ದಿನಾಂಕ : 05/02/2019ರ ಅಪರಾಧ ಪ್ರಕರಣಗಳು

1) ಚೇಳೂರು ಪೊಲೀಸ್ ಠಾಣೆ ಮೊ.ಸಂ.03/2019 ಕಲಂ: 87 ಕೆ.ಪಿ. ಆಕ್ಟ್:-

     ದಿನಾಂಕ 04/02/2019 ರಂದು ಮದ್ಯಾಹ್ನ 1:30 ಗಂಟೆ ಸಮಯದಲ್ಲಿ ಚೇಳೂರು  ಪೊಲೀಸ್ ಠಾಣಾ ವ್ಯಾಪ್ತಿಯ ಯಗುವನೆಟ್ಟಕುಂಟಪಲ್ಲಿ ಗ್ರಾಮದ ಬಳಿಯ ಕೊಂಡಾರೆಡ್ಡಿ ರವರಿಗೆ ಸೇರಿದ ಜಮೀನಿನಲ್ಲಿರುವ  ಹುಣಸೇ ಮರದ ಕೆಳಗೆ ಯಾರೋ ಕೆಲವರು ಜೂಜಾಟ ಆಡುತ್ತಿರುವುದಾಗಿ ಬಂದ  ಖಚಿತ  ಮಾಹಿತಿಯ ಮೇರೆಗೆ ಪಿಎಸ್ಐ ಚಂದ್ರಕಲಾ ಎನ್  ರವರು ಪಂಚರು ಮತ್ತು ಸಿಬ್ಬಂದಿಯೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆಎ42 ಜಿ61  ರಲ್ಲಿ  ಕುಳಿತು ಯಗುವನೆಟ್ಟಕುಂಟಪಲ್ಲಿ ಗ್ರಾಮದ ಬಳಿ ಹೋಗಿ ಕೊಂಡಾರೆಡ್ಡಿ ರವರಿಗೆ ಸೇರಿದ ಜಮೀನಿನಲ್ಲಿನ ಹುಣಸೇ ಮರದ ಕೆಳಗೆ  ಕಾನೂನು ಬಾಹಿರವಾಗಿ  ಜೂಜಾಟವಾಡುತ್ತಿದ್ದವರ ಮೇಲೆ  ದಾಳಿ ಮಾಡಿ 07 ಜನರನ್ನು  ವಶಕ್ಕೆ ಪಡೆದು ಅವರು ಪಣಕ್ಕಿಟ್ಟಿದ್ದ  3500/- ರೂ  ನಗದು ಹಣವನ್ನು 52 ಇಸ್ಪಿಟ್ ಎಲೆಗಳು 5 ವಿವಿಧ ಕಂಪನಿಗಳಿಗೆ ಸೇರಿದ ಕೀಪ್ಯಾಡ್  ಮೊಬೈಲ್ ಗಳನ್ನು , ಒಂದು ಹಳೆಯ ಪ್ಲಾಸ್ಟಿಕ್  ಕವರ್ ನ್ನು  ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತು ಪಡಿಸಿಕೊಂಡು  ಆರೋಪಿತರು ಮತ್ತು ಅಮಾನತು ಪಡಿಸಿದ  ಮಾಲಿನೊಂದಿಗೆ  ಮದ್ಯಾಹ್ನ 3:45 ಗಂಟೆಗೆ ಠಾಣೆಗೆ ವಾಪಸ್ಸಾಗಿ ನೀಡಿದ  ವರದಿ ಮೇರೆಗೆ   ಠಾಣಾ ಎನ್.ಸಿ.ಆರ್ 04/2019 ರಂತೆ ಪ್ರಕರಣ  ದಾಖಲಾಗಿದ್ದು  ಘನ ನ್ಯಾಯಾಲಯದ ಅನುಮತಿಯನ್ನು ಪಡೆದು  ದಿನಾಂಕ 04/02/2019 ರಂದು  ಸಂಜೆ  19:10 ಗಂಟೆಗೆ ಠಾಣಾ ಮೊಸಂ 03/2019 ಕಲಂ 87 ಕೆಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

2) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.11/2019 ಕಲಂ: 279 ಐ.ಪಿ.ಸಿ:-

