ದಿನಾಂಕ : 01/12/2018ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.330/2018 ಕಲಂ. 279-337 ಐ.ಪಿ.ಸಿ:-

     ದಿನಾಂಕ:01/12/2018 ರಂದು ಪಿರ್ಯಾದಿದಾರರಾದ ಶ್ರೀ ಶಂಕರಪ್ಪ ಬಿನ್ ದೋಬಿ ವೆಂಕಟರಾಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:01/11/2018 ರಂದು ನನ್ನ ತಮ್ಮನಾದ ಶ್ರೀನಿವಾಸ ಬಿನ್ ದೋಬಿ ವೆಂಕಟರಾಮಪ್ಪ, 23ವರ್ಷ, ರವರು ಅವನು ಕೆಲಸ ಮಾಡುವ ಅವರ ಯಜಮಾನ ಆಂದ್ರಪ್ರದೇಶದ ಶ್ರೀನಿವಾಸ ಕುಮಾರ್ ಬಿ ರವರ ಬಾಬತ್ತು ಎ.ಪಿ-21 ಜೆ-9531 ನೊಂದಣಿ ಸಂಖ್ಯೆಯ ಹೀರೋಹೊಂಡಾ ಸ್ಲ್ಪೇಂಡರ್ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಕೆಲಸದ ನಿಮಿತ್ತ ಬಾಗೇಪಲ್ಲಿಗೆ ಬರಲು ಬೆಳಿಗ್ಗೆ ಸುಮಾರು 11-00 ಗಂಟೆಯ ಸಮಯದಲ್ಲಿ ನನ್ನ ತಮ್ಮನೇ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಜಿಲಾಜಿರ್ಲಾ ಕ್ರಾಸ್ ಬಳಿ ಇರುವ ಅಕ್ಕುಲಪ್ಪದಿನ್ನೆ ಬಳಿ ರಸ್ತೆಯ ಎಡಭಾಗದಲ್ಲಿ ಬರುತ್ತಿರುವಾಗ ಬಾಗೇಪಲ್ಲಿ ಕಡೆಯಿಂದ ಬಂದಂತಹ ಕೆ.ಎ-40, ಎ-7458 ನೊಂದಣಿ ಸಂಖ್ಯೆಯ ಆಟೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ತಮ್ಮ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು, ಹೋಗಿ ಬಲಕಾಲಿಗೆ, ಬಲಕೆನ್ನೆಯ ಮೇಲೆ ರಕ್ತಗಾಯವಾಗಿರುತ್ತದೆ. ಹಾಗೂ ಆಟೋದಲ್ಲಿದ್ದ ಪ್ರಯಾಣಿಕ ವೆಂಕಟರಾಮಪ್ಪ ಬಿನ್ ಭಾವನ್ನ, 48ವರ್ಷ, ಪೋತೇಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರಿಗೆ ಬಲಕಾಲು ಮತ್ತು ಎಡಕಾಲಿಗೆ ರಕ್ತಗಾಯವಾಗಿದ್ದು, ಎರಡೂ ವಾಹನಗಳು ಜಖಂಗೊಂಡಿರುತ್ತದೆ. ಆಗ ಅಲ್ಲಿಯೇ ಇದ್ದ ಯಾರೋ ಸಾರ್ವಜನಿಕರು ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಸದರಿ ವಿಚಾರವನ್ನು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನಾನು ಮತ್ತು ಶಿವಪ್ಪ ಬಿನ್ ಭಾವನ್ನ ರವರು ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಯಲಹಂಕದ ದೀಕ್ಷಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸುತ್ತಿದ್ದು, ಈ ಅಪಘಾತದ ಬಗ್ಗೆ ಆಟೋದ ಮಾಲೀಕರು ರಾಜಿ ಪಂಚಾಯ್ತಿ ಮಾಡೋಣವೆಂದು ಹೇಳಿ ಇದುವರೆವಿಗೂ ಬಾರದೇ ಇರುವ ಕಾರಣ ಪೊಲೀಸ್ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ತಮ್ಮನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಕೆ.ಎ-40, ಎ-7458 ನೊಂದಣಿ ಸಂಖ್ಯೆಯ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2) ಚೇಳೂರು ಪೊಲೀಸ್ ಠಾಣೆ ಮೊ.ಸಂ.102/2018 ಕಲಂ.32-34 KARNATAKA EXCISE ACT:-

