ದಿನಾಂಕ : 04/12/2018ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.276/2018 ಕಲಂ.279-304(ಎ) ಐ.ಪಿ.ಸಿ:-

     ದಿನಾಂಕ;-04/12/2018 ರಂದು ಪಿರ್ಯಾದಿದಾರರಾದ ಮುರಳಿಮೋಹನ್ ಬಿನ್ ನರಸಿಂಹಪ್ಪ,29 ವರ್ಷ,ಕಂಡಕನಹಳ್ಳಿ ಗ್ರಾಮ ರವರು ಬೆಳಿಗ್ಗೆ 8.30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಮಾವನವರಾದ ನರಸಿಂಹಮೂರ್ತಿ ಕೆ ಆರ್ ರವರು ತಮ್ಮ ಊರಿನಲ್ಲಿಯೇ ವಾಸವಾಗಿದ್ದು ತನ್ನ ಮಾರನೇ ಮಗನಾದ  ಅಭಿ ಕೆ ಎನ್ ರವರು ಅಂಗರೇಖನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದನು,ದಿನಾಂಕ;-03/12/2018 ರಂದು ರಾತ್ರಿ ಸುಮಾರು 7:30 ಗಂಟೆಯ ಸಮಯದಲ್ಲಿ ತಮ್ಮ ಮಾವನ ಮನೆಯ ಮುಂದೆ ನಿಲ್ಲಿಸಿದ್ದ  ಅವರದೇ ದ್ವಿಚಕ್ರ ವಾಹನವನ್ನು KA-40-S-5186 PASSION PRO ವಾಹನವನ್ನು ತೆಗೆದುಕೊಂಡು ಓಡಿಸಲು ಹೋಗಿದ್ದು ಆಕಸ್ಮಿಕವಾಗಿ ಗಾಡಿಯಲ್ಲಿ ಜಾರಿ ಕಂಬಕ್ಕೆ ತಲೆ ತಗಲಿ ಸ್ಧಳದಲ್ಲಿಯೇ ಮೃತ ಪಟ್ಟಿರುವುದಾಗಿ ತಿಳಿಸಿದ್ದು,ತಾನ ಮತ್ತು ತನ್ನ  ಸ್ನೇಹಿತ ಮಂಜನಾಧ್ ಕೆ ಎನ್ ರವರು ಮನೆಯವರು ಹೇಳಿದ್ದು ಅಂಗರೇಖನಹಳ್ಳಿ ಗ್ರಾಮಕ್ಕೆ ಹೋಗಿ ನೋಡಲಾಗಿ ಸ್ಧಳದಲ್ಲಿ ಗ್ರಾಮದ ನಾಗರೀಕರು ಸೇರಿದರು ತಾವು ಸ್ಧಳದಲ್ಲಿ ಹೋಗಿ ನೋಡಲಾಗಿ ತನ್ನ ಮಾವನ ಮಗನಾದ ಅಭಿ ಕೆ ಎನ್ ರವರಿಗೆ ಮುಖದ ಬಲಭಾಗಕ್ಕೆ ಗಾಯವಾಗಿ ರಕ್ತ ಬಂದಿರುವುದು ಕಂಡುಬಂದಿದ್ದು ಸ್ಧಳದಲ್ಲಿಯೇ ಮೃತಪಟ್ಟಿರುವುದು ಕಂಡುಬಂದಿರುತ್ತೇದೆ,ಸ್ಧಳದಲ್ಲಿದ್ದ ಜನರನ್ನು ವಿಚಾರಿಸಿಲಾಗಿ ನಿಮ್ಮ ಹುಡುಗ ಗಾಡಿ ಓಡಿಸಿಕೊಂಡು ಬಂದು ಜಾರು ಬಿದ್ದುಗಾ ಆತನ ತಲೆ ವಿದ್ಯುತ್ ಕಂಬಕ್ಕೆ ತಗಲಿ ಮೃತ ಪಟ್ಟಿರುತ್ತೇನೆ ಎಂದು ತಿಳಿಸಿರತ್ತಾರೆ,ತನ್ನ ಮಾವನ ಮಗ ಗಾಡಿ ಓಡಿಸುವ ಸಮಯದಲ್ಲಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾರೆ ವಿನಂಹ ಬೇರೆ ಉದ್ದೇಶ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

2) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.75/2018 ಕಲಂ.279-337 ಐ.ಪಿ.ಸಿ:-

     ದಿನಾಂಕ:-03/12/2018 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀ.ವೈ.ಎನ್.ಮನೋಹರ ಬಿನ್ ಹೆಚ್.ನಾರಾಯಣಸ್ವಾಮಿ 20 ವರ್ಷ, ವಕ್ಕಲಿಗರು, ಜಿರಾಯ್ತಿ, ಯಲಕರಾಳ್ಳಿ ಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ. ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:-03/12/2018 ರಂದು ಪಿರ್ಯಾಧಿ/ಗಾಯಾಳು ತನ್ನ ಕೆಎ-07-ಎಂ-8549 ರ ಮಾರುತಿ ಓಮಿನಿ ಕಾರಿನಲ್ಲಿ ನಂದಿ ದೇವಸ್ಥಾನಕ್ಕೆ ಹೋಗಲು ಕಾರಿನ ಚಾಲಕನಾಗಿ ಶಿವಕುಮಾರ್ ಬಿನ್ ಚಿಕ್ಕಲಕ್ಷ್ಮಯ್ಯ 24ವರ್ಷ, ವಕ್ಕಲಿಗರು, ಕಂಬಾಲಹಳ್ಳಿ ಚಿಕ್ಕಬಳ್ಳಾಪುರ ತಾಲ್ಲೂಕು ರವರೊಂದಿಗೆ ವೈ.ಸಿ ಗಗನ್ ಬಿನ್ ಚಂದ್ರಶೇಖರ್ 8 ವರ್ಷ, ಶ್ರೀಮತಿ.ಭಾಗ್ಯಮ್ಮ ಕೋಂ ಕೊಂಡಪ್ಪ 45 ವರ್ಷ, ಶ್ರೀಮತಿ ನಂಜಮ್ಮ ಕೋಂ ವೈ.ಸಿ ನಾರಾಯಣಪ್ಪ 50 ವರ್ಷ, ಅಮರಾವತಿ ಕೋಂ ದೇವರಾಜು 28 ವರ್ಷ, ನಮ್ಮ ಗ್ರಾಮದವರು ಸೇರಿ ಕಾರಿನಲ್ಲಿ ಚಿಕ್ಕಬಳ್ಳಾಪುರದ ಎನ್.ಎಚ್-7 ರಸ್ತೆಯ ಹೊನ್ನೇನಹಳ್ಳಿ ಸಿ.ಎಸ್.ಎನ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸಂಜೆ 7:30 ಗಂಟೆಯ ಸಮಯದಲ್ಲಿ ಬರುತ್ತಿರುವಾಗ ಸಿ.ಎಸ್.ಎನ್ ಪೆಟ್ರೋಲ್ ಬಂಕ್ ನಿಂದ ಬಂದ ಕೆಎ-01-ಎ.ಇ-2068 ರ ಸಿಮೆಂಟ್ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತಮ್ಮ ಕಾರಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಕಾರು ಜಕಂಗೊಂಡು ಕಾರಿನಲ್ಲಿದ್ದ ತನಗೆ ಕೈಗೆ, ಗಡ್ಡಕ್ಕೆ, ವೈ.ಸಿ ಗಗನ್ ರವರಿಗೆ ತಲೆಗೆ, ಮೂಗು, ಹಣೆಗೆ, ಭಾಗ್ಯಮ್ಮಳಿಗೆ ಕೆನ್ನೆಗೆ, ನಂಜಮ್ಮಳಿಗೆ ತಲೆಗೆ, ಕೈ-ಕಾಲುಗಳಿಗೆ ಮತ್ತು ಅಮರಾವತಿಗೆ ರವರಿಗೆ ತಲೆಗೆ ಮತ್ತು ಕೈ-ಕಾಲುಗಳಿಗೆ ಗಾಯಗಳಾಗಿದ್ದು ತಮಗೆ ಡಿಕ್ಕಿ ಹೊಡೆಯಿಸಿದ ಲಾರಿ ಚಾಲಕ ಸ್ಥಳದಿಂದ ಓಡಿ ಹೋಗಿದ್ದು ತಮ್ಮಗಳನ್ನು ಅಲ್ಲಿನ ಸ್ಥಳೀಯರು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಇಲಾಜಿಗಾಗಿ ಸೇರಿಸದ್ದು ಗಗನ್ ರವರಿಗೆ ಹಾಗೂ ತಮ್ಮ ಕಾರಿನ ಚಾಲಕ ಶಿವಕುಮಾರ್ ರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈಧ್ಯರ ಸಲಹೆ ಮೇರೆಗೆ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದು ತಮಗೆ ಡಿಕ್ಕಿ ಹೊಡೆಯಿಸಿದ ಕೆಎ-01-ಎ.ಇ-2068 ರ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣೆಯಲ್ಲಿ ದಿನಾಂಕ:-03/12/2018 ರಂದು ರಾತ್ರಿ 10:00 ಗಂಟೆಗೆ ಠಾಣಾ ಮೊ.ಸಂ-75/2018 ಕಲಂ-279, 337 ಐಪಿಸಿ ರೆ.ವಿ 134 ಐಎಂವಿ ಆಕ್ಟ್ ರೀಅತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

3) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.237/2018 ಕಲಂ.323-326-504-506 ಐ.ಪಿ.ಸಿ:-

     ದಿನಾಂಕ 03/12/2018 ರಂದು ಸಂಜೆ 04-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ದಿನಾಂಕ 04/11/2018 ರಂದು ಮದ್ಯಾಹ್ನ ಸುಮಾರು 3-00 ಗಂಟೆಯ ಸಮಯದಲ್ಲಿ ಅವರ ಗ್ರಾಮದ ದ್ರಾಕ್ಷಾಯಮ್ಮ ರವರ ಜಮೀನು ಹತ್ತಿರ ಪಿರ್ಯಾದಿ ತಾಯಿ ಮಂಗಳಮ್ಮ ಮತ್ತು ಅವರ ಗ್ರಾಮದ ಬಾಲಕೃಷ್ಣ ಬಿನ್ ಗೊಟ್ಲುಕುಂಟೆ ಗಂಗಾಧರಪ್ಪ ರವರು ಜಗಳ ಮಾಡಿಕೊಳ್ಳುತ್ತಿದ್ದಾಗ, ಪಿರ್ಯಾದಿ ಅಲ್ಲಿಗೆ ಹೋಗಿ ಬಾಲಕೃಷ್ಣ ಬಿನ್ ಗೊಟ್ಲುಕುಂಟೆ ಗಂಗಾಧರಪ್ಪ ರವರಿಗೆ ಬಾಯಿ ಮಾತಿನಲ್ಲಿ ಜಗಳವಾಯಿತು. ಇದೇ ವಿಚಾರವಾಗಿ ದಿನಾಂಕ 05/11/2018 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯ ಸಮಯದಲ್ಲಿ ಪಿರ್ಯಾದಿ ಅವರ ಮನೆಯ ಹತ್ತಿರ ಇರುವಾಗ ಬಾಲಕೃಷ್ಣ ರವರು ಅವರ ಮನೆಯ ಹತ್ತಿರ ಬಂದು ಏನೋ ಬೋಳಿ ಮಗನೇ ನೀನು ನೋಡಿದೇನೋ ನಿಮ್ಮ ತಾಯಿಯನ್ನು ನಾನು ಮುಟ್ಟಿದ್ದು, ಎಂದು ಕೇಳಿ ಪಿರ್ಯಾದಿ ಮೇಲೆ ಜಗಳ ಮಾಡಿ ಪಿರ್ಯಾದಿಯನ್ನು ಕಾಲಿನಿಂದ ಒದ್ದು ಕೆಳಗೆ ಕೆಡವಿ ಅಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂಡು ಪಿರ್ಯಾದಿ ಬಲಕೈಗೆ ಹೊಡೆದು ಮೂಗೇಟು ಉಂಟಾಗಿ ಮೂಳೆ ಮುರಿದಿರುತ್ತೆ. ಆಗ ಅಲ್ಲಿದ್ದ ಬಾಬು ಬಿನ್ ರಾಮಮೂರ್ತಪ್ಪ ರವರು ಜಗಳವನ್ನು ಬಿಡಿಸಿ ಚಿಕಿತ್ಸೆಗಾಗಿ ದ್ವಿಚಕ್ರವಾಹನದಲ್ಲಿ ಗೌರೀಬಿದನೂರುಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ. ಅಲ್ಲಿಂದ ಹೋಗುವಾಗ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದನು.ಈ ಬಗ್ಗೆ ಗ್ರಾಮದಲ್ಲಿ ಹಿರಿಯರು ಪಂಚಾಯ್ತಿ ಮಾಡಿ ರಾಜಿ ಮಾಡಿಕೊಳ್ಳಲು ತಿಳಿಸಿದ್ದು, ಆದರೆ ಸದರಿ ಬಾಲಕೃಷ್ಣ ರಾಜಿಗೆ ಬರಲಿಲ್ಲ ಆದ್ದರಿಂದ ಈದಿನ ದಿನಾಂಕ 03/12/2018 ರಂದು ತಡವಾಗಿ ದೂರು ನೀಡುತ್ತಿದ್ದು, ಪಿರ್ಯಾದಿಗೆ ದೊಣ್ಣೆಯಿಂದ ಹೊಡೆದು ಕೈ ಮೂಳೆ ಮುರಿಯಲು ಕಾರಣನಾದ ಬಾಲಕೃಷ್ಣ ರವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ.

4) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.238/2018 ಕಲಂ.323-324-504 ರೆ/ವಿ 34 ಐ.ಪಿ.ಸಿ:-

     ದಿನಾಂಕ: 03-12-2018 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ.ಎಸ್.ಸತ್ಯನಾರಾಯಣರೆಡ್ಡಿ ಬಿನ್ ನಾರಾಯಣರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ದಿನಾಂಕ:03-12-2018 ರಂದು ಮದ್ಯಾಹ್ನ ಸುಮಾರು 2-00 ಗಂಟೆಯ ಸಮಯದಲ್ಲಿ  ತಾನು ತಮ್ಮ ಗ್ರಾಮದ ತಮ್ಮ ಮನೆಯ ಬಳಿ ಇದ್ದಾಗ ತನ್ನ ಸಂಬಂಧಿ ಪಕ್ಕದ ಮನೆಯವರಾದ ಆರೋಪಿತರು ತಮ್ಮ ಮನೆಗೆ ತೊಂದರೆ ಆಗುವಂತೆ ಗೋಡೆಯನ್ನು ಕಟ್ಟುತ್ತಿದ್ದನ್ನು ನೋಡಿ ಒಂದು ಇಂಚು ಬಿಟ್ಟು ಗೋಡೆಯನ್ನು ಕಟ್ಟಿಕೊಳ್ಳಿ ಎಂತ ಹೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಏಕಾಏಕೀ ಹನುಮಪ್ಪ ಬಂದು ತನ್ನ ಎಡ ಕಿವಿಯ ಬಳಿ ಬಾಯಿಯಿಂದ ಕಚ್ಚಿ ರಕ್ತಗಾಯಪಡಿಸಿರುತ್ತಾನೆ, ಭಾನುಪ್ರಕಾಶ ಅಲ್ಲಿಯೆ ಬಿದಿದ್ದ ಕಟ್ಟಿಗೆಯಿಂದ ತನ್ನ ಬೆನ್ನಿಗೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾನೆ, ನಾಗಲಕ್ಷ್ಮಮ್ಮ ರವರು ತನ್ನ ಪುರುಷತ್ವವನ್ನು ಕೈಗಳಿಂದ ಹಿಸುಕಿ ನೋವುಂಟು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ.