆ ಮುರಿತಗಾಯವಾಗಿ ಬಲಭುಜಕ್ಕೆ ಸಹ ತೀವ್ರವಾದ ಪೆಟ್ಟಾಗಿರುತ್ತೆ. ಆಗ ಪೆಟ್ರೋಲ್ ಬಂಕ್ ಬಳಿ ಇದ್ದ ನಮ್ಮ ಗ್ರಾಮದ ಮಂಜುನಾಥ ಮತ್ತು ಪವನ್ ಕುಮಾರ್ ಎಂಬುವರು ಬಂದು ಗಾಯಗೊಂಡಿದ್ದ ನಮ್ಮನ್ನು ಉಪಚರಿಸಿ ಬೇರೆ ವಾಹನದಲ್ಲಿ ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವ್ಶೆದ್ಯರು ಪ್ರಥಮ ಚಿಕಿತ್ಸೆ ನೀಡಿದ ನಮ್ಮ ತಂದೆಯನ್ನು ಹೆಚ್ಚಿನ ಚಿಕಿತ್ಸೆ ಬೆಂಗಳೂರು ಮಲ್ಲಿಗೆ ಆಸ್ಪತ್ರೆಯಲ್ಲಿ ದಾಖಲಿಸಿರುತ್ತೇವೆ. ಈ ಅಪಘಾತವುಂಟು ಮಾಡಿದ ಮೇಲ್ಕಂಡ ಬಸ್ಸಿನ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಮಂಜುನಾಥ ಬಿನ್ ವೆಂಕಟರಾಯಪ್ಪ, ಚಿಕ್ಕಬಳ್ಳಾಪುರ ಡಿಪೋ ಎಂದು ತಿಳಿದಿರುತ್ತೆ. ಸದರಿ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.