ದಿನಾಂಕ : 03/02/2019ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.21/2019 ಕಲಂ: ಮನುಷ್ಯ ಕಾಣೆ:-

     ದಿನಾಂಕ: 02/02/2019 ರಂದು ಸಂಜೆ 6-45 ಗಂಟೆಗೆ ಪಿರ್ಯಾದಿಯಾದ ಭಾರತಮ್ಮ ಕೋಂ ಆವಲಪ್ಪ 40 ವರ್ಷ, ಗೊಲ್ಲರು, ಕೂಲಿ ಕೆಲಸ ವಾಸ ದೊಡ್ಡಮುದ್ದೇನಹಳ್ಳಿ ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆಮ ದಿನಾಂಕ: 21/12/2018 ರಂದು ಬೆಳಿಗ್ಗೆ ನಮ್ಮ ಗ್ರಾಮದಿಂದ 9-00 ಗಂಟೆಯ ಮನೆಯಲ್ಲಿ ನನಗೆ ಹೇಳಿ ಚಿಕ್ಕಬಳ್ಳಾಪುರ ನ್ಯಾಯಾಲಯಕ್ಕೆ ಕೇಸ್ ಗೆ ಬಂದಿದ್ದು, ನನ್ನ ಗಂಡನಾದ ಆವಲಪ್ಪ ಬಿನ್ ಲೇಟ್ ರೆಡ್ಡಪ್ಪ ಇದುವರೆವಿಗೂ ಮನೆಗೆ ಬಂದಿಲ್ಲ ಎಷ್ಟು ಹುಡಿಕಿದರೂ ಸಿಕ್ಕಲಿಲ್ಲ. ಕೋರ್ಟ್ ಹತ್ತಿರ ಬಂದು ಲಾಯರ್ ನನ್ನು ಕೇಳಲಾಗಿ ನಿನ್ನ ಗಂಡ ಬಂದಿದ್ದ, ಊರಿಗೆ ಹೋಗುತ್ತೇಂದು ಹೋದ ಎಂದು ತಿಳಿಸಿದರು. ಆದ್ದರಿಂದ ತಾವು ದಯವಿಟ್ಟು ಮೇಲ್ಕಂಡ ಆವಲಪ್ಪನನ್ನು ಹುಡಿಕಿಕೊಡಬೇಕಾಗಿ ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

2) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.22/2019 ಕಲಂ: 78(ಸಿ) ಕೆ.ಪಿ. ಆಕ್ಟ್:-

     ದಿನಾಂಕ: 03/02/2019 ರಂದು 15-30 ಗಂಟೆಗೆ ಪಿ.ಎಸ್.ಐ ವರುಣ್ ಕುಮಾರ್ ಎಂ.ಆರ್. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 03-02-2019 ರಂದು 13-00 ಗಂಟೆಯಲ್ಲಿ ನಾನು ಅಪರಾದ ಸಿಬ್ಬಂದಿಯವರಾದ ಹೆಚ್.ಸಿ. 48 ದಿನೇಶ್, ಪಿ.ಸಿ. 138 ಮುರಳೀರವರೊಂದಿಗೆ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯ ಜೂನಿಯರ್ ಕಾಲೇಜಿನ ಗೇಟಿನ ಮುಂಭಾಗ ಸಾರ್ವಜನಿಕ ಸ್ಥಳವಾದ ಪುಟ್ ಪಾತ್ ನಲ್ಲಿ  ಯಾರೋ ಆಸಾಮಿಯು ಹಣವನ್ನು ಪಣವಾಗಿಟ್ಟು ಅಂಕಿ ಸಂಖ್ಯೆಗಳಿಂದ ಮಟ್ಕಾ ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿ ಬಂದಿದ್ದು ಘನ ಪಿ.ಸಿ.ಜೆ. ಮತು ಜೆ.ಎಂ.ಎಫ್.ಸಿ. ಚಿಕ್ಕಬಳ್ಳ್ಳಾಪುರ ನ್ಯಾಯಾಲಯದಿಂದ ದಾಳಿಯನ್ನು ಮಾಡಲು ಅನುಮತಿಯನ್ನು ಪಡೆದುಕೊಂಡು ಪಂಚರನ್ನು ಠಾಣೆಗೆ ಕರೆಯಿಸಿಕೊಂಡು ಪಂಚರಿಗೆ ಮತ್ತು ಚಿಕ್ಕಬಳ್ಳಾಪುರ ನಗರ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ. 48 ದಿನೇಶ್,  ಪಿ.ಸಿ. 138 ಮುರಳಿ ಮತ್ತು ಚಾಲಕ ಎ.ಪಿ.ಸಿ. 131 ಅಲೀಂ ಪಾಷ ರವರೊಂದಿಗೆ ಸಕರ್ಾರಿ ವಾಹನ ಕೆ.ಎ. 40-ಜಿ-139 ರಲ್ಲಿ ಠಾಣೆಯನ್ನು ಮಧ್ಯಾಹ್ನ 13-30 ಗಂಟೆಗೆ ಬಿಟ್ಟು  ಪೊಲೀಸ್ ವೃತ್ತ, ನ್ಯಾಯಾಲಯದ ವೃತ್ತ, ಬಾಗೇಪಲ್ಲಿ ವೃತ್ತಕ್ಕೆ ಬಂದು ಬಿ.ಬಿ.ರಸ್ತೆಯಲ್ಲಿ ಜೂನಿಯರ್ ಕಾಲೇಜು ಆಚರ್್ ಬಳಿ  ವಾಹನವನ್ನು ನಿಲ್ಲಿಸಿ 14-00 ಗಂಟೆಯಲ್ಲಿ ಮರೆಯಲ್ಲಿ ನಿಂತು ಕೊಂಡು ನೋಡಲಾಗಿ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯ ಜೂನಿಯರ್ ಕಾಲೇಜಿನ ಗೇಟಿನ ಮುಂಭಾಗ ಸಾರ್ವಜನಿಕ ಸ್ಥಳವಾದ ಪುಟ್ ಪಾತ್ ನಲ್ಲಿ  ಯಾರೋ ಒಬ್ಬ ಆಸಾಮಿಯು ನಿಂತಿದ್ದು, ಎಡಗೈನಲ್ಲಿ ಒಂದು ಚೀಟಿಯಲ್ಲಿ ಬರೆಯುತ್ತಿರುತ್ತಾನೆ. ಸದರಿ ಸ್ಥಳವು ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯಿಂದ ಪೂರ್ವಕ್ಕೆ ಜೂನಿಯರ್ ಕಾಲೇಜಿಗೆ ಹೋಗಲು ರಸ್ತೆಯಾಗಿರುತ್ತೆ. ಸದರಿ ರಸ್ತೆಯು ಟಾರ್ ರಸ್ತೆಯಾಗಿರುತ್ತೆ. ನಾನು ಮತ್ತು ಸಿಬ್ಬಂದಿಯವರು ನಿಂತಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಮಹಬೂಬ್ @ ಬಾಬು ಬಿನ್ ಫಕೃದ್ದೀನ್, 32 ವರ್ಷ, ಮುಸ್ಲೀಮರು, ಕೂಲಿ ಕೆಲಸ, ವಾಸ ಕೇಶವರೆಡ್ಡಿರವರ ಮನೆಯ ಹತ್ತಿರ, ಪೆರೇಸಂದ್ರ ಗ್ರಾಮ, ಮಂಡಿಕಲ್ ಹೋಬಳಿ , ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಆರೋಪಿಯನ್ನು ಪಂಚರ ಜಡ್ತಿಯನ್ನು ಮಾಡಲಾಗಿ 1) 1590/- ನಗದು ಹಣ, 2) 1 ಮಟ್ಕಾ ಚೀಟಿ, 3) ಒಂದು ಬಾಲ್ ಪೆನ್ನು ದೊರೆತಿದ್ದು ಆಸಾಮಿಯು ಹಣವನ್ನು ಪಣವಾಗಿಟ್ಟು ಅಂಕಿ ಸಂಖ್ಯೆಗಳಿಂದ ಮಟ್ಕಾ ಜೂಜಾಟವನ್ನು ಆಡುತ್ತಿರುತ್ತಾನೆ. ಆಸಾಮಿಯನ್ನು ಮತ್ತು ಮಾಲುಗಳನ್ನು 14-15 ಗಂಟೆಯಿಂದ 15-15 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆಸಾಮಿಯನ್ನು, ಮಾಲು ಮತ್ತು ಪಂಚನಾಮೆಯನ್ನು ಹಾಗೂ ನ್ಯಾಯಾಲಯದ ಅನುಮತಿಯನ್ನು 15-30 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು ಆಸಾಮಿಯ ವಿರುದ್ದ ಕಲಂ 78(3) ಕೆ.ಪಿ.ಆಕ್ಟ್ ರೀತ್ಯ  ಕ್ರಮ ಕೈಗೊಳ್ಳಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.20/2019 ಕಲಂ: 454-380 ಐ.ಪಿ.ಸಿ:-

