ದಿನಾಂಕ : 02/12/2018ರ ಅಪರಾಧ ಪ್ರಕರಣಗಳು

 1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.331/2018 ಕಲಂ. 279-337 ಐ.ಪಿ.ಸಿ:-

     ದಿನಾಂಕ:01/12/2018 ರಂದು ಪಿರ್ಯಾದಿದಾರರಾದ ಶ್ರೀಮತಿ ಶಾಬಾನ ಎಸ್.ಕೆ. ಕೊಂ ಮುನೀಬ್ ಬಾಷಾ ರವರು ಠಾಣೆಗೆ ಹಾಜರಾಗಿ ನೀಢಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30/11/2018 ರಂದು ಮದ್ಯ ರಾತ್ರಿ 1-00 ಗಂಟೆ ಸಮಯದಲ್ಲಿ  ನಮ್ಮ ಯಜಮಾನರ ಬಾಬತ್ತು ಎ.ಪಿ-03,ಬಿಜೆ-2529 ನೊಂದಣಿ ಸಂಖ್ಯೆಯ ಪೋರ್ಡ್ ಎಕೊ ಸ್ಪೋಟ್ ಕಾರಿನಲ್ಲಿ  ನಾನು ನಮ್ಮ ಯಜಮಾನರಾದ  ಮುನೀಬ್ ಬಾಷಾ ಬಿನ್ ಮಗಬೂಲ್ ಬಾಷಾ, 32ವರ್ಷ, ಮುಸ್ಲಿಂ ಜನಾಂಗ, ಸಾಪ್ಟ್ವೇರ್ ಇಂಜಿನಿಯರ್ ರವರು ಕಾರನ್ನು ಚಾಲನೆ ಮಾಡುತ್ತಿದ್ದು, ನಮ್ಮ ಮಕ್ಕಳಾದ ಮುತಾಯಿಬಾಷಾ 6ವರ್ಷ, ಮರಿಯಂ ಸುಹಾನ, 1ವರ್ಷ, ಮತ್ತು ನಮ್ಮ ಅತ್ತೆಯಾದ ಮುಮ್ತಾಜ್ ಬೇಗಂ ಕೋಂ ಮಗಬೂಲ್ಬಾಷಾ, 62ವರ್ಷ ರವರುಗಳು ಬೆಂಗಳೂರನ್ನು ಬಿಟ್ಟು ಎನ್.ಹೆಚ್-07 ರಸ್ತೆಯ ಮಾರ್ಗವಾಗಿ ಕದಿರಿಗೆ ಹೋಗಲು ಬಾಗೇಪಲ್ಲಿ ತಾಲ್ಲೂಕು  ವಡ್ಡರಪಲ್ಲಿ ಗ್ರಾಮದ ಸಮೀಪ ಇರುವ ಕರ್ನಾಟಕ ಡಾಭಾ ಬಳಿ ಬೆಳಗಿನ ಜಾವ 3-00 ಗಂಟೆ ಸಮಯದಲ್ಲಿ  ಬರುತ್ತಿದ್ದಾಗ ನಮ್ಮ ಯಜಮಾನರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು, ಆ ಸಮಯದಲ್ಲಿ ನಮ್ಮ ಕಾರಿಗೆ ಯಾವುದೋ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ನಮ್ಮ ಯಜಮಾನರು ಕಾರನ್ನು ರಸ್ತೆಯ ಎಡಭಾಗಕ್ಕೆ  ತಿರುಗಿಸಿದ್ದು, ಕಾರು  ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ  ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಮ್ಮಗಳ ಪೈಕಿ ನಮ್ಮ ಅತ್ತೆಯಾದ ಮುಮ್ತಾಜ್ ಬೇಗಂ ರವರಿಗೆ  ಎದೆಗೆ ಮತ್ತು ಬೆನ್ನಿಗೆ ಒತ್ತಡದ ಗಾಯವಾಗಿರುತ್ತದೆ, ಹಾಗೂ ಕಾರಿನಲ್ಲಿದ್ದ ನಮ್ಮಗಳಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ನಮ್ಮಗಳನ್ನು ಉಪಚರಿಸಿ  108 ಅಂಬುಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು,  ನಾವು ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇವೆ. ನಮ್ಮ ಅತ್ತೆಯವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮದನಪಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆ, ಅದ್ದರಿಂದ  ಈ ಅಪಘಾತವನ್ನುಂಟು ಮಾಡಿದ ನಮ್ಮ ಯಜಮಾನರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.74/2018 ಕಲಂ.279-337 ಐ.ಪಿ.ಸಿ:-

     ದಿನಾಂಕ:-01/12/2018 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀ.ಜೆ.ಮಂಜುನಾಥ ಬಿನ್ ಜಗದೀಶಚಾರಿ 30 ವರ್ಷ, ವಿಶ್ವಕರ್ಮ ಜನಾಂಗ, ಚಿನ್ನದ ಕೆಲಸ, ವಾರ್ಡ್ ನಂ-28, ಗಂಗಮ್ಮನಗುಡಿ ರಸ್ತೆ, ಚಿಕ್ಕಬಳ್ಳಾಪುರ ಟೌನ್ ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:-01/12/2018 ರಂದು ಪಿರ್ಯಾಧಿ/ಗಾಯಾಳು ತನ್ನ ಕೆಎ-01-ಇ.ಕ್ಯೂ-3961 ರ ಹಿರೋ ಸ್ಪ್ಲೆಂಡರ್ ದ್ವಿಚಕ್ರವಾಹನದಲ್ಲಿ ತಾನು ಹಾಗೂ ತನ್ನ ಹೆಂಡತಿ ಶ್ರೀಮತಿ.ಅಂಬಿಕಾ 25 ವರ್ಷ, ರವರು ಕೆಲಸದ ನಿಮಿತ್ತ ತಿಪ್ಪೇನಹಳ್ಳಿಗೆ ಹೋಗಿ ವಾಪಸ್ಸು ಚಿಕ್ಕಬಳ್ಳಾಪುರಕ್ಕೆ ಬರಲು ಚಿಕ್ಕಬಳ್ಳಾಪುರ – ಗೌರಿಬಿದನೂರು ಎನ್.ಎಚ್-234 ಎಂ.ಜಿ ರಸ್ತೆಯ ನಿಮ್ಮಾಕಲಕುಂಟೆಯ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಯಲ್ಲಿ ಸಂಜೆ 5:15 ಗಂಟೆಯ ಸಮಯದಲ್ಲಿ ಬರುತ್ತಿರುವಾಗ ಚಿಕ್ಕಬಳ್ಳಾಪುರ ರಸ್ತೆಯ ಕಡೆಯಿಂದ ಬರುತ್ತಿದ್ದ ಕೆಎ-40-ಯೂ-5890 ರ ಟಿ.ವಿ.ಎಸ್ ದ್ವಿಚಕ್ರವಾಹನಕ್ಕೆ ತನ್ನ ಹಿಂದೆ ಬರುತ್ತಿದ್ದ ಕೆಎ-40-ಇ.ಬಿ-6305 ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿ.ವಿ.ಎಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ನಂತರ ತನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ತನಗೆ ಮತ್ತು ತನ್ನ ಹೆಂಡತಿ ಅಂಬಿಕಾ ರವರಿಗೆ ಕೈ-ಕಾಲುಗಳಿಗೆ ಮೂಗೇಟುಗಳಾಗಿದ್ದು, ಕೆಎ-40-ಯೂ-5890 ರಲ್ಲಿ ಬರುತ್ತಿದ್ದವರು ರಸ್ತೆಯಲ್ಲಿ ಬಿದ್ದಿದ್ದು ಅವರ ಹೆಸರು ಮತ್ತು ವಿಳಾಸ ಕೇಳಲಾಗಿ ನಾಗರಾಜಚಾರಿ ಬಿನ್ ಪ್ರಾಣೇಶಚಾರಿ 75 ವರ್ಷ, ಬ್ರಾಹ್ಮಣರು, ಮಂಚೇನಹಳ್ಳಿ ಎಂತ ತಿಳಿಸಿದ್ದು ಸದರಿ ಡಿಕ್ಕಿ ಹೊಡೆಯಿಸಿದ ಕೆಎ-40-ಇ.