     ದಿನಾಂಕ 01/12/2018 ರಂದು  07:30 ಗಂಟೆಗೆ ಠಾಣಾ ಪ್ರಭಾರದಲ್ಲಿದ್ದಾಗ ಬಂದ ಖಚಿತ ಮಾಹಿತಿ ಏನೆಂದರೆ  ಠಾಣಾ ಸರಹದ್ದಿನ  ಊದುವಾರಪಲ್ಲಿ ಗ್ರಾಮದಲ್ಲಿ ಸೂರ್ಯನಾರಾಯಣರೆಡ್ಡಿ ಬಿನ್ ನರಸಿರೆಡ್ಡಿ ಎಂಬುವರಿಗೆ ಸೇರಿದ ಅಂಗಡಿಯಲ್ಲಿ  ಅಕ್ರಮವಾಗಿ ಮಧ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ  ಸರ್ಕಾರಿ ಜೀಪ್ ಸಂಖ್ಯೆ  ಕೆಎ 40 ಜಿ 61 ರಲ್ಲಿ ಸಿಬ್ಬಂದಿಯನ್ನು ಕರೆದುಕೊಂಡು ಊದುವಾರಪಲ್ಲಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಅಂಗಡಿಯ ಬಳಿ ಜೀಪ್ ನಲ್ಲಿ ಹೋಗಿ ಇಳಿಯುವಷ್ಟರಲ್ಲಿ ಅಂಗಡಿಯಿಂದ ಓಡಿ ಹೋಗುತ್ತಿದ್ದ  ಸೂರ್ಯನಾರಾಯಣರೆಡ್ಡಿ ರವರನ್ನು ಹಿಡಿದು, ನಂತರ ಪಂಚರ ಸಮಕ್ಷಮ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ 1) 90 ML ನ 129 HAYWARDS CHEERS WHISKY TETRA PACKETS 2) 180 ML ನ 38 OLD TOVERN WHISKY TETRA PACKETS  3) 90 ML ನ  87 BANGALORE MALT WHISKY   ಮಧ್ಯವನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು  ಮಾಲಿನೊಂದಿಗೆ ಠಾಣೆಗೆ  ಬೆಳಗ್ಗೆ 09:30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಠಾಣಾ ಮೊಸಂ102/2018 ಕಲಂ 32, 34 ಕೆಇ ಆಕ್ಟ್ ಕಾಯ್ದೆಯ ರೀತ್ಯ  ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.260/2018 ಕಲಂ. 15(A),32(3) KARNATAKA EXCISE ACT:-

     ಈ ದಿನ ದಿನಾಂಕ:30/11/2018 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಕುಡುಮಲಕುಂಟೆ ಗ್ರಾಮದಲ್ಲಿ ನಾರಾಯಣಸ್ವಾಮಿ ಎಂಬುವವರು ತನ್ನ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬೀಟು ಸಿಬ್ಬಂದಿ ಹೆಚ್.ಸಿ-01 ಚಂದ್ರಶೇಖರ್ ರವರು ನೀಡಿದ ಮಾಹಿತಿ ಮೇರೆಗೆ ಹೆಚ್.ಸಿ-01 ಚಂದ್ರಶೇಖರ್ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ ಕುಡುಮಲಕುಂಟೆ ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗ್ರಾಮದ ಸಿ.ಸಿ. ರಸ್ತೆಯ ಪಕ್ಕದಲ್ಲಿರುವ ಒಂದು ಅಂಗಡಿಯ ಮುಂದೆ ಒಬ್ಬ ಆಸಾಮಿ ಚೀಲವನ್ನು ಹಿಡಿದುಕೊಂಡು ನಿಂತಿದ್ದು, 3 ಜನ ಗಂಡಸರು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 3 ಜನ ಗಂಡಸರು ಓಡಿಹೋಗಿದ್ದು, ಚೀಲ ಹಿಡಿದುಕೊಂಡು ನಿಂತಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಿದಾಗ, ಸದರಿ ಆಸಾಮಿ ತನ್ನ ಹೆಸರು ನಾರಾಯಣಸ್ವಾಮಿ ಬಿನ್ ಮಲ್ಲಪ್ಪ, 26 ವರ್ಷ, ಪರಿಶಿಷ್ಟ ಜಾತಿ [ಎ.ಕೆ], ಅಂಗಡಿ ವ್ಯಾಪಾರ, ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 13 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಬೆಲೆ 963.69 ರೂ.ಗಳಾಗಿದ್ದು, ಸ್ಥಳದಲ್ಲಿ 07 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 07 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿ ನಾರಾಯಣಸ್ವಾಮಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಸಾಯಂಕಾಲ 4-00 ಗಂಟೆಯಿಂದ ಸಾಯಂಕಾಲ 4-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿ ನಾರಾಯಣಸ್ವಾಮಿ ಹಾಗು 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 13 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 07 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 07 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡು, ಸಾಯಂಕಾಲ 5-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಠಾಣೆಯಲ್ಲಿ  ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೆ.

4) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.235/2018 ಕಲಂ.380-454-457 ಐ.ಪಿ.ಸಿ:-

     ದಿನಾಂಕ:01/12/2018 ರಂದು ಬೆಳಿಗ್ಗೆ 8:30 ಗಂಟೆಗೆ ಪಿರ್ಯಾದಿದಾರರಾದ ಹೆಚ್.ವಿ ಮುದ್ದುಕೃಷ್ಣ ಬಿನ್ ಲೇಟ್ ಹೆಚ್.ಎಸ್ ವೆಂಕಟರಮಣಪ್ಪ, 52 ವರ್ಷ, ಶೆಟ್ಟಿಬಲಜಿಗರು, ವ್ಯಾಪಾರ ಹಾಗೂ ವ್ಯವಸಾಯ, ಬ್ಯಾಂಕ್ ಕಾಲೋನಿ ಮೈನ್ ರೋಡ್, ಗೌರಿಬಿದನೂರು ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:24/11/2018 ರಂದು ನಾನು ನನ್ನ ಪತ್ನಿ ಅರುಣ ಸಮೇತ ಮದ್ಯಾಹ್ನ 12:00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ದೇವಸ್ಥಾನಗಳ ದರ್ಶನಕ್ಕೆ ಹೋದೆವು. ಕೇರಳ ಮತ್ತು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ವಾಪಸ್ಸು ಮನೆಗೆ ದಿನಾಂಕ:30/11/2018 ರಂದು ರಾತ್ರಿ ಬಂದು ನೋಡಲಾಗಿ ಮನೆಯ ಮುಂದಿನ ಮುಖ್ಯ ಬಾಗಿಲು ಮತ್ತು ಗೇಟ್ ಬೀಗ ಹಾಕಿದಂತೆಯೇ ಇದ್ದು, ನಾವು ಬೀಗ ತೆಗೆದು ಒಳಗೆ ಹೋಗಿ ನೋಡಲಾಗಿ ನಮ್ಮ ಮನೆಯ ಡ್ಲೂಪ್ಲೆಕ್ಸ್ ಮನೆಯ ಮೇಲೆ  ಪೂರ್ವದ ಕಡೆಗಿನ ಕಾರಿಡಾರ್ ಬಾಗಿಲಿನ ಚಿಲಕ ಮತ್ತು ಡೋರ್ ಲಾಕ್ ಗಳನ್ನು ಒಡೆದು ಬಾಗಿಲು ತೆಗೆದಿದ್ದು, ಪೂರ್ವದ ಕಡೆಗಿನ ರೂಂನ  ಬಾಗಿಲು ಚಿಲಕ ಮತ್ತು ಡೋರ್ ಲಾಕ್ ಗಳನ್ನೂ ಸಹಾ ಯಾರೋ ಕಳ್ಳರು ಮುರಿದಿದ್ದರು. ಒಳಗೆ ಹೋಗಿ ನೋಡಲಾಗಿ ಬಾಗಿಲ ಪಕ್ಕದಲ್ಲಿದ್ದ ಬೀರುವನ್ನು ಒಡೆದು ಬೀರುವಿನಲ್ಲಿ ಇಟ್ಟಿದ್ದ ಸುಮಾರು 60 ಗ್ರಾಂ. ತೂಕದ ಎರಡು ಎಳೆ ಮಾಂಗಲ್ಯದ ಸರ, 35 ಗ್ರಾಂ.ತೂಕದ ಒಂದು ಎಳೆ ಮಾಂಗಲ್ಯದ ಸರ, 30 ಗ್ರಾಂ.ನ ಕೈಕಡಗ, 12 ಗ್ರಾಂ, ತೂಕದ ನಾಲ್ಕು ಜೊತೆ ಓಲೆ, 7 ಗ್ರಾಂ.ತೂಕದ ಮೂರು ಉಂಗುರ ದಕ್ಷಿಣದ ಕಡೆಗಿನ ಕಬೋರ್ಡ್ ನಲ್ಲಿಟ್ಟಿದ್ದ 110 ಗ್ರಾಂ. ತೂಕದ ನೆಕ್ಲೆಸ್ ಮತ್ತು ಎರಡು ಬಳೆಗಳು, 40 ಗ್ರಾಂ ತೂಕದ ಚೈನಾ ಬೊಟ್ಟು ಮತ್ತು ಚೈನು, 25 ಗ್ರಾಂ,ತೂಕದ ಚೈನಾ ಬೊಟ್ಟು ಮತ್ತು ಚೈನು, 15 ಗ್ರಾಂ.ತೂಕದ ಡಾಲರ್, 35 ಗ್ರಾಂ.ತೂಕದ ನೆಕ್ಲೆಸ್, 10 ಗ್ರಾಂ. ತೂಕದ ಮುತ್ತಿನ ಸರ ಹಾಗೂ 30 ಗ್ರಾಂ.ತೂಕದ ಎರಡು ಎಳೆ ಸೈಕಲ್ ಚೈನ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ವಿಚಾರವನ್ನು ನಮ್ಮ ಸಂಬಂಧಿಗಳಿಗೆ ತಿಳಿಸಿ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು, ಸುಮಾರು 1,90,000/- ರೂ.ಬೆಲೆ ಬಾಳುವ 409 ಗ್ರಾಂ.ತೂಕದ ಬಂಗಾರದ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುವುದಾಗಿ ನೀಡಿದ ದೂರಾಗಿರುತ್ತೆ.

5) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.270/2018 ಕಲಂ.279-337 ಐ.ಪಿ.ಸಿ:-

     ದಿನಾಂಕ:31.11.2018 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ:30.11.2018 ರಂದು ತಾನು ಕೆ.ಎ-03 ಸಿ-9558 ಲಾರಿಯಲ್ಲಿ ಆಂದ್ರಪ್ರದೇಶ ರಾಜ್ಯದ ತಾಡಿಪತ್ರಿ ತಾಲೂಕುನಲ್ಲಿ ಕಡಪ ಕಲ್ಲುಗಳನ್ನು ಲೋಡು ಮಾಡಿಸಿಕೊಂಡು ಲಾರಿಯಲ್ಲಿ ಲೋಡು ಅನ್ ಲೋಡು ಮಾಡುವ ಗಂಗಿರೆಡ್ಡಿ, ರಾಮ ಮದ್ದಿಲೆಡ್ಡಿ, ರವರೊಂದಿಗೆ ಎನ್,ಎಚ್-7 ರಸ್ತೆ ಮುಖಾಂತರ ಬೆಂಗಳೂರಿಗೆ ಹೋಗುವಾಗ, ತೀಲಕುಂಟಹಳ್ಳಿ ಕ್ರಾಸ್ ನಿಂದ ಸುಮಾರು 100 ಮೀಟರ್ ಚಿಕ್ಕಬಳ್ಳಾಪುರ ಕಡೆಯ ರಸ್ತೆ ಏರು ಮಾರ್ಗದಲ್ಲಿ ಹೋಗುವಾಗ, ತನ್ನ ಹಿಂಬದಿ ಕೆ.ಎ-07 ಎ-7940 ನೊಂದಣಿಯ ಈಚರ್ ಲಾರಿಯ ಚಾಲಕನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ಮುಂದೆ ಹೋಗುತ್ತಿದ್ದ ಮೇಲ್ಕಂಡ ಲಾರಿಯ ಹಿಂಬದಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ತಾನು ತಕ್ಷಣ ಲಾರಿಯನ್ನು ನಿಲ್ಲಿಸಿ ಮೇಲ್ಕಂಡ ಗಂಗಿರೆಡ್ಡಿ & ರಾಮ ಮದ್ದಿಲೆಡ್ಡಿ ರವರೊಂದಿಗೆ ಹಿಂಬದಿ ನೋಡಲಾಗಿ ತಮ್ಮ ಬಾಬತ್ತು ಲಾರಿಗೆ ಹಿಂಬದಿ ಜಖಂಗೊಂಡು ಚಾಸ್ಸೀ ಬೆಂಡ್ ಆಗಿದ್ದು, ಲಾರಿಯಲ್ಲಿದ್ದ ತಮ್ಮಗಳಿಗೆ ಯಾವುದೇ ಗಾಯಗಳು ಆಗಿಲ್ಲವೆಂದು, ಅಪಘಾತಪಡಿಸಿದ ಲಾರಿಯ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಗಾಯಾಳುವನ್ನು ಆಂಬುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಪಘಾತದಲ್ಲಿ ಭಾಗಿಯಾದ ಎರಡೂ ಲಾರಿಗಳು ಪೆರೇಸಂದ್ರ ಹೊರ ಠಾಣೆ ಆವರಣದಲ್ಲಿದ್ದು, ತಮ್ಮ ಲಾರಿಗೆ ಅಪಘಾತಪಡಿಸಿದ ಮೇಲ್ಕಂಡ ಕೆ.ಎ-07 ಎ-7940 ನೊಂದಣಿಯ ಈಚರ್ ಲಾರಿಯ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು ಆಗಿರುತ್ತೆ.