     ದಿನಾಂಕ:-05/02/2019 ರಂದು ಮಧ್ಯಾಹ್ನ 2:30 ಗಂಟೆಗೆ ಪಿರ್ಯಾಧಿ ಕುಮಾರಿ ಶ್ರಾವಣಿ ಬಿನ್ ಬಿ.ಎನ್.ಬಾಬುರೆಡ್ಡಿ 22 ವರ್ಷ, ವಕ್ಕಲಿಗರು, ನಂ-40(ಎ), ಆಂಜನೇಯ ದೇವಸ್ಥಾನದ ಹತ್ತಿರ, ಭಾಣಸವಾಡಿ, ಕೆಆರ್.ಪುರಂ ಹೋಬಳಿ, ಬೆಂಗಳೂರು-43. ರವರು ಟೈಪ್ ಮಾಡಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-04/02/2019 ರಂದು ರಾಜಾನುಕುಂಟೆ ಪ್ರಸಿಡೆನ್ಸ್ ಯೂನಿವರ್ಸಿಟಿ ಕಾಲೇಜನಲ್ಲಿ ಎಲ್.ಎಲ್.ಬಿ ವ್ಯಾಸಾಂಗ ಮಾಡುತ್ತಿದ್ದು, ಸಂಜೆ 5:30 ಗಂಟೆಯ ಸಮಯದಲ್ಲಿ ಕಾಲೇಜು ಮುಗಿಸಿಕೊಂಡು ತನ್ನ ಕೆಎ-03-ಎನ್.ಎ-1525 ರ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಸ್ನೇಹಿತರನ್ನು ನೋಡಿಕೊಂಡು ವಾಪಸ್ಸು ಮನೆಗೆ ಹೋಗಲು ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಹೆಚ್-7 ಬೈಪಾಸ್ ರಸ್ತೆಯ ಚೊಕ್ಕಹಳ್ಳಿ ಗೇಟ್ ಬಳಿ ರಾತ್ರಿ 8:00 ಗಂಟೆಯ ಸಮಯದಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದರಿಂದ ತಾನು ತನ್ನ ಕಾರನ್ನು ನಿಧಾನವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಹಿಂದೆ ಬರುತ್ತಿದ್ದ ಕೆಎ-50-ಎ-6915 ರ ಟಿಪ್ಪರ್ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಕಾರಿನ ಹಿಂಭಾಗದಿಂದ ಅರ್ಧ ಭಾಗ ಜಕಂಗೊಂಡಿದ್ದು, ಯಾರಿಗೂ ಸಹಾ ಗಾಯಗಳಾಗದೇ ಇದ್ದು, ಸದರಿ ಅಪಘಾತಕ್ಕೆ ಕಾರಣನಾದ ಕೆಎ-50-ಎ-6915 ಟಿಪ್ಪರ್ ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಆನಂದ ಬಿನ್ ಮುನಿಸ್ವಾಮಪ್ಪ 36 ವರ್ಷ, ವಕ್ಕಲಿಗರು, ಕನ್ನಮಂಗಲಪಾಳ್ಯ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂತ ತಿಳಿಸಿದ್ದು, ಸದರಿ ಅಪಘಾತ ಪಡಿಸಿದ ಕೆಎ-50-ಎ-6915 ರ ಟಿಪ್ಪರ್ ಲಾರಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಟೈಪ್ ಮಾಡಿ ನೀಡಿದ ದೂರಿನ ಮೇರೆಗೆ ದಿನಾಂಕ:-05/02/2019 ರಂದು ಮಧ್ಯಾಹ್ನ 2:30 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.30/2019 ಕಲಂ: 307-325-504 ರೆ/ವಿ 34 ಐ.ಪಿ.ಸಿ:-

     ದಿ: 04-02-2019 ರಂದು ಸಂಜೆ 7:30 ಗಂಟೆಗೆ ಪಿರ್ಯಾಧಿದಾರರಾದ ರಮೇಶ ಬಿನ್ ಲೇಟ್ ಗಂಗಪ್ಪ, 40 ವರ್ಷ, ಬಲಜಿಗರು, ತರಕಾರಿ ವ್ಯಾಪಾರ, ಹುದುಗೂರು ಗ್ರಾಮ, ಗೌರೀಬಿದೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ವೆಂಕಟಲಕ್ಷ್ಮಮ್ಮ, 35 ವರ್ಷರವರು