ದಿನಾಂಕ : 05/03/2019ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 36/2019 ಕಲಂ.87 ಕೆ.ಪಿ. ಆಕ್ಟ್ :-

      ದಿನಾಂಕ:04/03/2019ರಂದು ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ನವೀನ್ ಪಿ.ಎಸ್.ಐ ರವರು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:04/03/2019 ರಂದು ಸಂಜೆ 04-30 ಗಂಟೆಗೆ  ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ  ನವೀನ್ ಪಿ.ಎಂ. ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಬಾಗೇಪಲ್ಲಿ ಪುರದ ಸ್ಟೇಡಿಯಂ ಬಳಿ ಇರುವ ಉಮಾ ರವರ ಬಾಬತ್ತು ಖಾಲಿ ನಿವೇಶನದ ಬಳಿ ಬಳಿ ದಾಳಿ ಮಾಡಲಾಗಿ ಕೆಳಕಂಡ ಆರೋಪಿತರು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಗದು ಹಣ 1860/-ರೂ, 52 ಇಸ್ಪೀಟ್ ಎಲೆಗಳನ್ನು ಹಾಗೂ ಒಂದು ಹಳೆಯ ಪ್ಲಾಸ್ಟೀಕ್ ಚೀಲವನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿ ಪಡೆದು ಠಾಣಾ ಎನ್.ಸಿ.ಆರ್ ನಂ 47/2019 ರಂತೆ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 37/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ:04/03/2019ರಂದು ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ನವೀನ್ ಪಿ.ಎಸ್.ಐ ರವರು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:04/03/2019 ರಂದು ಸಂಜೆ 04-50 ಗಂಟೆಗೆ  ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ  ನವೀನ್ ಪಿ.ಎಂ. ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಬಾಗೇಪಲ್ಲಿ ತಾಲ್ಲೂಕು ಘಂಟಂವಾರಿಪಲ್ಲಿ ಗ್ರಾಮದ ವಾಟರ್ ಟ್ಯಾಂಕ್ ಸಮೀಪ ಹೋಗಿ  ದಾಳಿ ಮಾಡಲಾಗಿ ಕೆಳಕಂಡ ಆರೋಪಿತರು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಗದು ಹಣ 5500/-ರೂ, 52 ಇಸ್ಪೀಟ್ ಎಲೆಗಳನ್ನು ಹಾಗೂ ಒಂದು ಹಳೆಯ ಪ್ಲಾಸ್ಟೀಕ್ ಚೀಲವನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿ ಪಡೆದು ಠಾಣಾ ಎನ್.ಸಿ.ಆರ್ ನಂ 48/2019 ರಂತೆ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದಿಂದ  ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

3) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 53/2019 ಕಲಂ. 143,147,148,323,324,504,506 ರೆ/ವಿ 149 ಐಪಿಸಿ :-

      ದಿನಾಂಕ: 04/03/2019 ರಂದು ರಾತ್ರಿ 11-15 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಶ್ರೀಮತಿ ಅನಿತಾ ಕೋಂ ಸುಬ್ರಮಣಿ, 26 ವರ್ಷ, ಎಸ್.ಸಿ ಜನಾಂಗ, ಮನೆ ಕೆಲಸ, ಕಾಗತಿ ಗ್ರಾಮ,  ಚಿಂತಾಮಣಿ ತಾಲ್ಲೂಕು ರವರಿಂದ ಪಡೆದು ಬಂದ ಹೇಳಿಕೆಯ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ತನ್ನ ತವರು ಮನೆ ಕುರುಟಹಳ್ಳಿ ಗ್ರಾಮವಾಗಿದ್ದು, ತನಗೆ ಕಾಗತಿ ಗ್ರಾಮದ ಸುಬ್ರಮಣಿ ರವರೊಂದಿಗೆ ಮದುವೆಯಾಗಿರುತ್ತೆ. ದಿನಾಂಕ: 04/03/2019 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ರ ತಾನು ತನ್ನ ಗಂಡ ಮತ್ತು ಮಕ್ಕಳು ದಿನಾಂಕ: 03/03/2019 ರಂದು ರಾತ್ರಿ 10.50 ಗಂಟೆ ಸಮಯದಲ್ಲಿ ತಾನು ಮತ್ತು ತಮ್ಮ ಮನೆಯವರು ಮನೆಯಲ್ಲಿದ್ದಾಗ, ತಮ್ಮ ಸತೀಶ್ ನ ಟೆಂಪೋ ಚಾಲಕನಾದ ಅಭಿನಯ್ ಬಿನ್ ಅಮರನಾಥ ಎಂಬುವರು ತಮ್ಮ ಗ್ರಾಮದ ಅಂದರೆ ಕುರುಟಹಳ್ಳಿ ಗ್ರಾಮದ ಕಾವ್ಯಶ್ರೀ ಬಿನ್ ಲೇಟ್ ಮುನಿವೆಂಕಟಪ್ಪ ಎಂಬುವಳನ್ನು ಬೈದಿರುವ ಬಗ್ಗೆ ಪದ್ಮಮ್ಮ ರವರು ಮನೆಯ ಬಳಿ ಗಲಾಟೆಗಳಾತ್ತಿದ್ದು,  ಈ ವಿಚಾರ ತಿಳಿದು ತಾನು ತನ್ನ ತಾಯಿ ಮತ್ತಿತರರು ಸ್ಥಳಕ್ಕೆ ಹೋಗಿದ್ದಾಗ ಪ್ರದೀನ ಬಿನ್ ಲೇಟ್ ಮುನಿವೆಂಕಟಪ್ಪ ಎಂಬುವನು ತಮ್ಮನ್ನು ಕುರಿತು ನಿಮ್ಮ ಟೆಂಪೋ ಚಾಲಕ ತನ್ನ ತಂಗಿಯನ್ನು ಬೈದಿರುತ್ತಾನೆ, ಅವನನ್ನು ನೀವು ಚಾಲಕನಾಗಿ ಇಟ್ಟುಕೊಂಡು ತಮ್ಮ ಹುಡುಗಿ ಮೇಲೆ ಗಲಾಟೆ ಮಾಡಲು ಬಿಟ್ಟಿದ್ದೀರಾ ಎಂದು ತಮ್ಮ ಮೇಲೆ ಗಲಾಟೆಗೆ ಬಂದಾಗ ಗ್ರಾಮಸ್ಥರು ಬಂದು ಜಗಳವನ್ನು ಬಿಡಿಸಿರುತ್ತಾರೆ.  ನಂತರ ಇದೇ ದಿನ ದಿನಾಂಕ: 04/03/2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತಾನು ತನ್ನ ತಾಯಿ ಗಂಗಮ್ಮ, 50 ವರ್ಷ, ಕುರುಟಹಳ್ಳಿ ಗ್ರಾಮದ ಪಾರ್ವತಮ್ಮ  ಕೋಂ ನಾರಾಯಣಸ್ವಾಮಿ ಮತ್ತು ಪದ್ಮ ಕೋಂ ರಾಮಚಂದ್ರ ರವರು ತಮ್ಮ  ತಾಯಿಯ ಮನೆ ಬಳಿ ಇದ್ದಾಗ ಪ್ರದೀನ ಬಿನ್ ಲೇಟ್ ಮುನಿವೆಂಕಪ್ಪ, ನವೀನ ಬಿನ್ ಲೇಟ್ ಮುನಿವೆಂಕಟಪ್ಪ, ಪದ್ಮಮ್ಮ ಕೋಂ ಲೇಟ್ ಮನಿವೆಂಕಟಪ್ಪ, ನಾಗಮಣಿ, ಅಮರನಾಥ, ಆಲಂಬಗಿರಿ ಗ್ರಾಮದ, ಕಾವ್ಯಶ್ರೀ ಬಿನ್ ಲೇಟ್ ಮುನಿವೆಂಕಪ್ಪ ಎಂಬುವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ತಮ್ಮ ಮೇಲೆ ಜಗಳ ತೆಗೆದು ಆ ಪೈಕಿ ಅಮರನಾಥ, ಪ್ರದೀನ ಮತ್ತು ನವೀನ ರವರು ಕೈಗಳಿಂದ ತನ್ನ ಮೈ ಮೇಲೆ  ಹೊಡೆದು ನೋವುಂಟು ಮಾಡಿರುತ್ತಾರೆ, ಪದ್ಮಮ್ಮ ಎಂಬುವಳು ದೊಣ್ಣೆಯಿಂದ ತನ್ನ ತಾಯಿಯ ಬಲಮೊಣಕೈ  ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಕಾವ್ಯಶ್ರೀ ಎಂಬುವಳು ಕುಡುಗೋಲಿನಿಂದ ಪದ್ಮ ರವರ ಎಡ ಕಾಲಿಗೆ ಹೊಡೆದು ಗಾಯಪಡಿಸಿರುತ್ತಾರೆ, ನಾಗಮಣಿ ಎಂಬುವಳು ಕೈಗಳಿಂದ ಪಾರ್ವತಮ್ಮ ರವರ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ.  ಅಷ್ಟರಲ್ಲಿ ಇನ್ನೂ 10 ಜನ ಅಪರಿಚಿತರು ಬಂದಿದ್ದು, ಮೇಲ್ಕಂಡವರು ಮತ್ತು ಅಪರಿಚಿತರು ತಮ್ಮನ್ನು ಕುರಿತು ಮುಗಿಸಿಬಿಡುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ಕುರುಟಹಳ್ಳಿ ಗ್ರಾಮದ ಕೃಷ್ಣಪ್ಪ ಬಿನ್ ರಾಮಪ್ಪ ಮತ್ತು ತಮ್ಮರೆಡ್ಡಿ ರವರು ಬಂದು ಜಗಳವನ್ನು ಬಿಡಿಸಿರುತ್ತಾರೆ, ನಂತರ ಗಾಯಗೊಂಡಿದ್ದ ತಾವು 4 ಜನರು ಯಾವುದೋ ಒಂದು ಆಟೋದಲ್ಲಿ ಚಿಕಿತ್ಸೆಗೆ ಬಂದು ದಾಖಲಾಗಿದ್ದು, ಮೇಲ್ಕಂಡವರ ಮೇಲೆ ಕಾನೂ ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ.

4) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 42/2019 ಕಲಂ. 153(ಬಿ) ಐಪಿಸಿ ಮತ್ತು ಸೆಕ್ಷನ್ 2 ಅಫ್ PREVENTION OF INSULT TO NATIONAL HONOURS ACT, 1971 & ಸೆಕ್ಷನ್ 67 ಐಟಿ ಆಕ್ಟ್ :-

      ದಿನಾಂಕ:05/03/2019.ರಂದು ಬೆಳಿಗ್ಗೆ 09-15 ಗಂಟೆಗೆ ಠಾಣೆಯ ಸಿಪಿಸಿ-375 ಮಂಜುನಾಥ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ: 05/03/2019 ರಂದು ಬೆಳಿಗ್ಗೆ 08-00 ಗಂಟೆಯ ಸಮಯದಲ್ಲಿ ಠಾಣಾಧಿಕಾರಿಗಳು ನನಗೆ ನಗರದ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾನು ಬೆಳಿಗ್ಗೆ 08-30 ಗಂಟೆಗೆ ಬಂಬೂ ಬಜಾರ್ ನಲ್ಲಿ ಗಸ್ತಿನಲ್ಲಿದ್ದಾಗ, ಚಿಂತಾಮಣಿ ನಗರದ ಬಂಬೂ ಬಜಾರ್ ನಲ್ಲಿ  ಎನ್ ಬಿ ಟಿ ಟ್ರಾನ್ಸ್ ಪೋರ್ಟ ಮಾಲೀಕರಾದ ಕಿಜರ್ ವುಲ್ಲಾ ಖಾನ್ ರವರು ಆತನ ಪೇಸ್ ಬುಕ್ Nbt Khan Khan  (N B T) ಖಾತೆಯಲ್ಲಿ  I LOVE PAK ARMY ಎಂದು ಸಾಮಾಜಿಕ ಜಾಲ ತಾಣವಾದ ಪೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿ ನಮ್ಮ ಭಾರತ ದೇಶದ ಘನತೆಗೆ ಅಪಮಾನ ಮಾಡಿರುವುದಾಗಿ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದು, ನಾನು ಈ ಬಗ್ಗೆ ಸಾಮಾಜಿಕ ಜಾಲ ತಾಣವಾದ ಪೇಸ್ ಬುಕ್ ನ್ನು ಪರಿಶೀಲಿಸಲಾಗಿ ವಿಚಾರ ನಿಜವಾಗಿರುತ್ತೆ. ಸದರಿ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ಕಿಜರ್ ವುಲ್ಲಾ ಖಾನ್ ಬಿನ್ ಇನಾಯತ್ ವುಲ್ಲಾ ಖಾನ್ 24 ವರ್ಷ, ಮುಸ್ಲಿಂ ಜನಾಂಗ, ಎನ್ ಬಿ ಟಿ ಟ್ರಾನ್ಸ್ ಪೋರ್ಟ ಮಾಲೀಕರು ಬಂಬೂಬಜಾರ್ ವಾಸ: ಚಿನ್ನಸಂದ್ರ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ನಾನು ಬೆಳಿಗ್ಗೆ 09-00 ಗಂಟೆಗೆ ಬಂಬೂ ಬಜಾರ್ ನಲ್ಲಿರುವ ಎನ್ ಬಿ ಟಿ ಟ್ರಾನ್ಸ್ ಪೋರ್ಟ ಬಳಿಗೆ ಹೋಗಿ ಅಂಗಡಿಯಲ್ಲಿದ್ದ ಕಿಜರ್ ವುಲ್ಲಾ ಖಾನ್ ಬಿನ್ ಇನಾಯತ್ ವುಲ್ಲಾ ಖಾನ್ 24 ವರ್ಷ, ಮುಸ್ಲಿಂ ಜನಾಂಗ, ಎನ್ ಬಿ ಟಿ ಟ್ರಾನ್ಸ್ LOVE PAK ARMY ಎಂದು ಪೊಸ್ಟ್ ಮಾಡಿ ನಮ್ಮ ಭಾರತ ದೇಶದ ಘನತೆಗೆ ಅಪಮಾನ ಮಾಡಿ ರಾಷ್ಟ್ರದ ಐಕ್ಯತೆಗೆ ಕುಂದು ತರುವ ರೀತಿಯಲ್ಲಿ  ತನ್ನ ಮೊಬೈಲ್ ನಲ್ಲಿ ತನ್ನ ಗ್ರೂಪ್ ಸದಸ್ಯರಿಗೆ ಪೊಸ್ಟ್ ಮಾಡಿ ಶಾಂತಿಯನ್ನು ಕದಡಿ ಗಲಬೆಗಳನ್ನು ಸೃಷ್ಟಿಸುವಂತಹ ಕೆಲಸವನ್ನು ಮಾಡಿದ  ಆಸಾಮಿಯ ವಿರುದ್ದ ಕಾನುನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ವರದಿಯ ಸಾರಾಂಶವಾಗಿರುತ್ತೆ. ಪೋರ್ಟ ಮಾಲೀಕರು ಬಂಬೂಬಜಾರ್ ವಾಸ: ಚಿನ್ನಸಂದ್ರ ಚಿಂತಾಮಣಿ ತಾಲ್ಲೂಕು ರವರನ್ನು ವಶಕ್ಕೆ ಪಡೆದು ಬೆಳಿಗ್ಗೆ 09-15 ಗಂಟೆಗೆ ಆಸಾಮಿಯನ್ನು ಠಾಣೆಗೆ ಕರೆದುಕೊಂಡು ಬಂದು ಠಾಣಾಧಿಕಾರಿಗಳ ರವರ ಮುಂದೆ ಹಾಜರುಪಡಿಸಿ   ಆಸಾಮಿಯು ಸಾಮಾಜಿಕ ಜಾಲ ತಾಣವಾದ ಪೇಸ್ ಬುಕ್ ನಲ್ಲಿ Nbt Khan Khan  (N B T)  ಖಾತೆಯಲ್ಲಿ  I LOVE PAK ARMY ಎಂದು ಪೊಸ್ಟ್ ಮಾಡಿ ನಮ್ಮ ಭಾರತ ದೇಶದ ಘನತೆಗೆ ಅಪಮಾನ ಮಾಡಿ ರಾಷ್ಟ್ರದ ಐಕ್ಯತೆಗೆ ಕುಂದು ತರುವ ರೀತಿಯಲ್ಲಿ  ತನ್ನ ಮೊಬೈಲ್ ನಲ್ಲಿ ತನ್ನ ಗ್ರೂಪ್ ಸದಸ್ಯರಿಗೆ ಪೊಸ್ಟ್ ಮಾಡಿ ಶಾಂತಿಯನ್ನು ಕದಡಿ ಗಲಬೆಗಳನ್ನು ಸೃಷ್ಟಿಸುವಂತಹ ಕೆಲಸವನ್ನು ಮಾಡಿದ  ಆಸಾಮಿಯ ವಿರುದ್ದ ಕಾನುನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ವರದಿಯ ಸಾರಾಂಶವಾಗಿರುತ್ತೆ.

5) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 50/2019 ಕಲಂ. 87 ಕೆ.ಪಿ.  ಆಕ್ಟ್ :-

      ದಿನಾಂಕ: 04/03/2019 ರಂದು ಮಾನ್ಯ ಸಿ ಪಿ ಐ ಗೌರಿಬಿದನೂರು ರವರ ಸಂಜೆ 6-30 ಗಂಟೆ ಸಮಯದಲ್ಲಿ ನೀಡಿದ ದೂರಿನ ಸಾರಾಂಶವೆನೆಂದರೆ ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳದಲ್ಲಿ ಯಾರೋ ಅಂದರ್ ಬಾಹರ್ ಜೂಜಾಟವಾಡುತ್ತಿರುವುದಾಗಿ  ಮಾಹಿತಿ ಬಂದಿದ್ದು, ಅವರ ಮೇಲೆ ದಾಳಿ ನಡೆಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ನಂತರ ಪಂಚಾಯ್ತಿದಾರರನ್ನು ಕರೆದುಕೊಂಡು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ. ಲಿಯಾಕತ್ತುಲ್ಲಾ ಹಾಗು ಪೊಲೀಸ್ ಸಿಬ್ಬಂದಿಯವರೊಂದಿಗೆ ಪೊಲೀಸ್ ಜೀಪಿನಲ್ಲಿ ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದ ಹೊರವಲಯಕ್ಕೆ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಜೀಪಿನಿಂದ ಇಳಿದು ಮಾಹಿತಿ ಬಂದ ಸ್ಥಳವಾದ ಕೆರೆಯ ಅಂಗಳದಲ್ಲಿ ನಡೆದುಕೊಂಡು ಹೋಗಿ ಜಾಲಿಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ಜಾಲಿಗಿಡಗಳ ಕೆಳಗೆ  ಜನರ ಗುಂಪು ಇದ್ದು, ಗುಂಪಿನಲ್ಲಿದ್ದವರು ಅಂದರ್ ಗೆ 500/- ರೂ. ಬಾಹರ್ ಗೆ 500/- ರೂಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್  ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿಯವರು ಜೂಜಾಟವಾಡುತ್ತಿದ್ದರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ  ಹಿಡಿದು ಅವರ ಹೆಸರು ವಿಳಾಸ ಕೇಳಲಾಗಿ 1] ತಿರುಮಲೇಶ್  ಬಿನ್ ಅಶ್ವತ್ಥಪ್ಪ, 40 ವರ್ಷ, ನಾಯಕ ಜನಾಂಗ, ವ್ಯವಸಾಯ, ಇಡಗೂರು ಗ್ರಾಮ, 2) ಎಂ.ಬಾಬು ಬಿನ್ ಲೇಟ್ ಮಂಜುನಾಥ, 26 ವರ್ಷ, ಎ.ಕೆ.ಜನಾಂ,ಗ ಚಾಲಕ ವೃತ್ತಿ,  ಇಡಗೂರು ಗ್ರಾಮ, 3) ನರಸಿಂಹಮೂತರ್ಿ ಬಿನ್ ಲೇಟ್ ಕರಿಯಪ್ಪ, 48 ವರ್ಷ, ಎ.ಕೆ.ಜನಾಂಗ, ವ್ಯವಸಾಯ, ಇಡಗೂರು ಗ್ರಾಮ, 4) ಬಾಲಕೃಷ್ಣ ಬಿನ್ ಗಂಗಪ್ಪ, 32  ವರ್ಷ. ಎ.ಕೆ.ಜನಾಂಗ, ಆಟೋ ಚಾಲಕ ಪುರ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರೀಬಿದನೂರು ತಾಲ್ಲೂಕು, 5) ಸಂಕೆಪ್ಪ ಬಿನ್ ಭೀಮಣ್ಣ , 37 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ,  ಇಡಗೂರು ಗ್ರಾಮ,  6) ಸಿದ್ದಪ್ಪ ಬಿನ್ ಅಶ್ವತ್ಥಪ್ಪ, 45 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ,  ಇಡಗೂರು ಗ್ರಾಮ,  7) ಮಂಜುನಾಥ ಬಿನ್ ನರಸಪ್ಪ, 24 ವರ್ಷ, ಎ.ಕೆ.ಜನಾಂಗ,  ಜಿರಾಯ್ತಿ,  ವಾಸ ಇಡಗೂರು ಗ್ರಾಮ, 8) ನರೇಂದ್ರ ಬಾಬು ಬಿನ್ ಗಂಗಾಧರಪ್ಪ, 36 ವರ್ಷ, ನಾಯಕ ಜನಾಂಗ,  ಬಾಳೆ ಹಣ್ಣು ವ್ಯಾಪಾರ, ಸಿಂಗಾನಹಳ್ಳಿ ಗ್ರಾಮ,  ಹಾಲಿ ವಾಸ ಇಡಗೂರು ಗ್ರಾಮ 9) ಭೀಮರಾಜು ಬಿನ್ ಸಿದ್ದಪ್ಪ, 30 ವರ್ಷ, ದೋಬಿ ಜನಾಂಗ, ಕೋಳಿ ವ್ಯಾಪಾರ  ಇಡಗೂರು ಗ್ರಾಮ, ಹಾಗು      10) ರಮೇಶ ಬಿನ್ ಹನುಮಂತಯ್ಯ, 40 ವರ್ಷ, ನಾಯಕ ಜನಾಂಗ  ಕಂಟ್ರ್ಯಾಕ್ಟರ್.  ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿದ್ದ 1] 1] KA.40-Y.1174 Z RAY KA.04.HN.6956 PASSION PRO 3) K.A.40.EC5220 SPLENDOR PLUS, 4) ನೊಂದಣಿ ಸಂಖ್ಯೆ ಇಲ್ಲದ HERO SPLENDOR PLUS MBL HAR074J5L1409   5)ನೊಂದಣಿ ಸಂಖ್ಯೆ ಇಲ್ಲದ  TVS SUPER XL ಇದರ ಚಾಸಿ ನಂಬರ್ MD621BD19F2A6084 ಇಂಜಿನ್ ನಂಬರ್ OO1AF1123567  ಒಟ್ಟು 5 ದ್ವಿಚಕ್ರ ವಾಹನಗಳು 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ 28,760/- ರೂ. ನಗದು ಹಣ ಇದ್ದು, ಇವುಗಳನ್ನು ಸಾಯಂಕಾಲ 4-30 ಗಂಟೆಯಿಂದ 5-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ   ಇವುಗಳನ್ನು ಹಾಗು ಆರೋಪಿಗಳನ್ನು  ಪಂಚನಾಮೆಯನ್ನು  ವಶಕ್ಕೆ ನೀಡುತ್ತಿದ್ದು,     ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದೆ. ಮೇರಗೆ ಪ್ರಕರಣ ದಾಖಲಿಸಿರುತ್ತೆ.

6) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 51/2019 ಕಲಂ. 323,341,504,506 ಐಪಿಸಿ :-

      ದಿನಾಂಕ 04/03/2019 ರಂದು ಸಂಜೆ 7;30 ಗಂಟೆಗೆ ಪಿರ್ಯಾಧಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ,ಹಳೆವೂರು ಗ್ರಾಮದ ವಾಸಿಯಾದ ನವೀನ್ ಬಿನ್ ರಾಮಲಿಂಗರೆಡ್ಡಿ ರವರು ಸುಮಾರು ದಿನಗಳಿಂದ ಮುದ್ದಲೋಡು ಕೆರೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಾಣಿಕೆ ಮಾಡುತ್ತಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು  ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವಷ್ಟರಲ್ಲಿ ಮರಳು ತುಂಬುತ್ತಿದ್ದವರು ಪರಾರಿಯಾಗಿರುತ್ತಾರೆ. ಈ ದಿನ ದಿನಾಂಕ 04/03/2019 ರಂದು ಸಂಜೆ 5-30 ಗಂಟೆ ಸಮಯದಲ್ಲಿ ವಾಟದಹೊಸಹಳ್ಳಿಯಿಂದ ನಮ್ಮ ಗ್ರಾಮಕ್ಕೆ ಹೋಗಲು ನನ್ನ  ಬಾಬತ್ತು ಸ್ಕೂಟಿ ನಂ KA-40-V-0247 ವಾಹನದಲ್ಲಿ ಕ್ಯಾಸರ ಗುಟ್ಟೆ ಕ್ರಾಸ್ ನಲ್ಲಿ ನವೀನ್ ಅಡ್ಡಗಟ್ಟಿ ನನ್ನ ವಾಹನ ನಿಲ್ಲಿಸಿ ನೀನು ಮೇಲಾಧಿಕಾರಿಗಳಿಗೆ ನನ್ನ ಮೇಲೆ ದೂರು ನೀಡುತೀಯ ಎಂದು ನನ್ನನ್ನು ತಳ್ಳಾಡಿದ್ದು , ನಾನು ತಪ್ಪಿಸಿಕೊಂಡು ನಮ್ಮ ಗ್ರಾಮಕ್ಕೆ ಹೋಗಿ ಮನೆಯಲ್ಲಿದ್ದಾಗ ಸದರಿ ನವೀನ್ 9964113141 ರಿಂದ ನನ್ನ ಮೊಬೈಲ್  ನಂ 9731987140 ಗೆ ಕರೆ ಮಾಡಿ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ನೀನು ಏನೊ ನನ್ನ ಮೇಲೆ ದೂರು ಕೊಡೋದು ನಾನೆ ನಿನ್ನನ್ನು ಮುಗಿಸಿ ಬಿಡುತ್ತೇನೆಂತ ಇದರಿಂದ ಎಷ್ಟು ಖರ್ಚಾದರು ಪರವಾಗಿಲ್ಲವೆಂತ ಪ್ರಾಣಬೆದರಿಕೆ ಹಾಕಿರುತ್ತಾನೆ. ಈ ಸಂಭಾಷಣೆ ನನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತೇನೆ.ನನಗೆ ಪ್ರಾಣ ಬೆದರಿಕೆ ಹಾಕಿರುವುದರಿಂದ  ಸದರಿ ನವೀನ್  ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ದೂರು.

7) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 52/2019 ಕಲಂ. 279,337 ಐಪಿಸಿ :-

      ದಿನಾಂಕ: 04/03/2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಆದ್ದೆಕೊಪ್ಪ ಗ್ರಾಮದ ವಾಸಿ ಅನಿಲ್ ರಾಜು ಬಿನ್ ವೆಂಕಟೇಶಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನನ್ನ ಸ್ನೇಹಿತರಾದ ಗೌರೀಬಿದನೂರು ತಾಲ್ಲೂಕು, ಗೌಡಗೆರೆ ಗ್ರಾಮದ ಜಿ.ಕೆ. ಮಹೇಂದ್ರಕುಮಾರ್ ಬಿನ್ ಜಿ.ಎಸ್. ಕೃಷ್ಣಪ್ಪ ಎಂಬುವವರಿಗೆ ಬೋರ್ ವೆಲ್ ಹಾಕಿಸಲು ಹಣದ ಕೊರತೆ ಇದ್ದುದರಿಂದ ಅವರು ನನ್ನನ್ನು ಕೇಳಿದ್ದು, ನಾನು ತುಮಕೂರು ಜಿಲ್ಲೆ, ಶಿರಾ ಟೌನ್ ನಲ್ಲಿರುವ ನನ್ನ ಸ್ನೇಹಿತರಾದ ಸಿದ್ದೇಶ್ ಎಂಬುವವರು ನನಗೆ ಹಣ ಕೊಡಬೇಕಾಗಿದ್ದರಿಂದ ಅವರ ಬಳಿ ಹಣ ಕೊಡಿಸುವುದಾಗಿ ಹೇಳಿ,  ದಿನಾಂಕ: 03/03/2019 ರಂದು  ಬೆಳಿಗ್ಗೆ KA-40, A-6920 ನಾನು, ಜಿ.ಕೆ.ಮಹೇಂದ್ರ ಕುಮಾರ್ ಹಾಗು ಸಾಬ್ಜಾನ್ ಸಾಬಿ ಸ್ವಿಫ್ಟ್ ಡಿಸೈರೋ ಟೂರ್ ಕಾರಿನಲ್ಲಿ ಶಿರಾಗೆ ಹೋಗಿ, ನನ್ನ ಸ್ನೇಹಿತನಿಂದ ಹಣ ತೆಗೆದುಕೊಂಡು, ವಾಪಸ್ಸು ಗೌಡಗೆರೆಗೆ ಬರಲು KA-40, A-6920 ಸ್ವಿಫ್ಟ್ ಡಿಸೈರೋ ಟೂರ್ ಕಾರಿನಲ್ಲಿ ಜಿ.ಕೆ.ಮಹೇಂದ್ರಕುಮಾರ್ ರವರು ಚಾಲನೆ ಮಾಡಿಕೊಂಡು, ಸಂಜೆ ಸುಮಾರು 4-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ರಂಗನಹಳ್ಳಿ ಕ್ರಾಸ್ ಬಳಿ ಬರುತ್ತಿರುವಾಗ,  ಮಹೇಂದ್ರ ಕುಮಾರ್ ರವರು ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಕಾರು ನಿಯಂತ್ರಣಕ್ಕೆ ಸಿಗದೇ ರಸ್ತೆಯ ಎಡಬದಿಗೆ ಉರುಳಿಬಿದ್ದು,  ಕಾರು ಜಖಂಗೊಂಡು,  ನನಗೆ  ಬಲಕಾಲಿನ ಹಿಮ್ಮಡಿ ಬಳಿ ರಕ್ತಗಾಯವಾಗಿದ್ದು, ನಾನು ಬೇರೆ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ನನಗೆ ಅಪಘಾತದಿಂದ ಗಾಯವಲ್ಲದೇ ಮೈಕೈ ನೋವು ಹೆಚ್ಚಾಗಿದ್ದರಿಂದ ವಿಶ್ರಾಂತಿ ಬೇಕಾಗಿದ್ದರಿಂದ ಮನೆಗೆ ಹೋಗಿ, ವಿಶ್ರಾಂತಿ ಪಡೆದು, ಈ ದಿನ ತಡವಾಗಿ ಠಾಣೆಗೆ ಬಂದು ನನಗೆ ಅಪಘಾತವನ್ನುಂಟು ಮಾಡಿದ KA-40, A-6920 ಸ್ವಿಫ್ಟ್ ಡಿಸೈರೋ ಟೂರ್ ಕಾರಿನ ಚಾಲಕ ಜಿ.ಕೆ.ಮಹೇಂದ್ರಕುಮಾರ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

8) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 19/2019 ಕಲಂ. 78(ಸಿ) ಕೆ.ಪಿ. ಆಕ್ಟ್ :-

