ದಿನಾಂಕ: 05-04-2019 ರ ಅಪರಾಧ ಪ್ರಕರಣಗಳು

1)  ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 107/2019. ಕಲಂ. 323, 324, 504, 506 ರೆ/ವಿ 34 ಐ.ಪಿ.ಸಿ:-

     ದಿನಾಂಕ:04/04/2019 ರಂದು ಮದ್ಯಾಹ್ನ 3-00 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನಾರಾಯಣಸ್ವಾಮಿ.ವಿ ಬಿನ್ ಲೇಟ್ ವೆಂಕಟಪ್ಪ, ವಕ್ಕಲಿಗರು, ವಾಸ ಕನ್ನಂಪಲ್ಲಿ ಗ್ರಾಮ,ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೇ, ದಿನಾಂಕ:03/04/2019 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿ ಇದ್ದಾಗ ನಮ್ಮ ಗ್ರಾಮದ ವಾಸಿ ಡಿ.ಶ್ರೀನಿವಾಸ್ ಬಿನ್ ದೊಡ್ಡನಾರಾಯಣಪ್ಪ ಮತ್ತು ಅವರ ಅಣ್ಣನಾದ ವೆಂಕಟರೆಡ್ಡಿ ಬಿನ್ ದೊಡ್ಡನಾರಾಯಣಪ್ಪ ರವರು ಹಳೆಯ ವೈಷಮ್ಯದ ಹಿನ್ನೆಯಲ್ಲಿ ಸಮಾನ ಉದ್ದೇಶದಿಂದ ನಮ್ಮ ಮನೆಯ ಬಳಿ ಬಂದು ಏಕಾ ಏಕಿ ನನ್ನ ಮೇಲೆ ಜಗಳ ತೆಗೆದು ಲೇ ಲೋಫರ್ ನನ್ನ ಮಗನೇ ಸೂಳೆ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಶ್ರೀನಿವಾಸ ರವರು ತನ್ನ ಕೈಯಲ್ಲಿದ್ದ ಮೊಚ್ಚಿನ್ನು ತಿರುವಿಕೊಂಡು ನನ್ನ ಎಡಕಾಲಿನ ಮೊಣಕಾಲಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾರೆ. ವೆಂಕಟರೆಡ್ಡಿ ರವರು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಬಲಮುಂಗೈಗೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾನೆ. ಹಾಗು ಇಬ್ಬರು ಕೈಗಳಿಂದ ನನ್ನನ್ನು ಎಳೆದಾಡಿ ಮೈ ಮೇಲೆ ಹೊಡೆದು ನೋವುಂಟು ಮಾಡಿದ್ದು, ಮೇಲ್ಕಂಡವರು ಸ್ಥಳದಿಂದ ಹೋಗುವಾಗ ಈ ದಿನ ನೀನು ತಪ್ಪಿಸಿಕೊಂಡಿದ್ದೀಯಾ ನಿನ್ನನ್ನು ಮುಗಿಸಿಬಿಡುವವರೆಗೂ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

2)  ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 108/2019. ಕಲಂ. 504, 506 ರೆ/ವಿ 34 ಐ.ಪಿ.ಸಿ:-

     ದಿನಾಂಕ 05-04-2019 ರಂದು ಮದ್ಯಾಹ್ನ 1-30 ಗಂಟೆಗೆ ಠಾಣೆಯ ಪಿಸಿ 348 ರಾಜು ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ನೀಡಿದ ಅನುಮತಿ ಪತ್ರದ  ಸಾರಾಂಶವೆನೆಂದರೆ  ದಿನಾಂಕ:05/04/2019 ರಂದು ಚಿಂತಾಮಣಿ ಶ್ರೀಮತಿ ಶಬಾನಾ ಕೋಂ ಮೂರ್ತಿ ಕೋನಪಲ್ಲಿ ಗ್ರಾಮ ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ  ಸಾರಾಂಶವೆನೆಂದರೆ ಈ ಹಿಂದೆ ಕಾರಣಾಂತರಗಳಿಂದ ತನ್ನ ಮಾವ ನರಸಿಂಹಪ್ಪ, ರವಿ ಮತ್ತು ನಟ ರವರಿಗೆ ಗಲಾಟೆಯಾಗಿ ಚಿಂತಾಮಣಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ನಂತರ ಮೇಲ್ಕಂಡವರು ಸದರಿ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ 31-03-2019 ರಂದು ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ತಾನು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮೇಲ್ಕಂಡ ಚಿಂತಾಮಣಿ ನಗರದ ವಾಸಿ ರವಿ ಮತ್ತು ಆತನ ಸ್ನೇಹಿತರು ಕುಡಿದು ತಮ್ಮ ಮನೆ ಬಳಿ ಬಂದು ಮನೆಯ ಬಾಗಿಲನ್ನು ಹೊಡೆದು ತನ್ನ ಮಕ್ಕಳನ್ನು ಕುರಿತು ಅವಾಶ್ಚ ಶಬ್ದಗಳಿಂದ ಬೈದು ನಿಮ್ಮ ಅಮ್ಮ ಎಲ್ಲಿ, ಅವರ ಮೋಬೈಲ್ ನಂಬರ್ ಕೊಡು, ಅವರು ಎಲ್ಲಿಯಾದರೂ ಸಿಕ್ಕಿದರೆ ಅವಳನ್ನು ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾರೆ. ಆದ್ದರಿಂದ ಮೇಲ್ಕಂಡವರನ್ನು ಠಾಣೆಗೆ ಕರೆಯಿಸಿ ಸೂಕ್ತ ಬಂದೋಬಸ್ತ್ ಪಡಿಸಲು ಕೋರಿದ್ದರ ಮೇರೆಗೆ  ಠಾಣಾ ಎನ್.ಸಿ.ಆರ್ ನಂ 139/2019 ರಂತೆ ದಾಖಲಿಸಿಕೊಂಡಿರುತ್ತೆ.  ಸದರಿ ಪ್ರಕರಣವು ಅಸಂಙ್ಞೆಯ ಪ್ರಕರಣವಾದ್ದರಿಂದ ಕಲಂ 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಲು ಕೋರಿರುತ್ತೆ.

3) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 70/2019. ಕಲಂ. 78(III) ಕೆ.ಪಿ.ಆಕ್ಟ್ :-

     ಅಂಗಡಿಯ ಬಳಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಮತ್ತು ನಗರ ಠಾಣೆಯ ಪೊಲೀಸ್ ಸಿಬ್ಬಂದಿಯಾದ ಸಿ.ಪಿ.ಸಿ 511 ಮುರಳಿ ಕೃಷ್ಣ ಮತ್ತು ಸಿ.ಪಿ.ಸಿ 544 ವೆಂಕಟರವಣ, ರವರೊಂದಿಗೆ ಜೀಫದ ಸಂಖ್ಯೆ:ಕೆಎ-40-ಜಿ-1444 ವಾಹನದಲ್ಲಿ ಪ್ಲವರ್ ವೃತ್ತದ ಮಾರ್ಗವಾಗಿ ಆದರ್ಶ ಟಾಕೀಸ್ ಪಕ್ಕದ  ರಸ್ತೆಯ ಮೂಲಕ ಬಾಬ ಸರ್ಕಲ್ ನ ಟೀ ಅಂಗಡಿಯಿಂದ ಸ್ವಲ್ಪ ಹಿಂದೆ ಜೀಫ್ನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಟೀ ಅಂಗಡಿಯ ಬಳಿ ಯಾರೋ ಒಬ್ಬ ಆಸಾಮಿ ಕೈಯಲ್ಲಿ ಪೆನ್ನು ಮಟ್ಕಾ ಚೀಟಿಯನ್ನು ಹಿಡಿದು ಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆಯುತ್ತಾ ಹಣ ಕಟ್ಟುವಂತೆ ಪ್ರೇರೆಪಿಸುತ್ತಿಸುತ್ತಿದ್ದವನ   ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು  ಹೆಸರು ಮತ್ತು ವಿಳಾಸ ಕೇಳಲಾಗಿ, ಇದಾಯಿತ್ @ ಮುನ್ನಾ ಬಿನ್ ಅಬ್ದುಲ್ ಗಪೂರ್, 43 ವರ್ಷ, ಕೇಬಲ್ ಆಪರೇಟರ್, ವಾಸ: ವೆಂಕಟಗಿರೀಕೋಟೆ, ಚಿಂತಾಮಣಿ ನಗರ ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ  3720-00 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು, ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳಿಗೆ ನೀಡಿದ ವರದಿಯನ್ನು ಪಡೆದು ಠಾಣಾ ಮೊ,ಸಂಖ್ಯೆ:70/2019 ಕಲಂ:78(3) ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

4) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 71/2019. ಕಲಂ. 78(III) ಕೆ.ಪಿ.ಆಕ್ಟ್ :-

