ದಿನಾಂಕ : 03/12/2018ರ ಅಪರಾಧ ಪ್ರಕರಣಗಳು

 1) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.199/2018 ಕಲಂ.420-465-468 ಐ.ಪಿ.ಸಿ:-

     ದಿನಾಂಕ 03-12-2018 ರಂದು   13-30 ಗಂಟೆಗೆ ಕುಮಾರಿ ಕಲ್ಪನಾ ಸ್ವಾಮಿ ಬಿನ್  ಎ.ವಿ.ವೆಂಕಟಸ್ವಾಮಿ, 53 ವರ್ಷ,  ಬಲಜಿಗರು,  ವಾಸ ನಂ. 917/70, 28 ನೇ ಮುಖ್ಯ ರಸ್ತೆ, 9 ನೇ ಹಂತ, ಜಯನಗರ, ಬೆಂಗಳೂರು ಸ್ವಂತ ಸ್ಥಳ ಕಂದವಾರ, ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರ್ ಟೈಪ್ ಮಾಡಿರುವ ದೂರಿನ ಸಾರಾಂಶವೇನೆಂದರೆ  2000-01 ನೇ ಸಾಲಿನಲ್ಲಿ ನನ್ನ ತಂದೆಯವರಾದ  .ವಿ. ವೆಂಕಟಸ್ವಾಮಿರವರು ಮೃತಪಟ್ಟಿದ್ದು  ಅವರ ಹೆಸರಿನಲ್ಲಿದ್ದ ಚಿಕ್ಕಬಳ್ಳಾಪುರ ತಾಲ್ಲೂಕು ತಿಪ್ಪೇನಹಳ್ಳಿ  ಸರ್ವೇ ನಂ. 209/3 ರಲ್ಲಿ 0-27 ಗುಂಟೆ ಜಮೀನನ್ನು   ತನ್ನ ಹೆಸರಿಗೆ ಫವತಿ ವಾರಸು  ಮೂಲಕ ಬಂದಿದ್ದು  ದಿನಾಂಕ 15-06-2018 ರಂದು  ಶ್ರೀಧರ್ ಬಿನ್  ಜಿ.ಸಿ. ಗಣೇಶ್ ಎಂಬುವರಿಗೆ  ಕುಮಾರಿ ಕಲ್ಪನಾ ಎಂಬುವರಿಂದ ಮಾರಾಟವಾಗಿರುವಂತೆ ಕ್ರಯಪತ್ರವನ್ನು  ಮಾಡಿದ್ದು  ನಂತರ  ದಾಖಲೆಗಳನ್ನು ಪರಿಶೀಲಿಸಲಾಗಿ ತನ್ನ ಹೆಸರಿನಲ್ಲಿ  ನಕಲಿಯಾಗಿ ಕುಮಾರಿ ಕಲ್ಪನಾ ಬಿನ್ ಎ.ವಿ.ವೆಂಕಟಶಾಮ, ಬೈನಹಳ್ಳಿ,  ಬೆಂಗಳೂರು ಎಂಬುವರು  ನಕಲಿ ದಾಖಲೆಗಳನ್ನು ಸೃಷ್ಠಿಸಿ  ನಕಲಿ ಸಹಿ ಮತ್ತು ಹೆಬ್ಬೆಟ್ಟು ಗುರುತು ಹಾಕಿ ಶ್ರೀಧರ ಬಿನ್ ಜಿ.ಸಿ. ಗಣೇಶ  ಎಂಬುವರಿಗೆ  ಕ್ರಯ ಮಾಡಿಕೊಟ್ಟಿರುತ್ತಾರೆ.  ಸಾಕ್ಷೀದಾರರಾಗಿ  ಅಶೋಕ ಬಿನ್  ಮುತ್ತಪ್ಪ, ಅರಿಕೆರೆ,  ಸತೀಶ ಬಿನ್ ನ್ಯಾತಪ್ಪ, ವಾಪಸಂದ್ರ ರವರು ಸಹಿಯನ್ನು ಮಾಡಿರುತ್ತಾರೆ. ತನ್ನ ಸಹಿಯನ್ನು ಮತ್ತು ಜಮೀನಿನ ದಾಖಲೆಗಳನ್ನು ಪೋರ್ಜರಿ ಮಾಡಿ ಮೋಸ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

2) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.238/2018 ಕಲಂ.279-337 ಐ.ಪಿ.ಸಿ:-

