ದಿನಾಂಕ : 05/01/2019 ರ ಅಪರಾಧ ಪ್ರಕರಣಗಳು

1) ಸಂಚಾರಿ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.279-337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:-04/01/2019 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಚರಣ್ ಕೆ ಬಿನ್ ಕೇಶವಮೂರ್ತಿ 14 ವರ್ಷ, ವಿದ್ಯಾರ್ಥಿ, ಕುರುಬರು, ವಾರ್ಡ್-24, ಕಾರ್ಖಾನೆ ಪೇಟೆ, ಚಿಕ್ಕಬಳ್ಳಾಪುರ ಟೌನ್ ರವರಿಂದ ಪಡೆದ ಹೇಳಿಕೆ ಸಾರಾಂಶವೇನೆಂದರೆ ದಿನಾಂಕ:-04/01/2019 ರಂದು ತಾನು ಟ್ಯೂಷನ್ ಗೆ ಹೋಗಲು ತಮ್ಮ ಮನೆಯಿಂದ ಮಂಜುನಾಥ ಆಸ್ಪತ್ರೆಯ ಪಕ್ಕದ ವೇದ ಪ್ರಿಂಟರ್ಸ್ ಮುಂಭಾಗದ ರಸ್ತೆಯಲ್ಲಿ ಸಂಜೆ-5:30 ಗಂಟೆಯಲ್ಲಿ ಹೋಗುತ್ತಿರುವಾಗ ಎದುರುಕಡೆಯಿಂದ ಬಂದ ಕೆಎ-04-ಇ.ಬಿ-0504 ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ತನಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ತನ್ನ ಬಲಮೊಣಕಾಲಿಗೆ ಗಾಯವಾಗಿ ರಸ್ತೆಯಲ್ಲಿ ಬಿದ್ದಾಗ ಡಿಕ್ಕಿ ಹೊಡೆಯಿಸಿದ ದ್ವಿಚಕ್ರವಾಹನ ಸವಾರ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು ಅಲ್ಲಿಗೆ ಬಂದ ಶಶಿಕುಮಾರ್ ಬಿನ್ ಲೇಟ್ ನಾಗರಾಜು 29 ವರ್ಷ, ನಾಯಕರು, ಆಟೋ ಚಾಲಕ, ವಾರ್ಡ್-21, ಶಾಂತಿ ನಗರ, ಚಿಕ್ಕಬಳ್ಳಾಪುರ ಟೌನ್ ರವರು ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ತನಗೆ ಡಿಕ್ಕಿ ಹೊಡೆಯಿಸಿದ ಕೆಎ-04-ಇ.ಬಿ-0504 ರ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ದಿನಾಂಕ:-04/01/2019 ರಂದು ಸಂಜೆ 7:30 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

2) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.07/2019 ಕಲಂ.323-324-504-506 ಐ.ಪಿ.ಸಿ:-

     ದಿನಾಂಕ 05-01-2019 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಮಂಜುನಾಥ ರೆಡ್ಡಿ ಬಿನ್ ನಾರೆಪ್ಪ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ನಾಯನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲುಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 1-00 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 