ದಿನಾಂಕ : 04/02/2019ರ ಅಪರಾಧ ಪ್ರಕರಣಗಳು

1) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.12/2019 ಕಲಂ: 323-341-448-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 03-02-2019 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಎನ್ ಸುಭ್ರಮಣ್ಯಪ್ಪ ಬಿನ್ ಲೇಟ್ ನಾರಾಯಣಪ್ಪ, ಸುಮಾರು 55 ವರ್ಷ, ಬಲಜಿಗರು, ವಿಜಯಪುರ ದೇವನಹಳ್ಳಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಜಂಗಮಕೋಟೆ ಹೋಬಳಿ ಮಿತ್ತನಹಳ್ಳಿ ಗ್ರಾಮದ  ಹಾಲು ಉತ್ಪಾಕರ ಸಹಕಾರ ಸಂಘ ನಿ  ಗೆ ಈಗ್ಗೆ 25 ವರ್ಷಗಳಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  ಸದರಿ ಹಾಲು ಉತ್ಪಾದಕರ ಸಹಕಾರ ಸಂಘದ 2018-19 ನೇ ಸಾಲಿನ 5 ವರ್ಷಗಳ  ಅವದಿಗೆ ಚುನಾವಣೆಯನ್ನು  ನಡೆಸಲು ದಿನಾಂಕ:16/02/2019 ರಂದು ನಿಗದಿಯಾಗಿದ್ದು   ಚುನಾವಣೆ ಪ್ರಕ್ರಿಯೇಯ ದಿನಾಂಕ: 07/02/2019 ರಂದು ಪ್ರಾರಂಭಮಾಡಲು ಎಲ್ಲಾ ಸಂಘದ 115 ಸದಸ್ಯರಿಗೆ  ಚುನಾವಣಾ ನೋಟಿಸ್  ಅನ್ನು ನೀಡಿರುತ್ತೆ, ಸದರಿ ಚುನಾವಣೆ ಪ್ರಕ್ರೀಯೆಯಲ್ಲಿ  ತಾನು ಕಾರ್ಯನಿರ್ವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸದರಿ  ಚುನಾವಣೆಗೆ ಸಂಬಂದಿಸಿದಂತೆ ಮತದಾರರ  ಪಟ್ಟಿಯನ್ನು ತಮ್ಮ ಹಾಲು ಉತ್ಪಾದಕರ ಸಹಕಾರ ಸಂಘದ ನೋಟಿಸ್ ಬೋರ್ಡಿ ನಲ್ಲಿ ಪ್ರಕಟಿಸಿರುತ್ತೆ ಈಗಿರುವಲ್ಲಿ ದಿನಾಂಕ:02/02/2019 ರಂದು  ಸಂಜೆ 7-00 ಗಂಟೆ ಸಮಯದಲ್ಲಿ ಮಿತ್ತನಹಳ್ಳಿ ಗ್ರಾಮದ ವಾಸಿಗಳಾದ ಕೆಂಪೇಗೌಡ ಬಿನ್ ಪಟೇಲ್ ನಾರಾಯಣಸ್ವಾಮಿ, ಪಿ.ರಾಮರೆಡ್ಡಿ ಬಿನ್ ಲೇಟ್ ಪಿಳ್ಳಪ್ಪ, ಚನ್ನೇಗೌಡ ಬಿನ್ ಪಟೇಲ್ ನಾರಾಯಣಸ್ವಾಮಿ,  ಮತ್ತು ಆನಂದ ಮೂರ್ತಿ ಬಿನ್ ಲೇಟ್ ಪಿಳ್ಳಪ್ಪ  ಎಂಬುವವರು ಸಂಘದ ಕಛೇರಿ ಒಳಗೆ ಅಕ್ರಮ ಪ್ರವೇಶಮಾಡಿ  ಸದಸ್ಯರ ಪಟ್ಟಿಯನ್ನು ನೀಡಲು  ಕೇಳಿದ್ದು ಆಗ ತಾನು ನೀವು ಅರ್ಜಿಯನ್ನು ನೀಡಿದರೆ ತಾನು ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೊಡುತ್ತೇನೆಂದು ತಿಳಿದಾಗ  ಅವರುಗಳು ಏಕಾ ಏಕಿ   ಅವಾಚ್ಯಶಬ್ದಗಳಿಂದ ಬೈದು ಏ ಬೋಳಿ  ಮಗನೆ ನಿನ್ನದು ಸಂಘದಲ್ಲಿ ಜಾಸ್ತಿಯಾಗಿದೆ ಎಂದು ಕೆಂಪೆಗೌಡ ತನ್ನ ಗಲ್ಲಾಪಟ್ಟಿಯನ್ನು ಹಿಡಿದು ಎಳೆದು ನೆಲಕ್ಕೆ ದಬ್ಬಿರುತ್ತಾನೆ ರಾಮರೆಡ್ಡಿ  ಕೈಗಳಿಂದ ತನ್ನ ಮುಖಕ್ಕೆ ಮತ್ತು ಬೆನ್ನಿಗೆ ಗುದ್ದಿರುತ್ತಾನೆ, ಚನ್ನೇಗೌಡ ಕಾಲುಗಳಿಂದ ಒದ್ದಿರುತ್ತಾನೆ,  ನಂತರ ತಾನು ಕಛೇರಿಗೆ ಬೀಗ ಹಾಕಲು ಹೋದಾಗ ಪಿ. ಆನಂದಮೂರ್ತಿ ಮತ್ತು ಎಲ್ಲರು ಸೇರಿಕೊಂಡು ಬೀಗಹಾಕದೇ ಅಡ್ಡಗಟ್ಟಿ ಈ ಕಛೇರಿಗೆ ಬೀಗ ಹಾಕಬೇಡ ಮತ್ತೆ ಈ ಕಛೇರಿಗೆ ಬಂದರೆ  ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾ ಎಂದು ಪ್ರಾಣಬೆದರಿಕೆಹಾಕಿರುತ್ತಾರೆ ಅಷ್ಠರಲ್ಲಿ ಅಲ್ಲಿಯೇ ಇದ್ದ ಕಛೇರಿಯ ಸಿಬ್ಬಂದಿಯಾದ  ಎಂ.ಬಿ ಆಂಜಿನಪ್ಪ ಬಿನ್ ಲೇಟ್ ಬೈಯಣ್ಣ ಮತ್ತು ಎಂ ಮಂಜುನಾಥ ಬಿನ್ ಮೋಟಪ್ಪ ರವರುಗಳು ಜಗಳ ಬಿಡಿಸಿರುತ್ತಾರೆ, ತನ್ನ ಮೇಲೆ ವಿನಕಾರಣ ಜಗಳತೆಗೆದು ಅವಾಚ್ಯಶಬ್ದಗಳಿಂದ ಬೈದು ಹಲ್ಲೆ ಮಾಡಿದ ಕೆಂಪೇಗೌಡ, ಪಿ.ರಾಮರೆಡ್ಡಿ, ಚನ್ನೇಗೌಡ ಮತ್ತು ಪಿ. ಆನಂದಮೂರ್ತಿ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

2) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.13/2019 ಕಲಂ: 379  ಐ.ಪಿ.ಸಿ:-

     ದಿನಾಂಕ: 03-02-2019 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ ರಾಜೇಂದ್ರ ಬಿನ್ ಕೃಷ್ಣಾರೆಡ್ಡಿ, ಪಿಂಡಿಪಾಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿದ್ದು ನಮ್ಮ ಗ್ರಾಮದ ಸರ್ವೆ ನಂ. 116 ರಲ್ಲಿ 10 ಕುಂಟೆ ಜಮೀನಿದ್ದು ಸದರಿ ಜಮೀನಿನ ಬಳಿ ವ್ಯವಸಾಯಕ್ಕಾಗಿ ಕೃಷಿ ಹೊಂಡ ಮಾಡಿಸಿದ್ದು ಕೃಷಿ ಹೊಂಡದಿಂದ ನೀರನ್ನು ತೋಟಕ್ಕೆ ಬಿಡುವ ಸಲುವಾಗಿ ಕೃಷಿ ಹೊಂಡದ ಒಳಗಡೆ 2 ಹೆಚ್.ಪಿ. ಸಂಪ್ ಮೋಟರ್ ನ್ನು ಬಿಟ್ಟಿರುತ್ತೇನೆ, ನಮ್ಮ ತೋಟದ ಬಳಿ ಸುಮಾರು 1/2 ಕಿ.ಮೀ. ದೂರದಲ್ಲಿ ನಮ್ಮ ಗ್ರಾಮದ ಎ. ನರೇಂದ್ರ ಬಿನ್ ಆನಂದರೆಡ್ಡಿ, ಮುನಿಯಪ್ಪ ಬಿನ್ ಹನುಮಂತರಾಯಪ್ಪ ಹಾಗೂ ನಾರಾಯಣಸ್ವಾಮಿ ಬಿನ್ ನರಸಿಂಹಯ್ಯ ರವರುಗಳ ಜಮೀನುಗಳು ಇರುತ್ತೆ. ದಿನಾಂಕ: 02-02-2019 ರಂದು ರಾತ್ರಿ 11.00 ಗಂಟೆಯ ವರೆಗೂ ನಾನು ತೋಟದಲ್ಲಿ ಇದ್ದು ನಂತರ ಮನೆಗೆ ಬಂದಿರುತ್ತೇನೆ, ಈ ದಿನ ದಿನಾಂಕ: 03-02-2019 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ ನಾನು ತೋಟದ ಬಳಿ ಹೋಗಿ ನೋಡಲಾಗಿ ಯಾರೋ ಕಳ್ಳರು ನಮ್ಮ ತೋಟದ ಕೃಷಿ ಹೊಂಡದಲ್ಲಿ ಅಳವಡಿಸಿದ್ದ ನನ್ನ ಬಾಬತ್ತು 14,000-00 ರೂ ಬೆಲೆ ಬಾಳುವ 2 ಹೆಚ್.ಪಿ. ಸಂಪ್ ಮೋಟರ್ ಮತ್ತು 25 ಮೀಟರ್ ಕೇಬಲ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ವಿಚಾರ ಮಾಡಲಾಗಿ ನಮ್ಮ ತೋಟದಿಂದ ಸ್ವಲ್ಪ ದೂರದಲ್ಲಿರುವ ನಮ್ಮ ಗ್ರಾಮದ ನರೇಂದ್ರ ಬಿನ್ ಆನಂದರೆಡ್ಡಿ ರವರ ತೋಟದಲ್ಲಿನ ಕೃಷಿಹೊಂಡದಲ್ಲಿ ಅಳವಡಿಸಿದ್ದ 15,000-00 ರೂ ಬೆಲೆ ಬಾಳುವ 3 ಹೆಚ್.ಪಿ. ಸಂಪ್ ಮೋಟರ್ ಮತ್ತು 10 ಮೀಟರ್ ಕೇಬಲ್ ನ್ನು, ಮುನಿಯಪ್ಪ ಬಿನ್ ಹನುಮಂತರಾಯಪ್ಪ ರವರ ತೋಟದ ಬಳಿ ಮೋಟರ್ ಗೆ ಅಳವಡಿಸಿದ್ದ 4000-00 ರೂ ಬೆಲೆ ಬಾಳುವ 20 ಮೀಟರ್ ಕೇಬಲ್ ಹಾಗೂ ನಾರಾಯಣಸ್ವಾಮಿ ಬಿನ್ ನರಸಿಂಹಯ್ಯ ರವರ ತೋಟದಲ್ಲಿ ಬೋರ್ ವೆಲ್ ಗೆ ಅಳವಡಿಸಿದ್ದ 15,000-00 ರೂ ಬೆಲೆ ಬಾಳುವ ಸ್ಟಾರ್ಟರ್ ಮತ್ತು 10 ಮೀಟರ್ ಕೇಬಲ್ ನ್ನು ದಿನಾಂಕ: 02-02-2019 ರ ರಾತ್ರಿ 11.00 ಗಂಟೆಯಿಂದ ದಿನಾಂಕ: 03-02-2019 ರ ಬೆಳಗಿನ ಜಾವ 6.00 ಗಂಟೆ ಮದ್ಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಮೇಲ್ಕಂಡ ಕಳುವಾದ ಎಲ್ಲಾ ಸಂಪ್ ಮೋಟರ್, ಸ್ಟಾರ್ಟರ್ ಮತ್ತು ಕೇಬಲ್ ಗಳ ಒಟ್ಟು ಬೆಲೆ 48,000-00 ರೂಗಳಾಗಿದ್ದು ಕಳುವಾದ ಮಾಲನ್ನು ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

No announcement available or all announcement expired.