ದಿನಾಂಕ : 02/02/2019ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.11/2019 ಕಲಂ.182-419 ಐ.ಪಿ.ಸಿ:-

     ದಿನಾಂಕ:-01-02-2019 ರಂದು ಘನ ಅಡಿಷನಲ್ ಸಿವಿಲ್ ಜಡ್ಜ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ  ಪ್ರಿನ್ಸಿಪಲ್ ಸಿವಿಲ್ ಜಡ್ಜ ನ್ಯಾಯಾಲಯದ ಶಿರಸ್ತೆದಾರರಾದ  ಶ್ರೀ ಕೃಷ್ಣಮೂರ್ತಿ ಬಿನ್ ಟಿ.ಎನ್. ರಾಮರಾವ್ ರವರಿಗೆ   ನಿರ್ದೆಶಿಸಿದ ಪಿ.ಸಿ. ನಂ 26/2019 ರನ್ನು ಶಿರಸ್ತೆದಾರರವರು ನ್ಯಾಯಾಲಯದ ಪೇದೆ- 514 ಬೆಳಿಗ್ಗೆ 10-00 ಗಂಟೆಗೆ ತಂದು ಸಾದರುಪಡಿಸಿದ ದೂರಿನ ಸಾರಾಂಶವೇನೆಂದರೆ ಚಿಂತಾಮಣಿ ತಾಲ್ಲೂಕು ಮುಂಗಾನಹಳ್ಳಿ ಗ್ರಾಮದ ವಾಸಿಗಳಾದ ಶ್ರೀಮತಿ ಸುಬ್ಬಮ್ಮ ಕೊಂ ಲೇಟ್ ಪೆದ್ದಕೊಂಡಪ್ಪ ರವರು ಸ್ವಾದೀನಾನುಭವದಲ್ಲಿರುವ ಮುಂಗಾನಹಳ್ಳಿ ಸರ್ವೆ ನಂ 170/77  ರಲ್ಲಿರುವ 3.00 ಎಕರೆ ಜಮೀನಿನ ಮೇಲೆ ಚಿಂತಾಮಣಿ ತಾಲ್ಲೂಕು ಸೀತಂಪಲ್ಲಿ ಗ್ರಾಮದ ವಾಸಿ ಎಸ್.ಎನ್ .ಕದಿರಪ್ಪ ಬಿನ್ ನರಸಿಂಹಪ್ಪ ಎಂಬುವರು ಮೇಲ್ಕಂಡ ಸರ್ವೆ ನಂಬರಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಓ.ಎಸ್ ನಂ 242/2017 ರಂತೆ ಸಿವಿಲ್ ಸೂಟ್ ಪ್ರಕರಣವನ್ನು ದಾಖಲಿಸಿ  ನ್ಯಾಯಾಲಯಕ್ಕೆ ನಕಲಿ ತನ್ನ ಶಾಲಾ ದಾಖಲೆಗಳನ್ನು ಹಾಗೂ ಸುಳ್ಳು ಮಾಹಿತಿಯನ್ನು ನೀಡಿ ಉದ್ದೇಶ ಪೂರ್ವಕವಾಗಿ ತಾನೇ ಮೇಲ್ಕಂಡ ಸರ್ವೆ ನಂಬರಿನ ಅಸಲಿ ಮಾಲೀಕನೆಂದು ನ್ಯಾಯಾಲಯದಲ್ಲಿ ಪ್ರಮಾಣಿಕರಿಸಿರುವುದಾಗಿರುತ್ತೆಂದು ದೂರು.

2) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.11/2019 ಕಲಂ.279-337-304(ಎ)  ಐ.ಪಿ.ಸಿ:-

     ದಿನಾಂಕ:01/02/2019 ರಂದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ 3-00 ಗಂಟೆಗೆ ಗಾಯಾಳು ರಾಮ್ ಕುಮಾರ್ ಬಿನ್ ರಘು, 20 ವರ್ಷ, ನಾಯಕರ ಜನಾಂಗ, ಗಾರ್ಮೆಂಟ್ಸ್ ಉದ್ಯೋಗಿ, ವಾಸ: ಪೋತೇನಹಳ್ಳಿ ಗ್ರಾಮ, ತೊಂಡೇಭಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದ ವಾಸಿಯಾಗಿರುತ್ತೇನೆ. ದಿನಾಂಕ:01/02/2019 ರಂದು ನಾನು ಹಾಗೂ ನಮ್ಮ ದೊಡ್ಡಪ್ಪ ಸುಬ್ಬರಾಯಪ್ಪ ರವರ ಮಗನಾದ ನರಸಿಂಹಮೂರ್ತಿ ರವರೊಂದಿಗೆ ಗೌರಿಬಿದನೂರಿಗೆ ಹೋಗಿ ನನಗೆ ಬಟ್ಟೆ ತೆಗೆದುಕೊಂಡು ಬರುವುದಕ್ಕಾಗಿ ನರಸಿಂಹಮೂರ್ತಿಯ ಗಾಡಿ ನಂ:ಕೆ.ಎ-50-ಹೆಚ್-4868 ರ ಹೀರೋ ಹೊಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು, ನರಸಿಂಹಮೂರ್ತಿ ಗಾಡಿಯನ್ನು ಓಡಿಸುತ್ತಿದ್ದು, ಮದ್ಯಾಹ್ನ ಸುಮಾರು 1-15 ರಿಂದ 1-30 ಗಂಟೆಯ ಸಮಯದಲ್ಲಿ ಮಾದನಹಳ್ಳಿ ಗೇಟ್ ಬಳಿ ನಾವು ಬರುತ್ತಿದ್ದು, ಹಿಂಬಧಿಯಲ್ಲಿ ಒಂದು ಲಾರಿಯು ಅದರ ಚಾಲಕನು ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದವನು ಹಿಂದಿನಿಂದ ನಮಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಪಕ್ಕಕ್ಕೆ ಗಾಡಿಯ ಮೇಲೆ ಬಿದಿದ್ದು, ನರಸಿಂಹಮೂರ್ತಿ ಕೆಳಕ್ಕೆ ಬಿದ್ದಾಗ ಲಾರಿಯ ಚಕ್ರ ನರಸಿಂಹಮೂರ್ತಿಯ ಹೊಟ್ಟೆಯ ಮೇಲೆ ಹರಿದು ಹೋಯಿತು. ನನಗೆ ಗಡ್ಡಕ್ಕೆ ಹಾಗೂ ಎಡಭಾಗದ ಸೊಂಟಕ್ಕೆ ಗಾಯಗಳಾಯಿತು. ನರಸಿಂಹಮೂರ್ತಿಯ ಕಿವಿ, ಬಾಯಿಯಲ್ಲಿ ರಕ್ತ ಹೊರಬಂದಿದ್ದು, ಸಾರ್ವಜನಿಕರು ನಮ್ಮನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಚಿಕಿತ್ಸೆಗೆ ದಾಖಲಿಸಿದ್ದು, ನರಸಿಂಹಮೂರ್ತಿಯು ಗಾಯಗಳ ದೆಸೆಯಿಂದ ಮೃತಪಟ್ಟಿರುತ್ತಾನೆ. ನಾನು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ನಮಗೆ ಅಪಘಾತವುಂಟು ಮಾಡಿರುವ ಲಾರಿಯ ನಂ:ಟಿ.ಎನ್-28-ಎಆರ್-3925 ಆಗಿತ್ತು. ನಮಗೆ ಅಪಘಾತವುಂಟು ಮಾಡಿರುವ ಲಾರಿಯ ಚಾಲಕನ ವಿರುದ್ದ ಕ್ರಮ ಜರುಗಿಸಬೇಕೆಂದು ಕೋರಿದ್ದರ ದೂರಿನ ಸಾರಾಂಶವಾಗಿರುತ್ತೆ.

3) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.19/2019 ಕಲಂ.279-337   ಐ.ಪಿ.ಸಿ:-

