ದಿನಾಂಕ : 03/01/2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ  ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.323-324-504-506 ರೆ/ವಿ 34  ಐ.ಪಿ.ಸಿ:-

     ದಿನಾಂಕ:02/01/2019 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲಕ್ಷ್ಮೀನರಸಮ್ಮ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಮ್ಮ ಗ್ರಾಮದ ಸರ್ವೇ ನಂಬರ್  72ರ  ಜಮೀನಿನ ವಿಚಾರದಲ್ಲಿ ನಮಗೂ ನಮ್ಮ ಗ್ರಾಮದ ವಾಸಿ  ನಂಜುನಂಡಪ್ಪ ರವರಿಗೂ ಈ ಹಿಂದೆ ಗಲಾಟೆಗಳಾಗಿರುತ್ತೆ, ದಿನಾಂಕ:02/01/2019  ರಂದು ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ  ನಮ್ಮ ಗ್ರಾಮದ ನಂಜುಂಡಪ್ಪ ರವರು ಸರ್ವೇ ನಂಬರ್  72ರ  ಜಮೀನಿನಲ್ಲಿ ಜೆ.ಸಿ.ಬಿ.ಯಿಂದ  ಕೆಲಸ ಮಾಡಿಸುತ್ತಿದ್ದಾಗ ನಾನು ಸದರಿ ಜೆ.ಸಿ.ಬಿ.  ಯ ಬಳಿ ಹೋಗಿ ಈ ಜಮೀನಿನಲ್ಲಿ ನಮಗೂ ಸಹ ಭಾಗ ಇದೆ ಕೆಲಸ ಮಾಡಬಾರದೆಂದು ಹೇಳಿ ಜೆ.ಸಿ.ಬಿ.ಗೆ ಅಡ್ಡ ಹೋಗಿದ್ದಕ್ಕೆ ಅಲ್ಲಿಯೇ ಇದ್ದ ನಂಜುಂಡಪ್ಪ ರವರ ಮಗನಾದ ಮಧುರವರು ಬಂದು ನನ್ನ ಕತ್ತನ್ನು ಹಿಡಿದುಕೊಂಡು ಕೈಗಳಿಂದ ಮೈಮೇಲೆ ಹೊಡೆದಿರುತ್ತಾನೆ. ಹಾಗೂ ನಂಜುಂಡಪ್ಪ ರವರ ದೊಡ್ಡ ಮಗನಾದ ಗಂಗರಾಜು ರವರು ಬಂದು ನನ್ನನ್ನು ಕೆಳಗೆ ತಳ್ಳಿರುತ್ತಾನೆ. ನಾನು ಜೋರಾಗಿ ಕೂಗಿಕೊಳ್ಳುತ್ತಿದ್ದಾಗ ರಂಗಮ್ಮ ಕೋಂ ನಂಜುಂಡಪ್ಪ ರವರು ಬಂದು ನನಗೆ ಲೇ ಲೋಫರ್ ಮುಂಡೆ ಇತ್ಯಾದಿಯಾಗಿ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದಿರುತ್ತಾರೆ. ನಂಜುಂಡಪ್ಪರವರು ಅಲ್ಲಿಯೇ ಇದ್ದ ಚೂಪಾದ ಕಟ್ಟಿಗೆಯಿಂದ  ನನ್ನ ಕುತ್ತಿಗೆಯ ಕೆಳಗೆ ಬಲಗೈ ಭುಜದ ಮೇಲೆ  ಹಾಗೂ ಬಲಗೈನ ಮೊಣಕೈ ಮೇಲ್ಭಾಗ ಕೆಳಭಾಗದಲ್ಲಿ ಹೊಡೆದು ರಕ್ತ ಗಾಯಗಳನ್ನು ಉಂಟು ಮಾಡಿರುತ್ತಾರೆ.ಮಧು ರವರು ಅಲ್ಲಿಯೇ ಇದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ಬಲಭಾಗ ಭುಜಕ್ಕೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾನೆ. ಇನ್ನು ಮುಂದೆ ಈ ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿಬಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ನಾನು ಗಾಬರಿಯಿಂದ ಮನೆಗೆ  ಓಡಿ ಬಂದು ನಮ್ಮ ಗ್ರಾಮದಲ್ಲಿದ್ದ ಆಟೋದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ನನ್ನನ್ನು ಹೊಡೆದು ರಕ್ತ ಗಾಯಗಳನ್ನು ಪಡಿಸಿದ ಮೇಲ್ಕಂಡವರ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಕೋರಿ ಕೊಟ್ಟ ದೂರು

2) ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.279-337  ಐ.ಪಿ.ಸಿ:-

     ದಿನಾಂಕ 02/01/2019 ರಂದು ಸಂಜೆ 04 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಗೋವಿಂದಾಚಾರಿ ಬಿನ್ ದೊಡ್ಡಕೃಷ್ಣಾಚಾರಿ,ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ; 01-01-2019 ರಂದು ತಮ್ಮ ತಂದೆಯಾದ ದೊಡ್ಡಕೃಷ್ಣಾಚಾರಿ ಬಿನ್ ಲೇಟ್ ಮುನಿಯಾಚಾರಿ ರವರು ಹಾಲು ತೆಗೆದುಕೊಂಡು ಹಾಲಿನ ಡೈರಿಗೆ ಹೋಗುತ್ತಿದ್ದಾಗ ಅಪಘಾತವಾಗಿದ್ದು, ಈ ವಿಚಾರ ಮಾಜಿ ಗ್ರಾಮ ಪಂಚಾಯ್ತಿ ಅದ್ಯಕ್ಷರಾದ ಗೋಪಾಲಕೃಷ್ಣ ಬಿನ್ ಅಶ್ವತ್ಥಪ್ಪ ರವರು ತನಗೆ ಮಾಹಿತಿ ತಿಳಿಸಿದ್ದು, ತಾನು ಅಪಘಾತ ಸ್ಥಳಕ್ಕೆ ಹೋಗಿದ್ದು, ಗೋಪಾಲಕೃಷ್ಣ ರವರು ಗಾಯಾಳುವಾದ ತನ್ನ ತಂದೆಯನ್ನು ಉಪಚರಿಸುತ್ತಿದ್ದರು. ಆ ಸಮಯಕ್ಕೆ ಚಿಕ್ಕಬಳ್ಳಾಪುರದಿಂದ ಬಂದ ಆಂಬುಲೆನ್ಸ್ ವಾಹನದಲ್ಲಿ ಗಾಯಾಳುವಾದ ತಂದೆ ದೊಡ್ಡಕೃಷ್ಣಾಚಾರಿರವರನ್ನು   ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತೇನೆ. ನಂತರ ವೈದ್ಯರ ಸಲಹೆಯ ಮೇರೆಗೆ ಅದೇ ದಿನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು. ಅಲ್ಲಿ ಚಿಕಿತ್ಸೆ ಕೊಡಿಸಿ ನಿಮಾನ್ಸ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಕೊಡಗೇಹಳ್ಳಿ ಗೇಟ್ ಬಳಿ ಇರುವ ಹಾಸ್ಟರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಾಂಕ; 01-01-2019 ರಂದು ತಮ್ಮ ತಂದೆ ದೊಡ್ಡಕೃಷ್ಣಾಚಾರಿರವರು ಹಾಲನ್ನು ಡೈರಿಗೆ ಹಾಕಲು ಹಾಲಿನ ಕ್ಯಾನ್ ತೆಗೆದುಕೊಂಡು ಚಿಕ್ಕಬಳ್ಳಾಪುರ-ಗೌರಿಬಿದನೂರು ಎನ್.ಹೆಚ್-234 ರಸ್ತೆಯಲ್ಲಿ ಸಂಜೆ ಸುಮಾರು 4.30 ಗಂಟೆ ಸಮಯದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅದ್ಯಕ್ಷರಾದ ಗೋಪಾಲಕೃಷ್ಣ ರವರ ಮನೆಯ ಸಮೀಪ ಇರುವ ನೀರಿನ ತೊಟ್ಟಿಯ ಬಳಿ ತಿಪ್ಪೇನಹಳ್ಳಿ ಗ್ರಾಮದ ಕಡೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ಮಂಚೇನಹಳ್ಳಿ ಕಡೆಯಿಂದ ಕೆ.ಎ-01-ಇ.