     ದಿನಾಂಕ:02-02-2019 ರಂದು ಸಂಜೆ 05-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀರಾಮರೆಡ್ಡಿ.ಇ ಬಿನ್ ಲೇಟ್ ಈರಪ್ಪ, 75 ವರ್ಷ, ವಕ್ಕಲಿಗರು, ಜಿರಾಯ್ತಿ, ಯಗವ ಹೊಸಹುಡ್ಯ ಗ್ರಾಮ , ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:02-02-2019 ರಂದು ಸಾಯಂಕಾಲ ಸುಮಾರು 04-30 ಗಂಟೆಯ ಸಮಯದಲ್ಲಿ ತಾನು ನಮ್ಮ ಜಮೀನಿನ ಬಳಿ ಇದ್ದಾಗ , ತಮ್ಮ ಗ್ರಾಮದವರಾದ ಶ್ರೀನಿವಾಸ, ಸುಬ್ಬಾರೆಡ್ಡಿ ರವರು ತಮ್ಮ ಜಮೀನ ಬಳಿ ಬಂದರು. ನಾವೆಲ್ಲರೂ ತಮ್ಮ ಜಮೀನ ಬಳಿ ಇರುವ ಹುಣಸೇ ಮರದ ಕೆಳಗೆ ಕುಳಿತುಕೊಂಡು ಮಾತನಾಡಿಕೊಳ್ಳುತ್ತಿರುವಾಗ,  ತಮ್ಮ ಊರಿನ ಕಡೆಯಿಂದ ತೋಟದ ಕಡೆಗೆ ಬರುವ ದಾರಿಯಲ್ಲಿ ಯಾರೋ 3 ಜನ ಒಂದು ದ್ವಿಚಕ್ರ ವಾಹನದಲ್ಲಿ  ಬಂದು ತಮ್ಮ ಗ್ರಾಮದ ಮಾರಕಮ್ಮ ದೇವಸ್ಥಾನದ ಬಳಿ ಬಂದು ನಿಲ್ಲಿಸಿ, 3 ಜನರೂ ದೇವಸ್ಥಾನದ ಬಳಿ ಹೋದರು. ಆಗ ತಾವು ತಮ್ಮ ದೇವಸ್ಥಾನದಲ್ಲಿ  3 ತಿಂಗಳು ಹಿಂದೆ ಕಳ್ಳತನ ವಾಗಿತ್ತು , ಯಾರೋ ಕಳ್ಳರು ಇರಬಹುದೆಂದು  ಊಹಿಸಿ ತಾವು ದೇವಸ್ಥಾನದ ಬಳಿ ಹೋಗವಷ್ಠರಲ್ಲಿ ಕಳ್ಳರು  ದೇವಸ್ಥಾನದ ಬಾಗಿಲು ಬೀಗ ಮೀಟಿ ಬಾಗಿಲು ತೆಗೆದು ಒಳಗಡೆ ಹೋಗಿ ಕಬ್ಬಿಣದ ರಾಡ್ ನಿಂದ ಹುಂಡಿಯನ್ನು ಹೊಡೆದು ಅದರಲ್ಲಿದ್ದ ಹಣವನ್ನು ಅವರ ಬ್ಯಾಗ್ನಲ್ಲಿ ಹಾಕಿಕೊಂಡಿದ್ದರು. ತಮ್ಮನ್ನು ನೋಡಿ ಒಬ್ಬ ಕಳ್ಳ ಓಡಿ ಹೋದರು. ಉಳಿದ ಇಬ್ಬರನ್ನು ತಾವು ಹಿಡಿದುಕೊಂಡು ತಾವು ಕಳ್ಳರೆಂದು ಕಿರಿಚಿಕೊಂಡೆವು ಶಬ್ದ ಕೇಳಿ  ತಮ್ಮ ಗ್ರಾಮದ ಗ್ರಾಮಸ್ಥರು ಎಲ್ಲರೂ ಬಂದು ಇಬ್ಬರನ್ನು ಕಟ್ಟಿ ಹಾಕಿ ಪೊಲೀಸ್ ರಿಗೆ ಮಾಹಿತಿ ತಿಳಿಸಿದೆವು. ಹೆಸರು ವಿಳಾಸ ಕೇಳಲಾಗಿ 1)ಮಂಜು ಬಿನ್ ಲೇಟ್ ಮುನಿರಾಮು, 28 ವರ್ಷ, ಬಲಿಜ ಶೇಟ್ಟಿ, ಅಟೋ ಚಾಲಕ, ಬನಶಂಕರಿ, ಬೆಂಗಳೂರು, 2)  ಮುನಿರಾಜ ಬಿನ್ ಪಟಾಲಪ್ಪ, 48 ವರ್ಷ, ಕೊರಚ, ತಿಪ್ಪೂರಹಳ್ಳಿ, (ಹಣಬೆ ಗ್ರಾಮದ ಬಳಿ , ದೊಡ್ಡಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು. ಓಡಿ ಹೋದವನ ಹೆಸರು ಮತ್ತು ವಿಳಾಸ ಗೊತ್ತಿಲ್ಲ. ಅವರು ತಂದಿದ್ದ ದ್ವಿಚಕ್ರ ವಾಹನ ನೋಡಲಾಗಿ ಕೆಎ-03 ಹೆಚ್,ಎನ್-776 ಡಿಸ್ಕವರಿ ದ್ವಿಚಕ್ರ ವಾಹನವಾಗಿರುತ್ತೆ. ಅವರ ಬಳಿ ಇದ್ದ 2 ಕಬ್ಬಿಣ್ಣದ ರಾಡ್ ಗಳು ಹಾಗೂ ಒಂದು ಚಿಕ್ಕ ಬ್ಯಾಟರಿ ಇರುತ್ತೆ. ಕಳ್ಳತನವನ್ನು ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

4) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.11/2019 ಕಲಂ: 143-147-148-149-323-324-504-506 ಐ.ಪಿ.ಸಿ:-

     ದಿನಾಂಕ 02-02-2019 ರಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು  ಗಿರೀಶ್ ಬಿನ್ ಬೈರಾರೆಡ್ಡಿ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ  ನಮ್ಮ ಗ್ರಾಮದ ಕೃಷ್ಣಪ್ಪ ಬಿನ್ ದ್ಯಾವಪ್ಪ  ರವರ ತಂಗಿ ನಂದಿನಿ ಈಗ್ಗೆ 3 ದಿನಗಳ ಹಿಂದೆ ನಮ್ಮೂರಿನ ಮಂಜುನಾಥ ಎಂಬುವನ ಜೊತೆಯಲ್ಲಿ ಹೊರಟುಹೋಗಿದ್ದರು  ತಾನು ದಿನಾಂಕ 01-02-2019 ರಂದು ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿ  ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿದ್ದಾಗ   ನಮ್ಮ ಗ್ರಾಮದ ಕೃಷ್ಣಪ್ಪ ಬಿನ್ ದ್ಯಾವಪ್ಪ ರವರು ನನಗೆ  ಹೇಮಂತನ ಮೋಬೈಲಿನಿಂದ ಕರೆ ಮಾಡಿ ನನಗೆ ಕೆವಿ ಕ್ಯಾಂಪಸ್ ಬಳಿ ಇರುವ ಗೋಲ್ಟನ್ ಬಾರ್ ಬಳಿ ಬರುವಂತೆ  ಹೇಳಿದನು , ನಾನು ಅಲ್ಲಿಗೆ ಬಂದಾಗ   ನಮ್ಮೂರಿನ ಕೃಷ್ಣಪ್ಪ ,ಸೂಜಿ , ಪ್ರವೀಣ್  ಮದು ಹೇಮಂತ  ರವರುಗಳಿದ್ದು ಆ ಪೈಕಿ ಕೃಷ್ಣಪ್ಪ ಎಂಬುವನು ನನ್ನನ್ನು ಕುರಿತು ಎನೋ ಬೋಳಿ ಮಗನೆ  ತನ್ನ ತಂಗಿ ಮಂಜುನಾಥನ ಜೊತೆಯಲ್ಲಿ ಹೊರಟು ಹೋಗಲು ನೀನು ಸಪೋರ್ಟ್ ಮಾಡಿರುತ್ತೀಯಾ ಎಂದು ಅವಾಚ್ಯವಾಗಿ ಬೈದು  ಕೈಯಿಂದ  ಎಡಬಾಗದ ಭುಜಕ್ಕೆ ಹೊಡೆದು ಎಡಕೈಯನ್ನು ತಿರುಗಿಸಿದನು, ನಂತರ ನಿನ್ನ ಜೊತೆಯಲ್ಲಿದ್ದ ಸತೀಶ  ಮತ್ತು ಹರೀಶ ನನ್ನು ಕರೆಸುವಂತೆ  ಪ್ರಾಣ ಬೆದರಿಕೆಯನ್ನು ಹಾಕಿದನು,  ನಾನು ಅವರಿಬ್ಬರಿಗೂ ಕರೆ ಮಾಡಿದಾಗ  ಅವರಿಬ್ಬರೂ ಬಂದರು, ಅವರಿಬ್ಬರಿಗೂ ಕೃಷ್ಣಪ್ಪ ಅವಾಚ್ಯವಾಗಿ ಬೈದು ಕೈಯಿಂದ ಸತೀಶನ ಕತ್ತಿಗೆ ಹೊಡೆದಾಗ ಅವನು ಕೆಳಕ್ಕೆ ಬಿದ್ದಿರುತ್ತಾನೆ. ಹರೀಶನಿಗೆ ಕೃಷ್ಣಪ್ಪನು ಕೋಲಿನಿಂದ ತಲೆಗೆ ಎಡಕೈ ಮೊಣಕೈಗೆ ಹೊಡೆದು  ಗಾಯಗಳನ್ನುಂಟು ಮಾಡಿದನು, ಉಳಿದವರು ಇಬ್ಬರಿಗೂ ಹೊಡೆದಿರುತ್ತಾರೆ, ಓಡಿ ಹೋದವರ ಬಗ್ಗೆ ತಿಳಿಸದೇ ಹೋದರೆ ಮೂರು  ಜನರನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ, ಇವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ  ನೀಡಿದ ದೂರನ್ನು ಪಡೆದುಕೊಂಡು ಠಾಣೆಗೆ 6-00 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲು ಮಾಡಿರುತ್ತೇನೆ,

5) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.11/2019 ಕಲಂ: 323-324-504-506 ಐ.ಪಿ.ಸಿ:-

     ದಿನಾಂಕ: 02-02-2019 ಸಂಜೆ 5.00 ಗಂಟೆಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಸರ್ಕಾರಿ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿದ್ದ ಶ್ರೀ ಎ. ಬಾಬು ಬಿನ್ ಹಜಮುದ್ದೀನ್ ರವರ ಹೇಳಿಕೆ ಪಡೆದು ಸಂಜೆ 6.00 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ತಾನು ರೇಷ್ಮೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ತನಗೆ ಪರಿಚಯವಿರುವ ಮುನಿರೆಡ್ಡಿ ಬಿನ್ ಲೇಟ್ ಮುನಿಶಾಮಪ್ಪ ರವರ ಬಳಿ ಈಗ್ಗೆ 12 ವರ್ಷಗಳ ಹಿಂದೆ ಕೈ ಬದಲಿಗೆ 40,000-00 ರೂ ಹಣವನ್ನು ಪಡೆದುಕೊಂಡಿದ್ದು ಸದರಿ ಹಣವನ್ನು ವಾಪಸ್ಸು ಕೊಡಲು ಸಾದ್ಯವಾಗಿರುವುದಿಲ್ಲ, ಹೀಗಿದ್ದು ದಿನಾಂಕ: 02-02-2019 ರಂದು ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ತಾನು ಹಾಗೂ ಆಸೀಪ್ ಬಿನ್ ಅಕ್ಮಲ್ ಪಾಷಾ ರವರು ತನ್ನ ದ್ವಿಚಕ್ರ ವಾಹನದಲ್ಲಿ ದಿಬ್ಬೂರಹಳ್ಳಿ ಕಡೆಗೆ ಹೋಗಿ ರೇಷ್ಮೆ ಗೂಡನ್ನು ನೋಡಿಕೊಂಡು ಮತ್ತೆ ವಾಪಸ್ಸು ಶಿಡ್ಲಘಟ್ಟಕ್ಕೆ ಬರುತ್ತಿದ್ದಾಗ ವರದನಾಯಕನಹಳ್ಳಿ ಗೇಟ್ ನಲ್ಲಿದ್ದ ಮುನಿರೆಡ್ಡಿ ರವರು ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹಣವನ್ನು ಕೇಳಿದ್ದು ತಾನು ಕೊಡುತ್ತೇನೆ ಎನ್ನುವಷ್ಟರಲ್ಲಿ ಮುನಿರೆಡ್ಡಿ ರವರು ಏಕಾ ಏಕಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಯಾವುದೋ ಒಂದು ಗಾಜಿನ ಬಾಟಲ್ ತೆಗೆದುಕೊಂಡು ನನ್ನ ತಲೆಯ ಎಡಭಾಗಕ್ಕೆ ಹೊಡೆದು ಗಾಯವುಂಟುಮಾಡಿ ನನ್ನ ಹಣ ಕೊಡದಿದ್ದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿದ್ದು, ಗಾಯಗೊಂಡಿದ್ದ ತನ್ನನ್ನು ಆಸೀಪ್ ರವರು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುವುದಾಗಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಗಾಯಗೊಳಿಸಿರುವ ಮುನಿರೆಡ್ಡಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.