05-01-2019 ರಂದು ಬೆಳಗ್ಗೆ 10-00ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ಗೋವಿಂದರೆಡ್ಡಿ ಬಿನ್ ಚೊಕ್ಕರೆಡ್ಡಿ ಎಂಬುವವರು ನಮ್ಮ ಜಮೀನಿನಲ್ಲಿರುವ ಹತ್ತಿ ಮರದಲ್ಲಿ ಕೊಂಬೆಗಳನ್ನು ಕಡಿಯುತ್ತಿದ್ದು ತಾನು ಅಲ್ಲಿಗೆ ಹೋಗಿ ಏಕೆ ನಮ್ಮ ಮರದ ಕೊಂಬೆಗಳನ್ನು ಕಡಿಯುತ್ತಿದ್ದಿಯಾ ಎಂದು ಕೇಳಿದ್ದು ಆಗ ಗೋವಿಂದರೆಡ್ಡಿ ರವರು ನೀನು ಯಾರೋ ನನ್ನ ಮಗನೇ ನನ್ನ ಕೇಳುವುದಕ್ಕೆ ಎಂದು ಕೆಟ್ಟ ಮಾತುಗಳಿಂದ ಬೈದು ಕಾಲಿನಿಂದ ತನಗೆ ಒದ್ದು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದಾಗ ತಾನು ಜೋರಾಗಿ ಕಿರುಚಿಕೊಂಡು ಕೆಳಗೆ ಬಿದ್ದು ಹೋಗಿದ್ದು ಆಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಮ್ಮ ಗ್ರಾಮದ ವಾಸಿ ಬಚ್ಚನ್ನಗಾರಿ ಕೃಷ್ಣಪ್ಪ, ಸಿ.ವಿ ಕೃಷ್ಣಾರೆಡ್ಡಿ ರವರು ಅಲ್ಲಿಗೆ ಜಗಳ ಬಿಡಿಸಿರುತ್ತಾರೆ, ಆಗ ಮೇಲ್ಕಂಡ ಗೋವಿಂದರೆಡ್ಡಿ ತನ್ನನ್ನು ಕುರಿತು ಈ ದಿನ ಉಳಿದುಕೊಂಡಿದ್ದಿಯಾ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡ ಗೋವಿಂದರೆಡ್ಡಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.87 ಕೆ.ಪಿ. ಆಕ್ಟ್:-

     ದಿನಾಂಕ:04/01/2019 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ,  ಪಿ.ಸಿ.05 ನಾಗರಾಜ್ ರವರು ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ, ಬೈಚಾಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳದಲ್ಲಿ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ, ಠಾಣೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು, ಪಂಚರೊಂದಿಗೆ ಹಾಗು ಪೊಲೀಸ್ ಸಿಬ್ಬಂದಿಯವರೊಂದಿಗೆ ಪೊಲೀಸ್ ಜೀಪಿನಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ, ಬೈಚಾಪರ ಗ್ರಾಮಕ್ಕೆ ಹೋಗಿ,  ಜೀಪನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ನದಿಯ ಅಂಗಳದಲ್ಲಿ ಸೀಮೆ ಜಾಲಿ ಗಿಡಗಳ ಕೆಳಗೆ 5 ಜನರ ಗುಂಪು ಇದ್ದು, ಗುಂಪಿನಲ್ಲಿದ್ದ ಕೆಲವರು ಅಂದರ್ಗೆ ಐದು ನೂರು ರೂ,  ಎಂದು ಮತ್ತೆ ಕೆಲವರು ಬಾಹರ್ ಗೆ ಐದು ನೂರು ರೂಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಪೊಲೀಸ್ ಸಿಬ್ಬಂದಿಯವರು ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ, ಹಿಡಿದು ಕೊಂಡು, ಹೆಸರು ವಿಳಾಸ ಕೇಳಲಾಗಿ 1] ಲಕ್ಷ್ಮಿನಾರಾಯಣಪ್ಪ ಬಿನ್ ಲೇಟ್ ವೆಂಕಟರಾಮಪ್ಪ, 52 ವರ್ಷ, ಕುರುಬ ಜನಾಂಗ,  ವ್ಯವಸಾಯ ಗೌಡಸಂದ್ರ ಗ್ರಾಮ, ಗೌರೀಬಿದನೂರು ತಾಲ್ಲೂಕು,  2) ಕಲಕಂಧೀಶ್ವರ ಬಿನ್ ಲೇಟ್ ಸಂಜೀವರಾಯಪ್ಪ, 40 ವರ್ಷ, ಕುರುಬ ಜನಾಂಗ,  ವ್ಯವಸಾಯ, ಬಾದಿಮರಳೂರು ಗ್ರಾಮ, ಗೌರೀಬಿದನೂರು ತಾಲ್ಲೂಕು,  3) ವೀರಣ್ಣ ಬಿನ್ ಲೇಟ್ ಶಿವಣ್ಣ, 55 ವರ್ಷ, ಕೋನಾಪುರ ಗ್ರಾಮ, ಲಿಂಗಾಯಿತರು,  ವ್ಯವಸಾಯ, ಗೌರೀಬಿದನೂರು ತಾಲ್ಲೂಕು,   4) ನಾಗರಾಜ ಬಿನ್ ಲೇಟ್ ರೇವಣ್ಣ, 51 ವರ್ಷ ಲಿಂಗಾಯಿತರು, ವ್ಯವಸಾಯ, ಬಾದಿಮರಳೂರು ಗ್ರಾಮ,  ಗೌರೀಬಿದನೂರು ತಾಲ್ಲೂಕು, 5) ನಾರಾಯಣರೆಡ್ಡಿ ಬಿನ್ ಲೇಟ್ ತಿಮ್ಮಾರೆಡ್ಡಿ  52 ವರ್ಷ, ವಕ್ಕಲಿಗರು,  ವ್ಯವಸಾಯ,  ಗೌಡಸಂದ್ರ ಗ್ರಾಮ,  ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದರು. ಸ್ಥಳದಲ್ಲಿ ಪರಿಶೀಲಿಸಲಾಗಿ ಜೂಜಾಟವಾಡಲು ಬಳಸುತ್ತಿದ್ದ ಇಸ್ಟೀಟ್ ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದು, ಇವುಗಳನ್ನು ಎಣಿಸಲಾಗಿ, 52 ಇಸ್ಪೀಟ್ ಎಲೆಗಳು ಇರುತ್ತವೆ.  ಸ್ಥಳದಲ್ಲಿ ಜೂಜಾಟಕ್ಕೆ ಕಟ್ಟಿದ್ದ ಹಣ ಸಹ ಇದ್ದು, ಇದನ್ನು ಎಣಿಸಲಾಗಿ, 5,720/- ರೂ. ನಗದು ಹಣ ಇರುತ್ತೆ. ಸ್ಥಳದಲ್ಲಿ ಮಧ್ಯಾಹ್ನ 3-00 ರಿಂದ 3-45 ಗಂಟೆಯವರೆಗೆ ವಿವರವಾದ ಪಂಚನಾಮೆ ಕ್ರಮವನ್ನು ಜರುಗಿಸಿ,  ಆರೋಪಿಗಳೊಂದಿಗೆ  ನಗದು ಹಣ, ಹಾಗು ಇಸ್ಪೀಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸಂಜೆ 4-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿರುತ್ತೇನೆ.

4) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.379 ಐ.ಪಿ.ಸಿ & 41(ಡಿ), 102 ಸಿ.ಆರ್.ಪಿ.ಸಿ:-

     ದಿನಾಂಕ:04-01-2019 ರಂದು ಬೆಳಿಗ್ಗೆ 11-30 ಘಂಟೆಯಲ್ಲಿ ಸಿಪಿಸಿ-438 ಡಿ.ಎನ್. ನರಸಿಂಹಮೂರ್ತಿ ರವರು ಆರೋಪಿ & ಮಾಲು ಸಮೇತ ಠಾಣೆಯಲ್ಲಿ ಹಾಜರಾಗಿ ನೀಡಿದ ವರದಿಯನ್ನು ಪಡೆದು ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:04-01-2019 ರಂದು ಬೆಳಿಗ್ಗೆ 08-00 ಘಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತನಗೆ ಮತ್ತು ನರಸಿಂಹಯ್ಯ ಸಿಪಿ.