ಇ-3809 ದ್ವಿ-ಚಕ್ರವಾಹನವನ್ನು ಅದರ ಸವಾರನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ಹಾಲು ತೆಗೆದುಕೊಂಡು ಬರುತ್ತಿದ್ದ ತಮ್ಮ ತಂದೆಯವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿಸಿ ಅಪಘಾತ ಉಂಟು ಮಾಡಿರುತ್ತಾನೆ. ಇದರಿಂದ ತಮ್ಮ ತಂದೆಯವರು ರಸ್ತೆಯಲ್ಲಿ ಬಿದ್ದು ಹೋಗಿ ಹಣೆಗೆ, ಕೈಕಾಲುಗಳಿಗೆ, ಬಲಭಾಗದ ಸೊಂಟಕ್ಕೆ ಇತರೆ ಕಡೆಗೆ ಗಾಯಗಳಾಗಿರುತ್ತೆ. ಅಪಘಾತ ಮಾಡಿದ ದ್ವಿ-ಚಕ್ರವಾಹನ ಸವಾರನ ಹೆಸರು ವಿಳಾಸ ತಿಳಿದು ಬಂದಿಲ್ಲ. ಈ ಅಪಘಾತಕ್ಕೆ ದ್ವಿ-ಚಕ್ರವಾಹನ ಸವಾರನು ವೇಗವಾಗಿ ಚಲಾಯಿಸಿರುವುದೆ ಕಾರಣವಾಗಿರುತ್ತೆ. ತಮ್ಮ ತಂದೆಯವರಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ದಿನಾಂಕ; 02-01-2019 ರಂದು ತಡವಾಗಿ ಬಂದು ದೂರು ಕೊಟ್ಟಿರುತ್ತೇನೆ. ಅಪಘಾತಕ್ಕೆ ಕಾರಣನಾದ ಮೇಲ್ಕಂಡ ದ್ವಿ-ಚಕ್ರವಾಹನ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

3) ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.143-144-147-148-323-324-504-506 ರೆ/ವಿ 149 ಐ.ಪಿ.ಸಿ:-

     ದಿನಾಂಕ; 02-01-2018 ರಂದು ಸಂಜೆ 4.30 ಗಂಟೆಗೆ ಗಾಯಾಳು ರವಿಕುಮಾರ್ ಬಿನ್ ಶ್ರೀನಿವಾಸ, 29 ವರ್ಷ, ಗೊಲ್ಲರು, ಬಿತ್ತನೆ ಬೀಜಗಳ ವ್ಯಾಪಾರ ವಾಸ: ಸುಲ್ತಾನ ಪೇಟೆ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ತಾನು ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ಕಾಡು ಜಾತಿಯ ಗಿಡ-ಮರಗಳ ಬೀಜಗಳನ್ನು ಗ್ರಾಮಗಳಲ್ಲಿ ಖರೀದಿಸಿ ಮಾರಾಟ ಮಾಡುತ್ತಿರುತ್ತೇನೆ. ತಾನು ಒಂದು ವಾರದ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕು ಮೋಟ್ಲೂರು ಗ್ರಾಮದಲ್ಲಿರುವ ತಮ್ಮ ಮಾವನಾದ ಮುನಿರಾಜು ಬಿನ್ ನರಸಪ್ಪ, ತೋಟದ ಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ; 31-12-2018 ರಂದು ತಾನು, ಜಗದೀಶ ಬಿನ್ ಶ್ರೀನಿವಾಸ, ಮೋಹನ್ ಬಿನ್ ನರಸಿಂಹಮೂರ್ತಿ, ಶ್ರೀಕಾಂತ ಬಿನ್ ಮುನಿರಾಜು, ಪುನಿತ್ ಬಿನ್ ಬಾಬು, ವೆಂಕಟೇಶ್ ಬಿನ್ ನಾಗರಾಜು ರವರು ಸೇರಿಕೊಂಡು ಹೊಸವರ್ಷದ ಆಚರಣೆ ಸಲುವಾಗಿ ತಲಾ 300/- ರೂಗಳನ್ನು ಹಾಕಿಕೊಂಡು ರಾತ್ರಿ 9.00 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಬಂದು ಚಿಕ್ಕಬಳ್ಳಾಪುರದಲ್ಲಿ ಕೇಕ್, ಕಬಾಬ್, ಎಗ್ ರೈಸ್ ಪಾರ್ಸೆಲ್ ತೆಗೆದುಕೊಂಡು ರಾತ್ರಿ ಸುಮಾರು 10.30 ಗಂಟೆಗೆ ವಾಪಸ್ಸು ಮೋಟ್ಲೂರು ಗ್ರಾಮದ ತಮ್ಮ ಮಾವ ಮುನಿರಾಜು ರವರ ಜಮೀನು ಬಳಿ ಹೋಗಿ ಕೇಕನ್ನು ಕತ್ತರಿಸಿ ಹೊಸವರ್ಷ, ಆಚರಣೆ ಮಾಡಿ ಅಲ್ಲಿಯೇ ಊಟ ಮಾಡಿದೆವು. ರಾತ್ರಿ ಸುಮಾರು 1.30 ಗಂಟೆ ಸಮಯಕ್ಕೆ ಮೋಟ್ಲೂರು ಗ್ರಾಮದ ಅರುಣ್ ರವರು ತಮ್ಮನ್ನು ಗೋವರ್ಧನ್ ಲೇ ಔಟ್ ಬಳಿ ಇರುವ ಎಸ್ಟೇಟ್ ಬಳಿ ಊಟ ಮಾಡಲು ಕರೆದರು ತಾನು, ಜಗದೀಶ, ಮೋಹನ್ ರವರು ವೆಂಕಟೇಶ್, ಪುನೀತ್ ಅಲ್ಲಿಗೆ ಹೋಗಿ ಊಟ ಮಾಡಿದೆವು. ನಂತರ ಸುಮಾರು 3.00 ಗಂಟೆ ಸಮಯದಲ್ಲಿ ನಾವುಗಳು ಊಟ ಮಾಡಿಕೊಂಡು ವಾಪಸ್ಸು ಬರುತ್ತಿದ್ದಾಗ ಗೋವರ್ದನ ಲೇ ಔಟ್ ನಲ್ಲಿ ಒಂದು ಬ್ಯಾಗ್ ಇಟ್ಟಿದ್ದು, ಆಗ ತನ್ನ ಜೊತೆಯಲ್ಲಿದ್ದ ಮೋಹನ್, ಅನಿಲ್ ಬಿನ್ ವೆಂಕಟೇಶಪ್ಪ ರವರಿಗೆ ಪೋನ್ ಮಾಡಿ ಇಲ್ಲಿ ಒಂದು ಬ್ಯಾಗ್ ಇಟ್ಟಿದ್ದೀರಿ ಎಂತ ಹೇಳಿದಾಗ ಅನಿಲ್ ನಮಗೆ ಆ ಬ್ಯಾಗನ್ನು ತೆಗೆದುಕೊಂಡು ಬರುವಂತೆ ತಿಳಿಸಿದನು. ಅದರಂತೆ ನಾವು ಬ್ಯಾಗನ್ನು ತೆಗೆದುಕೊಂಡು ಮೋಟ್ಲೂರು ರಸ್ತೆಯ ಕಡೆಗೆ ಬಂದಾಗ ಅಲ್ಲಿ ಅನಿಲ್ ಮತ್ತು ಆತನ ಜೊತೆಯಲ್ಲಿದ್ದ 5 ಜನರು ಅಲ್ಲಿ ಒಂದು ಕಾರನ್ನು ನಿಲ್ಲಿಸಿಕೊಂಡಿದ್ದರು. ಆಗ ಮೋಹನ್ ಬ್ಯಾಗ್ ತೆಗೆದುಕೊಂಡು ಕಾರಿನ ಬಳಿ ಹೋದಾಗ ಕಾರಿನಲ್ಲಿದ್ದ ಒಬ್ಬ ಆತನು, ಏ ನಿನ್ನಮ್ಮನ್ ನಿನ್ಯಾಕೆ ನನ್ನ ಬ್ಯಾಗು ತೆಗೆದುಕೊಂಡಿದ್ದೀಯಾ ಎಂತ ಅವಾಚ್ಯ ಶಬ್ದಗಳಿಂದ ಬೈದನು, ಆಗ ನಾವು ಸಮಾದಾನದಿಂದ ಯಾಕೆ ಈ ರೀತಿಯಾಗಿ ಬೈಯುತ್ತಿದ್ದಿಯಾ ಎಂತ ಕೇಳಿದಾಗ ಕಾರಿನಲ್ಲಿದ್ದವರು ಏಕಾಏಕಿ ಇಳಿದು ಬಂದು ನಮ್ಮ ಮೇಲೆ ಜಗಳ ತೆಗೆದು ಒಬ್ಬ ಆತನು ಚಾಕುವಿನಿಂದ ತನ್ನ ಎಡಭಾಗದ ಪಿರ್ರಿಯ ಮೇಲೆ 2 ಬಾರಿ ತಿವಿದು ರಕ್ತಗಾಯ ಪಡಿಸಿದನು.ಬಿಡಿಸಲು ಬಂದ ಜಗದೀಶನಿಗೆ ಅದೇ ಚಾಕುವಿನಿಂದ ಒಂದು ಬಾರಿ ತಿವಿದು ರಕ್ತ ಗಾಯಪಡಿಸಿದನು. ಅವರ ಜೊತೆಯಲ್ಲಿದ್ದ ಅನಿಲ್ ಹಾಗೂ ಒಬ್ಬನು ನಮ್ಮಗಳನ್ನು ಬೈದು ಈ ತನ್ನ ಮಕ್ಕಳನ್ನು ಮುಗಿಸಿ ಬಿಡಿ ಎಂತ ಪ್ರಾಣ ಬೆದರಿಕೆ ಹಾಕಿ,ಕೈಗಳಿಂದ ಹೊಡೆದು ಮೂಗೇಟುಗಳನ್ನು ಉಂಟು ಮಾಡಿದರು. ಮೋಟ್ಲೂರು ಗ್ರಾಮದ ಜಗದೀಶ್ ಮತ್ತು ಅನಿಲ್ ರವರಿಗೆ ಹಳೆಯ ದ್ವೇಷ ಮತ್ತು ವೈಷಮ್ಯಗಳು ಇದ್ದುದರಿಂದ ಅನಿಲ್ ರವರು ಆತನ ಸ್ನೇಹಿತರನ್ನು ಕರೆಯಿಸಿಕೊಂಡು ನಮ್ಮ ಮೇಲೆ ಗಲಾಟೆ ಮಾಡಿರುತ್ತಾನೆ. ನಮ್ಮನ್ನು ಹೊಡೆದವರ ಹೆಸರು ವಿಳಾಸ ಅನಿಲ್ ರವರಿಗೆ ತಿಳಿದಿರುತ್ತೆ. ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದೆ. ಗಾಯಗಳಾಗಿದ್ದ ತಾನು ಮತ್ತು ಜಗದೀಶ್ ರವರನ್ನು ನಮ್ಮ ಜೊತೆಯಲ್ಲಿದ್ದವರು ಯಾವುದೋ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ತಂದು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂತ ಕೋರಿ ನೀಡಿದ ಮೇರೆಗೆ ಈ ಪ್ರ.ವ.ವರದಿ.