     ದಿನಾಂಕ 01/02/2019 ರಂದು ಸಂಜೆ 5.00 ಗಂಟೆಯಲ್ಲಿ ಪಿರ್ಯಾದಿದಾರರಾದ ಇಂದ್ರಾಣಿ ಕೋಂ ಟಿ.ಎಮ್ ಮಂಜುನಾಥ, 33 ವರ್ಷ ವಿಶ್ವಕರ್ಮ ಜನಾಂಗ, ವಾಸ-ತಲವಾರದಿನ್ನೆ ಗ್ರಾಮ, ಬೀಚಗಾನಹಳ್ಳಿ ಪಂಚಾಯ್ತಿ ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ 31/01/2019 ರಂದು ರಾತ್ರಿ 7.00 ಗಂಟೆ ಸಮಯದಲ್ಲಿ ಬೀಚಗಾನಹಳ್ಳಿ ಕ್ರಾಸ್ ನಿಂದ ಗುಡಿಬಂಡೆ ಕಡೆಗೆ ಬರುವ ರಸ್ತೆ ಮಾರ್ಗದಲ್ಲಿ ತಮ್ಮ ಬಾಬತ್ತು KA 40 X 6388 ನೊಂದಣಿಯ ದ್ವಿಚಕ್ರ ವಾಹನದಲ್ಲಿ ತನ್ನ ಗಂಡನಾದ ಮಂಜುನಾಥ ರವರು ಗುಡಿಬಂಡೆಗೆ ಬರುವಾಗ ರಾತ್ರಿ ಸುಮಾರು 7.00 ಗಂಟೆ ಸಮಯದಲ್ಲಿ ಚಿಕ್ಕತಮ್ಮನಹಳ್ಳಿ ಕ್ರಾಸ್ ಬಳಿ ಗುಡಿಬಂಡೆ ಕಡೆಯಿಂದ KA 01 C 4342 ನೊಂದಣಿಯ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ಗಂಡ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು. ಸ್ಥಳದಲ್ಲಿದ್ದ ಸಾರ್ವಜನಿಕರು ನೋಡಿ ಅಪಘಾತದಲ್ಲಿ ಗಾಯಗೊಂಡ ತನ್ನ ಗಂಡ ಮಂಜುನಾಥನನ್ನು ಉಪಚರಿಸಿ, ಅಂಬುಲೆನ್ಸ್ ನಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ವಿಚಾರ ತಿಳಿದು ತಾನು ಹೋಗಿ ನೋಡಿದಾಗ ವಿಚಾರ ನಿಜವಾಗಿದ್ದು. ತನ್ನ ಗಂಡನ ಬಲಕಾಲಿನ ಮೂಳೆ ಮುರಿತ ಗಾಯವಾಗಿದ್ದು, ವೈದ್ಯರು ಪ್ರಥಮ ಚಿಕಿತ್ಸೆ ಕೊಡುತ್ತಿದ್ದು ತನ್ನ ಗಂಡನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಕಾಲಿಗೆ ರಾಡು ಹಾಕಬೇಕೆಂದು ವೈದ್ಯರು ತಿಳಿಸಿದ್ದು. ಮೇಲ್ಕಂಡಂತೆ ತನ್ನ ಗಂಡ ಮಂಜುನಾಥನಿಗೆ ಅಪಘಾತ ಪಡಿಸಿದ ಲಾರಿ ಮತ್ತು ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

4) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.12/2019 ಕಲಂ.279-337   ಐ.ಪಿ.ಸಿ:-

     ದಿನಾಂಕ 02/02/2019 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾಧಿ ಕಲ್ಲಿನಾಯಕನಹಳ್ಳಿ ಗ್ರಾಮದ ರಾಮಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ 31/01/2019 ರಂದು ರಾತ್ರಿ ಸುಮಾರು 7-30 ಗಂಟೆಯ ಸಮಯದಲ್ಲಿ ತನ್ನ ಅಣ್ಣ ಪ್ರಭಾಕರ್ ರವರು ತಮ್ಮ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದಾಗ ತೊಂಡೇಬಾವಿ ಕಡೆಯಿಂದ ಬಂದ ಕೆಎ50-ಆರ್-5820 ರ ದ್ವಿಚಕ್ರವಾಹನದ ಸವಾರ ಮಂಜುನಾಥ ಬಿನ್ ಕ್ಯಾತಪ್ಪ ಪುಲಗಾನಹಳ್ಳಿ ಗ್ರಾಮ ರವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ತನ್ನ ಅಣ್ಣ ಪ್ರಭಾಕರ್ ರವರಿಗೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಬಲ ಕಾಲಿಗೆ ರಕ್ತಗಾಯವಾಗಿರುತ್ತೆ, ತನ್ನ ಅಣ್ಣನೊಂದಿಗೆ ಬೆಂಗಳೂರಿನ ಹಾಸ್ಮಟ್ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, ರಸ್ತೆ ಅಪಘಾತ ಉಂಟುಪಡಿಸಿದ  ಮಂಜುನಾಥ ಬಿನ್ ಕ್ಯಾತಪ್ಪ ಪುಲಗಾನಹಳ್ಳಿ ಗ್ರಾಮ ರವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

5) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.05/2019 ಕಲಂ.379   ಐ.ಪಿ.ಸಿ:-

     ದಿನಾಂಕ:01/02/2019 ರಂದು ಮಧ್ಯಾಹ್ನ 01-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗರಾಜಪ್ಪ ಬಿನ್ ನಾರಾಯಣಪ್ಪ ಪೈಪಾಳ್ಯ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದೆ ದಿನಾಂಕ:27/01/2019 ರಂದು ಗ್ರಾಮದಲ್ಲಿ ಜಾನುವಾರುಗಳ ಹಬ್ಬ ಮಾಡುತ್ತಿದ್ದು ತಮ್ಮ ಮನೆಯ ಹಿಂದೆಗೆಡೆ ಚಪ್ಪಡಿಗಳನ್ನು ನಾಟಿ ಮೇಲ್ಬಾಗ ಹುಲ್ಲನ್ನು ಹಾಕಿದ್ದು ಕುರಿಗಳನ್ನು ಅದರೊಳಕ್ಕೆ ಹಾಕಿ ರಾತ್ರಿ ಮನೆಯಲ್ಲಿ ಮಲಗಿದ್ದು ಬೆಳಗ್ಗೆ 6 ಗಂಟೆಯಲ್ಲಿ ಎದ್ದು ನೋಡಲಾಗೆ ಯಾರೋ ಕಳ್ಳರು ಕುರಿ ಶಡ್ಡಿನ ಬಂಡೆ ಸಂದಿಯಲ್ಲಿ ಇಟ್ಟಿದ್ದ ಕಲ್ಲುಗಳನ್ನು ಪಕ್ಕಕ್ಕೆ ಹಾಕಿ ಅದರಲ್ಲಿದ್ದ ಕುರಿಗಳ ಪೈಕಿ 5 ಟಗರುಗಳು 5 ಕುರಿಗಳು ಸೇರಿ 10 ಕುರಿಗಳನ್ನು ಸುಮಾರು 48000 ರೂ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಹುಡುಕಾಡಿ ಸಿಗದಿದ್ದರಿಂದ ಈ ದಿನ ದೂರು ನೀಡುತ್ತಿದ್ದು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ

6) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.10/2019 ಕಲಂ.392   ಐ.ಪಿ.ಸಿ:-

     ದಿನಾಂಕ: 02-02-2019 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾಧಿದಾರರಾದ ಎಂ. ಲೋಕೇಶ್, ಶ್ರೀ ಮಾರುತಿ ಸರ್ವೀಸ್ ಸ್ಟೇಷನ್, ಮಳಮಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 02-02-2019 ರಂದು ಮುಂಜಾನೆ 1.45 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಮಳಮಾಚನಹಳ್ಳಿ ಗ್ರಾಮದ ಹತ್ತಿರವಿರುವ ಹೊಸಕೋಟೆ ಶಿಡ್ಲಘಟ್ಟ ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯ ಟ್ರಾನ್ಸ್ ಸಿಟಿ ಲೇ-ಔಟ್ ಪಕ್ಕದಲ್ಲಿರುವ ಶ್ರೀ ಮಾರುತಿ ಸರ್ವೀಸ್ ಸ್ಟೇಷನ್ ನಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಬುಳ್ಳಾಪುರ ಗ್ರಾಮದ ವಾಸಿಯಾದ ಸಂತೋಷ್ ಬಿನ್ ಮನೋಹರ್ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ಅಂಗರೇಖನಹಳ್ಳಿ ಗ್ರಾಮದ ಅನಿಲ್ ಬಿನ್ ಮಂಜುನಾಥ ಎಂಬುವರು ಪೆಟ್ರೋಲ್ ಮತ್ತು ಡೀಸಲ್ ಸೇಲ್ಸ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಯಾರೋ ಪರಿಚಯವಿಲ್ಲದ 4 ಜನ ವ್ಯಕ್ತಿಗಳ ಪೈಕಿ ಒಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು ಉಳಿದವರು ಯಥಾಸ್ಥಿತಿಯಲ್ಲಿದ್ದು ಇಬ್ಬರು ಚಾಕುಗಳನ್ನು ಹಿಡಿದು ಇಬ್ಬರ ಕೈಯಲ್ಲಿ ನೀಲಗಿರಿ ದೊಣ್ಣೆಗಳನ್ನು ಹಿಡಿದು ಬಾಗಿಲನ್ನು ಹೊಡೆದು ಒಳಗೆ ಹೋಗಿ ಸಿಸಿ ಕ್ಯಾಮರಾ ಕಿತ್ತುಕೊಂಡು ಅಲ್ಲಿದ್ದ ಸಂತೋಷ್ ಮತ್ತು ಅನಿಲ್ ರವರಿಗೆ ತಕ್ಷಣ ನಿಮ್ಮ ಬಳಿಯಿರುವ ಹಣವನ್ನು ಕೊಡಿ ಇಲ್ಲವಾದಲ್ಲಿ ನಿಮ್ಮನ್ನು ಮುಗಿಸಿಬಿಡುತ್ತೇವೆಂದು ಪ್ರಾಣಬೆದರಿಕೆ ಹಾಕಿ ಸಂತೋಷ್ ಬಳಿಯಿದ್ದ 24,000-00 ನಗದು ಹಣವನ್ನು ಕಿತ್ತುಕೊಂಡು ನಂತರ 7 ಲೀಟರ್ ಇಂಜಿನ್ ಆಯಿಲ್ ಎತ್ತಿಕೊಂಡು ಅವರಿಗೆ ಬೆದರಿಸಿ ಅವರು ಬಂದಿದ್ದ ಟಾಟಾ ಇಂಡಿಕಾ ಕಾರಿಗೆ ಪುಲ್ ಟ್ಯಾಂಕ್ ಪೆಟ್ರೋಲ್ ಹಾಕಿಕೊಂಡು ಸಿಸಿ ಕ್ಯಾಮರಾ ಡಿವಿಆರ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದು ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.