ದಿನಾಂಕ : 02/01/2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.279 ಐ.ಪಿ.ಸಿ:-

     ದಿನಾಂಕ:01/01/2019 ರಂದು  ಪಿರ್ಯಾದಿದಾರರಾದ ಶ್ರೀ ಸದ್ದಲ ಪ್ರಸಾದ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:01/01/2019 ರಂದು  ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ  ನಾನು, ನನ್ನ ಹೆಂಡತಿ ಮಾನಸ ಪ್ರಿಯ ನನ್ನ ಮಗ ದೀಪಕ್ ರಾಜ್ ರವರುಗಳನ್ನು ನನ್ನ  ಬಾಬತ್ತು ಕೆಎ-02, ಎಂ.ಕೆ-5847 ನೊಂದಣಿ ಸಂಖ್ಯೆಯ  ಪೋರ್ಡ್ ಎಕೋ ಸ್ಪೋರ್ಟ್ ಕಾರಿನಲ್ಲಿ  ಕೂರಿಸಿಕೊಂಡು ನಾನು ಕಾರನ್ನು ಚಾಲನೆ ಮಾಡಿಕೊಂಡು ನಮ್ಮ ಸ್ವಂತ ಗ್ರಾಮವಾದ ಧರ್ಮಾವರಂನಿಂದ ಗುಡಿಬಂಡೆಗೆ ಹೋಗಲು ಎನ್.ಹೆಚ್-07 ರಸ್ತೆಯ ಮಾರ್ಗವಾಗಿ ಬಾಗೇಪಲ್ಲಿ ತಾಲ್ಲೂಕು ಟಿ.ಬಿ ಕ್ರಾಸ್ ಬಳಿ ಇರುವ  ಗ್ರೀನ್ ಪಾರ್ಕ್ ಡಾಭಾ ಸಮೀಪ  ಸಂಜೆ ಸುಮಾರು 6-30 ಗಂಟೆ ಸಮಯದಲ್ಲಿ ಗುಡಿಬಂಡೆ ಕಡೆಗೆ ಹೋಗುವುದಕ್ಕಾಗಿ ಕಾರನ್ನು ನಿಧಾನಗತಿಯಲ್ಲಿ ಇಂಡಿಕೇಟರ್ ಸೂಚನೆಯನ್ನು ಹಾಕಿಕೊಂಡು ಕಾರನ್ನು ಬಲಗಡೆಗೆ  ತಿರುಗಿಸುತ್ತಿದ್ದಾಗ  ಹಿಂಭಾಗದಿಂದ ಬಂದಂತಹ ಕೆಎ-07,ಎಂ-8918 ನೊಂದಣಿ ಸಂಖ್ಯೆಯ ಜೀಫ್ ಕಂಪನಿಯ  ಕಂಪಾಸ್ ಸ್ಫೋರ್ಟಿ ಕಾರಿನ ಚಾಲಕ ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು  ನಾನು  ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕೆಎ-02ಎಂ.ಕೆ-5847 ನೊಂದಣಿ ಸಂಖ್ಯೆಯ  ಪೋರ್ಡ್ ಎಕೋ ಸ್ಪೋರ್ಟ್ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಕಾರಿನ ಬಲಭಾಗ  ಸಂಪೂರ್ಣ ಜಖಂಗೊಂಡಿದ್ದು, ಕೆಎ-07,ಎಂ-8918 ನೊಂದಣಿ ಸಂಖ್ಯೆಯ ಜೀಫ್ ಕಂಪನಿಯ  ಕಂಪಾಸ್ ಸ್ಫೋರ್ಟಿ ಕಾರಿನ ಎಡಭಾಗದ ಡೋರ್ ಮತ್ತು ಎಡಭಾಗದ ಮುಂದಿನ ಚಕ್ರ  ಹೊಡೆದು ಹೋಗಿರುತ್ತದೆ. ಕಾರಿನಲ್ಲಿದ್ದ ನಮ್ಮಗಳಿಗೆ ಯಾವುದೇ ರೀತಿಯ  ಗಾಯಗಳು ಆಗಿರುವುದಿಲ್ಲ, ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-07,ಎಂ-8918 ನೊಂದಣಿ ಸಂಖ್ಯೆಯ ಜೀಫ್ ಕಂಪನಿಯ  ಕಂಪಾಸ್ ಸ್ಫೋರ್ಟಿ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2) ಚಿಕ್ಕಬಳ್ಳಾಪುರ ನಗರ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.317 ಐ.ಪಿ.ಸಿ:-

     ದಿನಾಂಕ: 24.12.2018 ರಂದು ರಾತ್ರಿ 10-30 ಗಂಟೆಯಲ್ಲಿ  ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯ ತುರ್ತು ನಿಗಾಘಟಕ ಹಾಗೂ ಲೇಬರ್ ವಾರ್ಡಗೆ ಹೋಗುವ  ದಾರಿಯಲ್ಲಿ ನೆಲದ ಮೇಲೆ  ಒಂದು ನವಜಾತ  ಹೆಣ್ಣು ಶಿಶುವನ್ನು  ಯಾರೋ  ವ್ಯಕ್ತಿಗಳು  ಹೆಣ್ಣು ಮಗು ಎಂತಲೋ ಅಥವಾ ಮಗುವಿನ ಜನನವನ್ನು  ಮುಚ್ಚಿಡುವ ಉದ್ದೇಶದಿಂದ ಅಪಾಯಕರ ರೀತಿಯಲ್ಲಿ  ಬಿಟ್ಟು ಹೋಗಿದ್ದು  ಮಗುವಿನ ವಾರಸುದಾರರನ್ನು ಪತ್ತೆ  ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಸಲುವಾಗಿ  ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

3) ಚಿಕ್ಕಬಳ್ಳಾಪುರ ಸಂಚಾರಿ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.279-337  ಐ.ಪಿ.ಸಿ:-