      ದಿನಾಂಕ:05/03/2019 ರಂದು ಬೆಳಿಗ್ಗೆ 11:45 ಗಂಟೆಗೆ ಪಿ.ಎಸ್.ಐ ಶ್ರೀ. ಸಿ.ರವಿಕುಮಾರ ರವರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:05/03/2019 ರಂದು  ಬೆಳಿಗ್ಗೆ 10:15  ಗಂಟೆಗೆ ಗೌರಿಬಿದನೂರು ಪುರದ  ಸಿವಿಲ್ ಬಸ್ ನಿಲ್ದಾಣದ   ರಸ್ತೆಯಲ್ಲಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಬಾತ್ಮೀ ಮೇರೆಗೆ ನಾನು ಪಂಚರನ್ನು  ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯಾದ ಗೋಪಾಲ ಹೆಚ್.ಸಿ 244, ಸುಬ್ರಮಣ್ಯ ಸಿ.ಹೆಚ್.ಸಿ 242, ಮತ್ತು ನರಸಿಂಹಮೂರ್ತಿ ಪಿ.ಸಿ 06  ರವರುಗಳೊಂದಿಗೆ ಸರ್ಕಾರಿ ಜೀಪಿನಲ್ಲಿ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಿವಿಲ್ ಬಸ್ ನಿಲ್ದಾಣದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ 1/- ರೂ.ಗೆ 70/- ರೂ.ಗಳನ್ನು ನೀಡುವುದಾಗಿ ಹಣ ಆಮಿಷವನ್ನು ಒಡ್ಡುತ್ತಿದ್ದು,  ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ  ದಾಳಿ ಮಾಡಿ ಆತನನ್ನು ಸುತ್ತುವರಿದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಗಂಗಪ್ಪ ಬಿನ್ ಲೇಟ್ ಮಾಳೂರಪ್ಪ, 66 ವರ್ಷ, ಕುರುಬರು, ಜಿರಾಯ್ತಿ, ಕೋನಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು  ತಿಳಿಸಿದ್ದು, ಆತನ  ಬಳಿ ಇದ್ದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು 565/- ರೂ. ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆಸಾಮಿಯನ್ನು ಬೆಳಿಗ್ಗೆ 11:45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ದೂರಾಗಿರುತ್ತೆ.

9) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 25/2019 ಕಲಂ. 457,380 ಐಪಿಸಿ :-

      ದಿನಾಂಕ:05/03/2019 ರಂದು ಬೆಳಗ್ಗೆ 11-15 ಘಂಟೆಗೆ ಪಿರ್ಯಾದಿದಾರರಾದ ಶ್ರೀ.ನರಸಿಂಹಮೂರ್ತಿ.ಬಿ.ಆರ್. ಬಿನ್ ರಾಮಾಂಜಿನಪ್ಪ 26 ವರ್ಷ ವಕ್ಕಲಿಗರು ಬಳುವನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಂಶವೇನೆಂದರೆ: ತಾನು  ನಿಶಾ ಗ್ರೂಪ್ ಆಪ್ ಕಂಪನಿಯಲ್ಲಿ ಪೆಟ್ರೋಲಿಂಗ ಸೂಪರ್ ವೈಸರ್ ಆಗಿ ಸುಮಾರು 3 ವರ್ಷಗಳಿಂದ ಕೆಲಸ ಮಾಡುತ್ತಿದ್ದು ತಮ್ಮ ಕಂಪನಿಯು ಇಂಡೂಸ್ ಕಂಪನಿಗೆ ಸೇರಿರುವ ಏರ್ಟೇಲ್  ಟವರ್ ಗಳನ್ನು ನೋಡಿಕೊಳ್ಳುವ ಕೆಲಸ ವಹಿಸಿಕೊಂಡಿದ್ದು ಅದರಂತೆ ತಮ್ಮ ಕಂಪನಿಯು ತನಗೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ ಕಡೆಗಳಲ್ಲಿನ ಟವರ್ಗಳನ್ನು  ಗಸ್ತು ಮಾಡುವ ಕೆಲಸ ವಯಿಸಿದ್ದು ತಾನು ವಾರಕ್ಕೆ ಎರಡು ಬಾರಿ ಬಂದು ಸದರಿ ಟವರ್ ಗಳನ್ನು ನೋಡಿಕೊಂಡು ಹೋಗುತ್ತಿದ್ದು ಅದರಂತೆ ದಿನಾಂಕ:16/02/2019 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ವರ್ಲಕೊಂಡ ಗ್ರಾಮದ ಸಮೀಪ ನಿರ್ಮಿಸಿರುವ ಏರಟೆಲ್ ಟವರ್ NH7003ID ಯ ಟವರ್ ನ್ನು ನೋಡಿಕೊಂಡು ಹೋಗಿದ್ದು  ನಂತರ ದಿನಾಂಕ:18/02/2019 ರಂದು ಬೆಳಗ್ಗೆ:9-00 ಘಂಟೆಯಲ್ಲಿ ಸದರಿ ಟವರ್ ಬಳಿ  ಬಂದು ನೋಡಲಾಗಿ ದಿನಾಂಕ:17/02/2019 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಟವರ್ ನಲ್ಲಿ ಇರುವ ಶೆಟರ್ ಕಿಟಕಿಯನ್ನು ಮುರಿದು ಶೆಟರ್ ಒಳಗಡೆ ಅಳವಡಿಸಿದ್ದ 48 ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳತನವಾಗಿರವ ಬ್ಯಾಟರಿಗಳ ಬೆಲೆ ಸುಮಾರು 45.000/- ರೂಪಾಯಿಗಳು ಆಗಿದ್ದು ಈ ವಿಷಯವನ್ನು  ಕೂಡಲೇ ತಾನು ತಮ್ಮ ಕಂಪನಿಯ ಅಧಿಕಾರಿಗಳಿಗೆ ತಿಳಿಸಿ ಎಲ್ಲಾ ಕಡೆ ಹುಡಕಿ ನೋಡಲಾಗಿ ಸಿಗದಿರವ ಕಾರಣ ತಾನು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡ ಟವರ್ ನಲ್ಲಿ ಕಳ್ಳತನ ಮಾಡಿರವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಆಗಿರುತ್ತೆ.

10) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 19/2019 ಕಲಂ. 87 ಕೆ.ಪಿ. ಆಕ್ಟ್ :-

      ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಅವಿನಾಶ್ ಪಿ.ಎಸ್.ಐ. (ಕಾ&ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ದಿನಾಂಕ-04/03/2019 ರಂದು ಸಂಜೆ 5.00 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಅವಿನಾಶ್ ಪಿ.ಎಸ್.ಐ. (ಕಾ & ಸು) ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಸಂತೆ ಮೈದಾನದ ಆಂಜನೇಯಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು  ಪಂಚಾಯ್ತಿದಾರರು ಮತ್ತು ಸಿಬ್ಬಂದಿಯವರರುಗಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನೋಡಲಾಗಿ ಯಾರೋ ಜನರು ಆಂಜನೇಯ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಅಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ 08 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1) ಮಂಜುನಾಥ ಬಿನ್ ಮುನಿಸ್ವಾಮಪ್ಪ. 38 ವರ್ಷ, ಭೋವಿ ಜನಾಂಗ, ನಗರಸಭೆಯಲ್ಲಿ ಕೆಲಸ, ವಾಸ-ಭೋವಿ ಕಾಲೋನಿ, ಶೀಡ್ಲಘಟ್ಟ ಪುರ 2) ವೆಂಕಟೇಶ್ ಬಿನ್ ಗಂಗಪ್ಪ, 30 ವರ್ಷ, ಭೋವಿ ಜನಾಂಗ, ನಗರಸಭೆಯಲ್ಲಿ ಕೆಲಸ, ವಾಸ-ಭೋವಿ ಕಾಲೋನಿ, ಶಿಡ್ಲಘಟ್ಟ ಪುರ 3] ನಾರಾಯಣಸ್ವಾಮಿ ಬಿನ್ ತಿಮ್ಮಣ್ನ, 41 ವರ್ಷ, ಭೋವಿ ಜನಾಂಗ, ನಗರಸಭೆಯಲ್ಲಿ ಕೆಲಸ, ವಾಸ-ಭೋವಿ ಕಾಲೋನಿ, ಶಿಡ್ಲಘಟ್ಟ ಪುರ 4] ವೆಂಕಟೇಶ.ಕೆ ಬಿನ್ ಕೆಂಪಣ್ಣ, 35 ವರ್ಷ, ಭೋವಿ ಜನಾಂಗ, ರೇಷ್ಮೆ ಕೆಲಸ, ವಾಸ-ಭೋವಿ ಕಾಲೋನಿ, ಶಿಡ್ಲಘಟ್ಟ ಪುರ 05) ಎನ್ ಹರೀಶ್ ಬಿನ್ ನಾರಾಯಣಸ್ವಾಮಿ, 24 ವರ್ಷ, ಭೋವಿ ಕಾಲೋನಿ, ನಗರಸಭೆಯಲ್ಲಿ ಕೆಲಸ, ವಾಸ-ಭೋವಿ ಕಾಲೋನಿ, ಶಿಡ್ಲಘಟ್ಟ ಪುರ 06) ಟಿ.ಹರೀಶ್ ಬಿನ್ ತಿರುಮಲಪ್ಪ, 24 ವರ್ಷ, ಭೋವಿ ಜನಾಂಗ, ನಗರಸಭೆಯಲ್ಲಿ ಕೆಲಸ, ವಾಸ-ಭೋವಿ ಕಾಲೋನಿ, ಶಿಡ್ಲಘಟ್ಟ ಪುರ 07) ಮುನಿರಾಜು.ಎಂ ಬಿನ್ ವೆಂಕಟರೋಣಪ್ಪ, 53 ವರ್ಷ, ನಾಯಕರು, ರೇಷ್ಮೆ ಕೆಲಸ, ವಾಸ:-ವಾರ್ಡ್-21, ಕಾಮಾಟಿಗರ ಪೇಟೆ, ಶಿಡ್ಲಘಟ್ಟ ಪುರ 8) ನಾರಾಯಣಸ್ವಾಮಿ ಎನ್ ಬಿನ್ ರಾಮಯ್ಯ, 35 ವರ್ಷ, ಭೋವಿ ಜನಾಂಗ, ನಗರಸಭೆಯಲ್ಲಿ ಕೆಲಸ, ವಾಸ:-ಭೋವಿ ಕಾಲೋನಿ, ಶಿಡ್ಲಘಟ್ಟ ಪುರ ಎಂದು ತಿಳಿಸಿದ್ದು ಇವರುಗಳು ಜೂಜಾಟಕ್ಕೆ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಒಟ್ಟು 14,400-00 ರೂ ನಗದು ಹಣವನ್ನು, ಜೂಜಾಟಕ್ಕೆ ಬಳಸಿ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ 52 ಇಸ್ಟೀಟ್ ಎಲೆಗಳು ಇವುಗಳನ್ನು ಸಂಜೆ 06.00 ರಿಂದ 6.30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಸಂಜೆ 07.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ಕೇಸು ದಾಖಲಿಸಿರುತ್ತೇನೆ.