4) ಚಿಂತಾಮಣಿ ನಗರ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.143-323-427-447-504-506 ರೆ/ವಿ 149 ಐ.ಪಿ.ಸಿ:-

     ಪಿರ್ಯಾದಿದಾರರಾದ ಗುರುನಾಥ ಬಿನ್ ಲೇಟ್ ನಾರಾಯಣಸ್ವಾಮಿ, ಮಾಳಪಲ್ಲಿ ಚಿಂತಾಮಣಿ ನಗರ ರವರು ದಿನಾಂಕ 12/07/2018 ರಂದು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನೂ ಚಿಂತಾಮಣಿ ನಗರದ ಮಾಳಪಲ್ಲಿ ಗ್ರಾಮದ ಸರ್ವೆ ನಂ 100 ರಲ್ಲಿ ಈಗ್ಗೆ 15 ವರ್ಷಗಳ ಹಿಂದೆ 1 3/4 ಗುಂಟೆ ವಿಸ್ತೀರ್ಣದ ಜಮೀನನಲ್ಲಿ  ಮನೆಯನ್ನು  ಕಟ್ಟಿ  ಸುತ್ತಲೂ ಕಾಂಪೌಂಡ್ ಗೋಡೆ ಹಾಕಿಕೊಂಡು ವಾಸವಾಗಿರುತ್ತೇನೆ.  ದಿನಾಂಕ: 12/07/2017 ಮದ್ಯಾಹ್ನ ಸುಮಾರು 3-10 ನಿಮಿಷದಲ್ಲಿ ನಾನು ಕರ್ತವ್ಯದಲ್ಲಿರುವಾಗ ನನ್ನ ಪತ್ನಿಯಾದ ಪದ್ಮಾವತಿರವರು ಪೋನ್ ಮಾಡಿ ಮಾಳಪಲ್ಲಿಯ ವಾಸಿಗಳಾದ ಆನಂದ ಮತ್ತು ಶೋಬಾರಾಣಿ ಹಾಗೂ ಇತರರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಜೆ.ಸಿ.ಬಿಯನ್ನು ತೆಗೆದುಕೊಂಡು ಬಂದು ನಮ್ಮ ಮನೆಯ ಕಾಂಪೌಂಡ್ ಗೋಡೆಯನ್ನು ಹಾಗೂ ಗೇಟ್ ಬಾಗಿಲುಗಳನ್ನು ಉರುಳಿಸುತ್ತಿರುವುದಾಗಿಯೂ  ಈ ಬಗ್ಗೆ ಕೇಳಲಾಗಿ ತನ್ನ ಪತ್ನಿ ಪದ್ಮಾವತಿರವರ ಮೇಲೆ ಹಲ್ಲೆ ಮಾಡಿ ನೀವು ಹೇಗೆ ಬದುಕುತ್ತೀರಿ ನೋಡೋಣವೆಂದು ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನಿಮ್ಮ ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆಂದು ತಿಳಿಸಿರುತ್ತಾರೆ. ಆದುರಿಂದ ತಾವುಗಳು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ .ಆರ್ ನಂ 80/2017 ರಂತೆ ದೂರು ದಾಖಲಿಸಿರುತ್ತೆ. ಸದರಿ ಪ್ರಕರಣದಲ್ಲಿ ಇದೂವರೆವಿಗೂ ಸರ್ವೆ ಇಲಾಖೆಗೆ  ಮೇಲ್ಕಂಡ ಸ್ವತ್ತಿನ ಸರ್ವೆ ಮಾಡಲು ಕೋರಿ ಮನವಿಯನ್ನು ಸಲ್ಲಿಸಿದ್ದರಿಂದ ಪ್ರಕರಣ ದಾಖಲಿಸುವುದು ತಡವಾಗಿದ್ದು ಅರ್ಜಿದಾರರು ನೀಡಿರುವ ತನ್ನ ಅರ್ಜಿಯಲ್ಲಿನ ಅಂಶಗಳು ಭಾರತ ದಂಡ ಸಂಹಿತೆ-1960 ನಲ್ಲಿ ಕಲಂ: 143-323-427-447-504-506 ರೆ/ವಿ 34 ಐಪಿಸಿ ಯು ಅಸಂಜ್ಞೆಯ ಅಪರಾದಕ್ಕೆ ಸಂಬಂದಿಸಿದ ಅಂಶಗಳಾಗಿದ್ದರಿಂದ ಆರೋಪಿಯ ವಿರುದ್ದ ಮೇಲ್ಕಂಡ ಕಲಂಗಳ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಈ ದಿನ ದಿನಾಂಕ 02/01/2019 ರಂದು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