ನಮ್ಮ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುವ ಸಂತೆಗಳಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿರುತ್ತೇವೆ. ನಮ್ಮೊಂದಿಗೆ ನಮ್ಮ ಗ್ರಾಮದ ನಮ್ಮ ಪಕ್ಕದ ಮನೆಯ ವಾಸಿಗಳಾದ ಆನಂದ ಬಿನ್ ಅಶ್ವಥಪ್ಪ ಮತ್ತು ಅವರ ತಾಯಿ ಶ್ರೀಮತಿ ಚೌಡಮ್ಮರವರೂ ಸಹಾ ತರಕಾರಿ ವ್ಯಾಪಾರಕ್ಕೆ ಬರುತ್ತಿರುತ್ತಾರೆ. ಈಗ್ಗೆ ಸುಮಾರು 3 ತಿಂಗಳುಗಳಿಂದ ಆನಂದ್ ಮತ್ತು ಅವರ ತಾಯಿ ನಮಗೆ ತರಕಾರಿ ವ್ಯಾಪಾರದಲ್ಲಿ ಲಾಸ್ ಆಗುತ್ತಿದೆ. ಇದಕ್ಕೆ ನಾವೇ ಕಾರಣ ಎಂದು ಸಂತೆಗಳು ನಡೆದ ದಿನಗಳಂದು ಕುಡಿದು ಬಂದು ನಮ್ಮ ಮನೆಯ ಮುಂದೆ ನಮ್ಮನ್ನು ಉದ್ದೇಶಿಸಿಕೊಂಡು ಬಾಯಿಗೆ ಬಂದಂತೆ ಬೈಯುಕೊಳ್ಳುತ್ತಿದ್ದರು. ಈ ವಿಚಾರದಲ್ಲಿ ನಾನು ನನ್ನ ಹೆಂಡತಿ ಅಕ್ಕ ಪಕ್ಕದ ಮನೆಯವರ ಬಳಿ ಯಾಕೆ ಜಗಳ ಗಲಾಟೆಗಳನ್ನು ಮಾಡಿಕೊಳ್ಳುವುದು ಎಂದು ಸುಮ್ಮನಾಗಿದ್ದೆವು. ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ಸಹಾ ಇದೇ ರೀತಿ ಜಗಳ ತೆಗೆದು ಗಲಾಟೆ ಮಾಡಿದಾಗ ನಮ್ಮ ಪಕ್ಕದ ಮನೆಯ ವಾಸಿಗಳಾದ ಅಶ್ವಥಪ್ಪ ಬಿನ್ ಗಂಗಪ್ಪ ಮತ್ತು ಬಲರಾಮ ಬಿನ್ ಶಿವಶಂಕರಪ್ಪರವರು ನಮ್ಮಿಬ್ಬರಿಗೂ ಬುದ್ದಿ ಮಾತುಗಳನ್ನು ಹೇಳಿದ್ದರು. ದಿನಾಂಕ: 03/02/2019 ರಂದು ಗೌರಿಬಿದನೂರು ಟೌನ್ ನಲ್ಲಿ ಸಂತೆ ಮುಗಿಸಿಕೊಂಡು ಮನೆಗೆ ಹೋಗಿ ಮನೆಯವರೊಂದಿಗೆ ಊಟ ಮಾಡುತ್ತಾ ಕುಳಿತಿದ್ದಾಗ ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಆನಂದ ಕುಡಿದು ಬಂದು ನನ್ನ ಹೆಂಡತಿ ಶ್ರೀಮತಿ ವೆಂಕಟಲಕ್ಷ್ಮಮ್ಮನನ್ನು ಉದ್ದೇಶಿಸಿ ಬಾರೆ ಈಚೆಗೆ ಲೋಫರ್ ಮುಂಡೆ, ಸೂಳೆ ಮುಂಡೆ ನಿನಗೆ ಒಂದು ಗತಿ ಕಾಣಿಸುತ್ತೇನೆ. ನಿನ್ನಿಂದಲೇ ನಮ್ಮ ವ್ಯಾಪಾರವೆಲ್ಲಾ ಹಾಳಾಗಿರುವುದು ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯಲು ಶುರು ಮಾಡಿದನು. ಆಗ ನನ್ನ ಹೆಂಡತಿ ಶ್ರೀಮತಿ ವೆಂಕಟಲಕ್ಷ್ಮಮ್ಮರವರು ಊಟ ಮಾಡುತ್ತಿದ್ದಳು ಬಿಟ್ಟು ಮನೆಯಿಂದ ಹೊರಗೆ ಹೋಗಿ ಆನಂದನ ತಾಯಿ ಶ್ರೀಮತಿ ಚೌಡಮ್ಮರವರಿಗೆ ನಿನ್ನ ಮಗ ನನ್ನನ್ನು ಹೆಂಗಸು ಎನ್ನುವುದನ್ನೂ ನೋಡದೇ ಬಾಯಿಗೆ ಬಂದಂತೆ ಬೈಯುತ್ತಿದ್ದಾನೆ ನೀನು ನಿನ್ನ ಮಗನನ್ನು