     ದಿನಾಂಕ: 02/12/2018 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮುನಿರಾಜು ಬಿನ್ ಮುನಿನಾರಾಯಣಪ್ಪ, 28 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ತೋಕಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಠಾಣಾ CHC-159 ರವರು ಪಡೆದುಕೊಂಡು ಮದ್ಯಾಹ್ನ 2.10 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ, ತಾನು ತನ್ನ ಹೆಂಡತಿ ತವರು ಮನೆಗೆ ಹೋಗಿದ್ದರಿಂದ ತನ್ನ ಹೆಂಡತಿಯನ್ನು ನೋಡಿಕೊಂಡು ಬರಲು ದಿನಾಂಕ:01/12/2018 ರಂದು ಸಂಜೆ ಸುಮಾರು 6.00 ಗಂಟೆ ಸಮಯದಲ್ಲಿ ತನ್ನ ಬಾಭತ್ತು KA-40 S-8184 ಸ್ಲೆಂಡರ್ ಪ್ಲೆಸ್ ದ್ವಿಚಕ್ರ ವಾಹನದಲ್ಲಿ ದಿಬ್ಬೂರಹಳ್ಳಿ ಮುಖಾಂತರ ಗುಡಿಬಂಡೆ ಕಡೆ ಹೂಗಲು ಕೊಂಡಪ್ಪಗಾರಹಳ್ಳಿ ಯಿಂದ ಸ್ವಲ್ಪ ಮುಂದೆ ರಸ್ತೆಯ ಎಡ ಭಾಗದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಯಾವುದೋ ಒಂದು ಲಾರಿಯ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸದೆ ಹೊರಟು ಹೋದ ಪರಿಣಾಮ ತಾನು ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ಕಾಲು, ಕೈ ಹಾಗೂ ಬಲಗಣ್ಣಿನ ಮೇಲ್ಬಾಗದಲ್ಲಿ ರಕ್ತಗಾಯವಾಗಿರುತ್ತದೆ. ನಂತರ ವಿಚಾರ ಮಾಡಲಾಗಿ ಅಪಘಾತವನ್ನುಂಟು ಮಾಡಿದ ಲಾರಿಯ ನೊಂದಣಿ ಸಂಖ್ಯೆ KA-51 AB-6407 ಎಂದು ತಿಳಿದು ಬಂದಿರುತ್ತೆ, ಆದ್ದರಿಂದ ಮೇಲ್ಕಂಡಂತೆ ಅಪಘಾತವನ್ನುಂಟು ಮಾಡಿದ ಲಾರಿಯ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

3) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.320/2018 ಕಲಂ.323-324-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 02-12-2018 ರಂದು ಸಂಜೆ 4-00 ಗಂಟೆಯಲ್ಲಿ ಪಿರ್ಯಾದಿ ಜನಾರ್ದನ ಬಿನ್ ಬಚ್ಚೆಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ  16/11/2018 ರಂದು ರಾತ್ರಿ 10-30 ಗಂಟೆಯಲ್ಲಿ ತಾನು ಅಂಗಡಿಯಿಂದು ಮನೆಗೆ ಹೋಗಲು ಗೋಪಾಲಪ್ಪ ರವರ ಮನೆಯ ಮುಂದೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಯೇ ಇದ್ದ ಗೋಪಾಲಪ್ಪ ಬಿನ್ ಲೇಟ್ ದೊಡ್ಡನಾರಾಯಣಪ್ಪ ರವರು ಏ ಯಾರೋ ನೀನು  ನಮ್ಮ ಮನೆಯ ಮುಂದೆ ಬರಬೇಡವೆಂದು ಅವಾಚ್ಯಶಬ್ದಗಳಿಂದ ಬೈದಿರುತ್ತಾನೆ ಆಗ ತಾನು ಏಕೆ ಹೋಗಬಾರದು ಎಂದು ಕೇಳಿದಕ್ಕೆ ಅಲ್ಲಿಯೇ ಇದ್ದ ಗೋಪಾಲಪ್ಪ  ಬಿನ್ ಲೇಟ್ ದೊಡ್ಡನಾರಾಯಣಪ್ಪ, ರಾಜೇಶ ಬಿನ್ ಚಿಕ್ಕಮುನಿಯಪ್ಪ, ಯಶೋದಮ್ಮ ಕೋಂ ಗೋಪಾಲಪ್ಪ, ವಿನುತಾ ಕೋಂ ರಾಜೇಶ ಮತ್ತು ಮುನೇಗೌಡ ಬಿನ್ ಬಚ್ಚೆಗೌಡ ರವರುಗಳು  ತನ್ನ  ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಅ ಪೈಕಿ  ಗೋಪಾಲಪ್ಪ  ಕಬ್ಬಿಣದ ರ್ಯಾಡ್ ನಿಂದ ತನ್ನ  ಎಡಕೈಗೆ ಎಡತೊಡೆಯ ಮೇಲೆ ಹೊಡೆದು ನೋವಿನಗಾಯವುಂಟುಮಾಡಿರುತ್ತಾನೆ, ರಾಜೇಶ್ ದೊಣ್ಣೆಯಿಂದ ತನ್ನ  ತಲೆಗೆ ಹೊಡೆದು ರಕ್ತಗಾಯವುಂಟು ಮಾಡಿರುತ್ತಾನೆ,ಯಶೋದಮ್ಮ, ವಿನುತಾ ಮತ್ತು ಮುನೇಗೌಡ ರವರು ಅವಾಚ್ಯಶಬ್ದಗಳಿಂದು ಬೈದು ಕೈಗಳಿಂದ ಹೊಡೆದಿರುತ್ತಾರೆ, ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ನರೇಶ ಬಿನ್ ನರಸಿಂಹರಾಜು ಮತ್ತು ಕೆ.ಸಿ ನಾರಾಯಣಸ್ವಾಮಿ ಬಿನ್ ಲೇಟ್ ಚನ್ನಪ್ಪ ರವರು ಬಿಡಿಸಿರುತ್ತಾರೆ ವಿಚಾರವನ್ನು ತಿಳಿದುಕೊಂಡ ತನ್ನ ಅಣ್ಣ ಶ್ರೀನಿವಾಸ ರವರು ಸ್ಥಳಕ್ಕೆ ಬಂದು  ತನ್ನನ್ನು  ಮನೆಗೆ  ಕರೆದುಕೊಂಡು ಬಂದು ತನಗೆ ಆದ ಗಾಯಗಳಿಗೆ ಮನೆಯಲ್ಲಿದ್ದ ನೋವಿನ ಔಷದಿಯನ್ನು ಇಟ್ಟುಕೊಂಡು ದಿನಾಂಕ: 17/11/2018 ರಂದು ತನ್ನನ್ನು ತನ್ನ ಅಣ್ಣ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.  ಗ್ರಾಮದಲ್ಲಿ ಹಿರಿಯರು ಮಾತುಕತೆ ಮಾಡಿ ರಾಜಿ ಮಾಡುವುದಾಗಿ ತಿಳಿಸಿರುತ್ತಾರೆ  ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿದ್ದು  ತನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ಹಲ್ಲೆ ಮಾಡಿದ ಗೋಪಾಲಪ್ಪ ,ರಾಜೇಶ,ಯಶೋದಮ್ಮ,ವಿನುತಾ, ಮುನೇಗೌಡ ರವರುಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

4) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.320/2018 ಕಲಂ.87 ಕೆ.ಪಿ. ಆಕ್ಟ್:-

     ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ  ವಿಜಯ್ ಆರ್  ಆದ ನಾನು ಘನ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:  02-12-2018 ರಂದು ಸಂಜೆ 4.30 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾಗ ಯಾರೋ ಸಾರ್ವಜನಿಕರಿಂದ ಹಂಡಿಗನಾಳ ಗ್ರಾಮದ ರಾಮಕೃಷ್ಣಪ್ಪ  ರವರ ಜಮೀನಿನ ಬಳಿ ಹಂಡಿಗನಾಳ ಕೆರೆಯಿಂದ ಬೆಳ್ಳುಟ್ಟಿ ಗ್ರಾಮದ ಕಡೆಗೆ ಹೋಗುವ  ಸರ್ಕಾರಿ ಕಾಲುವೆಯಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಸಿ.ಹೆಚ್.ಸಿ-165 ಚಂದ್ರಪ್ಪ, ಸಿಪಿಸಿ-444 ನಾರಾಯಣಸ್ವಾಮಿ, ಸಿಪಿಸಿ-437 ಆಂಜಿನೇಯ , ಸಿಪಿಸಿ-548  ಕೃಷ್ಣಪ್ಪ  ಸಿಪಿಸಿ-529 ಸಿದ್ದೇಶ  ಸಿಪಿಸಿ-139   ಬಾಬು  ಮತ್ತು ಪಂಚಾಯ್ತಿದಾರರಾದ ಶ್ರೀ. ನಾಗೇಂದ್ರ ಬಿನ್  ಅಶ್ವತ್ಥನಾರಾಯಣ, ಸುಮಾರು 34 ವರ್ಷ, ವಕ್ಕಲಿಗರು, ಜಿರಾಯ್ತಿ, ಬೆಳ್ಳುಟ್ಟಿ  ಗ್ರಾಮ ಶಿಡ್ಲಘಟ್ಟ ತಾಲ್ಲೂಕು, ಶ್ರೀ ರಾಜು ಬಿನ್  ವೆಂಕಟೇಶಪ್ಪ, ಸುಮಾರು 35 ವರ್ಷ, ವಕ್ಕಲಿಗರು, ಜಿರಾಯ್ತಿ, ಮಂಚಂಡಹಳ್ಳಿ ಗ್ರಾಮ, ವೇಮಗಲ್ ಹೋಬಳಿ, ಕೋಲಾರ ತಾಲ್ಲೂಕು, ಶ್ರೀ ಹರೀಶ ಬಿನ್ ರಾಮಾಂಜಿನಪ್ಪ, ಸುಮಾರು 33 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ಚೌಡಸಂದ್ರ ಗ್ರಾಮ ಶಿಡ್ಲಘಟ್ಟ ತಾಲ್ಲುಕು ರವರುಗಳೊಂದಿಗೆ ನಂ. ಕೆ.ಎ.-40 -ಜಿ-357 ಸರ್ಕಾರಿ ಜೀಪು ಮತ್ತು ದ್ವಿಚಕ್ರವಾಹನಗಳಲ್ಲಿ  ಕೇಶವಾಪುರ ಗ್ರಾಮದ ಬಳಿ  ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿಮಾಡಿದ್ದು  ಆ ಪೈಕಿ  7  ಜನ ಆಸಾಮಿಗಳು ಪರಾರಿಯಾಗಿದ್ದು  2 ಜನ ಅಸಾಮಿಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1] ಕೆ.ಎಂ.ನವೀನ್ ಕುಮಾರ್ ಬಿನ್ ಮುನೇಗೌಡ, 33 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕೇಶವಾಪುರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು. 2] ರಾಮಾಂಜಿನಪ್ಪ ಬಿನ್ ನಂಜಪ್ಪ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಎಲೆಯೂರು ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ  ಎಂದು ತಿಳಿಸಿರುತ್ತಾರೆ ಸ್ಥಳದಿಂದ ಪರಾರಿಯಾದ ಆಸಾಮಿಗಳ ಹೆಸರು ವಿಳಾಸವನ್ನು ವಶಕ್ಕೆ ಪಡೆದವರಿಂದ ತಿಳಿಯಲಾಗಿ 3] ಚನ್ನಕೃಷ್ಣ   ಎಂ ಬಿನ್ ಸಿ.ಬಿ ರಾಮಪ್ಪ, ವಕ್ಕಲಿಗರು,ಜಿರಾಯ್ತಿ, ವಾಸ ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  4] ಮುರಳಿ  ಬಿನ್ ಲೇಟ್ ಚನ್ನಪ್ಪ, ವಕ್ಕಲಿಗರು,ಜಿರಾಯ್ತಿ, ವಾಸ ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ,5] ಲೋಕೇಶ ಬಿನ್  ಸಿ.ಬಿ ರಾಮಪ್ಪ, ವಕ್ಕಲಿಗರು,ಜಿರಾಯ್ತಿ, ವಾಸ ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 6] ಮಂಜುನಾಥ ಬಿನ್ ಲೇಟ್ ನರಸಿಂಹಪ್ಪ, ವಕ್ಕಲಿಗರು, ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು, 7] ಚೇತನ್ ಬಿನ್ ಮುನಿಕೃಷ್ಣಪ್ಪ, ದೋಬಿ ಜನಾಂಗ ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು 8] ರಂಜಿತ್ ಬಿನ್ ಗಣೇಶಪ್ಪ, ಪ.ಜಾತಿ, ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು 9] ಮುರಳಿ ಬಿನ್ ಮುನಿಕೃಷ್ಣಪ್ಪ, ನಾಯಕರು, ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ, ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಇಬ್ಬರು  ಆಸಾಮಿಗಳನ್ನು ವಶಕ್ಕೆ ಪಡೆದಿರುತ್ತಾರೆ ಮತ್ತು ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆ, ಒಂದು ನೀಲಿ ಬಣ್ಣದ ಪ್ಲಾಸ್ಟಿಕ್  ಪೇಪರ್ ಮತ್ತು ಪಣಕ್ಕಾಗಿ ಇಟ್ಟಿದ್ದ 2560-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 5.00 ಗಂಟೆಯಿಂದ 6.00 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು , ಇಬ್ಬರು ಆರೋಪಿಗಳನ್ನು  ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ ಬಂದು ಠಾಣಾ ಮೊ.ಸಂ. 321/2018 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿರುತ್ತೇನೆ.