5) ದಿಬ್ಬೂರಹಳ್ಳಿ  ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.323-324-504-506 ರೆ/ವಿ 34 ಐ.ಪಿ.ಸಿ:-

     ಈ ದಿನ ದಿನಾಂಕ 02/01/2019 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶಶಿಕುಮಾರ್ ಬಿನ್ ದೊಡ್ಡವೆಂಕಟರಾಯಪ್ಪ ರವರ ಹೇಳಿಕೆಯನ್ನು ಠಾಣೆಯ ಎ.ಎಸ್.ಐ ಪಾರ್ಥಸಾರತಿ ರವರು ತಂದು ಹಾಜರುಪಡಿಸಿದರ ಸಾರಂಶವೇನೆಂದರೆ ದಿನಾಂಕ 01/01/2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಶಶಿಕುಮಾರ್ ಮತ್ತು ವಿಜಯ್ ಕುಮಾರ್ ರವರು ಆನೇಮಡಗು ಮುಶಾಮಪ್ಪ ರವರ ಸೀಬೆ ತೋಟದ ಬಳಿ ಇದ್ದಾಗ ನಮ್ಮ ಗ್ರಾಮದ ಪ್ರಶಾಂತ ಮತ್ತು ಆತನ ಜೊತೆಯಲ್ಲಿ ಬಂದಿದ್ದ ಯಾರೂ ಇಬ್ಬರು ಆತನ ಸ್ನೇಹಿತರು ಅಲ್ಲಿಗೆ ಬಂದು ಏಕಾಏಕಿ ನನ್ನ ಮೇಲೆ ಗಲಾಟೆಮಾಡಿ ಪ್ರಶಾಂತನು ಕಬ್ಬನಿಣದ ರಾಡ್ ನಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು ಪ್ರಶಾಂತನ ಜೊತೆಯಲ್ಲಿದ್ದ ಇತರೆ ಯಾರೋ ಇಬ್ಬರೂ ಸಹ ತನ್ನ ಭುಜ ಕೈ ಕಾಲು, ಬೆನ್ನಿಗೆ ಹೊಡೆದು ಮೂಗೇಟುಗಳನ್ನು ಉಂಟುಮಾಡಿದ್ದು ಹಾಗೂ ತನ್ನನ್ನು ಮುಗಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ಜಗಳ ಬಿಡಿಸಲು ಬಂದ ವಿಜಯ್ ಕುಮಾರ್ ಬಿನ್ ಮಾರಪ್ಪ 30ವರ್ಷ, ಪರಿಶಿಷ್ಟ ಜಾತಿ ಕೂಲಿ ಕೆಲಸ ರವರಿಗೂ ಪ್ರಶಾಂತ್ ಮತ್ತು ಇತರೆ ಇಬ್ಬರು ಕಲ್ಲಿನಿಂದ ವಿಜಯ್ ಕುಮಾರ್ ರವರ ತಲೆಗೆ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿದ್ದು ಅವಾಚ್ಯಶಬ್ದಗಳಿಂದ ಬೈದು ಕೈಗೆ ಮತ್ತು ಬೆನ್ನಿಗೆ ಸಹ ಮೂಗೇಟು ಗಳನ್ನು ಉಂಟುಮಾಡಿದ್ದು ಹಾಗೂ ನಿಮ್ಮಬ್ಬರನ್ನೂ ಮುಗಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುವುದಾಗಿ ನೀಡಿರುವ ಹೇಳಿಕೆಯಾಗಿರುತ್ತೆ.

6) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.420 ಐ.ಪಿ.ಸಿ & 15 INDIAN MEDICAL COUNCIL ACT:-

     ದಿನಾಂಕ:02-01-2019 ರಂದು ಸಂಜೆ 06-00 ಗಂಟೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ, ಎಂ.ಎಸ್. ರಾಮಚಂದ್ರಾರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು , ಆರೋಪಿ, ಮಹಜರ್ ಹಾಗೂ ಅಮಾನತ್ತು ಪಡಿಸಿಕೊಂಡಿರುವ ಅಮಾನತ್ತು  ಪಡಿಸಿಕೊಂಡಿರುವ ಮಾಲಗಳನ್ನು ವಶಕ್ಕೆ ಪಡೆದುಕೊಂಡು ಸಾರಾಂಶವೇನೆಂದರೆ, ದಿನಾಂಕ:02-01-2019 ರಂದು ಚಿಂತಾಮಣಿ ತಾಲ್ಲೂಕು ಮುರುಗಮಲ್ಲಾ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮುಂಭಾಗ ಎಸ್.ಎಸ್.ಎನ್. ಮೆಡಿಕಲ್ ಅಂಡ್ ಜನರಲ್ ಸ್ಟೋರ್ಸನ ಹಿಂಬಾಗದಲ್ಲಿ ಟಿ.ಎನ್. ರಾಮರೆಡ್ಡಿ ಬಿನ್ ನರಸಿಂಹಪ್ಪ.ಜಿ ರವರು ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ಅನಧಿಕೃತ ಕ್ಲಿನಿಕ್ ನಡೆಸುತ್ತಿದ್ದ ರವರ ಮೇಲೆ ಮಾನ್ಯ ಚಿಂತಾಮಣಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಅಶೋಕ್ ಶೇಲಿ ಕೆ.ಎ.ಎಸ್. ತಾಲ್ಲೂಕು ಆರೋಗ್ಯ ನಿರೀಕ್ಷರಾದ ಶ್ರೀ. ಶ್ರೀನಿವಾಸರೆಡ್ಡಿ, ಔಷಧಿ ಪರಿವೀಕ್ಷಕರಾದ ಶ್ರೀ. ಸುರೇಶ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹನಾಧಿಕಾರಿಗಳಾದ ಶ್ರೀ. ಶ್ರೀನಿವಾಸನ್ , ಆಯುಷ್ ವೈದ್ಯಾಧಿಕಾರಿಗಳಾದ ಡಾ,ಮುನಿಸ್ವಾಮಿರೆಡ್ಡಿ ಹಾಗೂ ಪೊಲೀಸರ ಸಮಕ್ಷಮದಲ್ಲಿ ದಾಳಿ ಮಾಡಿ ಪರಿಶೀಲಿಸಿಲಾಗಿ ಸದರಿ ಟಿ.ಎನ್. ರಾಮರೆಡ್ಡಿಯವರು ವೈದ್ಯನೆಂದು ನಂಬಿಸಿ ರೋಗಿಗಳಿಗೆ ಜೀವಕ್ಕೆ ಹಾನಿಯಾಗುವಂತಹ ಔಷಧಿಗಳು ಮತ್ತು ಚುಚ್ಚುಮದ್ದು ಬಳಿಸಿರುವುದು ಕಂಡ ಬಂದಿರುತ್ತದೆ. ಆದರಂತೆ ಸದರಿ ಔಷಧಿಗಳು ಮತ್ತು ಚುಚ್ಚುಮದ್ದುಗಳನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 12-30 ರಿಂದ 02-00 ಗಂಟೆಯವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು ಟಿ.ಎನ್. ರಾಮರೆಡ್ಡಿ  ಬಿನ್ ಜಿ. ನರಸಿಂಹಪ್ಪ, 47 ವರ್ಷ, ವಕ್ಕಲಿಗರು, ವಾಸ ತುಳುವನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂಬ ಆತನನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು, ಸದರಿ  ಆಸಾಮಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

7) ಪಾತಪಾಳ್ಯ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.380-454-457 ಐ.ಪಿ.ಸಿ:-