ಮನೆಯೊಳಗೆ ಕರೆದುಕೊಂಡು ಹೋಗು ಎಂದು ಹೇಳುತ್ತಿದ್ದಂತೆ ಚೌಡಮ್ಮ ನನ್ನ ಮಗ ಹೇಳುವುದು ಸರಿಯಾಗಿದೆ ನೀನು ಯಾರೇ ಬೋಸುಡಿ ಕೇಳಲು ಎಂದು ಜಗಳ ತೆಗೆದಳು. ನಾನು ಮನೆಯ ಹೊರಗೆ ಹೋದೆನು. ಆಗ ಆನಂದ ನಿನ್ನನ್ನು ಈ ದಿನ ಬಿಡುವುದಿಲ್ಲ ಎಂದು ಹೇಳಿಕೊಂಡು ಬಂದು ಬಲ ಕೈಯಿಂದ ನನ್ನ ಹೆಂಡತಿಯ ಎಡಕೆನ್ನೆಗೆ ಹೊಡೆದು, ಆಕೆಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದನು. ಆಗ ನನ್ನ ಹೆಂಡತಿ ತಲೆ ಕೆಳಗಾಗಿ ಬಿದ್ದು, ನನ್ನ ಹೆಂಡತಿಯ ತಲೆಯೊಳಗೆ ಏಟಾಗಿ ಕಿವಿ, ಬಾಯಿ ಮತ್ತು ಮೂಗಿನಲ್ಲಿ ರಕ್ತ ಬಂದಿತು. ಆಗ ನಾನು, ಅಲ್ಲಿದ್ದ ನಮ್ಮ ಅಕ್ಕ ಪಕ್ಕದ ಮನೆಯವರಾದ ಅಶ್ವಥಪ್ಪ ಬಿನ್ ಗಂಗಪ್ಪ, ಶಾಂತಮ್ಮ ಕೋಂ ಅಶ್ವಥಪ್ಪ ಮತ್ತು ಬಲರಾಮ ಬಿನ್ ಶಿವಶಂಕರಪ್ಪರವರುಗಳು ಬಂದು ನನ್ನ ಹೆಂಡತಿಯನ್ನು ಉಪಚರಿಸಿ ನೋಡಲಾಗಿ ನನ್ನ ಹೆಂಡತಿ ಪ್ರಜ್ಞೆ ತಪ್ಪಿದ್ದಳು. ತಕ್ಷಣ ನನ್ನ ಹೆಂಡತಿಯನ್ನು ನಾವುಗಳು ಯಾವುದೋ ಒಂದು ಆಟೋದಲ್ಲಿ ಗೌರಿಬಿದನೂರು ಮಾನಸ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದೆವು. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರದ ಯಲಹಂಕದಲ್ಲಿರುವ ಶುಶ್ರೂಷ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸುವಂತೆ ತಿಳಿಸಿದ್ದರಿಂದ ನಮ್ಮ ಹೆಂಡತಿಯನ್ನು ಬೆಂಗಳೂರು ನಗರದ ಯಲಹಂಕದಲ್ಲಿರುವ ಶುಶ್ರೂಷ ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಖಲಿಸಿರುತ್ತೇನೆ. ನನ್ನ ಹೆಂಡತಿ ವೆಂಕಟಲಕ್ಷ್ಮಮ್ಮರವರು ಐ.ಸಿ.ಯು ದಲ್ಲಿರುತ್ತಾರೆ. ನನ್ನ ಹೆಂಡತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಈ ದಿನ ಠಾಣೆಗೆ ಬಂದು ವ್ಯಾಪಾರದಲ್ಲಿನ ದ್ವೇಷದಿಂದ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ಸಾಯಿಸುವ ಉದ್ದೇಶದಿಂದ ನನ್ನ ಹೆಂಡತಿಯ ಕೆನ್ನೆಗೆ ಹೊಡೆದು, ಎತ್ತಿ ನೆಲಕ್ಕೆ ಅಪ್ಪಳಿಸಿ ತೀವ್ರ ಗಾಯವನ್ನುಂಟು ಮಾಡಿರುವ ಆನಂದ ಮತ್ತು ಅವರ ತಾಯಿ ಶ್ರೀಮತಿ ಚೌಡಮ್ಮರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ , ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ

4) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.31/2019 ಕಲಂ: 78(ಸಿ) ಕೆ.ಪಿ. ಆಕ್ಟ್:-

     ಈ ದಿನ ದಿನಾಂಕ:05/02/2019 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ಹುದುಗೂರು ಗ್ರಾಮದ ಬಸ್ ನಿಲ್ದಾಣದ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೇಬರವರ ಮಾರ್ಗದರ್ಶನದಂತೆ ದಾಳಿ ಮಾಡಲು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸಿಬ್ಬಂದಿಯರಾದ ಪಿ.ಸಿ-518 ಆನಂದ್ ರವರೊಂದಿಗೆ ಪೊಲಿಸ್ ಜೀಪಿನಲ್ಲಿ ಹುದುಗೂರು ಗ್ರಾಮಕ್ಕೆ ಹೋಗಿ ಮಾಹಿತಿ ಬಂದ ಸ್ಥಳಕ್ಕೆ ಸ್ವಲ್ಪ ದೂರದಲ್ಲಿಯೇ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಬಸ್ ನಿಲ್ದಾಣದ ಬಳಿ ಇರುವ ಶಿವವೈನ್ಸ್ ಮುಂದೆ ಯಾರೋ ಆಸಾಮಿ ನಿಂತಿದ್ದು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷ ಒಡ್ಡಿ ಮಟ್ಕಾ ಚೀಟಿ ಬರೆದುಕೊಟ್ಟು ಹಣ ಪಡೆದುಕೊಂಡು ಮಟ್ಕಾ ಜೂಟಾವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಆತನನ್ನು ಸುತ್ತುವರೆದು ಹಿಡಿದುಕೊಂಡು ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಲಕ್ಷ್ಮಣ @ ಪುಟ್ಟ ಬಿನ್ ನರಸಿಂಹಪ್ಪ, 36 ವರ್ಷ, ಪರಿಶಿಷ್ಟ ಜಾತಿ [ಎ.ಕೆ], ಜಿರಾಯ್ತಿ, ಹುದುಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಪರಿಶೀಲಿಸಲಾಗಿ ಕೈಯಲ್ಲಿ ಒಂದು ಮಟ್ಕಾ ಅಂಕಿಗಳನ್ನು ಬರೆದಿರುವ ಚೀಟಿ ಮತ್ತು ಬಾಲ್ ಪೆನ್ನು ಇದ್ದು, ಆತನ ಜೇಬಿನಲ್ಲಿ 1215/- ರೂ. ನಗದು ಹಣ ಇರುತ್ತೆ. ಸದರಿ ಆಸಾಮಿಯನ್ನು, ಮಟ್ಕಾ ಚೀಟಿ, ಬಾಲ್ ಪೆನ್ನು ಮತ್ತು ನಗದು ಹಣ 1215/- ರೂ. ಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 11-45 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 1-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ಆರೋಪಿಯ ವಿರುದ್ದ ಮೊ.ಸಂ. 31/2019 ಕಲಂ: 78 ಕ್ಲಾಸ್ 1 [4] & [6] ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೇನೆ.