ಸಿ-430 ರವರುಗಳಿಗೆ ಪೆರೇಸಂದ್ರ, ವರ್ಲಕೊಂಡ, ಬೀಚಗಾನಹಳ್ಳಿ ಕಡೆಗಳಲ್ಲಿ ಹಗಲು ಗಸ್ತು ಕರ್ತವ್ಯ ನಿರ್ವಹಿಸಲು ನೇಮಕ ಮಾಡಿದ್ದು, ನೇಮಕದಂತೆ ತಾವಿಬ್ಬರೂ ಪೆರೇಸಂದ್ರದಲ್ಲಿ ಗಸ್ತು ಮಾಡಿಕೊಂಡು, ವರ್ಲಕೊಂಡ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ವರ್ಲಕೊಂಡ ಗ್ರಾಮದ ಬಳಿಯಿರುವ ಮೊಬೈಲ್ ಟವರ್ ಬಳಿ ಒಬ್ಬ ಆಸಾಮಿಯು ಅನುಮಾನಾಸ್ಪದವಾಗಿ ಓಡಾಡುತ್ತಾ ಇದ್ದು, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಗಾಬರಿಯಿಂದ ಸದರಿ ಆಸಾಮಿಯು ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು, ತಾವುಗಳು ಸದರಿ ಆಸಾಮಿಯನ್ನು ಬೆನ್ನತ್ತಿ ಬೆಳಿಗ್ಗೆ 11-00 ಘಂಟೆಯಲ್ಲಿ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಅಶ್ವತ್ಥರೆಡ್ಡಿ ಜಿ.ಡಿ ಬಿನ್ ಲೇಟ್ ದೊಡ್ಡ ಪಾಪಿರೆಡ್ಡಿ, 35 ವರ್ಷ, ಒಕ್ಕಲಿಗರು, ಮೊಬೈಲ್ ಟವರ್ ರೆಗ್ಗರ್ ಕೆಲಸ, ಸ್ವಂತ ಸ್ಥಳ:ಗುಣಿಬೀಳು ಗ್ರಾಮ, ಸಾದೇನಹಳ್ಳಿ ಪಂಚಾಯ್ತಿ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು. ಹಾಲಿ ವಾಸ:3ನೇ ಕ್ರಾಸ್, 2ನೇ ಮೈನ್, ಅತ್ತಿಗುಪ್ಪೆ, ಬೆಂಗಳೂರು ಎಂತಾ ತೊದಲುತ್ತಾ ಅನುಮಾನದಿಂದ ಹೇಳಿದ್ದು, ಸದರಿ ಆಸಾಮಿಯ ಬಳಿ ಒಂದು ಬ್ಯಾಗ್ ಇದ್ದು, ಸದರಿ ಬ್ಯಾಗ್ ತೆಗೆಸಿ ನೋಡಲಾಗಿ ಅದರಲ್ಲಿ ಮೊಬೈಲ್ ಟವರ್ಗೆ ಸಂಬಂಧಿಸಿದ 3 ಕಾರ್ಡ್ ಗಳು ಇದ್ದು, ಅವುಗಳ ಬಗ್ಗೆ ಕೇಳಲಾಗಿ 4ಜಿ ನೆಟ್ ವರ್ಕ್ ಕೆಲಸ ಮಾಡುವ ಮೊಬೈಲ್ ಟವರ್ ನ UBBP  ಕಾರ್ಡ್ ಗಳು ಎಂದು ಹೇಳಿದ್ದು, ಅವುಗಳು ತನ್ನ ಬಳಿ ಇಟ್ಟುಕೊಂಡಿರುವ ಬಗ್ಗೆ ವಿಚಾರಿಸಿದಾಗ, ಸರಿಯಾದ ಉತ್ತರವನ್ನು ನೀಡಿರುವುದಿಲ್ಲ. ಸದರಿ ಆಸಾಮಿಯು ಮೊಬೈಲ್ ಟವರ್ ನ UBBP ಕಾರ್ಡ್ ಗಳನ್ನು ಕಳ್ಳತನ ಮಾಡಿಕೊಂಡು ಬಂದಿರುವಂತೆ ಅನುಮಾನ ಕಂಡು ಬಂದಿದ್ದು, ಸದರಿ 3 UBBP  ಕಾರ್ಡ್ ಗಳ ಸಮೇತ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 11-30 ಘಂಟೆಗೆ ಗುಡಿಬಂಡೆ ಠಾಣೆಗೆ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರುಪಡಿಸುತ್ತಿದ್ದು, ಸದರಿ ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿರುವ ವರದಿ ದೂರಾಗಿರುತ್ತದೆ.

5) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.279-304(ಎ) ಐ.ಪಿ.ಸಿ:-

     ದಿನಾಂಕ:04-01-2019 ರಂದು ಸಂಜೆ 06-00 ಗಂಟೆಗೆ ಪಿರ್ಯಾಧಿದಾರರಾದ ಕೆ.ಎಂ. ಮುನಿಶಾಮಿ ಬಿನ್ ಲೇಟ್ ಮುನಿಶಾಮಿ, ಕಾನಗಮಾಕಲಹಳ್ಳಿ ಗ್ರಾಮ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:04-01-2019 ರಂದು ತಾನು ಚಿಂತಾಮಣಿಯಲ್ಲಿ ಕೆಲಸ ಮುಗಿಸಿಕೊಂಡು  ಊರಿಗೆ ವಾಪಸ್ಸು ಹೋಗಲು ಬೆಂಗಳೂರಿನ ಸರ್ಕಲ್ ನಲ್ಲಿ ಮುರುಗಮಲ್ಲಾ ಕಡೆಗೆ ಹೋಗಿವ ಖಾಸಗಿ ಬಸ್ಸು ,ವಿಜಯಲಕ್ಷ್ಮೀ ಸಂಖ್ಯೆ ಕೆ.ಎ-06 ಡಿ-2142 ರಲ್ಲಿ ಹತ್ತಿದ್ದನು. ತಮ್ಮ ಗ್ರಾಮದ ಕೋನಪರೆಡ್ಡಿ ಮಗ ವೆಂಕಟರಾಮರೆಡ್ಡಿ , ಶ್ರೀರಾಮರೆಡ್ಡಿ ಮಗ ಆನಂದ , ದಿನ್ನಮಿಂದಪಲ್ಲಿ, ಗೋವಿಂದರೆಡ್ಡಿ ಮಗ ಚೌಡರೆಡ್ಡಿ ರವರುಗಳು ಮದ್ಯಾಹ್ನ ಸುಮಾರು 03-15 ಗಂಟೆಗೆ ಬಸ್ಸು ಚೇಳೂರು ಸರ್ಕಲ್ ಬಿಟ್ಟು ಸಂಜೆ ಸುಮಾರು 03-45 ಗಂಟೆಗೆ ಮುರುಗಮಲ್ಲಾ ಬಳಿಯ ಚಲಂಕೋಟೆ ಕ್ರಾಸ್ ಬಳಿ ಬಂದು ಬಸ್ಸನ್ನು ನಿಲ್ಲಿಸಿದ್ದು, ತಾನು ಹಾಗೂ ಇತರರು ಕೆಳಕ್ಕೆ ಇಳಿದೆವು, ಹಿಂಭಾಗದ ಡೋರ್ ನಿಂದ ವೆಂಕಟರಾಮರೆಡ್ಡಿ ಮನೆಗೆ ಬೇಕಾದ ಸಾಮಾನುಗಳನ್ನು ತಂದಿದ್ದು, ಚೀಲನೊಂದಿಗೆ ಇಳಿಯುತ್ತಿದ್ದಾಗ ಬಸ್ಸು ಚಾಲಕ ಇದನ್ನು ಗಮನಿಸಿದೆ ಕಂಡಕ್ಟರ್  ಪ್ರಯಾಣಿಕರು ಇಳಿಯುತ್ತಿದ್ದವರನ್ನು ನೋಡದೇ ರೈಟ್ ಹೇಳಿದ್ದು, ಚಾಲಕನು ಬಸ್ಸನ್ನು ಅತೀ ವೇಗವಾಗಿ ಮತ್ತು ಆಜಾಗೂರಕತೆಯಿಂದ ಚಾಲನೆ ಮಾಡಿದ ಕಾರಣ ಇಳಿಯುತ್ತಿದ್ದ ವೆಂಕಟರಾಮರೆಡ್ಡಿ ಚೀಲದ ಸಮೇತ ಕೆಳಕ್ಕೆ ಬಿದ್ದು ಹೋದ, ಕೂಡಲೇ ತಾವುಗಳು ಹಾಗೂ ಗೇಟ್ ನಲ್ಲಿದ್ದ ಜನರು ಹೋಗಿ ನೋಡಲಾಗಿ ವೆಂಕಟರಾಮರೆಡ್ಡಿಯ ತಲೆ ಹಿಂಭಾಗ ತೀವ್ರವಾದ ರಕ್ತಗಾಯವಾಗಿದ್ದು, ಕಾಲು ಸಹ ಗಾಯಗಳಾಗಿದ್ದು, ಸತ್ತುಹೋದ, ನಂತರ ತಾನು ಈ  ವಿಚಾರವನ್ನು ಅವರ ಮನೆಯವರಿಗೆ ತಿಳಿಸಿ ಯಾವುದೋ ಒಂದು ವಾಹನದಲ್ಲಿ ಹೆಣವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುತ್ತೇವೆ. ಆದ್ದರಿಂದ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ಪಿರ್ಯಾಧು.

6) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.03/2019 ಕಲಂ.420-426-465  ಐ.ಪಿ.ಸಿ:-

     ದಿನಾಂಕ:05.01.2019 ರಂದು ಬೆಳಿಗ್ಗೆ 09-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ.90 ರಾಜಕುಮಾರ ರವರು ಠಾಣೆಯಲ್ಲಿ ಹಾಜರುಪಡಿಸಿದ ಪಿ.ಸಿ.ಆರ್ ನಂಬರ್ 171/2018 ನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ,   ಪಿರ್ಯಾದಿದಾರರಾದ ಶ್ರೀ.ತ್ಯಾಗರಾಜು ಬಿನ್ ಲೇಟ್ ಕೆಂಪಯ್ಯ, 62 ವರ್ಷ, ಕನ್ನಮಂಗಲ ಗ್ರಾಮ ಬಿದರಹಳ್ಳಿ ಹೋಬಳಿ ಬೆಂಗಳೂರು ಈಸ್ಟ್ ತಾಲ್ಲೂಕು ಶಿಡ್ಲಘಟ್ಟ ತಾಲ್ಲೂಕು ಕುಂಬಿಗಾನಹಳ್ಳಿ ಗ್ರಾಮದ ಸರ್ವೇ ನಂಬರ್ 49/1 ರಲ್ಲಿ 2 ಎಕರೆ ಜಮೀನನ್ನು ಅದರ ಮೂಲ ವಾರಸುದಾರರಾದ ಸುವರ್ಣಮ್ಮ ಕೋಂ ಸಂಗಪ್ಪ ಎಂಬುವರಿಂದ ದಿನಾಂಕ:15.12.2006 ರಂದು ಶಿಡ್ಲಘಟ್ಟ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಪುಸ್ತಕ ನಂಬರ್ 2535 ರಂತೆ ಶುದ್ದಕ್ರಯದ ರಿಜಿಸ್ಟರ್ ಮಾಡಿಕೊಂಡಿರುತ್ತಾರೆ. ಆದರೆ ಸದರಿ ಜಮೀನನ್ನು ಈ ಹಿಂದೆ ಮಾರಪ್ಪ ಮತ್ತು ಅವರ ಮಕ್ಕಳಾದ ಎಂ.ವೆಂಕಟೇಶ ಮತ್ತು ಎಂ.ಕೃಷ್ಣಪ್ಪ ರವರುಗಳು ಮಾರಪ್ಪನಿಂದ ವೆಂಕಟೇಶ ಎಂ ರವರಿಗೆ ಖಾತೆಯಾಗಿರುವುದಾಗಿ ವೆಂಕಟೇಶ ಎಂ ತಾನು ಒಬ್ಬನೇ ಮಾಲಿಕನಾಗಿರುವುದಾಗಿ ದಿನಾಂಕ:07.08.1996 ರಂದು ದಾಖಲೆ ನಂಬರ್ 425 ಮತ್ತು ಪುಸ್ತಕ ನಂಬರ್ 1/1403 ರಂತೆ ಸುವರ್ಣಮ್ಮ ರವರಿಗೆ ಶಿಡ್ಲಘಟ್ಟ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಶುದ್ದ ಕ್ರಯ ಮಾಡಿಕೊಟ್ಟಿರುತ್ತಾರೆ. ಆ ಸಮಯದಲ್ಲಿ ಆರೋಪಿ ಕೃಷ್ಣಪ್ಪ ರವರು ಅವರ ತಂದೆ ಮತ್ತು ತಮ್ಮನ ಸಹಿಗಳನ್ನು ಅವರೇ ಹಾಕಿ ಸದರಿ ಜಮೀನು ಮತ್ತೊಬ್ಬ ಸುಗುಣ ಕೋಂ ಚಂದ್ರಪ್ಪ ರವರಿಗೆ ದಿನಾಂಕ:11.05.2000 ರಂದು ಕ್ರಯ ಮಾಡಿಕೊಟ್ಟು ಮೋಸ ಮಾಡಿರುತ್ತಾರೆಂತ ಸದರಿ ಕೃಷ್ಣಪ್ಪ ಎಂ ರವರ ವಿರುದ್ದ ಕಾನೂನು ಕ್ರಮ  ಜರುಗಿಸುವಂತೆ ಇದ್ದ ಸಾರಾಂಶದ ಮೇರೆಗೆ ಠಾಣಾ ಮೊ.ಸಂ. 03/2019 ಕಲಂ 420,426,465 ಐ.ಪಿ.ಸಿ. ರೀತ್ಯಾ ಕೇಸು ದಾಖಲಿಸಿರುತ್ತೇನೆ.