     ದಿನಾಂಕ: 03/01/2019 ರಂದು ಮದ್ಯಾಹ್ನ 02-30  ಗಂಟೆಗೆ  ಪಿರ್ಯಾದಿದಾರರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಸ್ವಂತ ಗ್ರಾಮ ಜೂಲಪಾಳ್ಯ ವಾಗಿದ್ದು ನಾವು ವ್ಯಾಪಾರದ ನಿಮಿತ್ತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ನಮ್ಮ ಸ್ವಂತ ಗ್ರಾಮವಾದ ಜೂಲಪಾಳ್ಯದಲ್ಲಿ ನಮ್ಮ ತಾಯಿಯವರಾದ ಶೇಖ್ ಕಾಸಿಂಬೀ ರವರು ಒಬ್ಬರೇ ಮನೆಯಲ್ಲಿ ಇರುತ್ತಾರೆ,   ಮನೆಯು ಮಹಡಿ ಮನೆಯಾಗಿದ್ದು ಮನೆಯ ಒಳಗಡೆಯಿಂದ ಮಹಡಿಯ ಮೇಲಕ್ಕೆ ಮೆಟ್ಟಿಲು ಇರುತ್ತೆ ಆ ಮೆಟ್ಟಿಲಿಗೆ ಕಬ್ಬಿಣದ ಜಾಲರಿ ಬಾಗಿಲನ್ನು ಹಾಕಿರುತ್ತೇವೆ ಈಗಿರುವಾಗ ದಿನಾಂಕ:02/12/2018 ರಂದು ನಮ್ಮ ಸಂಬಂದಿಕರ ಮದುವೆಯ ನಿಮಿತ್ತ ನಾನು ನಮ್ಮ ತಾಯಿಯವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತೇನೆ,  ನಂತರ ಈ ದಿನ ದಿನಾಂಕ: 03/01/2018 ರಂದು ಬೆಳಗ್ಗೆ 10-00 ಗಂಟೆಯಲ್ಲಿ ನಾನು ನಮ್ಮ ತಾಯಿಯವರನ್ನು ಕರೆದುಕೊಂಡು ನಮ್ಮ ಗ್ರಾಮಕ್ಕೆ ಬಂದಿದ್ದು ಮನೆಯ ಮುಖ್ಯ ಬಾಗಿಲು ಯತಾಸ್ಥಿತಿಯಲ್ಲಿದ್ದು ನಾವು ಬೀಗವನ್ನು ತೆಗೆದು ಮನೆಯೊಳಗೆ ಪ್ರವೆಶಿಸಿ ನೋಡಲಾಗಿ ಯಾರೋ ಕಳ್ಳರು ಮಹಡಿಯ ಮೇಲ್ಬಾಗದ ಜಾಲರಿ ಬಾಗಿಲನ್ನು ತೆರೆದು  ಹಾಲ್ಗೆ ಪ್ರವೇಶಿಸಿ ಹಾಲ್ನ ಬಾಗಿಲಿಗೆ ಬೀಗ ಹಾಕಿದ್ದು ಅದರ ಚಿಲಕವನ್ನು ಕಳ್ಳರು ಯಾವುದೋ ಆಯುಧದಿಂದ ಮೀಟಿ ಬೆಂಡು ಮಾಡಿ ಬಾಗಿಲು ತೆಗೆದು  ಮನೆಯೊಳಗೆ ಪ್ರವೆಶಿಸಿ ನಮ್ಮ ಮನೆಯ ರೂಂ ನಲ್ಲಿ ಇಟ್ಟಿದ್ದ ಬೀರುವಿನ  ಬಾಗಿಲನ್ನು ತೆಗೆದು ಬೀರುವಿನಲ್ಲಿ ನಮ್ಮ ತಾಯಿಯವರು ಇಟ್ಟಿದ್ದ 1) 16 ಗ್ರಾಂನ 02 ಬಂಗಾರದ  ಉಂಗುರಗಳು ಅಂದಾಜು ಬೆಲೆ 45 ಸಾವಿರ ರೂ ಮತ್ತು 2) 02 ಜೊತೆ ಬಂಗಾರದ ಓಲೆ 25 ಗ್ರಾಂ ಅಂದಾಜು ಬೆಲೆ 70 ಸಾವಿರ ರೂ 3) 30 ಗ್ರಾಂ ತೂಕದ ಬಂಗಾರದ ಕತ್ತಿನ ಹಾರ ಅಂದಾಜು ಬೆಲೆ 80 ಸಾವಿರ ರೂ 4) ಒಂದು ಲಕ್ಷ ಇಪ್ಪತೈದು ಸಾವಿರ ರೂ (125000./.) ರೂ ನಗದು ಹಣ ಮತ್ತು ಬಂಗಾರದ ಒಡವೆಗಳು ಸೇರಿ 320000./. (ಮೂರು ಲಕ್ಷ ಇಪ್ಪತ್ತು ಸಾವಿರ ರೂ ಬೆಲೆ ಬಾಳುವುದನ್ನು) ಕಳವು ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಮತ್ತು ಕಳುವಾದ ಮೇಲ್ಕಂಡ ವಸ್ತುಗಳನ್ನು ಪತ್ತೆಮಾಡಿಕೊಟ್ಟು ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾನಾ ಮೊ,ಸಂ 01/2019 ಕಲಂ 454,457,380 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.