5) ಗೌರಿಬಿದನೂರು ಪುರ  ಪೊಲೀಸ್ ಠಾಣೆ ಮೊ.ಸಂ.12/2019 ಕಲಂ: 120(ಬಿ)-504-506 ಐ.ಪಿ.ಸಿ:-

     ದಿನಾಂಕ:04/02/2019 ರಂದು ಸಂಜೆ 6:00 ಗಂಟೆಗೆ ನ್ಯಾಯಾಲಯದ ಪಿ.ಸಿ 507 ರವರು ನ್ಯಾಯಾಲಯದ ಪಿ.ಸಿ.ಆರ್ 77/2016 ರನ್ನು ಠಾಣೆಯಲ್ಲಿ ಹಾಜರುಪಡಿಸಿದ್ದು, ಸ್ವೀಕರಿಸಿಕೊಂಡಿದ್ದರ ಸಾರಾಂಶವೇನೆಂದರೆ, ಪಿರ್ಯಾದಿ ಜಾವೀದ್ ಬಿನ್ ಹಾಷಮ್ ಖಾನ್, 59 ವರ್ಷ, ಮಾಧವನಗರ, ಗೌರಿಬಿದನೂರು ಟೌನ್ ರವರು ಘನ ನ್ಯಾಯಾಲಯದಲ್ಲಿ ಸಲ್ಲಿಸಿಕೊಂಡ ದೂರಿನ ಸಾರಾಂಶವೇನೆಂದರೆ,  ಮಾಧವನಗರದ ಕೆ.ವಿ ಕೃಷ್ಣಮೂರ್ತಿ ಎಂಬುವವರು 50,000/- ರೂಪಾಯಿಗಳನ್ನು ತೆಗೆದುಕೊಂಡು ಒಂದು ಚೆಕ್ಕನ್ನು ನೀಡಿರುತ್ತಾರೆ. ಸದರಿ ಚೆಕ್ಕನ್ನು ಪಿರ್ಯಾದಿದಾರರು ಬ್ಯಾಂಕಿಗೆ ಹಾಕಿಕೊಂಡಾಗ ಹಣವಿಲ್ಲದೆ ಇದ್ದು, ಆದುದರಿಂದ ಪಿರ್ಯಾದಿದಾರರು ಕೃಷ್ಣಮೂರ್ತಿ ರವರ ವಿರುದ್ದ ಗೌರಿಬಿದನೂರು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಎನ್.ಐ ಆಕ್ಟ್ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡಿರುತ್ತಾರೆ. ಆರೋಪಿತನು 21/06/16ರಂದು ಜಾಮೀನು ಪಡೆದುಕೊಂಡಿರುತ್ತಾರೆ. ಹೀಗಿರುವಾಗ ಅದೇ ದಿನ ಸಂಜೆ ಸುಮಾರು 7:01 ಸಮಯಕ್ಕೆ ಪಿರ್ಯಾದಿದಾರರ ಮೊಬೈಲ್ ನಂಬರ್ ಗೆ 9880418199 ನಂಬರಿನಿಂದ ಕರೆ ಬಂದಿದ್ದು, ವಿಳಾಸ ಕೇಳಿದಾಗ ರಾಮಚಂದ್ರ ಬಂದಾರ್ಲಹಳ್ಳಿ ಗ್ರಾಮ ಎಂದು ತಿಳಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ನನ್ನ ಮಗ ಕೃಷ್ಣಮೂರ್ತಿ ನಿನ್ನ ಕೇಸಿನಲ್ಲಿ ಬೇಲ್ ತೆಗೆದುಕೊಂಡಿದ್ದಾನೆ. ನೀನು ಕೇಸನ್ನು ವಾಪಸ್ಸು ತೆಗೆದುಕೊಳ್ಳದಿದ್ದರೆ ನಾವಿಬ್ಬರೂ ಸೇರಿ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಆರೋಪಿತರು ಸಂಚು ಮಾಡಿಕೊಂಡು ತನಗೆ ಬೆದರಿಕೆಯನ್ನು ಹಾಕಿದ್ದು, ಇವರ ವಿರುದ್ದ ತನಗೆ ನ್ಯಾಯಾ ದೊರಕಿಸಿಕೊಡಬೇಕಾಗಿ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

6) ಮಂಚೇನಹಳ್ಳಿ  ಪೊಲೀಸ್ ಠಾಣೆ ಮೊ.ಸಂ.13/2019 ಕಲಂ: 87 ಕೆ.ಪಿ. ಆಕ್ಟ್:-

     ಪಿರ್ಯಾದಿ ಹೆಚ್.ಸಿ 180 ಮೋಹನ್ ಸಿಂಗ್ ರವರು ದಿನಾಂಕ:04/02/2019 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ತೊಂಡೇಬಾವಿ ಹೊರ ಠಾಣೆಯಲ್ಲಿರುವಾಗ ಮೈಲಗಾನಹಳ್ಳಿ ಗ್ರಾಮದ ಶ್ರೀ ಶನಿಮಾಹತ್ಮ ದೇವಸ್ಥಾನದ ಹಿಂಭಾಗದಲ್ಲಿ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ನನ್ನ ಜೊತೆಯಲ್ಲಿದ್ದ ಪಿ.ಸಿ. 175 ಶ್ರೀ ನವೀನ್ ಕುಮಾರ್, ಪಿ.ಸಿ 537 ಶ್ರೀ ಆನಂದ ಕುಮಾರ್, ಪಿಸಿ 532 ಶ್ರೀ ಚಿಕ್ಕಣ್ಣ, ಪಿ.ಸಿ 392 ಶ್ರೀ ಬಾಬು ರವರು ಮತ್ತು ಪಂಚರೊಂದಿಗೆ ದ್ವಿಚಕ್ರವಾಹನಗಳಲ್ಲಿ ಮೈಲಗಾನಹಳ್ಳಿ ಗ್ರಾಮದ ಶ್ರೀ ಶನಿಮಾಹತ್ಮ ದೇವಸ್ಥಾನದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ಗೆ 100/- ರೂ. ಬಾಹರ್ಗೆ 100/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆಯುವಷ್ಟರಲ್ಲಿ  ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಲೋಕೇಶ ಬಿನ್ ನರಸೀಯಪ್ಪ  40 ವರ್ಷ, ಎಕೆ ಜನಾಂಗ, ಕೂಲಿ ಕೆಲಸ ತರಿದಾಳು  ಗ್ರಾಮ ಗೌರೀಬಿದನೂರು ತಾಲ್ಲೂಕು 2) ಮಹೇಶ ಬಿನ್ ಗಂಗಾಧರಪ್ಪ, 31 ವರ್ಷ, ಲಿಂಗಾಯ್ತರು, ಕೂಲಿ ಕೆಲಸ , ಪುಲಗಾನಹಳ್ಳಿ ಗ್ರಾಮ,  ಗೌರೀಬಿದನೂರು ತಾಲ್ಲೂಕು,  3) ಲೋಕೇಶ ಬಿನ್ ಲೇಟ್ ಸಂಜೀವಪ್ಪ, 35 ವರ್ಷ, ನಾಯಕ ಜನಾಂಗ, ಮರಗೆಲಸ, ತರಿದಾಳು ಗ್ರಾಮ, ಗೌರೀಬಿದನೂರು ತಾಲ್ಲೂಕು, 4) ಸಂತೋಷ್ ರಾವ್ ಬಿನ್ ನಾರಾಯಣರಾವ್, 28 ವರ್ಷ, ಮರಾಠಿ ಜನಾಂಗ, ಕೂಲಿಕೆಲಸ, ಮೈಲಗಾನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 2630/-(ಎರಡು ಸಾವಿರ ಆರು ನೂರ ಮುವತ್ತು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಮದ್ಯಾಹ್ನ 3-30 ಗಂಟೆಯಿಂದ ಸಂಜೆ 4-30 ಗಂಟೆಯ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ಮತ್ತು ಮಾಲನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ.