ದಿನಾಂಕ : 04/01/2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ  ಪೊಲೀಸ್ ಠಾಣೆ ಮೊ.ಸಂ.03/2019 ಕಲಂ.379 ಐ.ಪಿ.ಸಿ:-

     ದಿನಾಂಕ:04-01-2019 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 30-12-2018 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ನಾನು ಬಾಗೇಪಲ್ಲಿ ಪುರದಲ್ಲಿನ ಲೋಕೋಪಯೋಗಿ ಇಲಾಖೆಯ ಕಛೇರಿಯ ಬಳಿ ಕೆಲಸದ ನಿಮಿತ್ತ ನನ್ನ ಬಾಬತ್ತು KA-51 EM-9407 ದ್ವಿಚಕ್ರವಾಹನದಲ್ಲಿ ಹೋಗಿ ಕಛೇರಿಯ ಮುಂಭಾಗ ಕಾಂಪೌಂಡ್ ಗೋಡೆಯ ಪಕ್ಕದಲ್ಲಿ ದ್ವಿಚಕ್ರವಾಹನವನ್ನು ನಿಲ್ಲಿಸಿರುತ್ತೇನೆ. ಹೊಸದಾಗಿ ನಿರ್ಮಾಣ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಕಛೇರಿಯ ಕಟ್ಟಡದ ಅಳತೆಯನ್ನು ನಾನು ಮತ್ತು ಕಾಂಟ್ರಾಕ್ಟರ್ ಆದ ಸೀನಪ್ಪ ರವರು ತೆಗೆದುಕೊಂಡು ನಂತರ ಕಛೇರಿಯ ಮುಂಭಾಗ ಬಂದು ನೋಡಲಾಗಿ ನಾನು ನಿಲ್ಲಿಸಿದ್ದ ಜಾಗದಲ್ಲಿ ನನ್ನ ಬಾಬತ್ತು ದ್ವಿಚಕ್ರವಾಹನ ಇರುವುದಿಲ್ಲ. ನಾನು ಬಾಗೇಪಲ್ಲಿ ಪುರದಲ್ಲಿ ಹಾಗೂ ಸುತ್ತಮುತ್ತಲೂ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಸದರಿ ದ್ವಿಚಕ್ರವಾಹನದ ಇಂಜಿನ್ ನಂ: JEZWEF28319, ಚಾಸಿ ನಂ: MD2A64CZ6EWF26011 ಆಗಿರುತ್ತದೆ. ಸದರಿ ದ್ವಿಚಕ್ರವಾಹನವು ಸುಮಾರು 44,550/-ರೂ ಬೆಲೆ ಬಾಳುವುದಾಗಿರುತ್ತೆ. ಕಳುವಾಗಿರುವ ನನ್ನ ದ್ವಿಚಕ್ರವಾಹನವನ್ನು ಇದುವರೆವಿಗೂ ಹುಡುಕಾಡಲಾಗಿ ಸಿಗದ ಕಾರಣ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಕಳುವಾಗಿರುವ ದ್ವಿಚಕ್ರವಾಹನ ಮತ್ತು ಅರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.420 ಐ.ಪಿ.ಸಿ:-

     ದಿನಾಂಕ: 03/01/2019 ರಂದು 18-30 ಗಂಟೆಗೆ ಪಿರ್ಯಾದಿದಾರರಾದ ವಿ. ಗೋಪಾಲ್ ಬಿನ್ ವೆಂಕಟರಾಮಪ್ಪ, 52 ವರ್ಷ, ಬೋವಿ ಜನಾಂಗ,  ವ್ಯಾಪಾರ, ವಾಸ ವರ್ಲಕೊಂಡಗ್ರಾಮ, ಗುಡಿಬಂಡೆ ತಾಲ್ಲೂಕು , ಚಿಕ್ಕಬಳ್ಳಾಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರನಲ್ಲಿ ಟೈಪ್ ಮಾಡಿರುವ ದೂರಿನ ಸಾರಾಂಶವೇನೆಂದರೆ,  ಚಿಕ್ಕಬಳ್ಳಾಫುರ ನಗರದ  ಪಿಳ್ಳಪ್ಪ ಕಾಂಪ್ಲೇಕ್ಸ್ ಹಿಂಭಾಗದಲ್ಲಿರುವ ಆರ್.ಹೆಚ್.ಎನ್. ಬಿಲ್ಡಿಂಗ್ ನಲ್ಲಿ  ಮಹಾರಾಷ್ಟ್ರ ರಾಜ್ಯದ ಪುಣೆ ಸಮೃದ್ದ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟೀವ್  ಲಿ. ಹಾಗೂ ಸಮೃದ್ದ  ಗ್ರೂಪ್ ಆಫ್ ಕಂಪನೀಸ್ ನ  ಸಂಸ್ಥಾಪಕರಾದ  ಮಹೇಶ್  ಕಿಸಾನ್  ಮೋತೇವಾರ್ ಹಾಗೂ ಪ್ರಸಾದ್ ಪರೇಸ್ವಾರ್ ಹಾಗೂ ಇತರೇ ಸೊಸೈಟಿ ನಿರ್ದೇಶಕರುಗಳು ಬ್ರಾಂಚ್ ಕಛೇರಿಯನ್ನು 19-10-2010 ನೇ ಸಾಲಿನಲ್ಲಿ ವಿವಿಧ ಹೆಸರಿನಲ್ಲಿ ತೆರೆದಿರುತ್ತಾರೆ. ಸದರಿ ಬ್ರಾಂಚ್ ಕಛೇರಿಯನ್ನು 2016 ನೇ ಸಾಲಿನವರೆಗೆ  ತೆರೆದಿದ್ದು  ನಾನು ದಿನಾಂಕ 25-12-2014 ರಂದು  ನನ್ನ ಹೆಂಡತಿಯವರಾದ  ಎನ್ ಸುನಂದಾ ರವರ ಹೆಸರಿನಲ್ಲಿ ಮೊದಲ ಕಂತಾಗಿ 8 ಲಕ್ಷರೂಗಳನ್ನು ಕಟ್ಟಿರುತ್ತೇನೆ.  ನನಗೆ ಸಮೃದ್ದ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟೀವ್  ಲಿ. ರಿಜಿಸ್ಟ್ರೇಷನ್ ನಂ. 1504914008593 ರಂತೆ ರಿಜಿಸ್ಟ್ರೇಷನ್ ಮಾಡಿ  ನಂ. 2493400 ರ ಸರ್ಟಿಫಿಕೇಟ್ ಅನ್ನು ಕೊಟ್ಟಿರುತ್ತಾರೆ. ನಂತರ ಕಂಪನಿಯವರು ಪಿರ್ಯಾದಿಗೆ ಜೋನಲ್ ಆಫಿಸರ್ ಎಂದು ನೇಮಕ ಮಾಡಿದ್ದು, ತಾನು  ಕಂಪನಿಯ ಪರವಾಗಿ  ಕೆಲಸವನ್ನು ಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಸುಮಾರು 10,000 ಜನ ಪೀಲ್ಡ್ ವರ್ಕಿಂಗ್ ಕೆಲಸದಲ್ಲಿದ್ದು ಇವರುಗಳು  ಗ್ರಾಹಕರನ್ನು  ಕಂಪನಿಯ ಸದಸ್ಯತ್ವವನ್ನು ಮಾಡಿಸಿ ಅವರಿಂದ ಹಣವನ್ನು ಕಟ್ಟಿಸುತ್ತಿದ್ದರು. 2016 ನೇ ಸಾಲಿನವರೆಗೆ  ಸುಮಾರು 50,000 ಜನರನ್ನು ಸದಸ್ಯತ್ವವನ್ನು ಮಾಡಿಸಿದ್ದು  ಸದರಿ ಕಂಪನಿಯಲ್ಲಿ ವಿವಿಧ ಹೆಸರುಗಳಲ್ಲಿ ಗ್ರಾಹಕರಿಂದ 100 ರೂಗಳಿಂದ 25,000 ರೂ ವರೆಗೆ ಕಂತುಗಳನ್ನು ಪ್ರತಿ ತಿಂಗಳು ಕಟ್ಟಿಸುತ್ತಿದ್ದು, ಸದರಿ ಹಣವನ್ನು ತಾನು ಮತ್ತು ತನ್ನ ಜೊತೆಯಲ್ಲಿರುವವರು  ಚಿಕ್ಕಬಳ್ಳಾಪುರ ನಗರದ ಬ್ರಾಂಚ್ ಕಛೇರಿಯಲ್ಲಿ ಕಟ್ಟಿ ಪ್ರತಿಯೊಬ್ಬ ಗ್ರಾಹಕರ ಹೆಸರಿನಲ್ಲಿ ರಸೀದಿಯನ್ನು ಪಡೆದುಕೊಂಡು ಹೋಗಿ ಕೊಡುತ್ತಿರುತ್ತೇವೆ. 2016 ನೇಸಾಲಿನ ಜೂನ್ ತಿಂಗಳಲ್ಲಿ ಕಂತಿನ ಹಣವನ್ನು ಕಟ್ಟಲು ಹೋದಾಗ ಕಛೇರಿಯು ಬಾಗಿಲು ಹಾಕಿತ್ತು. ಕಛೆರಿಯ ಬ್ರಾಂಚ್ ಮೇನೇಜರ್ ಮಹಬೂಬ್ ಪಾಶರವರಿಗೆ ದೂರವಾಣಿ ಕರೆಯನ್ನು ಮಾಡಿದಾಗ ಎಂ.ಡಿರವರು ಅರೆಸ್ಟ್ ಆಗಿದ್ದಾರೆ  ನಾವು  ಹಣವನ್ನು ಕಟ್ಟಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ನಂತರ ನಾನು ಈಗಾಗಲೇ ಕಟ್ಟಿರುವ ಹಣವನ್ನು ವಾಪಸ್ ಕೊಡುವಂತೆ ಕೇಳಲಾಗಿ  ಸದರಿಯವರು ನನಗೆ ಗೊತ್ತಿಲ್ಲ, ನೀವು  ಹೆಡ್ ಆಫೀಸ್ ನಲ್ಲಿ ಕೇಳಿ ಎಂದು ಹೇಳಿ ಪೋನ್ ಕಟ್ ಮಾಡಿದರು.  ತಾನು ಮತ್ತು ತನ್ನ ಜೊತೆಯಲ್ಲಿರುವ ಕೆಲಸಗಾರರು 2 ವರ್ಷಗಳ ಹಿಂದೆ  ಪುಣೆಯ ಹೆಡ್ ಆಫೀಸ್ ಗೆ ಹೋಗಿದ್ದು ಅಲ್ಲಿ ಎಂ.ಡಿರವರು ಸಿಕ್ಕಿರುವುದಿಲ್ಲ. ಅಂದಿನಿಂದ ಇಂದಿನವರೆಗೆ ತಾನು ಮತ್ತು ತನ್ನ ಜೊತೆಯಲ್ಲಿರುವವರು  ಸುಮಾರು 50,000 ಜನರಿಂದ ಕಟ್ಟಿಸಿರುವ ಹಣ ಸುಮಾರು 32 ಕೋಟಿಗೂ ಹೆಚ್ಚು ಹಣವನ್ನು ಕಟ್ಟಿಸಿದ್ದು  ಕಂಪನಿಯ  ಸಂಸ್ಥಾಪಕರಾದ ಮಹೇಶ್ ಕಿಸಾನ್  ಮೋತೇವಾರ್ ಚೀಫ್ ಪ್ರಮೋಟರ್ , ಸಮೃದ್ದ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟೀವ್  ಲಿ. ಹಾಗೂ ಸಮೃದ್ದ  ಗ್ರೂಪ್ ಆಫ್ ಕಂಪನೀಸ್ , ಲಾಂಡ್ ಮಾರ್ಕೇಟಿಂಗ್ ಬಿಲ್ಡಿಂಗ್, ಶಿರೋಲ್ ರೋಡ್, ಎಫ್.ಸಿ. ಕಾಲೇಜ್ ಎದುರು, ಪುಣೆ, ಮಹಾರಾಷ್ಟ್ರ ಹಾಗೂ ಪ್ರಸಾದ್ ಪರೇಸ್ವಾರ್ ಹಾಗೂ ಇತರೇ 18 ಜನ ಸೊಸೈಟಿ ನಿರ್ದೇಶಕರುಗಳು ಕಂಪನಿಯನ್ನು ತೆರೆದು ಹಲವಾರು ಹೆಸರುಗಳಲ್ಲಿ ಜನರಿಂದ ಹಣವನ್ನು ಕಟ್ಟಿಸಿಕೊಂಡು ಹಣವನ್ನು ವಾಪಸ್ ಕೊಡದೇ ಬ್ರಾಂಚ್ ಆಫೀಸ್ ಅನ್ನು ಮುಚ್ಚಿಕೊಂಡು ಸುಮಾರು 32 ಕೋಟಿಗೂ ಹೆಚ್ಚು ಹಣವನ್ನು ತೆಗೆದುಕೊಂಡು ಮೋಸ ಮಾಡಿರುತ್ತಾರೆ. ಇವರುಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.03/2019 ಕಲಂ.406-408-420 ಐ.ಪಿ.ಸಿ:-

     ದಿನಾಂಕ: 03/01/2019 ರಂದು 19-30 ಗಂಟೆಗೆ ಪಿರ್ಯಾದಿದಾರರಾದ ಎನ್.ಕೆ.ಗುರುರಾಜ್ ರಾವ್, ಕಾರ್ಯದರ್ಶಿಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರನಲ್ಲಿ ಟೈಪ್ ಮಾಡಿರುವ ದೂರಿನ ಸಾರಾಂಶವೇನೆಂದರೆ, ತಾನು ದಿ: 18/07/2018 ರಿಂದ ಚಿಕ್ಕಬಳ್ಳಾಪುರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುತ್ತೇನೆ. ರಕ್ತ ನಿಧಿ ಕೇಂದ್ರದಲ್ಲಿ ದಿ: 01/12/2011 ರಿಂದ ದಿ: 26/07/2018 ರ ವರೆಗೆ ಪ್ರಯೋಗಾಲಯ ತಂತ್ರಜ್ಞ ಮೇಲ್ವಿಚಾರಕರಾಗಿ ರವಿ ಲಂಬಾಣಿ ಬಿನ್ ಸೂರ್ಯ ನಾಯಕ್  [ 8073770170] ರವರು ಕಾರ್ಯನಿರ್ವಹಿಸುತ್ತಿದ್ದು, ಅವರೆ ರಕ್ತ ನಿಧಿ ಕೇಂದ್ರದಲ್ಲಿ ಪ್ಲಾಸ್ಮದ ನಿರ್ವಹಣೆ ಹಾಗೂ ಮಾರಾಟದ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಸದರಿ ಪ್ಲಾಸ್ಮ ಮಾರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಪತ್ರ ವ್ಯವಹಾರ ಹಾಗೂ ಕಡತಗಳ ನಿರ್ವಹಣೆಯನ್ನು ರವಿ ಲಂಬಾಣಿ ರವರು ಮಾಡುತ್ತಿದ್ದು, ದಿನಾಂಕ: 27/05/2015 ರಿಂದ 30/12/2016 ರ ವರೆಗೆ 1726 ಲೀಟರ್ ನಷ್ಟು ಉತ್ಪಾದನೆಯಾಗಬೇಕಾಗಿದ್ದು, 880 ಲೀಟರ್ ನಷ್ಟು ಪ್ಲಾಸ್ಮ ಉತ್ಪಾದನೆಯಾಗಿದೆ ಎಂದು ಸುಳ್ಳು ಲೆಕ್ಕವನ್ನು ಬರೆದು ಸಂಸ್ಥೆಗೆ 13,49,000 ರೂಗಳಷ್ಟು ಮಾನವ ರಕ್ತ ಭಾಗವಾದ ಪ್ಲಾಸ್ಮ ಮಾರಾಟ ಮಾಡಿ ದುರುಪಯೋಗಪಡಿಸಿಕೊಂಡು ಮೋಸ ಮಾಡಿರುತ್ತಾನೆ. ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

4) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.87 ಕೆ.ಪಿ. ಅಕ್ಟ್:-

     ದಿನಾಂಕ: 03/01/2019 ರಂದು ಸಂಜೆ ಸುಮಾರು 4.00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹುದುಗೂರು ಗ್ರಾಮದ ಹೊರವಲಯದಲ್ಲಿರುವ  ಹೊಸ ಬ್ರಿಡ್ಜ್ ಬಳಿ ಇರುವ ಸರ್ಕಾರಿ ಕಾಲುವೆಯಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಜೂಜಾಟವಾಡುತ್ತಿರುವುದಾಗಿ ನನಗೆ ಬಂದ ಮಾಹಿತಿ ಮೇರೆಗೆ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯವರೊಂದಿಗೆ ಪೊಲೀಸ್ ಜೀಪಿನಲ್ಲಿ ಗೌರಿಬಿದನೂರು ತಾಲ್ಲೂಕು ಹುದುಗೂರು ಗ್ರಾಮದ ಬಳಿ ಇರುವ ಕಾಲೋನಿಯ ಬಳಿಗೆ ಇದೇ ದಿನ ಸಂಜೆ ಸುಮಾರು 4.30 ಗಂಟೆಯಲ್ಲಿ    ಮರೆಯಲ್ಲಿ ಸರ್ಕಾರಿ ಜೀಪನ್ನು ನಿಲ್ಲಿಸಿ ಹೊಸ ಬ್ರಿಡ್ಜ್ ಬಳಿಗೆ ಕಾಲು ನಡಿಗೆಯಲ್ಲಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಿದಾಗ ಸರ್ಕಾರಿ ಕಾಲುವೆಯಲ್ಲಿ ನಾಲ್ಕು ಜನರು ರೌಂಡಾಗಿ ಕುಳಿತು ಅಂದರ್ ಗೆ 200/- ರೂ. ಬಾಹರ್ ಗೆ 200/- ಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಹಿಡಿದುಕೊಂಡು ನಾನು ಯಾರೋ ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರ ಹೆಸರು ವಿಳಾಸ ಕೇಳಲಾಗಿ 1) ಅಶ್ವತ್ಥಪ್ಪ ಬಿನ್ ನರಸಪ್ಪ 35 ವರ್ಷ ನಾಯಕರು ಜಿರಾಯ್ತಿ ವಾಸ:ಲಕ್ಕಸಂದ್ರ ಗ್ರಾಮ, ಗೌರಿಬಿದನೂರು ತಾಲೂಕು.2)ಮಹೇಶ ಬಿನ್ ಗಂಗಪ್ಪ  28 ವರ್ಷ ನಾಯಕ ಜನಾಂಗ ಬೇಲ್ದಾರು ಕೆಲಸ ವಾಸ:ಡಿ ಪಾಳ್ಯ ಗ್ರಾಮ ಗೌರಿಬಿದನೂರು ತಾಲೂಕು.3)ನರಸಿಂಹಮೂರ್ತಿ ಬಿನ್ ನಾರಾಯಣಪ್ಪ 30 ವರ್ಷ ನಾಯಕರು ಸಿಮೆಂಟ್ ಕೆಲಸ ವಾಸ: ಲಕ್ಕಸಂದ್ರ ಗ್ರಾಮ ಗೌರಿಬಿದನೂರು ತಾಲೂಕು.4)ರಾಘವೇಂದ್ರ ಬಿನ್ ಲಕ್ಷ್ಮಪ್ಪ 27 ವರ್ಷ ಬಲಜಿಗರು ಪಿ ಪಿ ಐ ಫ್ಯಾಕ್ಟರಿ ದೊಡ್ಡಬಳ್ಳಾಪುರದಲ್ಲಿ ಕೆಲಸ ವಾಸ:ಹುದುಗೂರು ಗ್ರಾಮ ಗೌರಿಬಿದನೂರು ತಾಲೂಕು. ಅಂತ ತಿಳಿಸಿದ್ದು, ಜೂಜಾಟವಾಡುತ್ತಿದ್ದ ಸ್ಥಳದಲ್ಲಿದ್ದ ಚೆಲ್ಲಾ ಪಿಲ್ಲಿಯಾಗಿ ಬಿದಿದ್ದ  ಇಸ್ಪೀಟು ಎಲೆಗಳಿದ್ದು ಎಣಿಸಲಾಗಿ 52 ಇಸ್ಪೀಟ್ ಎಲೆಗಳಾಗಿದ್ದು, ಸ್ಥಳದಲ್ಲಿ ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣವಿದ್ದು ಎಣಿಸಲಾಗಿ 8200/- (ಎಂಟು ಸಾವಿರದ ಇನ್ನೂರು) ರೂ ನಗದಾಗಿರುತ್ತೆ.ಮೇಲ್ಕಂಡ ನಾಲ್ಕು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, 52 ಇಸ್ಪೀಟ್ ಎಲೆಗಳು,ಪಂದ್ಯಕ್ಕೆ ಪಣವಾಗಿಟ್ಟಿದ್ದ 8200/- ರೂ.ನಗದು ಹಣವನ್ನು  ಸಂಜೆ 4.30 ಗಂಟೆಯಿಂದ 5.30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ಸಾಯಂಕಾಲ 6.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿರುತ್ತೇನೆ.

6) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.ಮನುಷ್ಯ ಕಾಣೆ:-

     ದಿನಾಂಕ 04-01-2019 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದುದಾರರಾದ  ಮುನಿಶ್ಯಾಮರೆಡ್ಡಿ ಬಿನ್ ಮಾರಪ್ಪರೆಡ್ಡಿ ಗಂಜಗುಂಟೆ ಗ್ರಾಮ ಶಿಡ್ಲಘಟ್ಟ ತಾಲ್ಲೂಕು  ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನಗೆ ಮೂರು ಜನ ಮಕ್ಕಳಿದ್ದು  ಮೊದಲನೆಯನಾದ ಉದಯ್ಕುಮಾರ್ ಎಂಬುವರು ಪಿಯುಸಿ ವ್ಯಾಸಾಂಗ ಮಾಡಿ 2 ವರ್ಷಗಳಿಂದ  ಇಧೇ ಚಿಕ್ಕಬಳ್ಳಾಪುರ ತಾಲ್ಲೂಕು  ಪಾಪಿರೆಡ್ಡಿ ರವರ ಪೆಯಂಟ್ ಅಂಗಡಿಯಲ್ಲಿ  ಮ್ಯಾನೇಜರ್ ಆಗಿದ್ದು  ಚದಲಪುರ ಗ್ರಾಮದ ಬಳಿ ಇರುವ ಅವರ ಗೋಡನ್ನಿನ ಬಳಿಯಿರುವ ಕೊಠಡಿಯೊಂದರಲ್ಲಿ ವಾಸವಿದ್ದು  ಮನಗೆ  ತಿಂಗಳಿಗೊಮ್ಮೆ ಬರುತ್ತಿದ್ದನು, ಹಾಗೂ ಹಬ್ಬಗಳಿಗೆ ನಮ್ಮ ಗ್ರಾಮಕ್ಕೆ ಬರುತ್ತಿದ್ದನು,  ದಿನಾಂಕ 03-01-2019 ರಂದು ಬೆಳಗ್ಗೆ 10-30 ಗಂಟೆಗೆ ಪೇಯಿಂಟ್ ಅಂಗಡಿ ಮಾಲೀಕರಾದ ಪಾಪಿರೆಡ್ಡಿ ರವರು ನನಗೆ ದೂರವಾಣಿ ಕರೆ ಮಾಡಿ ಅಂಗಡಿಯ ಬಳಿ ಗಿರಾಕಿಗಳು ಬಂದಿದ್ದು ಉದಯ್ಕುಮಾರ್ ಅಂಗಡಿಯ ಬಳಿ ಇರುವುದಿಲ್ಲಾವೆಂದು  ಊರಿಗೆ ಏನಾದರೂ ಬಂದಿರುವನೋ  ಎಂದು ನನಗೆ ತಿಳಿಸಿದನು,ತಕ್ಷಣ ನಾನು ನನ್ನ ಮಗನ ಮೋಬೈಲ್ ಸಂಖ್ಯೆ 9663432673 ನಂಬರಿಗೆ ಪೋನ್ ಮಾಡಿದಾಗ ತನ್ನ ಮಗನ ಮೋಬೈಲ್ ಸ್ವಿಚ್ ಆಪ್ ಆಗಿತ್ತು,  ನಾನು ನಮ್ಮ ನೆಂಟರಿಷ್ಟರ ಮನೆಗಳಲ್ಲಿ  ಪತ್ತೆ ಮಾಡಲಾಗಿ ಪತ್ತೆಯಾಗದ ಕಾರಣ  ಚದಲಪುರ ಗ್ರಾಮದ ಬಳಿಯ ಪೈಯಿಂಟ್ ಅಂಗಡಿಯ ಬಳಿ ಬಂದು ನನ್ನ ಮಗನ ಜೊತೆಯಲ್ಲಿದ್ದವರನ್ನು ವಿಚಾರಿಸಲಾಗಿ ದಿನಾಂಕ 03-01-2019 ರಂದು ಬೆಳಗ್ಗೆ 8-30 ಗಂಟೆಯ ಸಮಯದಲ್ಲಿ ಉದಯ್ಕುಮಾರ್ ಸ್ನಾನ  ಮಾಡಿಕೊಂಡು ಹೋದಾಗ ನೋಡಿದ್ದು ನಂತರ ನೋಡಲಿಲ್ಲಾ ಎಂದು ತಿಳಿಸಿದನು,  ನಾವು ಅವನಿಗೆ ಪರಿಚಯವಿರುವ ಸ್ಥಳಗಳಲ್ಲಿ ಹುಡುಕಾಡಿದರೂ ಸಿಗದ ಕಾರಣ  ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,