     ದಿನಾಂಕ:05-04-2019 ರಂದು ಬೆಳಗ್ಗೆ10-45 ಗಂಟೆಗೆ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ತಾನೂ ಬೆಳಗ್ಗೆ 9-15 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಕೆ.ಆರ್ ಬಡಾವಣೆಯಲ್ಲಿರುವ ವೆಂಕಟಾಚಲಪತಿ ನ್ಯಾಯ ಬೆಲೆ  ಅಂಗಡಿಯ ಮುಂಭಾಗದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಮತ್ತು ಪೊಲೀಸ್ ಸಿಬ್ಬಂದಿಯಾದ ಸಿ.ಪಿ.ಸಿ 375 ಮಂಜುನಾಥ, ಸಿ.ಪಿ.ಸಿ24 ನರೇಶ್ ಮತ್ತು ಸಿ.ಹೆಚ್.ಸಿ 126 ನಾಗಭೂಷಣ್ ರವರನ್ನು ಜೀಫ್ ಸಂಖ್ಯೆ:ಕೆಎ-40-ಜಿ-356 ವಾಹನದಲ್ಲಿ ಮಾರುತಿ ವೃತ್ತದ ಮೂಲಕ ಕೆ.ಆರ್ ಬಡಾವಣೆಯಿಂದ ಎಂ,ಜಿ ರಸ್ತೆಯ ಕಡೆಗೆ ಹೋಗುವ ರಸ್ತೆಯ ಮರೆಯಲ್ಲಿ ಜೀಫ್ ನ್ನು ನಿಲ್ಲಿಸಿ ನಿಂತು ನೋಡಲಾಗಿ ವೆಂಕಟಾಚಲಪತಿ ರೇಷನ್ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಯಾರೋ ಒಬ್ಬ ಆಸಾಮಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು  ಕೈಯಲ್ಲಿ ಪೆನ್ನು ಮಟ್ಕಾ ಚೀಟಿಯನ್ನು ಹಿಡಿದು ಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆಯುತ್ತಾ ಹಣ ಕಟ್ಟುವಂತೆ ಪ್ರೇರೆಪಿಸುತ್ತಿಸುತ್ತಿದ್ದವನ   ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು  ಹೆಸರು ಮತ್ತು ವಿಳಾಸ ಕೇಳಲಾಗಿ ಖಾದರ್ ವಲಿ @ ಮೆಹಬೂಬ್ ಬಿನ್ ಸಾಬೂಸಾಬ್, 62 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ ವಾಸ:ವೆಂಕಟಗಿರಿಕೋಟೆ, ಚಿಂತಾಮಣಿ ನಗರ ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ  640-00 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು, ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಿಗಳಿಗೆ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:71/2019 ಕಲಂ:78(3) ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

5) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 72/2019. ಕಲಂ. 78(III) ಕೆ.ಪಿ.ಆಕ್ಟ್ :-

     ದಿನಾಂಕ:05-04-2019 ರಂದು ಮಧ್ಯಾಹ್ನ 12-30 ಗಂಟೆಗೆ ಪಿ,ಐ ಸಾಹೇಬರು ಠಾಣಗೆ ಹಾಜರಾಗಿ ನೀಡಿ ವರದಿಯ ಸಾರಾಂಶವೆನೇಂದರೆ  ಬೆಳಗ್ಗೆ 11-15 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಗಜಾನನ ವೃತ್ತದ ಬಳಿ ಇರುವ ನ್ಯೂ ಸೆಲೆಕ್ಷನ್ ಶ್ಯಾಮಿಯಾನ ಹೌಸ್ ಮುಂಭಾಗದ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಮತ್ತು ಪೊಲೀಸ್ ಸಿಬ್ಬಂದಿಯಾದ ಸಿ.ಪಿ.ಸಿ 24 ನರೇಶ್ ಮತ್ತು ಸಿ.ಹೆಚ್.ಸಿ 126 ನಾಗಭೂಷಣ್, ಸಿ.ಹೆಚ್.ಸಿ 124 ನರಸಿಂಹಮೂರ್ತಿ ರವರನ್ನು  ಜೀಫ್ ಸಂಖ್ಯೆ:ಕೆಎ-40-ಜಿ-356 ವಾಹನದಲ್ಲಿ ಪ್ಲವರ್ ವೃತ್ತದ ಮೂಲಕ ಗಜಾನನ ವೃತ್ತದ ಬಳಿ ಮರೆಯಲ್ಲಿ ಜೀಫ್ ನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ  ನ್ಯೂ ಶ್ಯಾಮಿಯಾನ ಹೌಸ್  ಬಳಿ ಹೋಗಿ ಮರೆಯಲ್ಲಿ  ನಿಂತು ನೋಡಲಾಗಿ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಯಾರೋ ಒಬ್ಬ ಆಸಾಮಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು ಕೈಯಲ್ಲಿ ಪೆನ್ನು ಪೇಪರ್ ಹಿಡಿದುಕೊಂಡು ಮಟ್ಕಾ ಚೀಟಿಗಳನ್ನು ಬರೆಯುತ್ತಾ ಜನರನ್ನು ಗುಂಪು ಸೇರಿಸಿಕೊಂಡು  1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆಯುತ್ತಾ ಹಣ ಕಟ್ಟುವಂತೆ ಪ್ರೇರೆಪಿ ಸುತ್ತಿಸುತ್ತಿದ್ದವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು  ಹೆಸರು ಮತ್ತು ವಿಳಾಸ ಕೇಳಲಾಗಿ, ರಾಮಚಂದ್ರ ಬಿನ್ ಲೇಟ್ ಚಲುವರಾಜ್, 45 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ: ಕೆ.ಆರ್ ಬಡಾವಣೆ ಚಿಂತಾಮಣಿ ನಗರ  ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ  1460-00 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು, ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ  ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂಖ್ಯೆ:72/2018 ಕಲಂ:78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣದ ದಾಖಲಿಸಿರುತ್ತೆ.

6) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 73/2019. ಕಲಂ. 78(III) ಕೆ.ಪಿ.ಆಕ್ಟ್ :-

     ದಿನಾಂಕ:05-04-2019 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಬಿ/ ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಐ ಸಾಹೇಬರಾದ ಶ್ರೀ ಚಿನ್ನಪ್ಪ ರವರು ಮಧ್ಯಾಹ್ನ 14-00 ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ಚಿಂತಾಮಣಿ ತಾಲ್ಲೂಕು ಹಾಗೂ ನಗರದಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ತಾನೂ ಮತ್ತು ಸಿಬ್ಬಂದಿಯಾದ ಎ.ಎಸ್.ಐ ಆರ್ ನಾರಾಯಣಸ್ವಾಮಿಮತ್ತು ಪಾಪಣ್ಣ ಎ.ಎಸ್.ಐ, ಹೆಚ್.ಸಿ 198 ಮಂಜುನಾಥ, ಸಿ.ಪಿ.ಸಿ 365 ಮಲ್ಲಿಕಾರ್ಜುನ, ರವರೊಂದಿಗೆ ಸರ್ಕಾರಿ ಜೀಫ್ ನಂ ಕೆಎ-40 ಜಿ-270 ವಾಹನದಲ್ಲಿ ಚಿಂತಾಮಣಿ ನಗರದದಲ್ಲಿ ಗಸ್ತು ಮಾಡುತ್ತಿದ್ದಾಗ ಮಧ್ಯಾಹ್ನ ಸುಮಾರು 13-30 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದ ಬಂಬೂಬಜಾರ್ ರಸ್ತೆಯಲ್ಲಿ  ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ  ಆಸಾಮಿಯ ಮೇಲೆ ದಾಳಿ ಮಾಡಲು ಪಂಚರನ್ನು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ಬಂಬೂ ಬಜಾರ್ ನ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 80-00 ರೂಗಳು ಕೊಡುತ್ತೇನೆಂತ ಕೈಯಲ್ಲಿ ಪೆನ್ನು ಮತ್ತು ಹಾಳೆಯನ್ನು ಹಿಡಿದು ಕೊಂಡು ಹಣವನ್ನು ಕಟ್ಟುವಂತೆ  ಜನರಿಗೆ ಪ್ರೇರಿಪಿಸುತ್ತಿದ್ದ ಸದರಿ ವ್ಯೆಕ್ತಿಯ ಮೇಲೆ ಪೋಲಿಸರು ದಾಳಿಮಾಡಿ ಆತನನ್ನು ಹಿಡಿದ ಹೆಸರು ವಿಳಾಸ ಕೇಳಲಾಗಿ ತನ್ನ ಗೋವಿಂದ ಬಿನ್  ಲೇಟ್ ರತ್ನಂ, B,37 ವರ್ಷ, ನಾಯಕರು, ಕೂಲಿ ಕೆಲಸ ವಾಸ: ಬಂಬೂ ಬಜಾರ್, ಚಿಂತಾಮಣಿ ನಗರ ಎಂತ ತಿಳಿಸಿದ್ದು ಸದರಿ ಆಸಾಮಿಯನ್ನು ನಮ್ಮಗಳ ಸಮಕ್ಷಮ ಅಂಗ ಶೋದನೆ ಮಾಡಲಾಗಿ ಆತನ ಕೈಯಲ್ಲಿ ಒಂದು ಮಟ್ಕಾ ಚೀಟಿ ಮತ್ತು ಒಂದು ಪೆನ್ನು ಹಾಗೂ 1600-00 ರೂಗಳು ಇರುತ್ತೆ. ಇವುಗಳನ್ನು ಪಂಚನಾಮಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:73 /2019 ಕಲಂ:78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

7) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 74/2019. ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:05-04-2019 ರಂದು ಮಧ್ಯಾಹ್ನ 3-30 ಗಂಟೆಗೆ ಡಿ.ಸಿ.ಬಿ/ಸಿ.ಇ.ಎನ್ ಪೊಲಿಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಚಿನ್ನಪ್ಪ ರವರು ಮಾಲು , ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ಈ ದಿನ ಮಧ್ಯಾಹ್ನ ಚಿಂತಾಮಣಿ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ತನಗೆ ಅಕ್ರಮ ವಾಗಿ ಮಧ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಜೀಫ್ ಸಂಖ್ಯೆ ಕೆಎ 40 ಜಿ 270 ವಾಹನದಲ್ಲಿ ತಾನೂ ಹಾಗೂ ಸಿಬ್ಬಂದಿ ಮತ್ತು ಪಂಚರನ್ನು ಕರೆದುಕೊಂಡು ಚೇಳೂರು ವೃತ್ತದ ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಯಾರೋ ಒಬ್ಬ ಆಸಾಮಿ ಒಂದು ಬಿಳಿ ಪ್ಲಾಸ್ಟಿಕ್  ಚೀಲವನ್ನು ಎತ್ತಿಕೊಂಡು ಬರುತ್ತಿದ್ದು ಅನುಮಾನದ ಮೇಲೆ ಸದರಿ ಆಸಾಮಿಯನ್ನು ಹಿಡಿದು ಪರಿಶೀಲಿಸಲಾಗಿ ಚೀಲದಲ್ಲಿ ಮಧ್ಯ ತುಂಬಿದ 180 ML OLD TAVERN WISKHY 12 ಟೆಟ್ರಾ ಪ್ಯಾಕೆಟ್ ಗಳು ಹಾಗೂ HAYWARDS CHEERS WHISKEY 90 ML ನ 22 ಟೆಟ್ರಾ ಪ್ಯಾಕೆಟ್ ಗಳು ಇದ್ದು ಸದರಿ ಮಧ್ಯದ ಪಾಕೇಟ್ ಗಳನ್ನು ಸಾಗಿಸಲು ನಿಮ್ಮ ಬಳಿ ಯಾವುದಾರರೂ ಪರವಾನಿಗೆ ಇದಿಯೇ ಎಂಬುದಾಗಿ ಕೇಳಲಾಗಿ ಯಾವುದು ಇರುವುದಿಲ್ಲಾವೆಂತ ತಿಳಿಸಿದ್ದು ಅಕ್ರಮವಾಗಿ ಯಾವುದೇ ಪರವಾಗಿಗೆ ಇಲ್ಲದೇ ಮಧ್ಯ ಮಾರಾಟ ಮಾಡಲು ಸಾಗಿಸುತ್ತಿದ್ದ  ಟೆಟ್ರಾ ಪ್ಯಾಕೇಟ್ ಗಳನ್ನು  ಸುಮಾರು 4 ಲೀಟರ್ 140 ML ನ ಸುಮಾರು 1556.60 ರೂ ಗಳನ್ನು ಬೆಲೆ ಬಾಳುವ ಮಾಲನ್ನು  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:74/2019 ಕಲಂ:32,34 ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

8) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 104/2019. ಕಲಂ. 279, 304(A) ಐ.ಪಿ.ಸಿ:-

     ದಿನಾಂಕ 04/04/2019 ರಂದು ಸಂಜೆ 4.30 ಗಂಟೆಗೆ ಪಿರ್ಯಾಧಿದಾರರಾದ ಗಂಗಾಧರಪ್ಪ ಬಿನ್ ಲೇಟ್ ಓಬಳಾಪ್ಪ,38 ವರ್ಷ, ಪ.ಜಾ.ತಿ, ಕೂಲಿಕೆಲಸ, ಸಿಂಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 04/04/2019 ರಂದು ಮಧ್ಯಾಹ್ನ ನಮ್ಮ ತಾಯಿಯಾದ ವೆಂಕಟಮ್ಮ ಕೋಂ ಲೇಟ್ ಓಬಳಪ್ಪ ,ಸುಮಾರು 70 ವರ್ಷ, ಇವರಿಗೆ ಪಿಂಚಣಿ ಹಣವನ್ನು ತರಬೇಕಾಗಿದ್ದರಿಂದ ನಮ್ಮ ಗ್ರಾಮದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಗೆದರೆ ಗ್ರಾಮಕ್ಕೆ ಹೋಗಬೇಕಾಗಿದ್ದರಿಂದ ನಮ್ಮ ತಾಯಿಗೆ ವಯಸ್ಸಾಗಿದ್ದು ಹಾಗೂ ಮದ್ಯಾಹ್ನ ಬಿಸಿಲು ಹೆಚ್ಚಾಗಿದ್ದರಿಂದ ನನ್ನ ಮಗ ಪ್ರದೀಪ ಬಿನ್ ಗಂಗಾಧರಪ್ಪರವರನ್ನು T V S ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುವಂತೆ ಕೇಳಿದ್ದು ಅದಕ್ಕೆ ನನ್ನ ಮಗ ಮಧ್ಯಾಹ್ನ ಸುಮಾರು 1:15 ಗಂಟೆಯಲ್ಲಿ KA-40, X-3947 TVS XL HEVEY DUTY ದ್ವಿ ಚಕ್ರವಾಹನದಲ್ಲಿ ನಮ್ಮ ಮನೆಯಿಮದ ನಮ್ಮ ತಾಯಿ ವೆಂಕಟಮ್ಮರವರನ್ನು ಹಿಂದೆ ಕೂರಿಸಿಕೊಂಡು ನನ್ನ ಮಗ ಪ್ರದೀಪ TVS XL ದ್ವಿಚಕ್ರ ವಾಹನವನ್ನು ನಮ್ಮ ಮನೆಯಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ದ್ವಿಚಕ್ರವಾಹನವನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ನಾರಾಯಣಪ್ಪನ ಮನೆಯ ಬಳಿಯ ರಸ್ತೆಯಲ್ಲಿ ಹಿಂದೆ ಕುಳಿತ್ತಿದ್ದ ನಮ್ಮ ತಾಯಿ ವೆಂಕಟಮ್ಮ ಕೆಳಕ್ಕೆ ಬಿದ್ದು ಹೋಗಿದದ್ದರಿಂದ ತಲೆಗೆ ಮತ್ತು ಭುಜಕ್ಕೆ ಗಾಯಗಳಾಗಿದ್ದು ಕೂಡಲೆ ಈಕೆಯನ್ನು ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಗುಣಮುಖಳಾಗದೆ ಮಧ್ಯಾಹ್ನ ಸುಮಾರು 3:30 ರ ಸಮಯದಲ್ಲಿ ಮೃತಪಟ್ಟಿರುತ್ತಾಳೆ ಮೃತ ದೇಹವು ಗೌರಿಬಿದನೂರು ಸರ್ಕಾರಿ ಆಸ್ವತ್ರೆಯ ಶವಗಾರದಲ್ಲಿ ಇರಿಸಿರುತ್ತದೆ. ಆದ್ದರಿಂದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 105/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ: 04/04/2019 ರಂದು ಸಂಝೆ 6.30 ಗಂಟೆಯಲ್ಲಿ   ಗೌರಿಬಿದನೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ವೈ.ಅಮರನಾರಾಯಣ ಸಾಹೇಬರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಸವೇನೆಂದರೆ,, ದಿನಾಂಕ : 04/04/2019 ರಂದು ಸಂಜೆ ಸುಮಾರು 5.00 ಗಂಟೆಯಲ್ಲಿ     ಗೌರಿಬಿದನೂರು ತಾಲೂಕು ಕುಡುಮಲಕುಂಟೆ ಗ್ರಾಮದ ಬಸ್ಸು ನಿಲ್ದಾಣದ ಬಳಿ ಮದ್ಯಪಾನ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಬಂದ ಮಾಹಿತಿ ಮೇರೆಗೆ ಇದೇ ದಿನ ಸಂಜೆ 5.30 ಗಂಟೆಗೆ ವೃತ್ತ ಕಚೇರಿಯಿಂದ ಪಂಚರು ಮತ್ತು ಪೋಲೀಸ್ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪಿನಲ್ಲಿ ಕುಡುಮಲಕುಂಟೆ ಗ್ರಾಮದ ಬಸ್ಸು ನಿಲ್ದಾಣದ ಬಳಿಗೆ ಹೋಗಿ ಸರ್ಕಾರಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಮಾಹಿತಿ ಬಂದ ಸ್ಥಳಕ್ಕೆ ಸ್ವಲ್ಪ ದೂರ ನಡೆದುಕೊಂಡು ಹೋಗುವಷ್ಠರಲ್ಲಿ ಸಮವಸ್ರದಲ್ಲಿದ್ದ ನಮ್ಮಗಳನ್ನು ಕಂಡು ಮದ್ಯಪಾನ ಮಾಡುತ್ತಿದ್ದ ಇಬ್ಬರು ಆಸಾಮಿಗಳು ಸ್ಥಳದಿಂದ ಓಡಿ ಹೋಗಿದ್ದು,ಮತ್ತೋಬ್ಬ ಆಸಾಮಿ ಒಂದು ಪ್ಲಾಸ್ಟಿಕ್ ಬ್ಯಾಗ್ ಇಟ್ಟುಕೊಂಡಿರುತ್ತಾನೆ.ಆತನನ್ನು ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ಕೇಳಲಾಗಿ ಸಂಜೀವರಾಯ  ಬಿನ್ ಲೇಟ್ ಸಂಜೀವಪ್ಪ 45 ವರ್ಷ ಆದಿ ಕರ್ನಾಟಕ ಜನಾಂಗ ಕೂಲಿ ಕೆಲಸ ವಾಸ: ಕುಡುಮಲಕುಂಟೆ ಗ್ರಾಮ ಗೌರಿಬಿದನೂರು ತಾಲೂಕು ಅಂತ ತಿಳಿಸಿದ್ದು,ಆತನ ಬಳಿ ಪ್ಲಾಸ್ಟಿಕ್ ಬ್ಯಾಗ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ  90 ಎಂ ಎಲ್ ಸಾಮರ್ಥ್ಯದ ಮದ್ಯ ತುಂಬಿದ Hay wards cheers whiskey ಯ  14  ಟೆಟ್ರಾ ಪ್ಯಾಕೆಟ್ ಗಳು ಹಾಗು  90 ಎಂ ಎಲ್ ನ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು  ಗಳಿರುತ್ತವೆ.ಒಟ್ಟು ಮದ್ಯ 1260 ಎಂ ಎಲ್ ನದ್ದಾಗಿದ್ದು,424 ರೂ ಬೆಲೆ ಬಾಳುವಂತಹದ್ದಾಗಿರುತ್ತೆ. ಮದ್ಯಪಾನ ಮಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ 03 ಮೂರು ಪ್ಲಾಸ್ಟಿಕ್ ಲೋಟಗಳು ಇರುತ್ತವೆ. ಮಾಲಾದ 1) 90 ಎಂ ಎಲ್ ಸಾಮರ್ಥ್ಯದ ಮದ್ಯ ತುಂಬಿದ Hay wards cheers whiskey ಯ  14  ಟೆಟ್ರಾ ಪ್ಯಾಕೆಟ್ ಗಳು 2).90 ಎಂ ಎಲ್ ನ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು 3). 03 ಪ್ಲಾಸ್ಟಿಕ್ ಲೋಟಗಳನ್ನು ಪಂಚರ ಸಮಕ್ಷಮ ಸಂಜೆ 5.30 ಗಂಟೆಯಿಂದ 6.00 ಗಂಟೆಯವರೆವಿಗು ಪಂಚನಾಮೆ ಮೂಲಕ  ಅಮಾನತ್ತು ಪಡಿಸಿಕೊಂಡು  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳವಾಕಾಶ ಮಾಡಿಕೊಟ್ಟ ಸಂಜೀವರಾಯ  ಬಿನ್ ಲೇಟ್ ಸಂಜೀವಪ್ಪ 45 ವರ್ಷ ಆದಿ ಕರ್ನಾಟಕ ಜನಾಂಗ ಕೂಲಿ ಕೆಲಸ ವಾಸ: ಕುಡುಮಲಕುಂಟೆ ಗ್ರಾಮ ಗೌರಿಬಿದನೂರು ತಾಲೂಕು. ರವರನ್ನು ವಶಕ್ಕೆ ಪಡೆದುಕೊಂಡು ಸಂಜೆ 6.30 ಗಂಟೆಗೆ  ಮಾಲು ಮತ್ತು ಆರೋಪಿತನೊಂದಿಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ  ವಾಪಸ್ಸಾಗಿ   ನೀಡಿದ ದೂರನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ಪ್ರ,ವ,ವರದಿಯನ್ನು ಘನ ನ್ಯಾಯಾಲಯಕ್ಕೆ ಇಲಾಖೆಯ ಮೇಲಿನ ಅಧಿಕಾರಿಗಳೀಗೆ ನಿವೇದಿಸಿಕೊಂಡಿರುತ್ತೆ.

10) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 106/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ : 04/04/2019 ರಂದು ರಾತ್ರಿ 9.00 ಗಂಟೆಯಲ್ಲಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಕೆ.ಸಿ.ಗೌತಮ್, ಪ್ರೊಬೇಷನರಿ ಡಿ.ವೈ.ಎಸ್.ಪಿ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ.  ದಿನಾಂಕ:04/04/2019 ರಂದು ಸಾಯಂಕಾಲ 6-45 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ಅಂಜಿನಪ್ಪ ಎಂಬುವವರು ತನ್ನ ಪೆಟ್ಟಿಗೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಠಾಣೆಯ ಅಪರಾಧ ಪಿ.ಎಸ್.ಐ ಲಿಯಾಕತ್ ಉಲ್ಲಾ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-61 ರಲ್ಲಿ ಕೋಡಿಹಳ್ಳಿ ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಂಜಿನಪ್ಪರವರ ಪೆಟ್ಟಿಗೆ ಅಂಗಡಿಯ ಮುಂದೆ ಒಬ್ಬ ಆಸಾಮಿ ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ 3 ಜನ ಗಂಡಸರು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದ 3 ಜನ ಗಂಡಸರು ಮತ್ತು ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರನ್ನು ಸ್ಥಳದಲ್ಲಿ ಬಿಸಾಡಿ ಓಡಿ ಹೋಗಿದ್ದು, ನಂತರ ಗ್ರಾಮಸ್ಥರಲ್ಲಿ ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಅಂಜಿನಪ್ಪ ಬಿನ್ ಲೇಟ್ ತಿಮ್ಮಪ್ಪ, ಸುಮಾರು 48 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಕೋಡಿಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನು ಸ್ಥಳದಲ್ಲಿ ಬಿಸಾಡಿ ಹೋಗಿದ್ದ  ಪ್ಲಾಸ್ಟಿಕ್ ಕವರ್ ನ್ನು ಪರಿಶೀಲಿಸಿದಾಗ, ಅದರಲ್ಲಿ ಮದ್ಯ ತುಂಬಿದ 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 8 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 1,440 ಲೀಟರ್ ಆಗಿರುತ್ತೆ. ಇವುಗಳ ಬೆಲೆ 593.04 ರೂ.ಗಳಾಗಿದ್ದು, ಮದ್ಯಪಾನ ಮಾಡುತ್ತಿದ್ದ ಸ್ಥಳದಲ್ಲಿ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇಲ್ಲದೇ ಇರುವುದರಿಂದ ಸ್ಥಳದಿಂದ ಪರಾರಿಯಾಗಿರುತ್ತಾನೆ, ಸ್ಥಳದಲ್ಲಿ ಸಂಜೆ 7-30 ಗಂಟೆಯಿಂದ ರಾತ್ರಿ 8-15 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಮೇಲ್ಕಂಡ ಮದ್ಯ ತುಂಬಿದ 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 8 ಟೆಟ್ರಾ ಪಾಕೆಟ್ ಗಳು ಸ್ಥಳದಲ್ಲಿ ಬಿದ್ದಿದ್ದ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳು ಮತ್ತು ಒಂದು ಪ್ಲಾಸ್ಟಿಕ್ ಕವರ್ ನ್ನು ವಶಕ್ಕೆ ತೆಗೆದುಕೊಂಡು ರಾತ್ರಿ 9-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ವಶಪಡಿಸಿಕೊಂಡಿರುವ ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿ ನೀಡಿd ದೂರನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆರುತ್ತೇನೆ.

11) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 107/2019. ಕಲಂ. 78(I), 78(3) ಕೆ.ಪಿ.ಆಕ್ಟ್:-

     ದಿನಾಂಕ: 04/04/2019 ರಂದು ರಾತ್ರಿ 9.30 ಗಂಟೆಯಲ್ಲಿ ಘನ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಗೌರಿಬಿದನೂರು  ರವರಿಂದ ಅನುಮತಿ ಪಡೆದುದ್ದರ ಸಾರಾಂಶವೇನೆಂದರೆ,  ಕೆ ಸಿ ಗೌತಮ್ ಪ್ರೋಬೇಷನರಿ ಡಿ ವೈ ಎಸ್ ಪಿ ಪ್ರಭಾರ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ  ರವರು  ದಿನಾಂಕ :04/04/2019 ರಂದು ಬೆಳಗ್ಗೆ ಸುಮಾರು 11.30 ಗಂಟೆಯಲ್ಲಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗೌರಿಬಿದನೂರು ತಾಲೂಕಿನ ಮುದುಗೆರೆ ತಾಲೂಕಿನ ಸಪ್ಪಲಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ರಸ್ತೆಯಲ್ಲಿ ಯಾರೋ ಆಸಾಮಿಗಳು ಮಟಕಾ ಅಂಕಿಗಳ ಬರೆದು ಜುಜಾಟವಾಡುತ್ತಿರುವುದಾಗಿ ನನಗೆ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಮತ್ತು ಕ್ರೈಂ ಪಿ ಎಸ್ ಐ ರವರಾದ ಶ್ರೀ ಲಿಯಾಕತ್ ಉಲ್ಲಾ ಮತ್ತು ಪೊಲೀಸ್ ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಸರ್ಕಾರಿ ಜೀಪಿನಲ್ಲಿ ಮುದುಗೆರೆ ಗ್ರಾಮದ ಬಳಿಗೆ ಹೋಗಿ ಮನೆಗಳ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಮಾಹಿತಿ ಬಂದ ಸ್ಥಳ ಸಪ್ಪಲಮ್ಮ ದೇವಸ್ಥಾನದ ಬಳಿಗೆ ಹೋಗಿ ನೋಡಿದಾಗ ದೇವಸ್ಥಾನದ ಮುಂಭಾಗದಲ್ಲಿರುವ ರಸ್ತೆಯಲ್ಲಿ ಮೂರು ಜನ ಆಸಾಮಿಗಳು ನಿಂತಿದ್ದು, ಒಬ್ಬ ಆಸಾಮಿಯು ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಬನ್ನಿ ಬನ್ನಿ ಒಂದು ರೂಗೆ 60 ರೂ ಕೊಡುತ್ತೇನೆಂದು ಹೇಳುತ್ತಿದ್ದು, ಮತ್ತೊಬ್ಬ ಆಸಾಮಿಯು ಹಣವನ್ನು ಸಂಗ್ರಣೆ ಮಾಡುತ್ತಿದ್ದು,ಇನ್ನೊಬ್ಬ ಆಸಾಮಿಯು ಪೆನ್ನಿನಲ್ಲಿ ಮಟ್ಕಾ ಅಂಕಿಗಳನ್ನು ಚೀಟಿಯಲ್ಲಿ ಬರೆದುಕೊಂಡು ಮಟ್ಕಾ ಜೂಜಾಟವಾಡುತ್ತಿದ್ದವರು,ನಾವುಗಳು ಸಮವಸ್ತ್ರದಲ್ಲಿದ್ದವನನ್ನು ನೋಡಿದ ಒಬ್ಬ ಆಸಾಮಿ ಸ್ಥಳದಿಂದ ಓಡಿ ಹೋಗಿದ್ದು, ಉಳಿದ ಇಬ್ಬರು ಆಸಾಮಿಗಳನ್ನು.ನಾವುಗಳು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಎಂತ 1) ಅಶ್ವತ್ಥಪ್ಪ ಬಿನ್ ನಂಜುಂಡಪ್ಪ 47 ವರ್ಷ ಮಡಿವಾಳ ಜನಾಂಗ ಕೂಲಿ ಕೆಲಸ ವಾಸ: ಮುದುಗೆರೆ ಗ್ರಾಮ ಗೌರಿಬಿದನೂರು ತಾಲೂಕು 2) ಬಾಲರಾಜು ಬಿನ್ ಲೇಟ್ ನಾರಾಯಣಪ್ಪ 45 ವರ್ಷ ನಾಯಕ ಜನಾಂಗ ಹೂವಿನ ವ್ಯಾಪಾರ ವಾಸ:ಮುದುಗೆರೆ ಗ್ರಾಮ ಗೌರಿಬಿದನೂರು ತಾಲೂಕು.ಅಂತ ತಿಳಿಸಿದ್ದು ,ಈ ಆಸಾಮಿಗಳ ಬಳಿ  ಓಡಿ ಹೋದವನ ಹೆಸರು ವಿಳಾಸ ಕೇಳಲಾಗಿ ಅನ್ಸರ್ @ ಬುಡ್ಡ  ಬಿನ್ ಫಕೃದ್ದೀನ್ ಸುಮಾರು 26 ವರ್ಷ ಮುಸ್ಲಿಂ ಜನಾಂಗ ಹೊಟೆಲ್ ನಲ್ಲಿ ಅಡುಗೆ ಕೆಲಸ ವಾಸ: ಕೊಟಾಲದಿನ್ನೆ ಗೌರಿಬಿದನೂರು ತಾಲೂಕು ಅಂತ ತಿಳಿಸಿದ್ದು, ಅಶ್ವತ್ಥಪ್ಪ  ಆಸಾಮಿಯ ಬಳಿ ಕೈಯಲ್ಲಿ ಮಟ್ಕಾ ಜುಜಾಟದಿಂದ ಸಂಗ್ರಹಣೆ ಮಾಡಿದ್ದ  ವಿವಿಧ ಮುಖ ಬೆಲೆಯ 940 ರೂ ನಗದು ಹಣವಿರುತ್ತೆ.ಬಾಲರಾಜು ವಿನ ಕೈಯಲ್ಲಿ ವಿವಿಧ ಅಂಕೆಗಳನ್ನು ಬರೆದಿರುವ ಒಂದು ಮಟ್ಕಾ ಚೀಟಿ ಹಾಗು ಒಂದು ಪೆನ್ನು ಇರುತ್ತೆ,ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು 1) 940 /ರೂ ನಗದು ಹಣ, 2) ಮಟ್ಕಾ ಚೀಟಿ  3) ಒಂದು . ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 12.ಗಂಟೆಯಿಂದ 12.30 ಗಂಟೆಯವರೆವಿಗು ಪಂಚನಾಮೆ ಮೂಲಕ  ಅಮಾನತ್ತು ಪಡಿಸಿಕೊಂಡು ಇದೇ ದಿನ ಠಾಣೆಗೆ ಮದ್ಯಾಹ್ನ 1.00 ಗಂಟೆಯಲ್ಲಿ ವಾಪಸ್ಸಾಗಿ ಠಾಣಾ ಎನ್ ಸಿ ಆರ್ 174/2019 ರೀತ್ಯ ದಾಖಲು ಮಾಡಿಕೊಂಡಿರುತ್ತೆನೆ.

  ಸದರಿ ಪ್ರಕರಣವು ಅಂಜ್ಞೆಯ ಪ್ರಕರಣವಾಗಿದ್ದರಿಂದ ಈ ಮೇಲ್ಕಂಡ ಆಸಾಮಿಗಳ ವಿರುದ್ಧ  ಕಲಂ; 78(1),(3) ಕರ್ನಾಟಕ ಪೊಲೀಸ್ ಕಾಯಿದೆ 1963 ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಲು ಘನ ನ್ಯಾಯಾಲಯದಲ್ಲಿ ಕೋರುತ್ತೇನೆ.

12) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 108/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ: 05/04/2019 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಗೌರೀಬಿದನೂರು ವೃತ್ತದ ಸಿ.ಪಿ.ಐ ಸಾಹೇಬರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:05/04/2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಚಿಕ್ಕಮಲ್ಲೇನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಗೋಪಿಬಾಯಿ ಎಂಬ ಹೆಂಗಸು ತನ್ನ ಮನೆಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಮೇರೆಗೆ  ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222 ರಲ್ಲಿ ಚಿಕ್ಕಮಲ್ಲೇನಹಳ್ಳಿ ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶ್ರೀಮತಿ ಗೋಪಿಬಾಯಿರವರ ಮನೆಯ ಮುಂದೆ ಒಬ್ಬ ಹೆಂಗಸು ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಮನೆಯ ಮುಂದೆ ಇಬ್ಬರು ಗಂಡಸರು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದ ಇಬ್ಬರು ಗಂಡಸರು ಓಡಿಹೋಗಿದ್ದು, ಚೀಲ ಹಿಡಿದುಕೊಂಡು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಹೆಂಗಸಿನ ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಗೋಪಿಬಾಯಿ ಕೋಂ ಕೃಷ್ಣಪ್ಪ, 28 ವರ್ಷ, ಲಂಬಾಣಿ ಜನಾಂಗ, ಕೂಲಿಕೆಲಸ, ಚಿಕ್ಕಮಲ್ಲೇನಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈಕೆ ಹಿಡಿದುಕೊಂಡು ನಿಂತಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 180 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 1,800 ಲೀಟರ್ ಇದ್ದು, ಇವುಗಳ ಬೆಲೆ 606.4 ರೂ.ಗಳಾಗಿದ್ದು, ಸ್ಥಳದಲ್ಲಿ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಹೆಂಗಸನ್ನು ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಮದ್ಯಾಹ್ನ 12-00 ಗಂಟೆಯಿಂದ 12-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ 180 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು ಸ್ಥಳದಲ್ಲಿ ಬಿದ್ದಿದ್ದ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

13) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 71/2019. ಕಲಂ. 279, 337 ಐ.ಪಿ.ಸಿ :-

     ದಿನಾಂಕ 04/04/2019 ರಂದು ಪಿರ್ಯಾದಿದಾರರಾದ ಶ್ರೀ ನಾರಾಯಣಸ್ವಾಮಿ ಬಿನ್ ಲೇಟ್ ಆಂಜಿನಪ್ಪ 32 ವರ್ಷ, ವಡ್ಡಿ ಜನಾಂಗ ಗೋರಂಟ್ಲ ಗ್ರಾಮದವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಅಣ್ಣ ಗಂಗಾದರ ವಯಸ್ಸು 35 ವರ್ಷ ರವರು ಸುಮಾರು 1 ವರ್ಷದ ಇಂದ ಬೆಂಗಳೂರು ಬಳಿ ಹೊಸಕೋಟೆಯಲ್ಲಿ ಕೋಳಿ ಫಾರಂ ನಲ್ಲಿ ಕೋಳಿ ಮೇಯಿಸುವ ಕೆಲಸ ಮಾಡುತ್ತಿದ್ದು, ಯುಗಾದಿ ಹಬ್ಬಕ್ಕೆ ಬರಲು ದಿನಾಂಕ:03-04-2019 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತನ್ನ ಬಾಬತ್ತು ಕೆ.ಎ-53 ಡಬ್ಲೂ-3152 ನೊಂದಣಿಯ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಎನ್,ಎಚ್-7 ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಕಡೆಯಿಂದ ತಮ್ಮ ಗ್ರಾಮಕ್ಕೆ ಬರುತ್ತಿದ್ದಾಗ, ಕೆ,ಎನ್,ಆರ್ ಕನ್ಸ್ಟ್ರಕ್ಷನ್ ಬಳಿ ಎನ್,ಎಚ್-7 ರಸ್ತೆಯಲ್ಲಿ ತಮ್ಮ ಅಣ್ಣ ಗಂಗಾಧರ ರವರು ಅತಿವೇಗ & ಅಜಾಗರೂಕತೆಯಿಂದ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಡಿಸ್ಕ್ ಬ್ರೇಕ್ ಹಾಕಿದಾಗ, ಕೆಳಗೆ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡಿದ್ದು. ಆಗ ಸ್ಥಳಕ್ಕೆ ಹೋದ ಗ್ರಾಮಸ್ಥರು ತಮ್ಮ ಅಣ್ಣನ ಪೋನ್ ಎತ್ತಿಕೊಂಡು ಅದರಲ್ಲಿದ್ದ ತನ್ನ ನಂಬರಿಗೆ ಪೋನ್ ಮಾಡಿ ವಿಚಾರ ತಿಳಿಸಿ ಗಾಯಗೊಂಡ ಗಂಗಾಧರನನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುವುದಾಗಿ ತಿಳಿಸಿದರು. ತಾನು ದಿನಾಂಕ:03-04-2019 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ಕೂಡಲೇ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಹೋಗಿ ತಮ್ಮ ಅಣ್ಣನನ್ನು ನೋಡಲಾಗಿ ತಲೆಗೆ ತೀವ್ರವಾದ ಗಾಯವಾಗಿದ್ದು ಬ್ಯಾಂಡೇಜ್ ಹಾಕಿರುತ್ತಾರೆ, ಬಲ ಕೈ ಮೊಣಕೈಗೆ ತರಚಿದ ಗಾಯಗಳಾಗಿದ್ದವು, ವೈಧ್ಯರು ತಮ್ಮ ಅಣ್ಣನಿಗೆ ತಲೆಗೆ ತಿವ್ರವಾದ ಗಾಯಗಳಾಗಿದ್ದು ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದರು, ಅದರಂತೆ ತಾನು ಆಂಬುಲೆನ್ಸ್ ನಲ್ಲಿ ತಮ್ಮ ಅಣ್ಣನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ತಮ್ಮ ಅಣ್ಣ ಕೋಮಾ ಸ್ಥಿತಿಯಲ್ಲಿದ್ದು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ನಿಮಾನ್ಸ್ ಆಸ್ಪತ್ರೆಯಲ್ಲಿ ತಮ್ಮ ಅಣ್ಣನ ಆರೈಕೆ ನೋಡಿಕೊಂಡಿದ್ದರಿಂದ ತಡವಾಗಿ ಠಾಣೆಗೆ ಹಾಜರಾಗಿ ಮೇಲ್ಕಂಡಂತೆ ಆಗಿರುವ ಅಪಘಾತದ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

14) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 71/2019. ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣಯ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:04-04-2019 ರಂದು ರಾತ್ರಿ ತಾವು ಗಸ್ತಿನಲ್ಲಿದ್ದಾಗ, ರಾತ್ರಿ 11-00 ಗಂಟೆಯಲ್ಲಿ ಸಾರ್ವಜನಿಕರು ತಮಗೆ ಪೋನ್ ಮಾಡಿ ಗುಡಿಬಂಡೆ ಕೆರೆ ಕಟ್ಟೆಯ ಬಳಿ ಸಾಯಿಬಾಬಾ ದೇವಾಲಯದ ಬಳಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಸೇವಿಸಿ ಸ್ಥಳದಲ್ಲಿ ಗಲಾಟೆ ಮಾಡುತ್ತಾ ರಸ್ತೆಯಲ್ಲಿ ತೊಂದರೆ ಮಾಡುತ್ತಿರುವುದಾಗಿ ಭಾತ್ಮಿದಾರರು ತಮಗೆ ನೀಡಿದ ಮಾಹಿತಿ ಮೇರೆಗೆ ತಾವು  ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-58 ರಲ್ಲಿ ಚಾಲಕ ಎಚ್,ಜಿ-631 ನರಸಿಂಹಮೂರ್ತಿ & ಸಿಬ್ಬಂದಿ ಸಿ,ಪಿ,ಸಿ-438 ನರಸಿಂಹಮೂರ್ತಿ ರವರೊಂದಿಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಬಳಿಯಿದ್ದ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ 11-15 ಗಂಟೆಯಲ್ಲಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚರೊಂದಿಗೆ  ಮರೆಯಲ್ಲಿ ನೋಡಲಾಗಿ, ಸಾಯಿಬಾಬಾ ದೇವಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು. ಪಂಚರೊಂದಿಗೆ ತಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರಲ್ಲಿ ಒಬ್ಬನು ವಶಕ್ಕೆ ದೊರೆತು ಉಳಿದವರು ಓಡಿ ಹೋಗಿದ್ದು. ವಶದಲ್ಲಿದ್ದವನನ್ನು ಹೆಸರು & ವಿಳಾಸ ಕೇಳಲಾಗಿ, ಶ್ರೀನಿವಾಸ  ಬಿನ್  ಎಸ್ ವೆಂಕಟರಾಮಣಪ್ಪ 40 ವರ್ಷ, ಈಡಿಗರು, ಕೂಲಿ ಕೆಲಸ, ವಾಸ -ಎ ಬ್ಲಾಕ್, ಗುಡಿಬಂಡೆ ಟೌನ್ ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ತಿಳಿಸಿದ್ದು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತ ಮಧ್ಯವಿರುವಂತ 10 ಟೆಟ್ರಾ ಪಾಕೆಟ್ಗಳು ಇದ್ದು, ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 4 ಖಾಲಿ ಪಾಕೆಟ್ ಗಳಿದ್ದು. ಓಲ್ಡ್ ತವರನ್ ಕಂಪನಿಯ 180 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತ ಮಧ್ಯವಿರುವ 6 ಟೆಟ್ರಾ ಪಾಕೆಟ್ಗಳು ಇದ್ದು, ಅದೇ ಕಂಪನಿಯ ಅದೇ ಅಳತೆಯ 2 ಖಾಲಿ ಟೆಟ್ರಾ ಪಾಕೆಟ್ ಗಳು ಹಾಗೂ ಐದು ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು ಇದ್ದವನ್ನು ಅಮಾನತ್ತುಪಡಿಸಿಕೊಂಡು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 1980 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ 744 ರೂ ಮೌಲ್ಯವುಳ್ಳವಾಗಿದ್ದು, ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ರಾತ್ರಿ 11-30 ಗಂಟೆಯಿಂದ 12-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಮುಂದಿನ ಕಾನೂನು  ಕ್ರಮಕ್ಕಾಗಿ  ಮೇಲ್ಕಂಡ ಆರೋಪಿ ಶ್ರೀನಿವಾಸ ರವರನ್ನು & ಮಾಲನ್ನು ದಿನಾಂಕ:05-04-2019 ರಂದು ಬೆಳಗಿನ ಜಾವ 12-15 ಗಂಟೆಯಲ್ಲಿ ಪಂಚನಾಮೆಯೊಂದಿಗೆ ಠಾಣೆಯಲ್ಲಿ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು  ನೀಡಿದ ದೂರು ಆಗಿರುತ್ತೆ.

15) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 64/2019. ಕಲಂ. 15(A), 32(3) ಕೆ.ಇ.ಆಕ್ಟ್ :-

     ದಿನಾಂಕ: 04/04/2019 ರಂದು ರಂದು ಮದ್ಯಾಹ್ನ 4-30 ಗಂಟೆಗೆ ಹೆಚ್.ಸಿ 59 ರವರು ಆರೋಪಿಯೊಂದಿಗೆ ಮಾಲು ಮತ್ತು ಮಹಜರ್ ನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 04/04/2019 ರಂದು ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ  ತಾನು ಮತ್ತು ಪಿಸಿ-532 ಚಿಕ್ಕಣ್ಣ ರವರು ಗಸ್ತಿನಲ್ಲಿದ್ದಾಗ ತನಗೆ ಬಂದ ಮಾಹಿತಿ ಏನೇಂದರೆ ದೊಡ್ಡಮಲ್ಲೆಕೆರೆ ಗ್ರಾಮದ ವೆಂಕಟಸ್ವಾಮಿ ಬಿನ್ ಲೇಟ್ ಚಿಕ್ಕಪ್ಪಯ್ಯ ಎಂಬುವರು ದೊಡ್ಡಮಲ್ಲೆಕೆರೆ ಗ್ರಾಮದ ಸರ್ಕಲ್ ಬಳಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಮದ್ಯಾಹ್ನ  2-30 ಗಂಟೆಯ ಸಮಯಕ್ಕೆ ದೊಡ್ಡಮಲ್ಲೆಕೆರೆ ಗ್ರಾಮದ ಸರ್ಕಲ್ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ವೆಂಕಟಸ್ವಾಮಿ ಬಿನ್ ಲೇಟ್ ಚಿಕ್ಕಪ್ಪಯ್ಯ, 38 ವರ್ಷ, ನಾಯಕರು, ಕೂಲಿ ಕೆಲಸ, ವಾಸ ದೊಡ್ಡಮಲ್ಲೆಕೆರೆ ಗ್ರಾಮ, ತೊಂಡೇಬಾವಿ ಹೋಬಳಿ, ಗೌರೀಬಿದನುರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 16 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 3 ಟೆಟ್ರಾ ಪ್ಯಾಕೇಟ್ ಗಳು ಮತ್ತು 4 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 2-45 ಗಂಟೆಯಿಂದ 3-45  ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 485/- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ವೆಂಕಟಸ್ವಾಮಿ ವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ

16) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 24/2019. ಕಲಂ. 15(A), 32(3) ಕೆ.ಇ.ಆಕ್ಟ್ :-

     ದಿನಾಂಕ: 04/04/2019 ರಂದು ಸಂಜೆ 04-15 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:04/04/2019 ರಂದು ಮದ್ಯಾಹ್ನ 02-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ತೋಳ್ಳಪಲ್ಲಿ ಗ್ರಾಮದ ಮನೆಯ ಮುಂಬಾಗದ ಖಾಲಿ ಜಾಗದಲ್ಲಿ  ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ತೋಳ್ಳಪಲ್ಲಿ ಗ್ರಾಮದ ಮನೆಯ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ ಜೀಪನ್ನು ನೋಡಿ ಮನೆಯ ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬರು ಓಡಿ ಹೋಗಿದ್ದು ಮನೆಯ  ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ವೆಂಕಟರಾಯಪ್ಪ ಬಿನ್ ಲೇಟ್ ನರಸಪ್ಪ, 70 ವರ್ಷ ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ತೋಳ್ಳಪಲ್ಲಿ  ಗ್ರಾಮ  ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ 07 ಹೈ ವಾರ್ಡ್ಸ್ ಚೀರ್ಸ್  ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು 210 ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 01 ಖಾಲಿ ಹೈ ವಾರ್ಡ್ಸ್ ಚೀರ್ಸ್  ವಿಸ್ಕಿ ಟೆಟ್ರಾ ಪಾಕೆಟ್ ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 24/2019 ಕಲಂ 15 (ಎ) 32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ,

17) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 25/2019. ಕಲಂ. 15(A), 32(3) ಕೆ.ಇ.ಆಕ್ಟ್ :-:-

     ದಿನಾಂಕ:05/04/2019 ರಂದು ಮದ್ಯಾಹ್ನ 1-30 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:05/04/2019 ರಂದು ಬೆಳಗ್ಗೆ 11-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು  ಪೈಪಾಳ್ಯ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯ ಬಳಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ಪೈಪಾಳ್ಯ ಗ್ರಾಮದ ಚಿಲ್ಲರೆ ಅಂಗಡಿಯ ಬಳಿಗೆ ಹೋಗಲಾಗಿ ನಾವು ಹೋಗಿದ್ದ ಜೀಪನ್ನು ನೋಡಿ ಚಿಲ್ಲರೆ ಅಂಗಡಿಯ ಮುಂಬಾಗದಲ್ಲಿದ್ದ ಯಾರೋ ಒಬ್ಬರು ಓಡಿ ಹೋಗಿದ್ದು ಚಿಲ್ಲರೆ ಅಂಗಡಿಯ ಬಳಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಪರಮೇಶ್ವರಪ್ಪ ಬಿನ್ ನಂಜುಂಡಪ್ಪ, 55 ವರ್ಷ ಲಿಂಗಾಯತರು, ಚಿಲ್ಲರೆ ಅಂಗಡಿ ವ್ಯಾಪಾರ ಪೈಪಾಳ್ಯ  ಗ್ರಾಮ  ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ 19  ಹೈ ವಾರ್ಡ್ಸ್ ಚೀರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕಟ್ ಗಳು (ಸುಮಾರು  570 ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ ನೀರಿನ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 01 ಖಾಲಿ ಹೈ ವಾರ್ಡ್ಸ್ ಚೀರ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 25/2019 ಕಲಂ 15 (ಎ) 32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ,

18) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 66/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಹರೀಶ್ ವಿ  ಪಿ.ಎಸ್.ಐ ಆದ ನನಗೆ  ದಿನಾಂಕ: 04.04.2019 ರಂದು ಸಂಜೆ 5-45  ಗಂಟೆಯಲ್ಲಿ  ನಾನು ಠಾಣೆಯಲ್ಲಿ  ಕರ್ತವ್ಯದಲ್ಲಿದ್ದಾಗ  ನನಗೆ  ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಲ್ಲಪನಹಳ್ಳಿ ಗ್ರಾಮದ  ಚನ್ನಪ್ಪ ಬಿನ್ ಲೇಟ್ ಪೆದ್ದಣ್ಣ  ಎಂಬುವರು ರವರ ಮನೆಗೆ ಹೊಂದಿಕೊಂಡಿರುವ ಚಿಲ್ಲರೆ ಅಂಗಡಿಯ ಮುಂಭಾಗ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅವಕಾಶ ಮಾಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಪಿ.ಸಿ.14 ಗೋವಿಂದಪ್ಪ, ಪಿ.ಸಿ.543 ಸುಧಾಕರ ಮತ್ತು ಪಿ.ಸಿ.409 ಜಯಶೇಖರ ರವರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ   ಸಂಜೆ 6-15 ಗಂಟೆಗೆ ವಲ್ಲಪ್ಪನಹಳ್ಳಿ ಗ್ರಾಮಕ್ಕೆ ಹೋಗಿ  ಪಿ.ಸಿ.14 ಗೋವಿಂದಪ್ಪ  ರವರಿಗೆ  ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸುವಂತೆ ತಿಳಿಸಿದ್ದು  ಅದರಂತೆ ಪಿ.ಸಿ.14 ಗೋವಿಂದಪ್ಪ ರವರು  ಇಬ್ಬರು ಪಂಚಾಯ್ತಿದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ  ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸಂಜೆ 6-30 ಗಂಟೆಗೆ ಚನ್ನಪ್ಪ ಬಿನ್ ಲೇಟ್ ಪೆದ್ದಣ್ಣ  ರವರ ಮನೆಗೆ ಹೊಂದಿಕೊಂಡಿರುವ  ಅಂಗಡಿಯ ಬಳಿ ಹೋಗಿ ಜೀಪು ನಿಲ್ಲಿಸುವಷ್ಠರಲ್ಲಿ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ಗಳನ್ನಿಟ್ಟುಕೊಂಡಿದ್ದು,  ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನಮ್ಮ ನೋಡಿ ಸಾರ್ವಜನಿಕರು ಓಡಿ ಹೋಗಿದ್ದು ಮದ್ಯದ ಟೆಟ್ರಾ ಪಾಕೆಟ್ಗಳನ್ನಿಟ್ಟುಕೊಂಡಿದ್ದ ಅಸಾಮಿಯನ್ನು ಸುತ್ತುವರೆದು ಹಿಡಿದು ಹೆಸರು ವಿಳಾಸ ಕೇಳಲಾಗಿ  ಚನ್ನಪ್ಪ ಬಿನ್ ಲೇಟ್ ಪೆದ್ದಣ್ಣ, 65 ವರ್ಷ, ನಾಯಕರು, ವಾಸ ವಲ್ಲಪ್ಪನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು  ಎಂದು ತಿಳಿಸಿದನು. ಸದರಿ ಆಸಾಮಿಯ  ಬಳಿ ಒಂದು ಕವರಿನಲ್ಲಿದ್ದವುಗಳನ್ನು  ಪರಿಶೀಲಿಸಲಾಗಿ ಅದರಲ್ಲಿ 90 ಎಂ ಎಲ್ ಸಾಮರ್ಥ್ಯದ HAYWARDS PUNCH ನ 10 ಟೆಟ್ರಾಪಾಕೆಟ್ಗಳಿದ್ದು, ಒಂದು ಪಾಕೆಟ್ ಬೆಲೆ ರೂ: 30.32 ಆಗಿದ್ದು, ಒಟ್ಟು 300.32   ರೂಗಳ ಬೆಲೆಯಾಗಿದ್ದು,  ಮತ್ತು ಪಕ್ಕದಲ್ಲಿ  90 ಎಂ ಎಲ್ ಸಾಮರ್ಥ್ಯದ HAYWARDS PUNCH 3 ಖಾಲಿ ಟೆಟ್ರಾ ಪಾಕೇಟುಗಳು ಮತ್ತು ಒಂದು ಅರ್ಧ ನೀರು ತುಂಬಿದ್ದ ಒಂದು ಲೀಟರ್ ವಾಟರ್ ಬಾಟೆಲ್ ಇರುತ್ತೆ. ಸದರಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಮತ್ತು ಖಾಲಿ ಟೆಟ್ರಾ ಪಾಕೇಟುಗಳನ್ನು ಹಾಗೂ ವಾಟರ್ ಬಾಟಲನ್ನು  ಚನ್ನಪ್ಪ ಬಿನ್ ಲೇಟ್ ಪೆದ್ದಣ್ಣ  ಎಂಬುವರು ಮನೆಯ ಮುಂಭಾಗದ ರಸ್ತೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿದ್ದುದರಿಂದ  ಸಂಜೆ 6.30 ಗಂಟೆಯಿಂದ ರಾತ್ರಿ 7-30  ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಸಮೇತ ಮುಂದಿನ ಕ್ರಮಕ್ಕಾಗಿ ರಾತ್ರಿ 8.00  ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ.66/2019 ಕಲಂ.15[ಎ],32[3] ಕೆ.ಇ ಆಕ್ಟ್ ರಿತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.

19) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 67/2019. ಕಲಂ. 279 ಐಪಿಸಿ :-

     ದಿನಾಂಕ: 05-04-2019 ರಂದು ಮದ್ಯಾಹ್ನ 13.00 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ. ಎಂ. ಕೃಷ್ಣಮೂರ್ತಿ ಬಿನ್ ಮುನಿಪಾಪಣ್ಣ ಎಂ., 40 ವರ್ಷ, ದೊಡ್ಡತತ್ತಮಂಗಲ ಗ್ರಾಮ, ದೇವನಹಳ್ಳಿ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿದ್ದು ದೊಡ್ಡತತ್ತಮಂಗಲ ಗ್ರಾಮದಲ್ಲಿ ಉದಯ ಚಾಕಿ ಸೆಂಟರ್ ಇಟ್ಟುಕೊಂಡಿರುತ್ತೇನೆ. ಹುಳುಗಳನ್ನು ಶಿಡ್ಲಘಟ್ಟ ತಾಲ್ಲೂಕು ಹಾಗೂ ಸುತ್ತ-ಮುತ್ತಲು ನಮ್ಮ ಬಾಬತ್ತು ನಂ. ಕೆಎ-43-9507 ಮಹಿಂದ್ರಾ ಗೂಡ್ಸ್ ವಾಹನದಲ್ಲಿ ತೆಗೆದುಕೊಂಡು ಹೋಗಿ ರೈತರಿಗೆ ಕೊಟ್ಟು ಬರುವ ಸಲುವಾಗಿ ನಮ್ಮ ವಾಹನಕ್ಕೆ ಚಾಲಕನಾಗಿ ನರಸಿಂಹಮೂರ್ತಿ ಸಿ ಬಿನ್ ಚಿಕ್ಕಪಿಳ್ಳಪ್ಪ, ವಡೇರಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು ರವರನ್ನು ನೇಮಕ ಮಾಡಿಕೊಂಡಿದ್ದು ಅದರಂತೆ ದಿನಾಂಕ: 03-04-2019 ರಂದು ಚಾಕಿಯ ಹುಳುಗಳನ್ನು ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಬರುವುದಾಗಿ ಹೇಳಿ ಬೆಳಿಗ್ಗೆ 5.00 ಗಂಟೆಗೆ ನಮ್ಮ ವಾಹನದ ಚಾಲಕ ಹೋಗಿದ್ದು ಆ ದಿನ ಬೆಳಿಗ್ಗೆ ಸುಮಾರು 5.45 ಗಂಟೆಯಲ್ಲಿ ನಮ್ಮ ಚಾಲಕ ನರಸಿಂಹಮೂರ್ತಿ ರವರು ಪೋನ್ ಮಾಡಿ ಹೇಳಿದ್ದೇನೆಂದರೆ ತಾನು ವಿಜಯಪುರ ಮಾರ್ಗವಾಗಿ ಶಿಡ್ಲಘಟ್ಟ ರಸ್ತೆಯ ಎಡಬದಿಯಲ್ಲಿ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಆನೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಅಪ್ಪೇಗೌಡನಹಳ್ಳಿ-ಕೇಶವಪುರ ಗ್ರಾಮದ ಮದ್ಯದಲ್ಲಿರುವ ಮೇಲೂರು ಗ್ರಾಮದ ಅಂದ್ರಹಳ್ಳಿ ಬೈರಪ್ಪ ರವರ ಜಮೀನಿನ ಬಳಿ ಯಾವುದೋ ನಾಯಿ ಅಡ್ಡ ಬಂದಿದ್ದು ಆಗ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದಲ್ಲಿದ್ದ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಮುಂಭಾಗ ಜಖಂ ಆಗಿರುವುದಾಗಿ ಹೇಳಿದ್ದು ನಾನು ಆ ದಿನ ಸ್ನೇಹಿತರೊಂದಿಗೆ ಮಡಿಕೇರಿ ಪ್ರವಾಸದಲ್ಲಿದ್ದರಿಂದ ಈ ದಿನ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದು ಅಪಘಾತ ನಡೆದಿರುವುದು ನಿಜವಾಗಿರುತ್ತದೆ. ಅಪಘಾತದಲ್ಲಿ ನಮ್ಮ ವಾಹನದ ಚಾಲಕ ನರಸಿಂಹಮೂರ್ತಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ದಿನಾಂಕ: 03-04-2019 ರಂದು ಬೆಳಿಗ್ಗೆ 5.45 ಗಂಟೆಯಲ್ಲಿ ನನ್ನ ಬಾಬತ್ತು ನಂ. ಕೆಎ-43-9507 ಮಹೀಂದ್ರಾ ಗೂಡ್ಸ್ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿ ಸ್ವತಃ ಅಪಘಾತ ಮಾಡಿ ವಾಹನ ಜಖಂ ಆಗಲು ಕಾರಣವಾಗಿರುವ ಚಾಲಕ ನರಸಿಂಹಮೂರ್ತಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

20) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 41/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ವಿ.ಅವಿನಾಶ್ ಪಿ.ಎಸ್.ಐ (ಕಾ.ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ದಿನಾಂಕ:04-04-2019 ರಂದು ಸಂಜೆ 4.00 ಗಂಟೆಯಲ್ಲಿ ನಾನು ಠಾಣೆಯ ಸಿಬ್ಬಂದಿಯವರಾದ ಪಿ.ಸಿ-134 ಧನಂಜಯ್ ಮತ್ತು ಮ.ಪಿ.ಸಿ.251 ಶ್ವೇತಾ ಮತ್ತು ಜೀಪ್ ಚಾಲಕ ಎ.ಪಿ.ಸಿ. ಮಂಜುನಾಥ ರವರೊಂದಿಗೆ ಚುನಾವಣೆ ಪ್ರಯುಕ್ತ ಶಿಡ್ಲಘಟ್ಟ ನಗರದಲ್ಲಿ ಪೊಲೀಸ್ ವಾಹನದಲ್ಲಿ ಸಂಜೆ ಗಸ್ತು ಮಾಡುತ್ತಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ಟೌನ್ ಸಿದ್ದಾರ್ಥನಗರದಲ್ಲಿ ಮುನಿಯಮ್ಮ ಕೊಂ ಲೇಟ್ ಕದಿರಪ್ಪ ಎಂಬುವರ ಚಿಲ್ಲರೆ ಪೆಟ್ಟಿಗೆ ಅಂಗಡಿ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರು ಮದ್ಯಪಾನ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಕೂಡಲೇ ನಾವು ಪಂಚಾಯ್ತಿದಾರರಾದ 1] ಕೆ.ಸುಬ್ರಮಣಿ ಬಿನ್ ದೊಡ್ಡಕದಿರಪ್ಪ, 41 ವರ್ಷ, ಪ.ಜಾತಿ,  ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್. 2] ಕೇಶವಪ್ಪ ಬಿನ್ ಚಿಕ್ಕಮುನಿಯಪ್ಪ ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್ ರವರನ್ನು ಕರೆದುಕೊಂಡು ಸಂಜೆ 4.15 ಗಂಟೆಗೆ ಸದರಿ ಚಿಲ್ಲರೆ ಅಂಗಡಿ ಬಳಿ ದಾಳಿ ಮಾಡಿದಾಗ ಅಂಗಡಿ ಮುಂಭಾಗ ಯಾರೋ 4 ಜನರು ಮದ್ಯಪಾನ ಸೇವನೆ .ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದವರು ಓಡಿ ಹೋಗಿದ್ದು, ಅಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ ಮುನಿಯಮ್ಮ ಕೊಂ ಲೇಟ್ ಕದಿರಪ್ಪ, 65 ವರ್ಷ, ಪ.ಜಾತಿ,  ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಸದರಿ ಜಾಗದಲ್ಲಿ ಜನರು ಓಡಾಡುವ ಸ್ಥಳದಲ್ಲಿ ಸಿಮೆಂಟ್ ರಸ್ತೆಯ ಮೇಲೆ 90 ಎಂ.ಎಲ್ ನ ರಾಜಾ ವಿಸ್ಕಿ ಲೇಬಲ್ ಇರುವ 7 ಮದ್ಯದ ಪಾಕೇಟ್ ಗಳಿದ್ದು, ಇವುಗಳ ಬೆಲೆ 212-00 ರೂಗಳಾಗಿರುತ್ತೆ. ಅದರ ಪಕ್ಕದಲ್ಲಿ 90 ಎಂ.ಎಲ್ ನ ರಾಜಾ ವಿಸ್ಕಿ ಲೇಬಲ್ ಇರುವ ಎರಡು ಅರ್ದಂಬರ್ದ ಮದ್ಯ ಇರುವ 90 ಎಂ.ಎಲ್.ನ ಮದ್ಯದ ಪಾಕೇಟ್ ಹಾಗೂ ಮದ್ಯಪಾನ ಸೇವನೆ ಮಾಡಿರುವ ಎರಡು ಖಾಲಿ ಪ್ಲಾಸ್ಟೀಕ್ ಪೇಪರ್ ಗ್ಲಾಸ್ ಇರುತ್ತೆ. ಚಿಲ್ಲರೆ ಅಂಗಡಿ ವ್ಯಾಪಾರಿ ಮುನಿಯಮ್ಮ ರವರು ಸಾರ್ವಜನಿಕರ ಸ್ಥಳದಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸದರಿ ಮುನಿಯಮ್ಮ ರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 90 ಎಂ.ಎಲ್ ನ 7 ರಾಜಾ ವಿಸ್ಕಿ ಮದ್ಯದ ಪಾಕೇಟ್ ಗಳು, ಮದ್ಯ ಸೇವನೆ ಮಾಡಿ ಬಿಟ್ಟು ಹೋಗಿರುವ ಅರ್ದಂಬರ್ದ ಮದ್ಯ ಇರುವ ಎರಡು 90 ಎಂ.ಎಲ್.ನ ಮದ್ಯದ ಪಾಕೇಟ್ ಹಾಗೂ ಮದ್ಯಪಾನ ಸೇವನೆ ಮಾಡಿರುವ ಎರಡು ಖಾಲಿ ಪ್ಲಾಸ್ಟೀಕ್ ಪೇಪರ್ ಗ್ಲಾಸ್ ಮುಂದಿನ ಕ್ರಮದ ಬಗ್ಗೆ ಸಂಜೆ 4.30 ರಿಂದ ಸಂಜೆ 5.00 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಸಮೇತ ಸಂಜೆ 5.15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಠಾಣಾ ಮೊ.ಸಂ.41/2019 ಕಲಂ.32(3),15(ಎ) ಕೆ.ಇ ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲು ಮಾಡಿರುತ್ತೆ.

21) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 42/2019. ಕಲಂ. 87 ಕೆ.ಪಿ.ಆಕ್ಟ್ :-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಅವಿನಾಶ್ ಪಿ.ಎಸ್.ಐ. (ಕಾ & ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ದಿನಾಂಕ:04-04-2019 ರಂದು ಸಂಜೆ 6-30 ಗಂಟೆ ಸಮಯದಲ್ಲಿ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ಟೌನ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ 2ನೇ ಕಾರ್ಮಿಕನಗರಕ್ಕೆ ಹೋಗುವ ರಸ್ತೆ ಬದಿ ಇರುವ ವಿದ್ಯುತ್ ಕಂಬದ ಲೇಟ್ ಬೆಳಕಿನಲ್ಲಿ ಯಾರೋ ಜನರು ಸೇರಿಕೊಂಡು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ನೀಡಿದ್ದು ಕೂಡಲೇ ಠಾಣೆಯ ಸಿಬ್ಬಂದಿಯವರಾದ ಪಿ.ಸಿ.134 ಧನಂಜಯ್ ಕುಮಾರ್, ಪಿ.ಸಿ.129. ರಾಮಚಂದ್ರ, ಪಿ.ಸಿ.187 ವಸಂತ, ಪಿ.ಸಿ.540 ಶಿವಕುಮಾರ್ ಮತ್ತು ಪಿ.ಸಿ458 ರಾಜೇಶ್ ರವರುಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಇವರೊಂದಿಗೆ ಪಂಚರಾದ 1]ಚಾಂದಪಾಷ ಬಿನ್ ಜಹಂಗೀರ್ ಸಾಬ್,  ಸಂತೋಷನಗರ, ಶಿಡ್ಲಘಟ್ಟ ಟೌನ್ 2] ಸೋಮಶೇಖರ್ ಬಿನ್ ಲೇಟ್ ಮುನಿಯಪ್ಪ,  ಸಿದ್ದಾರ್ಥ ನಗರ, ಶಿಡ್ಲಘಟ್ಟ ಟೌನ್ ರವರುಗಳನ್ನು ದಾಳಿಗೆ ಸಹಕರಿಸಲು ನಮ್ಮೊಂದಿಗೆ ಕರೆದುಕೊಂಡು ಎಲ್ಲರೂ ದ್ವಿಚಕ್ರ ವಾಹನಗಳಲ್ಲಿ ಮೇಲ್ಕಂಡ ಸ್ಥಳಕ್ಕೆ ಸಂಜೆ 6-45 ಗಂಟೆಗೆ ಹೋಗಿ  ವಾಹನಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 5 ಜನರು ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಅಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವರುಗಳ ಮೇಲೆ ದಾಳೆ ಮಾಡಲು ಹೋದಾಗ ಜೂಜಾಟ ಆಡುತ್ತಿದ್ದವರು ನಮ್ಮಗಳನ್ನು ಕಂಡು ಓಡಿ ಹೋಗುತ್ತಿದ್ದು ಅವರನ್ನು ಹಿಂಬಾಲಿಸಿ 05 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಅಮೀರ್ ಜಾನ್ ಬಿನ್ ಬಂದೂಸಾಬ್,   ತೈಬಾನಗರ, ಶಿಡ್ಲಘಟ್ಟ ಟೌನ್ 2] ಶಂಕರ ಬಿನ್ ನಾರಾಯಣಪ್ಪ, ಕುರುಬರಪೇಟೆ, ಶಿಡ್ಲಘಟ್ಟ ಟೌನ್ 3] ನಯಜ್ ಪಾಷ ಬಿನ್ ಮುಬಾರಕ್, ವಿಜಯಲಕ್ಷ್ಮೀ ವೃತ್ತ, ಶಿಡ್ಲಘಟ್ಟ ಟೌನ್ 4] ಪಕೃದ್ದೀನ್ ಬಿನ್ ಮಹಮದ್ ಹುಸೇನ್,  ರಹಮತ್ ನಗರ, ಶಿಡ್ಲಘಟ್ಟ ಟೌನ್ 5] ಗಂಗಾಧರ ಬಿನ್ ವೆಂಕಟರವಣಪ್ಪ್ಪ, ಕುಂಬಾರಪೇಟೆ, ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು, ಇವರುಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 2660-00 ರೂ ನಗದು ಹಣ ಹಾಗೂ ಜೂಜಾಟಕ್ಕೆ ಬಳಸಿ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ 52 ಇಸ್ಟೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಸಂಜೆ 7-00 ಗಂಟೆಯಿಂದ 7-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದ ಮೇಲ್ಕಂಡ 5 ಜನರೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ವಾಪಸ್ಸು ಬಂದು ರಾತ್ರಿ 8-00 ಗಂಟೆಗೆ ಠಾಣಾ ಮೊ.ಸಂ.42/2019 ಕಲಂ.87 ಕೆ.ಪಿ. ಆಕ್ಟ್ ರೀತ್ಯ ಸ್ವತಃ ಕೇಸು ದಾಖಲಿಸಿರುತ್ತೇನೆ.