ಬಿ-6305 ರಲ್ಲಿ ಚಾಲನೆ ಮಾಡುತ್ತಿದ್ದವರ ಹೆಸರು ಕೇಳಲಾಗಿ ನವೀನ್ ಕುಮಾರ್ ಬಿನ್ ವೆಂಕಟೇಶಪ್ಪ 21 ವರ್ಷ, ಮಂಚನಬಲೆ ಎಂತ ತಿಳಿಸಿದ್ದು ಇವರಿಗೆ ತಲೆಗೆ ಮತ್ತು ಕೈ-ಕಾಲುಗಳಿಗೆ ಗಾಯಗಳಾಗಿದ್ದು ಆತನ ಹಿಂದೆ ಕುಳಿತಿದ್ದವನ ಹೆಸರು ಕೇಳಲಾಗಿ ಶ್ರೀನಿವಾಸ ಬಿನ್ ರಾಮಕೃಷ್ಣಪ್ಪ 24 ವರ್ಷ, ಶ್ರೀರಾಮಪುರ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು ಈತನಿಗೂ ಸಹಾ ತಲೆಗೆ, ಮುಖ ಮತ್ತು ಕೈ-ಕಾಲುಗಳಿಗೆ ಗಾಯಗಳಾಗಿದ್ದು ಗಾಯಾಳುಗಳಾದ ತಮ್ಮಗಳನ್ನು ಅಲ್ಲಿಗೆ ಬಂದ ಎಸ್.ಅನೀಲ್ ಕುಮಾರ್ ಬಿನ್ ಸುಬ್ರಮಣಿ 21 ವರ್ಷ, ವಿದ್ಯಾರ್ಥಿ, ಧೋಬಿ ಜನಾಂಗ, ವಾರ್ಡ-07, ನಿಮ್ಮಾಕಲಕುಂಟೆ, ಚಿಕ್ಕಬಳ್ಳಾಪುರ ಟೌನ್ ರವರು ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ತಮ್ಮಗಳ ಗಾಯಗಳಿಗೆ ಕಾರಣನಾದ ಕೆಎ-40-ಇ.ಬಿ-6305 ರ ದ್ವಿಚಕ್ರವಾಹನ ಸವಾರ ನವೀನ್ ಕುಮಾರ್ ರವರ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣೆಯಲ್ಲಿ ದಿನಾಂಕ:-01/12/2018 ರಂದು ಸಂಜೆ 7:00 ಗಂಟೆಗೆ ಠಾಣಾ ಮೊ.ಸಂ-74/2018 ಕಲಂ-279, 337 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.261/2018 ಕಲಂ.279-304(ಎ) ಐ.ಪಿ.ಸಿ:-

     ದಿ: 01-12-2018 ರಂದು ಮದ್ಯಾಹ್ನ 2:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಶಾರದಮ್ಮ ಕೋಂ ಆರ್.ಜಿ.ಕೃಷ್ಣಪ್ಪ, 40 ವರ್ಷ, ನಾಯಕರು, ಅಂಗನವಾಡಿ ಟೀಚರ್, ಕಲ್ಲೂಡಿ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ಪಿರ್ಯಾಧಿಯ ಗಂಡನಾದ ಕೃಷ್ಣಪ್ಪ  ರವರು ಪ್ಲಂಬರ್ ಕೆಲಸ ಮಾಡಿಕೊಂಡಿದ್ದು, ದಿ: 01-12-2018 ರಂದು ಬೆಳಗ್ಗೆ 09:00 ಗಂಟೆಯಲ್ಲಿ ಗಂಗಸಂದ್ರ ಗ್ರಾಮದ ಪ್ಲಂಬರ್ ಕೆಲಸ ಮಾಡುವ ಆಂಜಿನಪ್ಪ ರವರೊಂದಿಗೆ ತಮ್ಮ ಬಾಬತ್ತು KA-40-K-7422 XL ದ್ವಿಚಕ್ರ ವಾಹನದಲ್ಲಿ ಪ್ಲಂಬರ್ ಕೆಲಸಕ್ಕೆಂದು ವಿಧುರಾಶ್ವತ್ಥದ ಕಡೆಗೆ ಹೋಗಿದ್ದು, ಮದ್ಯಾಹ್ನ 12:30 ಗಂಟೆಯಲ್ಲಿ ಚಿಕ್ಕಕುರುಗೋಡು ಗ್ರಾಮದ ಮೆಂಬರ್ ನಾಗರಾಜಪ್ಪ ರವರು ಪಿರ್ಯಾಧಿಗೆ ಕರೆ ಮಾಡಿ ಕೃಷ್ಣಪ್ಪ ರವರು ತಮ್ಮ ವಾಹನದ ಹಿಂದುಗಡೆ ಆಂಜಿನಪ್ಪ ರವರನ್ನು ಕುಳ್ಳರಿಸಿಕೊಂಡು ಕಲ್ಲೂಡಿ ಕಡೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಬಂದು ಚಿಕ್ಕಕುರುಗೋಡು ಗ್ರಾಮಕ್ಕೆ ಪೂರ್ವದಿಂದ ಪಶ್ವಿಮದ ಕಡೆಗೆ ತಿರುವು ಪಡೆದುಕೊಳ್ಳುತ್ತಿದ್ದಾಗ, ಈತನ ಎದುರುಗಡೆಯಿಂದ ವಿಧುರಾಶ್ವತ್ಥ ಕಡೆಯಿಂದ RJ-32-GC-1224 ನೊಂದಣಿ ಸಂಖ್ಯೆ ಕಂಟೈನರ್ ಲಾರಿ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಇಬ್ಬರೂ ರಸ್ತೆಯಲ್ಲಿ ಬಿದ್ದು ಹೋಗಿ ತಲೆಗೆ ಮತ್ತು ಮೈಮೇಲೆ ಗಾಯಗಳಾಗಿದ್ದು, ನಾವು ಉಪಚರಿಸಿದೆವು ತಕ್ಷಣ ಬರಲು ತಿಳಿಸಿದ ಮೇರೆಗೆ ಪಿರ್ಯಾಧಿಯು ಸ್ಥಳಕ್ಕೆ ಬರಲಾಗಿ ದ್ವಿಚಕ್ರ ವಾಹನ ಮತ್ತು ಲಾರಿಯು ಸ್ಥಳದಲ್ಲಿದ್ದು, ರಸ್ತೆಯಲ್ಲಿ ರಕ್ತಕಲೆಗಳಾಗಿದ್ದು, ಗಾಯಾಳುಗಳನ್ನು 108 ಅಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾಧಿಯು ಆಸ್ಪತ್ರೆ ಬಂದು ನೋಡಲಾಗಿ ಕೃಷ್ಣಪ್ಪನಿಗೆ ತಲೆಗೆ, ಎದೆಗೆ, ಬೆನ್ನಿಗೆ ಗಾಯಗಳಾಗಿದ್ದು ವೈದ್ಯರು ಪ್ರಥಮ ಚಿಕಿತ್ಸೆ ನೀಡುತ್ತಿದ್ದು, ಇದೇ ಮದ್ಯಾಹ್ನ 1:10 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಪ್ಪ ಮತ್ತು ಆಂಜಿನಪ್ಪ ರವರು ತಮಗಾದ ಗಾಯಗಳ ದೆಸೆಯಿಂದ ಮೃತಪಟ್ಟಿರುತ್ತಾರೆ.  ಈ ಅಪಘಾತಕ್ಕೆ ಕಾರಣರಾದ RJ-32-GC-1224 ಕಂಟೈನರ್ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

4) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.88/2018 ಕಲಂ.323-324 ರೆ/ವಿ 34 ಐ.ಪಿ.ಸಿ:-

     ದಿನಾಂಕ:02/12/2018 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀ ನಾಗರಾಜ ಬಿನ್ ಚಿನ್ನಾಯಪ್ಪ, ಮೂಗಿರೆಡ್ಡಪ್ಲಲಿ  ಗ್ರಾಮರವರ ಹೇಳಿಕೆಯನ್ನು ಪಡೆದುದರ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 02 ತಿಂಗಳ ಹಿಂದೆ ಬಿಳ್ಳೂರು ಗ್ರಾಮದ ನಾರಾಯಣಪ್ಪ ಎಂಬುವವರಿಂದ ಮೊಬೈಲ್ ಪೋನನ್ನು 600./ ರೂಗಳಿಗೆ ಕೊಂಡುಕೊಂಡಿದ್ದು ಸದರಿ ಪೋನಿನಲ್ಲಿ ತನ್ನ ನಂಬರನ್ನು ಪೀಡ್ ಮಾಡಿದ್ದು ಸದರಿ ಪೋನನ್ನು ಈಗ್ಗೆ 10 ದಿನಗಳ ಹಿಂದೆ ನಾರಾಯಣಪ್ಪರವರಿಗೆ ವಾಪಸ್ಸು ನೀಡಿರುತ್ತೇನೆ, ನಾರಾಯಣಪ್ಪರವರು ಸದರಿ ಪೋನನ್ನು ಬಿಳ್ಳೂರು ಗ್ರಾಮದಲ್ಲಿ ಬೇರೆ ಯಾರಿಗೋ ನೀಡಿದ್ದು ಆ ಪೋನಿನಿಂದ ತನಗೆ ದಿನಾಂಕ:01/12/2018 ರಂದು ಮದ್ಯಾಹ್ನ ಸುಮಾರು 03-00 ಗಂಟೆಯಲ್ಲಿ ಕರೆ ಮಾಡಿದ್ದು ನಾನು ಅವರನ್ನು ಮಾತನಾಡಿ ಬಿಳ್ಳೂರು ಗ್ರಾಮದಲ್ಲಿ ಅವರ ಮನೆಯ ಬಳಿಗೆ ಹೋಗಲಾಗಿ ಅಲ್ಲಿಯೇ ಇದ್ದ ಆಂದ್ರ ಪ್ರದೇಶದ ವೆಣುಗೋಪಾಲ ಬಿನ್ ವೆಂಕಟರವಣಪ್ಪ ಎಂಬುವವನು ಏಕಾ ಏಕಿ ಜಗಳ ತೆಗೆದು ತನ್ನ ಕೈಯಲ್ಲಿದ್ದ ಮರದ ರಿಪೀಸಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿ ಮೈ ಮೇಲೆ ಹೊಡೆದು ಮೂಗೇಟು ಉಂಟು ಮಾಡಿದನು ವೇಣುಗೋಪಾಲ ಜೊತೆಯಲ್ಲಿದ್ದ ಪಂದುಲ ಆಂಜಿನಪ್ಪ  ಎಂಬುವವನು ನನ್ನ ಮೈ ಮೇಲೆ ಕೈ ಗಳಿಂದ ಹೊಡೆದು ಮೂಗೇಟು ಉಂಟು ಮಾಡಿದನು ಅಷ್ಟರಲ್ಲಿ ಗೌರೋಳ್ಳಪಲ್ಲಿ ಗ್ರಾಮದ ವೆಂಕಟರವಣಪ್ಪ ಮತ್ತು ಇತರರು ಅಡ್ಡ ಬಂದು ಜಗಳ ಬಿಡಿಸಿದರು ಗಾಯಗೊಂಡಿದ್ದ ನಾನು ಬಿಳ್ಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬಾಗೇಪಲ್ಲಿಗೆ ಬಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅಲ್ಲಿನ ವೈದ್ಯರ ಸಲಹೆಯಂತೆ ಈ ದಿನ ಬೆಳಗ್ಗೆ ಚಿಕಿತ್ಸೆಗಾಗಿ ಬಾಗೇಪಲ್ಲಿ ಆಸ್ಪತ್ರೆಯಲ್ಲಿ ವಾಪಸ್ಸು ಬಂದು ಚಿಕಿತ್ಸೆ ಪಡೆಯುತ್ತಿರುತ್ತೇನೆ ನನ್ನನ್ನು ಹೊಡೆದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ನೀಡಿರುವ ಹೇಳಿಕೆಯ ದೂರಾಗಿರುತ್ತೆ,

5) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ319/2018 ಕಲಂ.279-337 ಐ.ಪಿ.ಸಿ:-

     ದಿನಾಂಕ:01-12-2018 ರಂದು ಸಂಜೆ 4-00 ಗಂಟೆಯಲ್ಲಿ ಪಿರ್ಯಾದಿದಾರರಾದ ಮುನಿಕೃಷ್ಣಪ್ಪ ಬಿನ್ ಲೇಟ್  ಮುನಿಶ್ಯಾಮಪ್ಪ ರವರು ಠಾಣೆ ಬಂದು ನೀಡಿದ ದೂರಿನ ಸಾರಾಂಶವೇನೆಂದರಡ ದಿನಾಂಕ: 27/11/2018 ರಂದು ತನ್ನ  ಮಗನಾದ ಅಭಿನವ್ ಕುಮಾರ್, ಮತ್ತು  ತಮ್ಮ ಗ್ರಾಮದ ಮುನಿನರಸಿಂಹಪ್ಪ ರವರ ಮಗನಾಧ ಭಾನುಚಂದನ್ ರವರು ಇಬ್ಬರು ಜಂಗಮಕೋಟೆ ಜ್ಯೋತಿ ಶಾಲೆಯಲ್ಲಿ ವಿಶೇಷ ತರಗತಿ ಇದೇ ಎಂದು ಬೆಳಿಗ್ಗೆ 7-30 ಗಂಟೆಯಲ್ಲಿ  ಶಾಲೆಯ ವ್ಯಾನ್ ನಲ್ಲಿ ಹೋಗದೇ ಯಾವುದೋ ವಾಹನದಲ್ಲಿ ಶಾಲೆಗೆ ಹೋದರು, ಇದೇ ದಿನ ಬೆಳಿಗ್ಗೆ 8-10 ಗಂಟೆಯಲ್ಲಿ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ ರವರು ದೂರವಾಣಿ ಕರೆ ಮಾಡಿ ಶಾಲೆಯ ಮುಂದೆ  ಅಭಿನವ್ ಕುಮಾರ್ ಮತ್ತು ಭಾನುಚಂದನ್ ರವರಿಗೆ ಕೆಎ-43-1803 ನೊಂದಣಿ ಸಂಖ್ಯೆ ಶಾಲೆಯ ಬಸ್ಸು ಅಪಘಾತವುಂಟುಮಾಡಿರುತ್ತೆ ಎಂದು ತಿಳಿಸಿದ್ದು ತಕ್ಷಣ ತಾನು ಮತ್ತು  ತಮ್ಮ ಗ್ರಾಮದ ಮುನಿನರಸಿಂಹಪ್ಪ ರವರು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರುತ್ತೆ, ವಿಚಾರ ಮಾಡಿ ತಿಳಿದುಕೊಳ್ಳಲಾಗಿ ಇದೇ ದಿನ ಅಭಿನವ್ ಕುಮಾರ್ ಮತ್ತು ಭಾನುಚಂದನ್ ರವರು ಗ್ರಾಮದಿಂದ ಯಾವುದೋ ಒಂದು ವಾಹನದಲ್ಲಿ ಬಂದು ಜಂಗಮಕೋಟೆ ಕ್ರಾಸ್ ನಲ್ಲಿ ಇಳಿದುಕೊಂಡು ಅಲ್ಲಿಂದ ನಡೆದುಕೊಂಡು ಇದೇ ದಿನ ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಜಂಗಮಕೋಟೆ ಕ್ರಾಸ್ ನಿಂದ ಜಂಗಮಕೋಟೆಗೆ ಹೋಗುವ ರಸ್ತೆಯಲ್ಲಿ ಶ್ರೀ ಜ್ಯೋತಿ ಶಾಲೆಯ ಮುಂಭಾಗ ಹೋಗುತ್ತಿದ್ದಾಗ ಜಂಗಮಕೋಟೆ ಕಡೆಯಿಂದ ಕೆಎ-43-1803 ರ ಶಾಲೆಯ ಬಸ್ಸ್ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಭಿನವ್ ಕುಮಾರ್ ಮತ್ತು ಭಾನುಚಂದನ್ ರವರಿಗೆ ಹಿಂಬದಿಯಿಂದ ಡಿಕ್ಕಿಹೊಡೆಸಿದ ಪರಿಣಾಮ ಇಬರು ಕೆಳಗಡೆ ಬಿದ್ದುಹೋಗಿ ಅಭಿನವ್ ಕುಮಾರ್  ರವರಿಗೆ ಬಲ ಮೊಣಕಾಲಿನ ಕೆಳಗಡೆ, ಬಲ ಮೊಣಕೈಗೆ ರಕ್ತಗಾಯಗಳಾಗಿರುತ್ತೆ, ಭಾನುಚಂದನ್ ರವರಿಗೆ ಬಲ ಕಣ್ಣಿನ ಉಬ್ಬಿನ ಮೇಲೆ, ಕೆನ್ನೆಯ ಮೇಲೆ,ಬಲ ಮೊಣಕೈಮೇಲೆ ರಕ್ತಗಾಯಗಳಾಗಿರುತ್ತೆ,ಗಾಯಗಳಾಗಿದ್ದ ಇಬ್ಬರನ್ನು  ಜಂಗಮಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ  ದಾಖಲಿಸಿದ್ದು ಅಲ್ಲಿನ ವೈದ್ಯರ ಸಲಹೆಯ ಮೇರಗೆ ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರು ಗಂಗೇನಹಳ್ಳಿಯಲ್ಲಿರುವ ಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಕೆಎ-43-1803 ಶಾಲೆಯ ಬಸ್ಸ್ ಚಾಲಕನ ಹೆಸರು ತಿಳಿದುಕೊಳ್ಳಲಾಗಿ ಸುಪ್ರೀತ್ ಬಿನ್ ಬಸವರಾಜು,ದೊಡ್ಡಮರಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಯಿತು. ತನ್ನ ಮಗನಿಗೆ ಅಪಘಾತದಲ್ಲಿವುಂಟಾದ ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿದ್ದು ಅಪಘಾತವುಂಟುಮಾಡಿದ ಕೆಎ-43-1803 ರ ಶಾಲೆಯ ಬಸ್ಸ್ ಚಾಲಕ ಸುಪ್ರೀತ್ ಬಿನ್ ಬಸವರಾಜು ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.