     ದಿನಾಂಕ:-01/01/2019 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾಧಿ ಶ್ರೀ.ರಮೇಶ ಬಿ ಬಿನ್ ಬೈರಾರೆಡ್ಡಿ, 27 ವರ್ಷ, ವಕ್ಕಲಿಗರು, ದೊಡ್ಡತೇಕಹಳ್ಳಿ ಗ್ರಾಮ, ಬಶೆಟ್ಟಹಳ್ಳಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-31/12/2018 ರಂದು ತಾನು ಮತ್ತು ತನ್ನ ಮಾವ ವಿ.ಎಮ್.ಬೈರಾರೆಡ್ಡಿ ಬಿನ್ ಮುದ್ದಪ್ಪ 42 ವರ್ಷ, ವಕ್ಕಲಿಗರು, ವಕೀಲ ವೃತ್ತಿ, ವಂಟೂರು ಗ್ರಾಮ, ಬಶೆಟ್ಟಹಳ್ಳಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ರವರೊಂದಿಗೆ ತಮ್ಮ ಮಾವನ ಕೆ.ಎ-40-ಎಸ್-4282 ರ ಹೀರೋ ಹೋಂಡ ಸ್ಲೇಂಡರ್ ಪ್ರೋ ದ್ವಿ ಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ನಂತರ ತಮ್ಮ ಗ್ರಾಮಕ್ಕೆ ಹೋಗಲು ಚಿಕ್ಕಬಳ್ಳಾಪುರ ಎನ್.ಹೆಚ್-234 ರಸ್ತೆಯ ಅಣಕನೂರು ಗ್ರಾಮದ ಬಳಿ ಸಂಜೆ 5:10 ಗಂಟೆಯ ಸಮಯದಲ್ಲಿ ಹೋಗುತ್ತಿರುವಾಗ ತಮ್ಮ ಹಿಂದಿ ಬರುತ್ತಿದ್ದ ದ್ವಿ ಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ವಾಹನದ ಹಿಂಭಾಗಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ತಾವು ರಸ್ತೆಯಲ್ಲಿ ಬಿದ್ದಾಗ ವಾಹನವನ್ನು ಚಾಲನೆ ಮಾಡುತ್ತಿದ್ದ ತನ್ನ ಮಾವ ಬೈರಾರೆಡ್ಡಿ ವಿ.ಎಮ್ ರವರಿಗೆ ಬಲ ಭುಜಕ್ಕೆ ಮತ್ತು ನಡುವಿಗೆ ಗಾಯಗಳಾಗಿದ್ದು ತನಗೆ ತರಚಿದ ಗಾಯಗಳಾಗಿದ್ದು ತಮಗೆ ಡಿಕ್ಕಿ ಹೊಡೆಸಿದ ವಾಹನ ಮತ್ತು ಸವಾರನನ್ನು ನೋಡಲಾಗಿ ಅವರಿಗೂ ಸಹ ಗಾಯಗಳಾಗಿದ್ದು ದ್ವಿ ಚಕ್ರವಾಹನ ನೊಂದಣಿ ಸಂಖ್ಯೆ ಇಲ್ಲದ ಹೊಸ ಪಲ್ಸರ್ ದ್ವಿ ಚಕ್ರವಾಹನವಾಗಿದ್ದು ಡಿಕ್ಕಿ ಹೊಡೆಯಿಸಿದವನ ಹೆಸರು ವಿಳಾಸ ತಿಳಿಯಲಾಗಿ ಶ್ರೀನಿವಾಸ ನೆಲಮಾಕಳಹಳ್ಳಿ ಎಂತ ತಿಳಿಸಿದ್ದು ತಾನು ತನ್ನ ಮಾವನನ್ನು ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ವಾಹನದಲ್ಲಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಸೇರಿಸಿದ್ದು ತಾನು ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಅಪಘಾತ ಪಡೆಸಿದ ನೊಂದಣಿ ಸಂಖ್ಯೆ ಇಲ್ಲದ ಹೊಸ ಪಲ್ಸರ್ ದ್ವಿ ಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

4) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.332-353-504  ಐ.ಪಿ.ಸಿ:-

     ದಿನಾಂಕ 01-01-2019 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನರಸಿಂಹಮೂರ್ತಿ ವಿ, ಬ್ಯಾಡ್ಜ್ ನಂ 6144, ಚಾಲಕ ಕಂ ನಿರ್ವಾಹಕ, ಕೆ.ಎಸ್.ಆರ್.ಟಿ.ಸಿ ಚಿಂತಾಮಣಿ ಘಟಕ  ರವರು ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಮದ್ಯಾಹ್ನ 2-15 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 01-01-2018 ರಂದು ತನಗೆ ತಮ್ಮ ಘಟಕದ ಅದಿಕಾರಿಗಳು ರೂಟ್ ನಂ 6 ಕ್ಕೆ ತನಗೆ ನಿರ್ವಾಹಕನಾಗಿ ಹಾಗೂ ನಾಗೇಶ್ ರವರಿಗೆ ಚಾಲಕನಾಗಿ ಕೆಎ 40 ಎಫ್ 1370 ಬಸ್ಸ್ ನೀಡಿದ್ದು ಅದರಂತೆ ಈ ದಿನ ಬೇಳಗ್ಗೆ ಬಸ್ ಅನ್ನು ತೆಗೆದುಕೊಂಡು ಚಿಂತಾಮಣಿ ಬಸ್ ನಿಲ್ದಾಣಕ್ಕೆ ಬಂದಾಗ ನಿಲ್ದಾಣದ ಬಳಿ ಕೋಟಗಲ್ ಗ್ರಾಮದ ವಾಸಿ ನಾಗೇಶ್ ಎಂಬುವವರು ತನ್ನ ಅಪ್ಪಿ  ಆಟೋದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾಗ ತಾನು ಬಸ್ ನಿಂದ ಇಳಿದು ಸದರಿ ನಾಗೇಶ್ ರವರನ್ನು ಕುರಿತು ರೂಟ್ ಬಸ್ ಹೋಗುವ ಸಮಯದಲ್ಲಿ ಯಾಕೆ ಜನರನ್ನು ಕರೆದುಕೊಂಡು ಹೋಗುತ್ತೀಯಾ  ತಾವು ಹೇಗೆ ಸಂಸ್ಥೆಗೆ ಕಲೆಕ್ಷನ್ ಕಟ್ಟುವುದು ಎಂದು ಕೇಳಿದಾಗ ನಾಗೇಶ್ ತನಗೆ ಕೆಟ್ಟ ಮಾತುಗಳಿಂದ ಬೈದು ನೀನು ಕೋಟಗಲ್ಗೆ ಬಾರೋ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿರುತ್ತಾನೆ. ನಂತರ ತಾವು ದೊಡ್ಡಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಚಿಂತಾಮಣಿಗೆ ಬರಲು ಬೆಳಗ್ಗೆ 8-30 ಗಂಟೆಗೆ ಕೋಟಗಲ್ ಗ್ರಾಮಕ್ಕೆ ಬಂದು ಬಸ್ ಸ್ಟಾಂಡ್ ನಲ್ಲಿ ಬಸ್ ಅನನ್ಉ ನಿಲ್ಲಿಸಿ ತಾನು ಬಸ್ ನಿಂದ ಇಳಿದು ಪ್ರಯಾಣಿಕರನ್ನು  ಬಸ್ ಹತ್ತಿಸುತ್ತಿದ್ದಾಗ ಮೇಲ್ಕಂಡ ನಾಗೇಶ್ ತನ್ನ ಬಳಿ ಬಂದು ಏನೋ ಲೋಪರ್ ನನ್ನ ಮಗನೇ ಚಿಂತಾಮಣಿಯಲ್ಲಿ ಮಾತನಾಡಿದೇ ಅಲ್ವ ಇಲ್ಲಿ ಮಾತನಾಡು ನೋಡೋಣ ಎಂದು ತನಗೆ ಕೆಟ್ಟ ಮಾತುಗಳಿಂದ ಬೈದು ತನ್ನ ಷರ್ಟ್ ಅನ್ನು ಹಿಡಿದು ಎಳೆದಾಡಿ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕೆಲಸವನ್ನು ನಿರ್ವಹಿಸದಂತೆ ಅಡ್ಡಪಡಿಸಿದಾಗ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಜಗಳ ಬಿಡಿಸಿರುತ್ತಾರೆ. ಈ ಗಲಾಟೆಯಲ್ಲಿ ತನ್ನ ಬಳಿ ಇದ್ದ ಕಲೆಕ್ಷನ್ 700 ರೂ, ಒಂದು ಚೈನ್, 2 ಉಂಗುರಗಳು ಎಲ್ಲಿಯೋ ಬಿದ್ದು ಹೋಗಿರುತ್ತವೆ. ನಂತರ ತಮ್ಮ ಚಾಲಕ ತನ್ನನ್ನು ಆಸ್ವತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ಮೇಲ್ಕಂಡ ನಾಗೇಶ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

5) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.03/2019 ಕಲಂ.323-341-504-506 ಐ.ಪಿ.ಸಿ:-

     ದಿನಾಂಕ 01-01-2019 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನಾಗೇಶ್ ಬಿನ್ ವೆಂಕಟೇಶಪ್ಪ, 22 ವರ್ಷ, ಕುಂಬಾರರು, ಆಟೋ ಚಾಲಕ, ಕೋಟಗಲ್ ಗ್ರಾಮ ಚಿಂತಾಮಣಿ ತಾ ರವರು ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಮದ್ಯಾಹ್ನ 2-45 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 01-01-2018 ರಂದು ಬೆಳಗ್ಗೆ 7-00 ಗಂಟೆ ಸಮಯದಲ್ಲಿ ತಾನು ಚಿಂತಾಮಣಿ ನಗರದ ಬಸ್ ನಿಲ್ದಾನದ ಬಳಿ ತನ್ನ ಆಟೋ ನಿಲ್ಲಿಸಿ ಪ್ರಯಾಣಿಕರನ್ನು ತನ್ನ ಆಟೋದಲ್ಲಿ ಹತ್ತಿಸಿಕೊಳ್ಳುತ್ತಿದ್ದಾಗ  ಆಗ ತಮ್ಮ ಗ್ರಾಮದ ಕಡೆ ಹೋಗುವ ಕೆ.ಎಸ್.ಆರ್.ಟಿ.ಸಿ  ಬಸ್ ಬಂದಿದ್ದು ಆಗ ತನ್ನ ಆಟೋ ನಲ್ಲಿದ್ದ ಪ್ರಯಾಣಿಕರನ್ನು ಬಸ್ ಗೆ ಹೋಗುವಂತೆ ತಿಳಿಸಿ ಇಳಿಸಿಬಿಟ್ಟಿರುತ್ತೇನೆ. ಆಗ ಸದರಿ ಬಸ್ ನಲ್ಲಿದ್ದ ನಿರ್ವಾಹಕ ಕುರುಮಾರರ್ಲ ಹಳ್ಳಿ ಗ್ರಾಮದ ನರಸಿಂಹಮೂರ್ತಿ ರವರು ಬಸ್ ನಿಂದ ಇಳಿದು ತನಗೆ ಈ ಬಗ್ಗೆ ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ನಂತರ ತಾನು ಮನೆಗೆ ಹೋಗಿ ಈ ವಿಷಯವನ್ನು ತನ್ನ ತಾಯಿ ಉಮಾದೇವಿ ರವರಿಗೆ ತಿಳಿಸಿರುತ್ತೇನೆ.ನಂತರ ಬೆಳಗ್ಗೆ 8-30 ಗಂಟೆ ಸಮಯದಲ್ಲಿ ಸದರಿ ಕೆ.ಎಸ್.ಆರ್,ಟಿ.ಸಿ ಬಸ್ ತಮ್ಮ ಗ್ರಾಮದ ಬಸ್ ನಿಲ್ದಾಣಕ್ಕೆ  ಬಂದಾಗ ಅದರ ನಿರ್ವಾಹಕ ನರಸಿಂಹಮೂರ್ತಿ  ರವರು ಬಸ್ ನಿಂದ ಇಳಿದು ಕೆಳಗೆ ನಿಂತಿದ್ದನು. ಆಗ ತನ್ನ ತಾಯಿ ಆತನ ಬಳಿ ಹೋಗಿ ಯಾಕೆ ತನ್ನ ಮಗನ ಮೇಲೆ ಗಲಾಟೆ ಮಾಡಿದ್ದು ಎಂದು ಕೇಳಿದ್ದಕ್ಕೆ ಆತನು ತನ್ನ ತಾಯಿಗೆ ಕೆಟ್ಟ ಮಾತುಗಳಿಂದ ಬೈದಿರುತ್ತಾನೆ. ಆಗ ತಾನು ಸ್ಥಳಕ್ಕೆ ಹೋಗಿ ಕೇಳಿದ್ದಕ್ಕೆ ನರಸಿಂಹಮೂರ್ತಿ ತನ್ನನ್ನು ಅಡ್ಡಗಟ್ಟಿ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಜಗಳ ಮಾಡಿದ್ದು ಆಗ ತಮ್ಮ ಗ್ರಾಮಸ್ಥರು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ಆಗ ನರಸಿಂಹಮೂರ್ತಿ ತನ್ನನ್ನು ಕುರಿತು ತನ್ನ ತಂಟೆಗೆ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಮೇಲ್ಕಂಡ ನರಸಿಂಹಮೂರ್ತಿ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

6) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.04/2019 ಕಲಂ.279-304(ಎ) ಐ.ಪಿ.ಸಿ:-

     ದಿನಾಂಕ:01/01/2019 ರಂದು ರಾತ್ರಿ 9-30 ಗಂಟೆ ಪಿರ್ಯಾದಿ ಸುರೇಶ್ ರಾವ್ ಬಿನ್ ರಾಮರಾವ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೇ, ನಮ್ಮ ತಂದೆ-ತಾಯಿಗೆ ಇಬ್ಬರು ಗಂಡು ಮಕ್ಕಳು 1ನೇ ನಾನು, 2ನೇ ನನ್ನ ತಮ್ಮನಾದ ರತ್ನೋಜಿರಾವ್ ಎಂಬುವರಾಗಿದ್ದು, ನನ್ನ ತಮ್ಮ ರತ್ನೋಜಿರಾವ್ಗೆ 28 ವರ್ಷ ವಯಸ್ಸಾಗಿದ್ದು, ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು ಅವನಿಗೆ ಮದುವೆ ಆಗಿರುವುದಿಲ್ಲ. ಚಿಂತಾಮಣಿ ತಾಲ್ಲೂಕು ಐಮರೆಡ್ಡಿಹಳ್ಳಿ ಗ್ರಾಮದ ನನ್ನ ದೊಡ್ಡಮ್ಮನಾದ ಕಸ್ತೂರಿ ಬಾಯಿ ರವರನ್ನು ಮಾತನಾಡಿಸಿಕೊಂಡು ಬರಲು ನನ್ನ ತಮ್ಮ ರತ್ನೋಜಿರಾವ್ ರವರು ನನ್ನ ಬಾಬ್ತು ಕೆಎ-53 ಇಎಸ್-4516 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಈ ದಿನ ದಿನಾಂಕ 01/01/2019 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಮನೆಯನ್ನು ಬಿಟ್ಟು ಬಂದಿರುತ್ತಾನೆ. ಇದೇ ದಿನ ರಾತ್ರಿ 7.35 ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಗ್ರಾಮದ ವಾಸಿಯಾದ ವಸಂತಕುಮಾರ್ ಬಿನ್ ಆನಂದ ಕುಮಾರ್ ಎಂಬುವರು ನನಗೆ ಪೋನ್ ಮಾಡಿ ರತ್ನೋಜಿರಾವ್ ನಿಮಗೆ ಏನಾಗಬೇಕು ಎಂದು ಕೇಳಿದ್ದು ಅವನು ತನ್ನ ತಮ್ಮ ಎಂದು ತಿಳಿಸಿದಾಗ, ಆತನು ನಿನ್ನ ತಮ್ಮನಿಗೆ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಮುನಗನಹಳ್ಳಿ ಗೇಟ್-ಚಿನ್ನಸಂದ್ರ ಮಾರ್ಗಮದ್ಯೆ ರಸ್ತೆ ಅಪಘಾತವಾಗಿದ್ದು ಆತನು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ತಕ್ಷಣ ನಾನು ಮತ್ತು ನನ್ನ ಸ್ನೇಹಿತನಾದ ನಮ್ಮ ಗ್ರಾಮದ ವಾಸಿಯಾದ ಮಂಜುನಾಥ ಬಿನ್ ಕುಮಾರಪ್ಪ ರವರು ಸ್ಥಳಕ್ಕೆ ಬಂದು ನೋಡಲಾಗಿ ಸಂಗತಿ ನಿಜವಾಗಿದ್ದು ನನ್ನ ತಮ್ಮನ ಮುಖಕ್ಕೆ, ತಲೆಗೆ ಮತ್ತು ಬಲಮೊಣಕಾಲಿಗೆ ತಿವ್ರ ಸ್ವರೂಪದ ರಕ್ತಗಾಯಗಳಾಗಿ ಸೊಂಟಕ್ಕೆ ಮತ್ತಿತರೆ ಕಡೆ ಗಾಯಗಳಾಗಿದ್ದು ನನ್ನ ತಮ್ಮ ಸತ್ತು ಹೋಗಿರುತ್ತಾನೆ. ಅಲ್ಲಿ ನೆರೆದಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ ನನ್ನ ತಮ್ಮ ಸಂಜೆ 6.45 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನವನ್ನು ನಡೆಸಿಕೊಂಡು ಕುರುಟಹಳ್ಳಿ ಕಡೆಯಿಂದ ಚಿನ್ನಸಂದ್ರ ಕಡೆಗೆ ಬರುತ್ತಿದ್ದಾಗ, ಎದುರುಗಡೆಯಿಂದ ಅಂದರೆ ಚಿನ್ನಸಂದ್ರ ಕಡೆಯಿಂದ ಬರುತ್ತಿದ್ದ ಎಪಿ-16 ಟಿಎಕ್ಸ್-5763 ನೋಂದಣಿ ಸಂಖ್ಯೆಯ ಟಾಟಾ ಸುಮೋ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಆತನು ವಾಹನದ ಸಮೇತ ಕೆಳಗೆ ಬಿದ್ದು ಹೋಗಿ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಪಘಾತಉಂಟು ಮಾಡಿದ ಕಾರು ಸ್ಥಳದಲ್ಲೇ ಇದ್ದು, ಸದರಿ ಕಾರಿನ ಮುಂಭಾಗದ ಚಕ್ರ ಜಕಂ ಆಗಿರುತ್ತೆ. ಸದರಿ ವಾಹನದ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ನನ್ನ ತಮ್ಮನ ಮೃತದೇಹವನ್ನು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಇಟ್ಟಿರುತ್ತೇವೆ. ಮೇಲ್ಕಂಡ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನನ್ನ ತಮ್ಮನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಅವನ ಸಾವಿಗೆ ಕಾರಣನಾದ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿದೆ.

7) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.05/2019 ಕಲಂ.279-337-338-304(ಎ) ಐ.ಪಿ.ಸಿ:-

     ದಿನಾಂಕ 02-01-2019 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀಮತಿ ಸುನಿತಾ ಕೊಂ ಆನಂದ 22 ವರ್ಷ, ಬೋವಿ ಜನಾಂಗ, ಮನೆ ಕೆಲಸ, ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬೆಳಗ್ಗೆ 10-30 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 01-01-2019 ರಂದು ಹೋಸ ವರ್ಷದ ಪ್ರಯುಕ್ತ ಕೈಲಾಸಗಿರಿ ಗೆ ಹೋಗಿ ವಾಪಸ್ಸು ತಮ್ಮ  ಗ್ರಾಮಕ್ಕೆ ಹೋಗುವ ಸಲುವಾಗಿ ಚಿಂತಾಮಣಿ  ನಗರದ ಗಜಾನನ ವೃತ್ತದಲ್ಲಿ ಸಂಜೆ 6-00 ಗಂಟೆ ಸಮಯದಲ್ಲಿ ತಾನು, ತನ್ನ ಮಗಳು 3 ವರ್ಷದ ಶ್ರೀಲತಾ, ತಮ್ಮ  ಅಕ್ಕ ವೇದಾವತಿ, ವೇದಾವತಿ ರವರ 2 ವರ್ಷದ ಮಗಳು ವೈಶಾಲಿ , ತನ್ನ ಗಂಡನ ತಂಗಿ ಅನಿತಾ ಕೊಂ ವೆಂಕಟೇಶ ರವರು ಕೆ ಎ 40 6382 ನೊಂದಣಿ ಸಂಖ್ಯೆಯ ಅಪ್ಪೆ ಆಟೋದಲ್ಲಿ ಹತ್ತಿ ನಂತರ ಬಾಗೇಪಲ್ಲಿ ವೃತ್ತದಲ್ಲಿ ನಾಯನಹಳ್ಳಿ ಗ್ರಾಮದ ಕೃಷ್ಣಪ್ಪ ಬಿನ್ ಹನುಮಪ್ಪ ಹಾಗೂ ನಾಗಸಂದ್ರ ಗಡ್ಡದ ಗಂಗೋತ್ರಿ ಕೊಂ ನವೀನ್ ಚಂದ್ರ ಹಾಗೂ ಇತರರು ಆಟೋವನ್ನು ಹತ್ತಿ ಹೋಗಿದ್ದು ಸಂಜೆ 6-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ರಸ್ತೆಯ ಹೆಚ್ ಪಿ ಗ್ಯಾಸ್ ಗೋಡನ್ ಬಳಿ ಸದರಿ ಆಟೋ ಚಾಲಕ ತನ್ನ ಆಟೋವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಆಟೋ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ  ಬಿದ್ದು ಹೋಗಿದ್ದು ಆಗ ತನಗೆ ಎಡಗಾಲಿಗೆ, ಎಡ ಕೈ ಮತ್ತು ಎಡಭುಜಕ್ಕೆ, ತಮ್ಮ ಅಕ್ಕ ವೇದಾವತಿ ರವರಿಗೆ  ತಲೆಗೆ , ಮುಖಕ್ಕೆ ಹಾಗೂ ಮೈ ಮೇಲೆ ರಕ್ತ ಗಾಯವಾಗಿದ್ದು, ವೈಶಾಲಿ ರವರಿಗೆ ತಲೆಗೆ ರಕ್ತ ಗಾಯವಾಗಿ, ಅನಿತಾ ರವರಿಗೆ ಮೈ ಮೇಲೆ ಮೂಗೇಟುಗಳು, ಗಂಗೋತ್ರಿ ರವರಿಗೆ ಬಲ ಭುಜಕ್ಕೆ ಮೂಳೆ ಮುರಿತಗಾಯ ಹಾಗೂ ಕೃಷ್ಣಪ್ಪ ಬಿನ್ ಹನುಮಪ್ಪ ರವರಿಗೆ ತಲೆಗೆ ಹಾಗೂ ಮೈ ಮೇಲೆ ತೀವ್ರತರವಾದ ರಕ್ತಗಾಯಗಳಾಗಿ ಸ್ಥಳ ದಲ್ಲಿಯೇ ಮೃತ ಪಟ್ಟಿರುತ್ತಾನೆ. ನಂತರ ತಮ್ಮನ್ನು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿದ್ದು, ವೇದಾವತಿ ಮತ್ತು ವೈಶಾಲಿ ರವರನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ. ಆಟೋದಲ್ಲಿ ಇನ್ನೂ ಇತರರು  ಇದ್ದು ಅವರ ಹೆಸರು ವಿಳಾಸ ಗೊತ್ತಿರುವುದಿಲ್ಲ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಹಾಗೂ ಆಟೋ ಚಾಲಕನಿಗೂ ಸಹ ಮೂಗೇಟುಗಳಾಗಿರುತ್ತವೆ. ಆದ್ದರಿಂದ ಮೇಲ್ಕಂಡ ಕೆಎ 40 6382 ಆಟೋ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

8) ದಿಬ್ಬೂರಹಳ್ಳಿ  ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.279-304(ಎ) ಐ.ಪಿ.ಸಿ:-

     ದಿನಾಂಕ: 02/01/2019 ರಂದು ಬೆಳಿಗ್ಗೆ 11.00 ಗಂಟೆಗೆ ಪಿಯರ್ಯಾಧಿದಾರರಾದ ಗಜೇಂದ್ರ ಬಿನ್ ನಾರಾಯಣಪ್ಪ, 25 ವರ್ಷ, ನಾಯಕರು, ಗಾರೇಕೆಲಸ, ಲಗಿನಾಯಕನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 01/01/2019 ರಂದು ತಮ್ಮ ತಾಯಿಯಾದ ದ್ಯಾವಮ್ಮ ರವರಿಗೆ ಹುಷಾರಿಲ್ಲದ ಕಾರಣ ತಾನು ತನ್ನ ಬಾಬತ್ತು ಕೆ.ಎ-40 ಆರ್-7980 ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನದಲ್ಲಿ ದಿಬ್ಬೂರಹಳ್ಳಿ ಗ್ರಾಮಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ನಂತರ ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ತನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ ತಾನು ಹಾಗೂ ತನ್ನ ತಾಯಿ ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ದಿಬ್ಬೂರಹಳ್ಳಿ-ಚಿಂತಾಮಣಿ ರಸ್ತೆಯ ಗೊರ್ಲಗುಮ್ಮನಹಳ್ಳಿ – 11ನೇ ಮೈಲಿ ಮಾರ್ಗ ಮದ್ಯೆ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಚಿಂತಾಮಣಿ ಕಡೆಯಿಂದ ನಂ ಕೆಎ-07 -6782 ಆಗಿದ್ದು ಶ್ರೀ ವೆಂಕಟೇಶ್ವರ(ಎಸ್.ವಿ.ಎಂ.ಎಸ್) ಖಾಸಗಿ ಬಸ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ತಾನು ಮತ್ತು ತನ್ನ ತಾಯಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಯಿಸಿ ಅಪಘಾತವನ್ನು ಉಂಟುಮಾಡಿ ನಿಲ್ಲಿಸದೆ ಹೊರಟು ಹೋಗಿದ್ದರ ಪರಿಣಾಮ ತಾನು ಮತ್ತು ಹಿಂದೆ ಕುಳಿತಿದ್ದ ತಮ್ಮ ತಾಯಿ ದ್ವಿಚಕ್ರ ವಾಹನ ಸಮೇತ ಕೆಳಕ್ಕೆ ಬಿದ್ದುಹೋಗಿ ದ್ವಿಚಕ್ರ ವಾಹನದ ಹಿಂದೆ ಕುಳಿತಿದ್ದ ನಮ್ಮ ತಾಯಿ ದ್ಯಾವಮ್ಮ ರವರಿಗೆ ಎಡ ಕಣ್ಣಿದ ಹಣೆಯ ಮೇಲೆ ಹಾಗೂ ತಲೆಯ ಹಿಂಭಾಗದಲ್ಲಿ ತೀವ್ರತರವಾದ ರಕ್ತ ಗಾಯವಾಗಿರುತ್ತೆ. ನಂತರ ಗಾಯಗೊಂಡಿದ್ದ ತನ್ನ ತಾಯಿ ದ್ಯಾವಮ್ಮ ರವರನ್ನು ಯಾವುದೋ ಒಂದು ಕಾರಿನಿಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಗಳ ಆದೇಶದಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯೆ ತಮ್ಮ ತಾಯಿ ದ್ಯಾವಮ್ಮ ರವರು ಮೃತಪಟ್ಟಿರುತ್ತಾರೆ. ನಂತರ ತಮ್ಮ ತಾಯಿಯನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಬಂದು ಮೃತ ನಮ್ಮ ತಾಯಿಯವರನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿದ್ದು ತಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ಮಾರ್ಗ ಮದ್ಯೆ ಮೃತಪಟ್ಟ ಕಾರಣ ಪುನಃ ವಾಪಸ್ ಚಿಂತಾಮಣಿಗೆ ಕರೆದುಕೊಂಡು ಬಂದಿದ್ದು ಆಗ ಅವೇಳೆಯಾದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡಂತೆ ತಮ್ಮ ದ್ವಿಚಕ್ರ ವಾಹನಕ್ಕೆ ಅಪಘಾತವನ್ನು ಉಂಟುಮಾಡಿದ ಖಾಸಗಿ ಬಸ್ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ.

9) ಗುಡಿಬಂಡೆ  ಪೊಲೀಸ್ ಠಾಣೆ ಮೊ.ಸಂ.03/2019 ಕಲಂ.279-304(ಎ) ಐ.ಪಿ.ಸಿ:-

     ದಿನಾಂಕ:01/01/2019 ರಂದು ಮದ್ಯಾನ್ಹ:4-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ  ಶಿವಮ್ಮ ಕೋಂ. ರವಿಕುಮಾರ.29 ವರ್ಷ ಅಗಸರು. ಗಾರೆ ಕೆಲಸ ಸ್ವಂತ ಸ್ಥಳ:ಮಾಸದೊಡ್ಡಿ ಗ್ರಾಮ ಲಿಂಗನಕಾನದೊಡ್ಡಿ ಪಂಚಾಯ್ತಿ ರಾಯಚೂರು (ತಾ & ಜಿಲ್ಲೆ) ಹಾಲಿ ವಾಸ ಮಾರನಾಯಕನಹಳ್ಳಿ ಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಾನು ಮತ್ತು ತನ್ನ ಗಂಡನಾದ ರವಿಕುಮಾರ ಮತ್ತು ತಮ್ಮ ಮಕ್ಕಳು ಹಾಗೂ ತಮ್ಮ ಗ್ರಾಮದ ವಾಸಿಗಳಾದ ಬೀಮೇಶ್ ಬಿನ್ ನರಸಪ್ಪ . ಲಿಂಗಪ್ಪ ಬಿನ್ ನರಸಪ್ಪ. ತಾಯಪ್ಪ ಬಿನ್ ಬೀಮಣ್ಣ. ರಮೇಶ್ ಬಿನ್ ಮಲ್ಲಯ್ಯ ರವರ ಕುಟುಂಬದವರು ಈಗ್ಗೆ ಸುಮಾರು 1 ತಿಂಗಳಿಂದ  ಚಿಕ್ಕಬಳ್ಳಾಪುರ ತಾಲ್ಲೂಕು ಮಾರನಾಯಕನಹಳ್ಳಿ ಗ್ರಾಮದ ಬಳಿ ಇರುವ ಬೆಂಗಳೂರಿನ ವಾಸಿ ಬಾಲಸುಬ್ರಮಣಿ ರವರ ಬಾಬ್ತು ಜಮೀನಿನಲ್ಲಿ ಕಟ್ಟಡ ಕೆಲಸ ಮಾಡಲು ಬಂದು ಇಲ್ಲಿ ಸಂಸಾರ ಸಮೇತ ವಾಸವಿದ್ದು ಪ್ರತಿ ನಿತ್ಯಾ ಮೇಲ್ಕಂಡ ಜಮೀನಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುವುದಾಗಿದ್ದು ಹೀಗಿರುವಾಗ ದಿನಾಂಕ:01/01/2019 ರಂದು ಬೆಳಗ್ಗೆ ಸುಮಾರು 11-30 ಗಂಟೆಗೆ ನನ್ನ ಗಂಡನಾದ ರವಿಕುಮಾರ ರವರು ತಮ್ಮ ಬಾಬ್ತು ಕೆ.ಎ-36. ವಿ-6541 ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್  ದ್ವಿ ಚಕ್ರವಾಹನದಲ್ಲಿ ಪೆರೇಸಂದ್ರಕ್ಕೆ ಹೋಗಿ ಬರುತ್ತೇನೆಂದು ಹೋಗಿದ್ದು ನಂತರ ಸುಮಾರು  ಅರ್ದಗಂಟೆ ನಂತರ  ಯಾರೋ ಸಾರ್ವಜನಿಕರು ತಾವು ವಾಸವಿರುವ ಜಾಗಕ್ಕೆ ಬಂದು ರವಿಕುಮಾರ ರವರಿಗೆ  ಚಿಕ್ಕಬಳ್ಳಾಪುರ ತಾಲ್ಲೂಕು ಹೀರೇನಾಗವಲ್ಲಿ ಕ್ರಾಸ್ ನಿಂದ ಸುಮಾರು 100 ಮೀಟರ್ ದೂರದಲ್ಲಿ ಮಾರನಾಯಕನಹಳ್ಳಿ ಗ್ರಾಮದ ಕಡೆ ಬರುವ ಪೆರೇಸಂದ್ರ- ಗುಡಿಬಂಡೆ ಟಾರ್ ರಸ್ತೆಯಲ್ಲಿ ಅಪಘಾತವಾಗಿರವುದಾಗಿ ತಿಳಿಸಿದ್ದು ಕೂಡಲೇ ತಾನು ಮತ್ತು ತಮ್ಮೊಂದಿಗೆ ವಾಸವಿರುವ  ಬೀಮೇಶ್ ಬಿನ್ ನರಸಪ್ಪ . ಲಿಂಗಪ್ಪ ಬಿನ್ ನರಸಪ್ಪ. ತಾಯಪ್ಪ ಬಿನ್ ಬೀಮಣ್ಣ. ರಮೇಶ್ ಬಿನ್ ಮಲ್ಲಯ್ಯ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಗಂಡನಾದ ರವಿಕುಮಾರರವರು ಈ ದಿನ ದಿನಾಂಕ:01/01/2019 ರಂದು ಪೆರೇಸಂದ್ರ ಗ್ರಾಮದಿಂದ ಮಾರನಾಯಕನಹಳ್ಳಿ ಗ್ರಾಮಕ್ಕೆ ತಮ್ಮ ಬಾಬ್ತು ಕೆ.ಎ-36. ವಿ-6541 ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್  ದ್ವಿ ಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿರುವಾಗ ಮದ್ಯಾನ್ಹ: ಸುಮಾರು 12-00 ಘಂಟೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಹೀರೇನಾಗವಲ್ಲಿ ಕ್ರಾಸ್ ನಿಂದ ಸುಮಾರು 100 ಮೀಟರ್ ದೂರದಲ್ಲಿ ಮಾರನಾಯಕನಹಳ್ಳಿ ಗ್ರಾಮದ ಕಡೆ ಬರುವ ಪೆರೇಸಂದ್ರ- ಗುಡಿಬಂಡೆ ಟಾರ್ ರಸ್ತೆಯಲ್ಲಿ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಗಂಡ ರವಿಕುಮಾರ ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಕೆ.ಎ-36. ವಿ-6541 ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್  ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ತನ್ನ ಗಂಡನಾದ ರವಿಕುಮಾರ ರವರಿಗೆ ಬಲಕಣ್ಣಿನ ಹುಬ್ಬಿನ ಬಳಿ ರಕ್ತಗಾಯವಾಗಿ ಮತ್ತು ಹಣೆಯ ಎಡಬಾಗದಲ್ಲಿ ತೀವ್ರವಾದ ರಕ್ತಗಾಯವಾಗಿ ಬಲ ಕೈ ಮುರಿದಿದ್ದು ಬಲ ಕಾಲಿನ ಮೇಲೆ ಗಾಯವಾಗಿ ದ್ವಿ ಚಕ್ರವಾಹನ ಜಖಂಗೊಂಡು ತೀವ್ರವಾಗಿ ರಕ್ತಗಾಯಗೊಂಡಿದ್ದ ತನ್ನ ಗಂಡನಾದ ರವಿಕುಮಾರ ರವರು ಸ್ಥಳದಲ್ಲಿ ಮೃತಪಟ್ಟಿದ್ದು ತನ್ನ ಗಂಡನಾದ ರವಿಕುಮಾರ ರವರ ಮೃತದೇಹ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿದ್ದು ತನ್ನ ಗಂಡ ರವಿಕುಮಾರ ರವರಿಗೆ ಅಪಘಾತಪಡಿಸಿ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರವ ವಾಹನವನ್ನು ಪತ್ತೆ ಮಾಡಿ ಸದರಿ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

10) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.01/2019 ಕಲಂ.279-304  ಐ.ಪಿ.ಸಿ:-

     ದಿನಾಂಕ:-01-01-2019 ರಂದು ಬೆಳಿಗ್ಗೆ 9:00 ಗಂಟೆಗೆ ಪಿರ್ಯಾಧಿದಾರರಾದ ಗಂಗಣ್ಣ ಬಿನ್ ಲೇಟ್ ಮಲ್ಲಯ್ಯ, 60 ವರ್ಷ, ಲಿಂಗಾಯುತರು, ಜಿರಾಯ್ತಿ, ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತನ್ನ  ಮಗನಾದ ಮಹೇಶ್ ರವರು ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೊಬಳಿ ನಡಿಪಿನಾಯಕಹಳ್ಳಿ ಗೇಟ್ ನಲ್ಲಿರುವ ಕಪಿಲಮಮ್ಮ ಪಿ.ಯು. ಕಾಲೇಜಿಯಲ್ಲಿ ಲೆಕ್ಚರರ್ ಕೆಲಸ ಮಾಡಿಕೊಂಡು ಜಂಗಮಕೋಟೆಯಲ್ಲಿ ಮನೆ ಮಾಡಿಕೊಂಡು ಆತನ ಹೆಂಡತಿ ಮತ್ತು ಮಗುವಿನೊಂದಿಗೆ ವಾಸವಾಗಿದ್ದು, ತನ್ನ ಮಗನಾದ ಮಹೇಶ್ ಮತ್ತು ಆತನ ಹೆಂಡತಿ ಶ್ರೀಮತಿ ಗೀತಾ ಎಂ.ಎಸ್. ರವರಿಗೆ 4 ತಿಂಗಳ ಬೃಂದನ್ ರಾಮ್ ಎಂಬ ಗಂಡು ಮಗುವಾಗಿದ್ದು ತನ್ನ ಸೊಸೆ ಅವರ ತವರು ಮನೆ ಗೆದರೆ ಬಳಿಯಿರುವ ಮಲ್ಲಸಂದ್ರ ಗ್ರಾಮದಲ್ಲಿ ವಾಸವಾಗಿದ್ದರು. ದಿನಾಂಕ: 31-12-2018 ರಂದು ಮದ್ಯಾಹ್ನ ತಮ್ಮ ಗ್ರಾಮಕ್ಕೆ ಆತನ ಬಾಬತ್ತು ನಂ. ಕೆಎ-40-ಎಕ್ಸ್-0992 ದ್ವಿಚಕ್ರ ವಾಹನದಲ್ಲಿ ಬಂದು ನಂತರ ಮಲ್ಲಸಂದ್ರ ಗ್ರಾಮಕ್ಕೆ ಹೋಗಿ ಹೆಂಡತಿ ಮತ್ತು ಮಗುವನ್ನು ನೋಡಿಕೊಂಡು ದಿನಾಂಕ: 31-01-2018 ರಂದು ರಾತ್ರಿ ವಾಪಸ್ಸು ಬಂದು ಹೊಸ ವರ್ಷ ಆಚರಣೆಯ ಪ್ರಯುಕ್ತ ಆತನ ಸ್ನೇಹಿತರಾದ ಮೋಹನ್ ಕುಮಾರ್ ಮತ್ತು ಇತರರೊಂದಿಗೆ ವಿಜಯಪುರ ಬಳಿಯ ಯಾವುದೋ ಡಾಬಾದಲ್ಲಿ ಪಾರ್ಟಿ ಮಾಡಿಕೊಂಡು ದಿನಾಂಕ: 01-01-2019 ರಂದು ಬೆಳಗಿನ ಜಾವ 3.00 ಗಂಟೆ ಸುಮಾರಿನಲ್ಲಿ ಜಂಗಮಕೋಟೆಗೆ ಬರುತ್ತಿದ್ದಾಗ ಜೆ.ವೆಂಕಟಾಪುರದ ಮಿತ್ತನಹಳ್ಳಿ ಕ್ರಾಸ್ ಬಳಿ ಆತನ ಬಾಬತ್ತು ನಂ. ಕೆಎ-40-ಎಕ್ಸ್-0992 ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ವಾಹನ ಸವಾರನ ನಿಯಂತ್ರಣ ತಪ್ಪಿ ಸ್ವತಃ ಅಪಘಾತವಾಗಿದ್ದು ಅಪಘಾತದಲ್ಲಿ ತನ್ನ ಮಗ ಮಹೇಶ್ ರವರಿಗೆ ತಲೆ ಮತ್ತು ಇತರೆ ಕಡೆ ಗಾಯಗಳಾಗಿದ್ದು ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಮಹೇಶ್ ರವರ ಸ್ನೇಹಿತ ಮೋಹನ್ ಕುಮಾರ್ ರವರು ವಿಚಾರ ತಿಳಿಸಿದ್ದು ತಾನು ಹಾಗೂ ಇತರರು ದೇವನಹಳ್ಳಿ ಲೀನಾ ಆಸ್ಪತ್ರೆಗೆ ಬಂದು ನೋಡಲಾಗಿ ಬೆಳಿಗ್ಗೆ 4.00 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮಾರ್ಗ ಮದ್ಯದಲ್ಲಿ ತನ್ನ ಮಗ ಮೃತಪಟ್ಟಿರುತ್ತಾನೆಂತ ವಿಚಾರ ತಿಳಿಯಿತು. ವಿಚಾರ ಮಾಡಲಾಗಿ ತನ್ನ ಮಗ ಸ್ನೇಹಿತರೊಂದಿಗೆ ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಜಂಗಮಕೋಟೆಗೆ ಬರುವಾಗ ದಿನಾಂಕ: 01-01-2019 ಬೆಳಗಿನ ಜಾವ 3.00 ಗಂಟೆ ಸಮಯದಲ್ಲಿ  ಕೆಎ-40-ಎಕ್ಸ್-0992 ದ್ವಿಚಕ್ರ ವಾಹನವನ್ನು ಶಿಡ್ಲಘಟ್ಟ ತಾಲ್ಲೂಕು ಜೆವೆಂಕಟಾಪುರ ಬಳಿ ಮಿತ್ತನಹಳ್ಳಿ ಕ್ರಾಸ್ ನಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿದ ಪರಿಣಾಮ ವಾಹನ ಸವಾರನ ನಿಯಂತ್ರಣ ತಪ್ಪಿ ಸ್ವತಃ ಅಪಘಾತವಾಗಿ ಅಪಘಾತದಲ್ಲಿ ತನ್ನ ಮಗನಿಗೆ ತಲೆ ಮತ್ತು ಇತರೆ ಕಡೆ ಗಾಯಗಳಾಗಿ ಮೃತಪಟ್ಟಿದ್ದು, ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

11) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.87 ಕೆ.ಪಿ. ಆಕ್ಟ್ & 11(1) PREVENTION OF CRUELTY TO ANIMALS ACT:-

     ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯ್ ಆರ್ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ: 01-01-2019 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮದ ಹೊರವಲಯದ ವೀರಪ್ಪನವರ ತೋಟಕ್ಕೆ ಹೋಗುವ ಮಣ್ಣಿನ ರಸ್ತೆಯ ಬಲಭಾಗದಲ್ಲಿರುವ ಆನೂರು ಗ್ರಾಮಕ್ಕೆ ಸೇರಿದ ಸರ್ಕಾರಿ ಸ್ಮಶಾನದಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರಾದ ಸಿ.ಹೆಚ್.ಸಿ-111 ರಮೇಶ, ಸಿಪಿಸಿ-90 ರಾಜಕುಮಾರ, ಸಿಪಿಸಿ-143 ಶಿವರಾಜಕುಮಾರ್, ಸಿಪಿಸಿ-178 ಸುನೀಲ್ ಕುಮಾರ್, ಸಿಪಿಸಿ-195 ಪೃಥ್ವಿ ರಾಜ್, ಸಿಪಿಸಿ-233 ಮಂಜೇಶ್, ಸಿಪಿಸಿ-403 ಬಾಬು ಬಿ.ಆರ್., ಸಿಪಿಸಿ-444 ಬಿ. ನಾರಾಯಣಸ್ವಾಮಿ ಮತ್ತು ಸಿಪಿಸಿ-548 ಕೃಷ್ಣಪ್ಪ ಮತ್ತು ಪಂಚಾಯ್ತಿದಾರರಾದ ಶ್ರೀ. ಸುಬ್ರಮಣಿ ಬಿನ್ ಕೃಷ್ಣಪ್ಪ, 42 ವರ್ಷ, ಕೊರಚರು, ಎಟಿಎಂ ನಲ್ಲಿ ಸೆಕ್ಯುರಿಟಿ ಕೆಲಸ, ವಾಸ: ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಶಿವರಾಜ್ ಕುಮಾರ್ ವಿ ಬಿನ್ ವೆಂಕಟೇಶಪ್ಪ, 25 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ: ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು ನಾಗರಾಜ ಎಂ. ಬಿನ್ ಸಿ. ಮುನಿಶಾಮಪ್ಪ, 41 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರುಗಳೊಂದಿಗೆ ನಂ. ಕೆ.ಎ.-40-ಜಿ-357 ಸರ್ಕಾರಿ ಜೀಪು ಮತ್ತು ದ್ವಿಚಕ್ರವಾಹನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮದ ಹೊರವಲಯದ ವೀರಪ್ಪನವರ ತೋಟಕ್ಕೆ ಹೋಗುವ ಮಣ್ಣಿನ ರಸ್ತೆಯ ಬಲಭಾಗದಲ್ಲಿರುವ ಆನೂರು ಗ್ರಾಮಕ್ಕೆ ಸೇರಿದ ಸರ್ಕಾರಿ ಸ್ಮಶಾನದಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿಮಾಡಿದ್ದು 6 ಜನ ಅಸಾಮಿಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1] ವೆಂಕಟೇಶ ಬಿನ್ ರಾಜಪ್ಪ, 56 ವರ್ಷ, ನಾಯಕರು, ಎಳೆನೀರು ವ್ಯಾಪಾರ, ವಾಸ: 22ನೇ ವಾರ್ಡ್, ಮಯೂರ ವೃತ್ತದ ಬಳಿ, ಶಿಡ್ಲಘಟ್ಟ ನಗರ, 2) ನಾಗರಾಜ ಬಿನ್ ರಾಮಯ್ಯ, 45 ವರ್ಷ, ನಾಯಕರು, ಜಿರಾಯ್ತಿ, ವಾಸ: ಚಿಕ್ಕದಾಸರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ಸುರೇಶ ಬಿನ್ ದೊಡ್ಡವೆಂಕಟರಾಯಪ್ಪ, 36 ವರ್ಷ, ವಕ್ಕಲಿಗರು, ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 4) ಯುವರಾಜ ಬಿನ್ ಲೇಟ್ ವೆಂಕಟೇಶಪ್ಪ, 37 ವರ್ಷ, ಟೆಂಪೋ ಚಾಲಕ, ವಾಸ: ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 5) ದೇವರಾಜ ಬಿನ್ ಲೇಟ್ ಲಕ್ಷ್ಮಯ್ಯ, 40 ವರ್ಷ, ಗೊಲ್ಲರು, ಜಿರಾಯ್ತಿ, ವಾಸ: ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 6) ವಿ. ನವೀನ ಬಿನ್ ವೆಂಕಟೇಶಪ್ಪ, 30 ವರ್ಷ, ಜಿರಾಯ್ತಿ, ವಕ್ಕಲಿಗರು, ವಾಸ: ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ 7 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಆರೋಪಿಗಳು ಜೂಜಾಟಕ್ಕೆ ತಂದಿದ್ದ 2 ಜೀವಂತ ಕೋಳಿಗಳನ್ನು ಮತ್ತು ಪಣಕ್ಕಾಗಿ ಇಟ್ಟಿದ್ದ 3840-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 3.30 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು, 6 ಜನ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಸಂಜೆ 5.00 ಗಂಟೆಗೆ ಠಾಣೆಗೆ ವಾಪಸ್ ಬಂದು ಠಾಣಾ ಮೊ.ಸಂ. 02/2019 ಕಲಂ 87 ಕೆ.ಪಿ. ಆಕ್ಟ್ ರೆ/ವಿ 11 Sub (1) Prevention of Animals Cruealty act-1960 ರೀತ್ಯಾ ಕೇಸು ದಾಖಲಿಸಿರುತ್ತೇನೆ.